ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಅದರಡಿ ಬರುವ ಸ್ವಾಯತ್ತ ಸಂಸ್ಥೆಗಳು ಮತ್ತು ಅಧೀನ ಕಚೇರಿಗಳು ಮೂರು ವಾರಗಳ ಕಾಲ ರಜೆ  

प्रविष्टि तिथि: 25 MAR 2020 12:05PM by PIB Bengaluru

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಅದರಡಿ ಬರುವ ಸ್ವಾಯತ್ತ ಸಂಸ್ಥೆಗಳು ಮತ್ತು ಅಧೀನ ಕಚೇರಿಗಳು ಮೂರು ವಾರಗಳ ಕಾಲ ರಜೆ
 

 

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ(ಎಂ ಎಚ್ ಆರ್ ಡಿ) 2020 ಮಾರ್ಚ್ 24ರಂದು ಹೊರಡಿಸಿರುವ ಆದೇಶದಂತೆ ಎಂಎಚ್ಎ ಮತ್ತು ಅದರಡಿ ಬರುವ ಸ್ವಾಯತ್ತ ಸಂಸ್ಥೆಗಳು ಹಾಗೂ ಅಧೀನ ಕಚೇರಿಗಳಿಗೆ ಮೂರು ವಾರಗಳ ಕಾಲ ರಜೆ ಘೋಷಿಸಲಾಗಿದೆ. ಆದರೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಆದೇಶದಲ್ಲಿ ತಿಳಿಸಿರುವಂತೆ ಮನೆಯಿಂದಲೇ ಕಾರ್ಯ ನಿರ್ವಹಿಸಬೇಕು.
ಎಲ್ಲ ಬ್ಯೂರೋ ಮತ್ತು ವಿಭಾಗೀಯ ಮುಖ್ಯಸ್ಥರು ಹಣಕಾಸು ವಿಚಾರಗಳಲ್ಲಿ ವಿಶೇಷವಾಗಿ ವೇತನ ಮತ್ತು ಪಿಂಚಣಿ ಸೇರಿದಂತೆ ಯಾವುದೇ ವಿಷಯಗಳನ್ನು ಬಾಕಿ ಇಟ್ಟುಕೊಳ್ಳಬಾರದು ಎಂದು ಸೂಚಿಸಲಾಗಿದೆ.
ಸಿಬಿಎಸ್ಇ, ಎನ್ಐಒಎಸ್ ಮತ್ತು ಎನ್ ಟಿ ಎಗಳಿಗೆ  ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಸಿದ್ಧಪಡಿಸುವಂತೆ ಎಂ ಎಚ್ ಆರ್ ಡಿ ಸಚಿವಾಲಯ ಸೂಚಿಸಿದೆ. ಜೊತೆಗೆ ಸ್ವಾಯತ್ತ ಸಂಸ್ಥೆಗಳು ಮತ್ತು ಎನ್ ಸಿ ಇಆರ್ ಟಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಕರಡನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ.
 


*****


(रिलीज़ आईडी: 1608313) आगंतुक पटल : 200
इस विज्ञप्ति को इन भाषाओं में पढ़ें: English , हिन्दी , Bengali , Assamese , Punjabi , Gujarati , Tamil , Telugu , Malayalam