ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ನಿರ್ವಹಣೆಗಾಗಿ ಕೈಗೊಂಡ ಕ್ರಮಗಳು ಮತ್ತು ಪ್ರಸಕ್ತ ಇರುವ ಸ್ಥಿತಿಯ ಬಗ್ಗೆ ಜಿ.ಒ.ಎಂ. ಪರಾಮರ್ಶೆ 

Posted On: 25 MAR 2020 6:04PM by PIB Bengaluru

ಕೋವಿಡ್ -19 ನಿರ್ವಹಣೆಗಾಗಿ ಕೈಗೊಂಡ ಕ್ರಮಗಳು ಮತ್ತು ಪ್ರಸಕ್ತ ಇರುವ ಸ್ಥಿತಿಯ ಬಗ್ಗೆ ಜಿ.ಒ.ಎಂ. ಪರಾಮರ್ಶೆ 


 
ಕೋವಿಡ್ -19 ವಿರುದ್ದ ಹೋರಾಡಲು ಬಹಳ ಮುಖ್ಯವಾಗಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮನೆಯಲ್ಲಿ ಕ್ವಾರಂಟೈನ್ ಆಗಿರುವ ಶಿಷ್ಟಾಚಾರ ಮತ್ತು ವೈದ್ಯರು ಹಾಗು ಆರೋಗ್ಯ ಸಿಬ್ಬಂದಿಗಳಿಗೆ ಬೆಂಬಲ ನೀಡುವಿಕೆ ಬಗ್ಗೆ ಡಾ. ಹರ್ಷವರ್ಧನ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.
ಕೋವಿಡ್-19 ಕುರಿತಂತೆ ಉನ್ನತ ಮಟ್ಟದ ಸಚಿವರ ಗುಂಪಿನ ಸಭೆ (ಜಿ.ಒ.ಎಂ. ) ಇಂದು ನಿರ್ಮಾಣ ಭವನದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷ ವರ್ಧನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಾಗರಿಕ ವಾಯುಯಾನ ಸಚಿವ ಶ್ರೀ ಹರ್ದೀಪ್ ಎಸ್. ಪುರಿ, ವಿದೇಶಾಂಗ ವ್ಯವಹಾರ ಸಚಿವರಾದ ಡಾ. ಎಸ್. ಜೈಶಂಕರ್, ಗೃಹ ಖಾತೆ ಸಹಾಯಕ  ಸಚಿವ ಶ್ರೀ ನಿತ್ಯಾನಂದ ರೈ, ಶಿಪ್ಪಿಂಗ್ ಮತ್ತು ರಾಸಾಯನಿಕಗಳು ಹಾಗು ರಸಗೊಬ್ಬರ ಖಾತೆ ಸಹಾಯಕ  ಸಚಿವ ಶ್ರೀ ಮನ್ ಸುಖ್ ಮಾಂಡವೀಯ
.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಭೆ, ಮತ್ತು ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ ಶ್ರೀ ಬಿಪಿನ್ ರಾವತ್ ಪಾಲ್ಗೊಂಡಿದ್ದರು.
ಎಚ್.ಎಫ್.ದಬ್ಲ್ಯು. ಕಾರ್ಯದರ್ಶಿ ಪ್ರೀತಿ ಸುಧಾನ , ವಿದೇಶಾಂಗ ಕಾರ್ಯದರ್ಶಿ ಶ್ರೀ ಹರ್ಷ ವರ್ಧನ ಶ್ರಿಂಗ್ಲಾ, ಡಿ.ಎಚ್.ಆರ್. ಕಾರ್ಯದರ್ಶಿ ಮತ್ತು ಐ.ಸಿ.ಎಂ.ಆರ್. ಮಹಾ ನಿರ್ದೇಶಕ ಡಾ.  ಬಲರಾಂ ಭಾರ್ಗವ, ಜವಳಿ ಕಾರ್ಯದರ್ಶಿ ಶ್ರೀ ರವಿ ಕಪೂರ್, ಆರೋಗ್ಯ ಖಾತೆ ವಿಶೇಷ ಕಾರ್ಯದರ್ಶಿ ಶ್ರೀ ಸಂಜೀವ ಕುಮಾರ್, ಶಿಪ್ಪಿಂಗ್ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸಂಜಯ್ ಬಂಡೋಪಾಧ್ಯಾಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ  ಶ್ರೀ ದಾಮ್ಮು ರವಿ, ಎಂ.ಎಚ್.ಎ. ಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅನಿಲ್ ಮಾಲಿಕ್, ಡಿ.ಜಿ.ಎಚ್.ಎಸ್. ನ ಡಾ. ರಾಜೀವ್ ಗಾರ್ಗ್ , ಎಂ.ಒ.ಎಚ್.ಎಫ್.ಡಬ್ಲ್ಯು. ನ ಜೆ.ಎಸ್. ಶ್ರೀ ಲೇ ಅಗರ್ವಾಲ್  ಸೇರಿದಂತೆ  ಸೇನೆ, ಐ.ಟಿ.ಬಿ.ಪಿ. , ಫಾರ್ಮಾ, ಡಿ.ಜಿ.ಸಿ.ಎ. ಹಾಗು ಜವಳಿ ಇಲಾಖೆಗಳ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಚಿವರ ಗುಂಪು (ಜಿ.ಒ.ಎಂ.) ಕೋವಿಡ್ -19 ನಿಯಂತ್ರಿಸುವ ಬಗ್ಗೆ ಮತ್ತು ನಿಭಾಯಿಸುವ ಬಗ್ಗೆ ವಿವರವಾದ ಸಮಾಲೋಚನೆಯನ್ನು ಸಭೆಯಲ್ಲಿ ನಡೆಸಿತು. ಇದುವರೆಗೆ ಕೈಗೊಂಡ ಕ್ರಮಗಳು , ಪ್ರತಿಬಂಧಕ ಕ್ರಮವಾಗಿ ಜಾರಿ ಮಾಡಲಾಗಿರುವ ಸಾಮಾಜಿಕ ಅಂತರ ಪಾಲನೆ ಮತ್ತು ರಾಜ್ಯಗಳು ಕೋವಿಡ್ -19 ನಿಯಂತ್ರಣಕ್ಕೆ ಕೈಗೊಂಡ ಕಠಿಣ ಕ್ರಮಗಳ ಬಗ್ಗೆಯೂ ಸಚಿವರ ಗುಂಪು ಚರ್ಚಿಸಿತು. ರಾಜ್ಯಗಳ ಸಾಮರ್ಥ್ಯವರ್ಧನೆ ,ಕೋವಿಡ್ -19 ಕ್ಕಾಗಿಯೇ ಪ್ರತ್ಯೇಕ ಆಸ್ಪತ್ರೆಗಳನ್ನು ರಚಿಸಲು ಸಾಕಷ್ಟು ಸಂಪನ್ಮೂಲಗಳನ್ನು ಮೀಸಲಿಡುವ ಬಗ್ಗೆ , ಪಿ.ಪಿ.ಇ. ಗಳೊಂದಿಗೆ ವೈದ್ಯಕೀಯ ಸಂಸ್ಥೆಗಳನ್ನು ಸಜ್ಜುಗೊಳಿಸುವ ಬಗ್ಗೆ , ವೆಂಟಿಲೇಟರು ಮತ್ತು ಇತರ ಅವಶ್ಯ ಸಲಕರಣೆಗಳನ್ನು ಸಜ್ಜು ಮಾಡಿಡುವ ಬಗ್ಗೆ ಸಮಾಲೋಚಿಸಿತು. ಜೀವನಾವಶ್ಯಕ ಮತ್ತು ಪೂರೈಕೆ ಸೇವೆಗಳು ಮುಕ್ತವಾಗಿಟ್ಟಿರುವುದನ್ನು ಖಾತ್ರಿಪಡಿಸಲು ರಾಜ್ಯಗಳನ್ನು ಕೋರಲಾಯಿತು. ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಔಷದಿ ತಯಾರಿಕಾ ಸಂಸ್ಥೆಗಳು, ಲಸಿಕೆಗಳು, ಸ್ಯಾನಿಟೈಸರ್ ಗಳು, ಮುಖಗವಸುಗಳು, ಮತ್ತು ವೈದ್ಯಕೀಯ ಸಲಕರಣೆಗಳ ಸಹಿತ ಅವಶ್ಯಕ ಸೇವೆ ಮತ್ತು ವಸ್ತುಗಳ ಪೂರೈಕೆ ಅಬಾಧಿತವಾಗಿರುವಂತೆ ಖಾತ್ರಿಪಡಿಸಲು ಕೋರಲಾಯಿತು. ಗುಜರಾತ್, ಜಾರ್ಖಂಡ, ಅಸ್ಸಾಂ, ರಾಜಸ್ತಾನ , ಗೋವಾ, ಕರ್ನಾಟಕ, ಮಧ್ಯಪ್ರದೇಶ, ಮತ್ತು ಜಮ್ಮು ಹಾಗು ಕಾಶ್ಮೀರಗಳಲ್ಲಿ ಕೋವಿಡ್ 19 ಕ್ಕಾಗಿಯೇ ವಿಶೇಷ ಆಸ್ಪತ್ರೆಗಳನ್ನು ಸ್ಥಾಪಿಸಿರುವ ಬಗ್ಗೆ ಜಿ.ಒ.ಎಂ.ಗೆ ತಿಳಿಸಲಾಯಿತು. ಕೋವಿಡ್ -19 ಪರೀಕ್ಷೆಗಾಗಿ ಐ.ಸಿ.ಎಂ.ಆರ್. ಜಾಲದಲ್ಲಿ 118 ಪ್ರಯೋಗಾಲಯಗಳನ್ನು ಸೇರಿಸಿಕೊಳ್ಳಲಾಗಿದೆ. ಸಂಪುಟ ಕಾರ್ಯದರ್ಶಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದು ಮಾತ್ರವಲ್ಲ, ಆರೋಗ್ಯ ಕಾರ್ಯದರ್ಶಿಗಳ ಜೊತೆ , ಪೊಲೀಸ್ ಮಹಾ ನಿರ್ದೇಶಕರ ಜೊತೆ ವೀಡಿಯೋ ಕಾನ್ಫರೆನ್ಸಿಂಗ್ ನಡೆಸಿ ಲಾಕ್ ಡೌನ್ ಕ್ರಮಗಳನ್ನು ಜಾರಿಗೆ ತರಲು ಸೂಚನೆ ಕೊಟ್ಟಿರುವ ಬಗ್ಗೆಯೂ ಸಚಿವರ ಗುಂಪಿಗೆ ತಿಳಿಸಲಾಯಿತು.  
ಕೋವಿಡ್ -19 ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಕ್ರಿಯಾತ್ಮಕ ವ್ಯೂಹವಾಗಿದ್ದು , ಅದರ ಮಹತ್ವವನ್ನು ಮತ್ತು ಅದರ ಪ್ರಸರಣವನ್ನು ನಿಯಂತ್ರಿಸುವ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಡಾ. ಹರ್ಷ ವರ್ಧನ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿರುವ ಮತ್ತು ಆ ಸೌಲಭ್ಯ ಇರುವಲ್ಲಿ ಕ್ವಾರಂಟೈನ್ ಆಗಿರುವುದಕ್ಕೆ ಸಂಬಂಧಿಸಿ ಆರೋಗ್ಯ ಸಚಿವಾಲಯ ರೂಪಿಸಿರುವ ಶಿಷ್ಟಾಚಾರ ಸಂಹಿತೆಯು ಸಚಿವಾಲಯದ ವೆಬ್ ಜಾಲದಲ್ಲಿಯೂ ಲಭ್ಯವಿದೆ ಎಂದರು. “ ಗೌರವಾನ್ವಿತ ಪ್ರಧಾನ ಮಂತ್ರಿ ಅವರು ನಿನ್ನೆ ಘೋಷಿಸಿದಂತೆ  , ದೇಶವನ್ನು ದಿಗ್ಬಂಧನ (ಲಾಕ್ ಡೌನ್ ) ಮಾಡಲಾಗಿದೆ. ಇದರನ್ವಯ ನಾವು ಮನೆಗಳಲ್ಲೇ ಇರುವುದನ್ನು  ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಬೇಕು “ ಎಂದರು. 2020 ರ ಮಾರ್ಚ್ 21 ರ ಬಳಿಕ 64, 000 ಜನ ವಿದೇಶಗಳಿಂದ ಭಾರತಕ್ಕೆ ಬಂದಿದ್ದಾರೆ. ಇವರಲ್ಲಿ 8,000 ಮಂದಿಯನ್ನು ವಿವಿಧ ಸೌಲಭ್ಯಗಳಲ್ಲಿ  ಕ್ವಾರಂಟೈನ್ ಮಾಡಲಾಗಿದೆ, 56,000 ಮಂದಿ ಮನೆ ಕ್ವಾರಂಟೈನ್ ನಲ್ಲಿದಾರೆ “ ನಾವು ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿದ್ದೇವೆ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮತ್ತು ಇತರರನ್ನು ರಕ್ಷಿಸಲು ನಾವು ಸರಕಾರ ನಿಗದಿ ಮಾಡಿರುವ  ಶಿಷ್ಟಾಚಾರಗಳನ್ನು, ಮಾರ್ಗದರ್ಶಿಗಳನ್ನು ಮತ್ತು ನಿರ್ದೇಶನಗಳನ್ನು  ಅನುಸರಿಸುವುದು ಅತ್ಯಾವಶ್ಯವಾಗಿದೆ, ಇದಕ್ಕೆ ತಪ್ಪಿದರೆ ಐ.ಪಿ.ಸಿ. 188 ರಡಿಯಲ್ಲಿ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದೂ  ಅವರು ತಿಳಿಸಿದರು.
ಡಾ. ಹರ್ಷವರ್ಧನ ಅವರು ಈ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಮುಂಚೂಣಿಯಲ್ಲಿರುವ ಮತ್ತು ಕೋವಿಡ್ -19 ರಿಂದ ನಮ್ಮನ್ನು ರಕ್ಷಿಸಲು ಸೇವಾ ನಿರತರಾಗಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಬಹಿಷ್ಕಾರ ಹಾಕಬಾರದೆಂಬ  ತಮ್ಮ ಮನವಿಯನ್ನು ಪುನರುಚ್ಚರಿಸಿದರು. ನಾವು ಗಾಳಿ ಸುದ್ದಿಗಳನ್ನು ಹರಡುವುದನ್ನು ಮತ್ತು ಅಧಿಕೃತವಲ್ಲದ ಮಾಹಿತಿ ಹರಡುವುದನ್ನು ನಿಲ್ಲಿಸಬೇಕು ಎಂದೂ ಅವರು ಹೇಳಿದರು.

 

***



(Release ID: 1608328) Visitor Counter : 180