ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಲಾಕ್‌ಡೌನ್ ಕಾರಣದಿಂದ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅವಧಿಯ ವಿಸ್ತರಣೆ ದೊರೆಯುತ್ತದೆ
Posted On:
26 MAR 2020 12:04PM by PIB Bengaluru
ಲಾಕ್‌ಡೌನ್ ಕಾರಣದಿಂದ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅವಧಿಯ ವಿಸ್ತರಣೆ ದೊರೆಯುತ್ತದೆ
ಅನುಷ್ಠಾನದಲ್ಲಿರುವ ಎಲ್ಲಾ ನವೀಕರಿಸಬಹುದಾದ ಇಂಧನ (ಆರ್‌ಇ) ಯೋಜನೆಗಳಿಗೆ ಲಾಕ್ ಡೌನ್ ಅವಧಿ ಮತ್ತು ಕೆಲಸಗಾರರನ್ನು ಮರುಸಂಗ್ರಹಿಸಲು ಬೇಕಾದ ಸಮಯವನ್ನು ಪರಿಗಣಿಸಿ ಸಮಯದ ವಿಸ್ತರಣೆಯನ್ನು ನೀಡಲಾಗುವುದು ಎಂದು ಎಂಎನ್‌ಆರ್‌ಇ (ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ) ಕಾರ್ಯದರ್ಶಿ ಶ್ರೀ ಆನಂದ್ ಕುಮಾರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಭಾರತದ ಪ್ರಧಾನಮಂತ್ರಿಗಳು, ಮಂಗಳವಾರ ಮಧ್ಯರಾತ್ರಿಯಿಂದ 21 ದಿನಗಳವರೆಗೆ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿದ್ದಾರೆ ಮತ್ತು "ಕರೊನಾ ವೈರಸ್ ಸರಪಳಿಯನ್ನು ಮುರಿಯುವುದು ಬಹಳ ಅವಶ್ಯಕವಾಗಿದೆ" ಎಂದು ಪ್ರತಿಪಾದಿಸಿದ್ದಾರೆ. ಕರೊನಾವೈರಸ್ ಹರಡುವಿಕೆಯು ಆರ್‌ಇ ಯೋಜನೆಗಳಲ್ಲಿ ಬಳಸುವ ಘಟಕಗಳ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸುವುದಲ್ಲದೆ, ಉದ್ಯೋಗಿಗಳ ಲಭ್ಯತೆಯ ಮೇಲೂ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಯ ಘೋಷಣೆಯು ಆರ್‌ಇ ವಲಯದ ಎಲ್ಲ ಪಾಲುದಾರರಿಗೆ ಹೆಚ್ಚಿನ ಪರಿಹಾರ ನೀಡುತ್ತದೆ.
(Release ID: 1608332)
Visitor Counter : 159