ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆನ್ ಲೈನ್ ಕಲಿಕೆಯಲ್ಲಿ ತೊಡಗುವ ಮೂಲಕ ಸಮಯವನ್ನು ಉಪಯುಕ್ತವಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಯುಜಿಸಿ ಮನವಿ
Posted On:
25 MAR 2020 9:11PM by PIB Bengaluru
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆನ್ ಲೈನ್ ಕಲಿಕೆಯಲ್ಲಿ ತೊಡಗುವ ಮೂಲಕ ಸಮಯವನ್ನು ಉಪಯುಕ್ತವಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಯುಜಿಸಿ ಮನವಿ
ಯುಜಿಸಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪತ್ರವೊಂದನ್ನು ಬರೆದು, ಕೋವಿಡ್-19 ನಿಯಂತ್ರಣಕ್ಕೆ ಜಂಟಿಯಾಗಿ ಹೋರಾಟ ನಡೆಸುತ್ತಿರುವುದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮುಂಜಾಗ್ರತಾ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿನಿಲಯ/ಮನೆಗಳಲ್ಲಿರುವವರು ಆನ್ ಲೈನ್ ಕಲಿಕೆ ಮೂಲಕ ಸಮಯವನ್ನು ಉಪಯುಕ್ತವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದೆ. ಎಂಎಚ್ಆರ್ ಡಿ, ಯುಜಿಸಿ ಮತ್ತು ಇತರ ಅಂತರ ವಿಶ್ವ ವಿದ್ಯಾಲಯ ಕೇಂದ್ರಗಳು(ಐಸಿಟಿಎಸ್) ಹಲವು ಐಸಿಟಿ ಉಪಕ್ರಮಗಳನ್ನು ಕೈಗೊಂಡಿವೆ – ಮಾಹಿತಿ ಮತ್ತು ಗ್ರಂಥಾಲಯ ಸಂಪರ್ಕಜಾಲ (ಇನ್ಫಿಲಿಬ್ ನೆಟ್- INFLIBNET) ಮತ್ತು ಶೈಕ್ಷಣಿಕ ಸಂವಹನ ಒಕ್ಕೂಟ(ಸಿಇಸಿ) ಇನ್ನಿತರ ಸಂಸ್ಥೆಗಳು ಡಿಜಿಟಿಲ್ ವೇದಿಕೆಗಳನ್ನು ಸೃಷ್ಟಿಸಿದ್ದು, ಅವುಗಳನ್ನು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧಕರು ಬಳಸಿಕೊಂಡು, ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬಹುದು. ಈ ಕೆಳಗಿನ ಐಸಿಟಿ ಉಪಕ್ರಮಗಳ ಪಟ್ಟಿ ಮತ್ತು ಅದನ್ನು ಸಂಪರ್ಕಿಸುವ ಲಿಂಕ್ ವಿವರ ಹೀಗಿದೆ.
1. ಸ್ವಯಂ ಆನ್ ಲೈನ್ ಕೋರ್ಸ್ ಗಳು: https://storage.googleapis.com/uniquecourses/online.html ಇದು ಅತ್ಯುತ್ತಮ ಬೋಧನಾ ಕಲಿಕಾ ಸಂಪನ್ಮೂಲ ಹೊಂದಿದೆ. ಈ ಮೊದಲು ಸ್ವಯಂ ವೇದಿಕೆಯಲ್ಲಿ ಮಂಡಿಸಲಾಗಿರುವ ಪಾಠಗಳನ್ನು ಯಾವುದೇ ಕಲಿಕಾರ್ಥಿಗಳು ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳದೆ ಉಚಿತವಾಗಿ ಪಡೆದುಕೊಳ್ಳಬಹುದು. 2020ರ ಜನವರಿಯಲ್ಲಿ ಸ್ವಯಂನಲ್ಲಿ (swayam.gov.in)ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು/ಕಲಿಕಾರ್ಥಿಗಳು ಎಂದಿನಂತೆ ತಮ್ಮ ಕಲಿಕೆಯನ್ನು ಮುಂದುವರಿಸಬಹುದಾಗಿದೆ.
2. ಯುಜಿ/ ಪಿಜಿ/ ಎಂಒಒಸಿಎಸ್: http://ugcmoocs.inflibnet.ac.in/ugcmoocs/moocs_courses.php ಇದರಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ಸಂಗ್ರಹಿಸಿದ ಕೋರ್ಸ್ ಗಳ ಸ್ವಯಂ ಕಲಿಕಾ ಸಾಮಗ್ರಿ (ತಂತ್ರಜ್ಞಾನೇತರ) ಲಭ್ಯವಿದೆ.
3. ಇ-ಸ್ನಾತಕೋತ್ತರ ಪದವಿ ಪಾಠಶಾಲಾ epgp.inflibnet.ac.in ಇದರಲ್ಲಿ ಉನ್ನತ ಗುಣಮಟ್ಟದ ಪಠ್ಯಕ್ರಮ ಆಧಾರಿತ ಸಾಮಾಜಿಕ ವಿಜ್ಞಾನ, ಕಲೆ, ಲಲಿತ ಕಲೆ, ಮಾನವಶಾಸ್ತ್ರ, ಸ್ವಾಭಾವಿಕ ಮತ್ತು ಗಣಿತಶಾಸ್ತ್ರ ವಿಜ್ಞಾನಗಳು ಸೇರಿದಂತೆ ಸುಮಾರು 70 ಬಗೆಯ ಸ್ನಾತಕೋತ್ತರ ಪದವಿ ವಿಷಯಗಳಲ್ಲಿ(ಇ-ಪಠ್ಯ ಮತ್ತು ವಿಡಿಯೋ) ಸೇರಿ 23,000 ಸಂವಾದಾತ್ಮಕ ಮಾದರಿ ಪಠ್ಯಗಳು ಲಭ್ಯವಿದೆ.
4. ಪದವಿ ವಿಷಯಗಳ ಇ-ಪಠ್ಯ ಕೋರ್ಸ್: ಸಿಇಸಿಯ ವೆಬ್ ಸೈಟ್ http://cec.nic.in/ ನಲ್ಲಿ 87 ಪದವಿ ಕೋರ್ಸ್ ಗಳಿಗೆ ಸೇರಿದ ಸುಮಾರು 24,110 ಇ-ಪಠ್ಯ ಮಾದರಿಗಳು ಲಭ್ಯವಿದೆ.
5. ಸ್ವಯಂಪ್ರಭ: https://www.swayamprabha.gov.in/ ಇದು 32 ಡಿಟಿಎಚ್ ಚಾನಲ್ ಗಳನ್ನು ಹೊಂದಿರುವ ಗುಚ್ಛವಾಗಿದ್ದು, ಇದರಲ್ಲಿ ಜೀವನಪೂರ್ತಿ ಕಲಿಕೆ ಆಸಕ್ತಿ ಹೊಂದಿರುವ ದೇಶದ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಕಲೆ, ವಿಜ್ಞಾನ, ವಾಣಿಜ್ಯ, ಲಲಿತ ಕಲೆ, ಸಾಮಾಜಿಕ ವಿಜ್ಞಾನ ಮತ್ತು ಮಾನವಶಾಸ್ತ್ರ ಇಂಜಿನಿಯರಿಂಗ್, ತಂತ್ರಜ್ಞಾನ, ಕಾನೂನು, ವೈದ್ಯಕೀಯ, ಕೃಷಿ ಇತ್ಯಾದಿ ಕೋರ್ಸ್ ಗಳಿಗೆ ಸೇರಿದ ಗುಣಮಟ್ಟದ ಶೈಕ್ಷಣಿಕ ಪಠ್ಯ ದೊರಕಲಿದೆ. ಈ ಚಾನಲ್ ಗಳನ್ನು ಉಚಿತವಾಗಿದ್ದು, ನಿಮ್ಮ ಕೇಬಲ್ ಆಪರೇಟರ್ ಮೂಲಕ ಪಡೆಯಬಹುದಾಗಿದೆ. ಪ್ರಸಾರವಾಗಿರುವ ವಿಡಿಯೋ/ಉಪನ್ಯಾಸಗಳನ್ನು ಸ್ವಯಂಪ್ರಭ ಪೋರ್ಟಲ್ ನಲ್ಲಿ ಸಂಗ್ರಹಿಸಲ್ಪಟ್ಟ ವಿಡಿಯೋಗಳಲ್ಲಿ ದೊರಕಲಿವೆ.
6. ಸಿಇಸಿ-ಯುಜಿಸಿ ಯೂಟ್ಯೂಬ್ ಚಾನಲ್: https://www.youtube.com/user/cecedusat ಇದರಲ್ಲಿ ಅನಿಯಮಿತ ಶೈಕ್ಷಣಿಕ ಪಠ್ಯಗಳನ್ನು ಆಧರಿಸಿದ ಉಪನ್ಯಾಸಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.
7. ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ: https://ndl.iitkgp.ac.in/ ಈ ಡಿಜಿಟಲ್ ಗ್ರಂಥಾಲಯದಲ್ಲಿ ನಾನಾ ರೂಪದಲ್ಲಿ ಅಗಾಧ ಶೈಕ್ಷಣಿಕ ಪಠ್ಯ ಲಭ್ಯವಿದೆ ಮತ್ತು ಎಲ್ಲ ಸಂಶೋಧಕರು ಮತ್ತು ಜೀವನಪೂರ್ತಿ ಕಲಿಕೆಯ ಆಸಕ್ತಿ ಹೊಂದಿರುವವರಿಗೆ ನಾನಾ ರೂಪದಲ್ಲಿ ಮತ್ತು ವಿಶೇಷಚೇತನರಿಗೂ ಸಹ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ ಶೈಕ್ಷಣಿಕ ಮಟ್ಟದ ಪಠ್ಯಗಳು ಲಭ್ಯವಿದೆ.
8. ಶೋಧ್ ಗಂಗಾ: https://shodhganga.inflibnet.ac.in/ ಈ ಡಿಜಿಟಲ್ ಗ್ರಂಥಾಲಯ ವೇದಿಕೆಯಲ್ಲಿ 2,60,000ಕ್ಕೂ ಅಧಿಕ ಭಾರತೀಯ ವಿದ್ಯುನ್ಮಾನ ಪ್ರಬಂಧಗಳು ಮತ್ತು ಪ್ರೌಢಪ್ರಬಂಧಗಳು ಲಭ್ಯವಿದ್ದು, ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪಿಎಚ್ ಡಿ ಮಹಾ ಪ್ರಬಂಧಗಳನ್ನು ಇಲ್ಲಿ ಠೇವಣಿ ಮಾಡಬಹುದು ಮತ್ತು ಅವುಗಳನ್ನು ಇಡೀ ವಿದ್ವಾಂಸ ಸಮುದಾಯಕ್ಕೆ ಮುಕ್ತವಾಗಿ ಲಭ್ಯವಾಗುವಂತೆ ಮಾಡಬಹುದು.
9. ಇ-ಶೋಧ್ ಸಿಂಧು: https://ess.inflibnet.ac.in/ ಅದರಲ್ಲಿ 15,000 ಕೋಟಿಗೂ ಅಧಿಕ ಸಂಗ್ರಹಿತ ಮತ್ತು ಪ್ರಸಕ್ತ ಲೇಖನಗಳು ಮತ್ತು ಪರಾಮರ್ಶಿಸಲ್ಪಟ್ಟ ಜರ್ನಲ್ ಗಳು ಮತ್ತು ಗ್ರಂಥಸೂಚಿ (ಬೊಬಿಲೋಗ್ರಾಫಿಕ್) ಮತ್ತು ಉಲ್ಲೇಖ ಹಾಗೂ ಅಸಂಖ್ಯಾತ ಪ್ರಕಾಶಕರ ನಾನಾ ವಿಭಾಗಗಳ ದತ್ತಾಂಶ ಲಭ್ಯವಿದೆ. ಕೇಂದ್ರದ ನೆರವು ಪಡೆಯುವ ಯುಜಿಸಿ ಕಾಯ್ದೆ ಸೆಕ್ಷನ್ 12(ಬಿ) ಮತ್ತು 2(ಎಫ್) ವ್ಯಾಪ್ತಿಗೆ ಒಳಪಡುವ ಎಲ್ಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸದಸ್ಯರ ಪಠ್ಯವೂ ಇದರ ವ್ಯಾಪ್ತಿಗೆ ಒಳಪಡುತ್ತವೆ.
10. ವಿದ್ವಾನ್: https://vidwan.inflibnet.ac.in/ ಇದು ದೇಶದಲ್ಲಿ ನೀತಿ ನಿರೂಪಕರು ಮತ್ತು ಸಂಶೋಧನಾ ವಿದ್ವಾಂಸರ ಸಹಭಾಗಿತ್ವದಲ್ಲಿ ಹಣಕಾಸಿನ ನೆರವಿನೊಂದಿಗೆ ಸಿದ್ಧಪಡಿಸಲಾದ ಪರಿಣಿತರ ಮಾಹಿತಿ ಮತ್ತು ವಿವರಗಳನ್ನು ಒಳಗೊಂಡಿದೆ. ಬೋಧಕ ಸಿಬ್ಬಂದಿ ಈ ವಿದ್ವಾನ್ ಪೋರ್ಟಲ್ ನಲ್ಲಿ ತಮ್ಮ ಹೆಸರು ನೋಂದಾಯಿಸಿ, ತಜ್ಞರ ದತ್ತಾಂಶವನ್ನು ಇನ್ನಷ್ಟು ವಿಸ್ತರಿಸಲು ಸಹಾಯ ಮಾಡಬೇಕು.
ಈ ಎಲ್ಲ ಐಸಿಟಿ ಉಪಕ್ರಮಗಳು ಸಾಕಷ್ಟು ವಿಷಯಗಳು ಮತ್ತು ಕೋರ್ಸ್ ಗಳ ಬಗ್ಗೆ ವಿಸ್ತೃತವಾಗಿದ್ದು, ಅವುಗಳನ್ನು ತಜ್ಞರೇ ಸಿದ್ಧಪಡಿಸಿರುವುದರಿಂದ ಎಲ್ಲರಿಗೂ ಉತ್ತಮ ಕಲಿಕಾ ಅನುಭವ ಕಟ್ಟಿಕೊಡಲಿದೆ ಎಂಬ ಭರವಸೆ ಇದೆ.
ಯಾವುದಾದರೂ ಪ್ರಶ್ನೆಗಳಿಗೆ ಅಥವಾ ಸ್ಪಷ್ಟನೆಗಳಿಗೆ ಯುಜಿಸಿ, ಇನ್ ಫಿಲಿಬನೆಟ್ ಮತ್ತು ಸಿಇಸಿಗಳನ್ನು ಕ್ರಮವಾಗಿ eresource.ugc[at]gmail[dot]com, eresource.inflibnet[at]gmail[dot]com and eresource.cec[at]gmail[dot]com ಸಂಪರ್ಕಿಸಬಹುದು.
*****
(Release ID: 1608395)
Visitor Counter : 240