ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಕೋವಿಡ್-19 ನವೋದ್ಯಮದ (ಸ್ಟಾರ್ಟ್ ಅಪ್ಸ್) ಮೂಲಕ ತಂತ್ರಜ್ಞಾನಗಳ ಸಂಯೋಜನೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಕಾರ್ಯಪಡೆ ಸ್ಥಾಪನೆ
Posted On:
26 MAR 2020 4:21PM by PIB Bengaluru
ಕೋವಿಡ್-19 ನವೋದ್ಯಮದ (ಸ್ಟಾರ್ಟ್ ಅಪ್ಸ್) ಮೂಲಕ ತಂತ್ರಜ್ಞಾನಗಳ ಸಂಯೋಜನೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಕಾರ್ಯಪಡೆ ಸ್ಥಾಪನೆ
ರೋಗನಿರ್ಣಯ (ಡಯಗ್ನೊಸ್ಟಿಕ್ಸ್) , ಪರೀಕ್ಷೆ, ಆರೋಗ್ಯ ರಕ್ಷಣೆಯ ವಸ್ತುಗಳ ವಿತರಣಾ ಪರಿಹಾರಗಳು, ಸಲಕರಣೆಗಳ ಸರಬರಾಜಿನ ಕ್ಷೇತ್ರಗಳಲ್ಲಿ ಮಾರಾಟ ಮಾಡಲು ಸಿದ್ಧವಾಗುವ ಹಂತದಲ್ಲಿರುವ ಪರಿಹಾರಗಳ ಸೌಲಭ್ಯಗಳಿಗೆ ಧನಸಹಾಯ ಮಾಡಲು.
ಕೋವಿಡ್-19 ಸಂಬಂಧಿತ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಭಾರತದಲ್ಲಿ ಲಭ್ಯವಿರುವ ಸೂಕ್ತ ತಂತ್ರಜ್ಞಾನಗಳು ಮತ್ತು ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಸಮನ್ವಯಗೊಳಿಸುತ್ತಿದೆ, ಜೊತೆಗೆ ಕೋವಿಡ್ 19 ಸಾಂಕ್ರಾಮಿಕದಿಂದ ಉಂಟಾಗುವ ತುರ್ತುಪರಿಸ್ಥಿತಿಗೆ ದೇಶವು ಸಿದ್ಧವಾಗಿರುವಂತೆ ಸಹಾಯ ಮಾಡಲು ಹೆಚ್ಚು ಪ್ರಸ್ತುತವಾದ ಹೊಸ ಮತ್ತು ಅಭಿವೃದ್ಧಿಶೀಲ ಪರಿಹಾರಗಳಿಗಾಗಿ ಹುಡುಕಾಟವನ್ನು ಮಾಡುತ್ತದೆ.
ಡಯಗ್ನೊಸ್ಟಿಕ್ಸ್, ಪರೀಕ್ಷೆ, ಆರೋಗ್ಯ ರಕ್ಷಣೆಯ ವಸ್ತುಗಳ ವಿತರಣಾ ಪರಿಹಾರಗಳು, ಸಲಕರಣೆಗಳ ಸರಬರಾಜಿನ ಕ್ಷೇತ್ರದಲ್ಲಿ ಮಾರಾಟ ಮಾಡಲು ಸಿದ್ಧವಾಗುವ ಹಂತದಲ್ಲಿರುವ ಪರಿಹಾರಗಳ ಸೌಲಭ್ಯಗಳಿಗೆ ಧನಸಹಾಯ ನೀಡಲು ಆರ್ & ಡಿ ಲ್ಯಾಬ್‌ಗಳು, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳು ಮತ್ತು ಎಂಎಸ್‌ಎಂಇಗಳಿಂದ ತಂತ್ರಜ್ಞಾನಗಳನ್ನು ಸಂಯೋಜಿಸಲು ಡಿಎಸ್ ಟಿ ಕೋವಿಡ್ 19 ಕಾರ್ಯಪಡೆಯನ್ನು ಸ್ಥಾಪಿಸಿದೆ. ಈ ಕೆಲವು ಪರಿಹಾರಗಳಲ್ಲಿ ಹೆಸರಿಸುವುದಲ್ಲಿ ಕೆಲವುಗಳೆಂದರೆ, ಮುಖಗವಸುಗಳು ಮತ್ತು ಇತರ ರಕ್ಷಣಾತ್ಮಕ ವಸ್ತುಗಳು, ಸ್ಯಾನಿಟೈಜರ್‌ಗಳು, ಸ್ಕ್ರೀನಿಂಗ್‌ಗಾಗಿ ಕೈಗೆಟುಕುವ ಬೆಲೆಯ ಕಿಟ್‌ಗಳು, ವೆಂಟಿಲೇಟರ್‌ಗಳು ಮತ್ತು ಆಕ್ಸಿಜನೇಟರ್‌ಗಳು, ಎಐ ಮತ್ತು ಐಒಟಿ ಆಧಾರಿತ ಪರಿಹಾರಗಳ ಮೂಲಕ ವೈರಾಣು ಹರಡುವುದನ್ನು ಪತ್ತೆಹಚ್ಚಲು ಡೇಟಾ ವಿಶ್ಲೇಷಣೆಗಳು, ಮೇಲ್ವಿಚಾರಣೆ ಮಾಡುವುದು ಮತ್ತು ನಿಯಂತ್ರಿಸುವುದು ಸೇರಿವೆ.
ಕೆಪಾಸಿಟಿ ಮ್ಯಾಪಿಂಗ್ ಗುಂಪಿನಲ್ಲಿ ಡಿಎಸ್ ಟಿ, ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಮ್ ಇ ಐ ಟಿ ವೈ), ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್), ಅಟಲ್ ಇನ್ನೋವೇಶನ್ ಮಿಷನ್ ( ಎಐಎಂ), ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂಎಸ್‌ಎಂಇ), ಸ್ಟಾರ್ಟ್ಅಪ್ ಇಂಡಿಯಾ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ). ಕಾರ್ಯಪಡೆಯ ಕೆಲಸವೇನೆಂದರೆ ವಿಸ್ತರಿಸುವ ಪ್ರಕ್ರಿಯೆಗೆ ಹತ್ತಿರವಿರುವ, ಅತ್ಯಂತ ಭರವಸೆಯ ನವೋದ್ಯಮಗಳನ್ನು ಗುರುತಿಸುವುದು, ಅವುಗಳಿಗೆ ಹಣಕಾಸಿನ ಅಥವಾ ಇತರ ಸಹಾಯದ ಅಗತ್ಯವಿರಬಹುದು ಅಥವಾ ಸಂಪರ್ಕವನ್ನು ಹೆಚ್ಚಿಸುವುದು ಅಥವಾ ಬೇಡಿಕೆಯನ್ನು ವೇಗವಾಗಿ ಹೆಚ್ಚಿಸುವುದು ಇರಬಹುದು.
ಕೋವಿಡ್ 19 ಯಾವುದೇ ಪ್ರಮುಖ ಅಂಶಗಳಿಗೆ ತಂತ್ರಜ್ಞಾನ ಪರಿಹಾರಗಳನ್ನು ಹೊಂದಿರುವ ನವೋದ್ಯಮ ಮತ್ತು ಇತರ ಸಂಸ್ಥೆಗಳ ಮಾಹಿತಿಯನ್ನು ಪಡೆಯುವ ಪ್ರಕ್ರಿಯೆಯನ್ನು ವೈಯಕ್ತಿಕವಾಗಿ ತ್ವರಿತಗೊಳಿಸಲು ಸಂಬಂಧಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳ ನೋಡಲ್ ಅಧಿಕಾರಿಗಳಿಗೆ ಕೇಳಿಕೊಳ್ಳಲಾಗಿದೆ.
ಸಂಬಂಧಿತ ತಂತ್ರಜ್ಞಾನ ಆಯ್ಕೆಗಳ ಕ್ಷಿಪ್ರ ಅಭಿವೃದ್ಧಿ, ಉತ್ಪಾದನೆ ಮತ್ತು ನಿಯೋಜನೆಗಾಗಿ ಬಳಸಲಾಗುವ ಕಾರ್ಯವಿಧಾನಗಳ ಭಾಗವಾಗಿ, ಡಿಎಸ್ ಟಿಯು ಹೊಸ ಮತ್ತು ಅಸ್ತಿತ್ವದಲ್ಲಿರುವ ವೈಜ್ಞಾನಿಕ ಪರಿಹಾರಗಳು ಮತ್ತು ವಾಣಿಜ್ಯ ಉತ್ಪಾದನೆಯನ್ನು ಬೆಂಬಲಿಸಲು ಈಗಾಗಲೇ ಎರಡು ಪ್ರತ್ಯೇಕ ಪ್ರಸ್ತಾಪಗಳನ್ನು ಆಹ್ವಾನಿಸಿದೆ. ಒಂದು ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್ಇಆರ್ಬಿ) ಯಡಿಯಲ್ಲಿ ಮತ್ತೊಂದು ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (ಟಿಡಿಬಿ)ಯ ಅಡಿಯಲ್ಲಿ ಪ್ರಸ್ತಾಪಗಳನ್ನು ಆಹ್ವಾನಿಸಿದೆ.
(Release ID: 1608431)
Visitor Counter : 170