ಪ್ರಧಾನ ಮಂತ್ರಿಯವರ ಕಛೇರಿ

ಲೋಕಸಭೆಯಲ್ಲಿ ರಾಷ್ಟ್ರಪತಿಯವರ ವಂದನಾ ನಿರ್ಣಯ ಭಾಷಣದ ಚರ್ಚೆಗೆ ಪ್ರಧಾನಮಂತ್ರಿ ಮೋದಿ ಉತ್ತರ

Posted On: 06 FEB 2020 7:55PM by PIB Bengaluru

ಲೋಕಸಭೆಯಲ್ಲಿ ರಾಷ್ಟ್ರಪತಿಯವರ ವಂದನಾ ನಿರ್ಣಯ ಭಾಷಣದ ಚರ್ಚೆಗೆ ಪ್ರಧಾನಮಂತ್ರಿ ಮೋದಿ ಉತ್ತರ

 

ಗೌರವಾನ್ವಿತ ಸಭಾಧ್ಯಕ್ಷರೇ, ನಾನು ರಾಷ್ಟ್ರಪತಿಯವರ ಭಾಷಣದ ವಂದನಾ ನಿರ್ಣಯಕ್ಕೆ ಗೌರವ ಸಲ್ಲಿಸಿ ಮಾತನಾಡುತ್ತಿದ್ದೇನೆ. ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ನವ ಭಾರತದ ಕಲ್ಪನೆಯನ್ನು ಪ್ರಸ್ತುತ ಪಡಿಸಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ 21ನೇ ಶತಮಾನದ ಮೂರನೇ ದಶಕದ ಕುರಿತಂತೆ ನೀಡಿದ ಹೇಳಿಕೆಗಳು ನಮ್ಮೆಲ್ಲರಿಗೂ ದಶಕದಲ್ಲಿ ಮಾರ್ಗದರ್ಶನ ಮಾಡಿ, ಸ್ಫೂರ್ತಿ ನೀಡಿ ದೇಶದಲ್ಲಿನ ಕೋಟ್ಯಂತರ ಜನರಿಗೆ ಆತ್ಮ ವಿಶ್ವಾಸ ತುಂಬುತ್ತವೆ.

ಚರ್ಚೆಯಲ್ಲಿ ಸದನದ ಎಲ್ಲ ಅನುಭವಿ ಗೌರವಾನ್ವಿತ ಸದಸ್ಯರು ಸಮರ್ಥವಾಗಿ ತಮ್ಮ ಅಭಿಪ್ರಾಯಗಳನ್ನು ಮತ್ತು ವೈಯಕ್ತಿಕ ನಿಲುವುಗಳನ್ನು ತಮ್ಮದೇ ಆದ ರೀತಿಯಲ್ಲಿ ಮಂಡಿಸಿದ್ದಾರೆ. ಎಲ್ಲರೂ ತಮ್ಮದೇ ಆದ ವಿಧಾನದಲ್ಲಿ ಚರ್ಚೆಯನ್ನು ಶ್ರೀಮಂತಗೊಳಿಸುವ ಪ್ರಯತ್ನ ಮಾಡಿದ್ದಾರೆ. ಶ್ರೀಮಾನ್ ಅಧೀರ್ ರಂಜನ್ ಚೌಧರಿ, ಡಾ. ಶಶಿ ತರೂರ್, ಶ್ರೀಮಾನ್ ಓವೈಸಿ, ರಾಮ್ ಪ್ರತಾಪ್ ಯಾದವ್, ಪ್ರೀತಿ ಚೌಧರಿ ಅವರು, ಮಿಶ್ರಾ ಅವರು, ಅಖಿಲೇಶ್ ಯಾದವ್, ಹೀಗೆ ಹೇಳುತ್ತಾ ಹೋದರೆ ಹಲವರ ಹೆಸರುಗಳಿದ್ದು, ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಅಭಿಪ್ರಾಯ ಮಂಡಿಸಿದ್ದಾರೆ ಎಂದು ಹೇಳುತ್ತೇನೆ. ಆದರೆ ಎಲ್ಲ ಕಾರ್ಯಗಳ ಬಗ್ಗೆ ಸರ್ಕಾರ ಎಷ್ಟು ಅವಸರದಲ್ಲಿ ಏಕಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಎಲ್ಲ ಕೆಲಸಗಳನ್ನು ಏಕೆ ಒಟ್ಟಿಗೆ ಮಾಡಲಾಗುತ್ತಿದೆ?

ನಾನು ಸಂದರ್ಭದಲ್ಲಿ ಶ್ರೀಮಾನ್ ಸರ್ವೇಶ್ವರ ದಯಾಳ್ ಅವರ ಕವನವೊಂದನ್ನು ಉಲ್ಲೇಖಿಸಲಿಚ್ಛಿಸುತ್ತೇನೆ, ಬಹುಶಃ ಇದು ನಮ್ಮ ಸರ್ಕಾರದ ಸ್ವಭಾವ ಮತ್ತು ನಮ್ಮ ಸಂಸ್ಕೃತಿ ಆಗಿದೆ. ಅದೇ ಸ್ಫೂರ್ತಿಯ ಕಾರಣಕ್ಕಾಗಿ ನಾವು ಸೋಲಿನ ಮಾರ್ಗ ತೊರೆದು ವೇಗದ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಸರ್ವೇಶ್ವರ್ ದಯಾಳ್ ಅವರು ತಮ್ಮ ಪದ್ಯದಲ್ಲಿ ಹೀಗೆ ಬರೆಯುತ್ತಾರೆ..

लीक पर वे चलें जिनके
चरण दुर्बल और हारे हैं,
हमें तो जो हमारी यात्रा से बने
ऐसे अनिर्मित पन्थ ही प्यारे हैं।

 

ಲೀಕ್ ಪರ್ ವೆ ಚಲೇ ಜಿನ್ ಕೆ

ಚರಣ್ ದುರ್ಬಲ್ ಔರ್ ಹಾರೇ ಹೈ

ಹಮೆ ತೋ ಜೋ ಯಮಾರಿ ಯಾತ್ರಾ ಸೆ ಬನೆ

ಐಸೆ ಅನಿರ್ಮಿತ್ ಪಥ್ಯ ಹಿ ಪ್ಯಾರಾ ಹೆ

 

ಮಾನ್ಯ ಸಭಾಧ್ಯಕ್ಷರೇ, ಈಗ ಜನರು ಸರ್ಕಾರವನ್ನು ಮಾತ್ರ ಬದಲಾಯಿಸಿದ್ದಾರೆ ಅಂದಲ್ಲ, ಅವರ ಹಿತಾಸಕ್ತಿಗಳು ಸಹ ಬದಲಾಗುತ್ತವೆ ಎಂದು ನಿರೀಕ್ಷಿಸಲಾಗುತ್ತದೆ. ಹೊಸ ದೃಷ್ಟಿಯೊಂದಿಗೆ ಕೆಲಸ ಮಾಡುವ ಬಯಕೆಯಿಂದ, ಇಲ್ಲಿಗೆ ಬಂದು ಸೇವೆ ಸಲ್ಲಿಸುವ ಅವಕಾಶ ನಮಗೆ ಸಿಕ್ಕಿದೆ. ಆದರೆ ನಾವು ಕೂಡ ಹಿಂದೆ ನೀವು ಯಾವ ಮಾರ್ಗದಲ್ಲಿ ಸಾಗುತ್ತಿದ್ದಿರೋ ಅದೇ ಮಾರ್ಗದಲ್ಲಿ ಸಾಗಿದ್ದರೆ, 70 ವರ್ಷದ ಬಳಿಕವೂ ವಿಧಿ 370ನ್ನು ದೇಶದಲ್ಲಿ ರದ್ದು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದೇ ಮಾರ್ಗದಲ್ಲಿ ಸಾಗಿದ್ದರೆ, ಮುಸ್ಲಿಂ ಸೋದರಿಯರು, ಇನ್ನೂ ತ್ರಿವಳಿ ತಲಾಖ್ ಭೀತಿಯಲ್ಲಿ ನಲುಗಬೇಕಿತ್ತು. ನಾವು ನಿಮ್ಮ ಮಾರ್ಗ ಬಯಸಿದ್ದರೆ, ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಅವಕಾಶ ಇರುತ್ತಿರಲಿಲ್ಲ. ನಾವು ನಿಮ್ಮ ಚಿಂತನೆಗಳನ್ನೇ ಮುಂದುವರಿಸಿದ್ದರೆ, ಆಗ ರಾಮ ಜನ್ಮ ಭೂಮಿ ಇಂದಿಗೂ ವಿವಾದವಾಗೇ ಉಳಿಯುತ್ತಿತ್ತು. ನಿಮ್ಮ ದೃಷ್ಟಿಕೋನವೇ ಇದಿದ್ದರೆ, ಕರ್ತಾರ್ ಪುರ್ ಕಾರಿಡಾರ್ ನಿರ್ಮಾಣವೇ ಆಗುತ್ತಿರಲಿಲ್ಲ.

ನಿಮ್ಮ ದೃಷ್ಟಿಕೋನ, ನಿಮ್ಮ ಮಾರ್ಗ ಮಾತ್ರವೇ ಇದ್ದಿದ್ದರೆ, ಭಾರತ ಬಾಂಗ್ಲಾದೇಶದ ಗಡಿ ವಿವಾದ ಇತ್ಯರ್ಥ ಪಡಿಸುತ್ತಲೇ ಇರಲಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ಗೌರವಾನ್ವಿತ ಸಭಾಧ್ಯಕ್ಷರನ್ನು ನೋಡಿದಾಗ, ಅವರ ಮಾತು ಕೇಳಿದಾಗ, ಮೊಟ್ಟ ಮೊದಲಿಗೆ ನಾನು ಕಿರಣ್ ರಿಜಿಜು ಅವರನ್ನು ಅಭಿನಂದಿಸಲು ಇಚ್ಛಿಸುತ್ತೇನೆ, ಕಾರಣ, ಅವರು ನಡೆಸುತ್ತಿರುವ ಫಿಟ್ ಇಂಡಿಯಾ ಆಂದೋಲನ, ಫಿಟ್ ಇಂಡಿಯಾ ಚಳವಳಿಯನ್ನು ಬಹಳ ಮೆಚ್ಚುಗೆಯ ರೀತಿಯಲ್ಲಿ ಉತ್ತೇಜಿಸುತ್ತಿದೆ. ಅವರು ಭಾಷಣಗಳನ್ನು ಮಾಡುತ್ತಾರೆ ಮತ್ತು ಭಾಷಣಗಳ ಜೊತೆಗೆ ಅವರು ಜಿಮ್ನಲ್ಲಿ ತಾಲೀಮು ಮಾಡುತ್ತಾರೆ. ಇದು ಫಿಟ್ ಇಂಡಿಯಾವನ್ನು ಬಲಪಡಿಸಲು ಕಾರಣವಾಗಿದೆ, ಅದನ್ನು ಉತ್ತೇಜಿಸುತ್ತಿರುವುದಕ್ಕಾಗಿ ಗೌರವಾನ್ವಿತ ಸದಸ್ಯರಿಗೆ ಧನ್ಯವಾದಗಳು.

ಗೌರವಾನ್ವಿತ ಸಭಾಧ್ಯಕ್ಷರೆ,

ನಮ್ಮ ದೇಶ ಸವಾಲುಗಳನ್ನು ಎದುರಿಸಲು ಪ್ರತಿಯೊಂದು ಕ್ಷಣವನ್ನೂ ತಗೆದುಕೊಳ್ಳತ್ತಿದೆ ಎಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಕೆಲವೊಂದು ವೇಳೆ ದೇಶ ಸವಾಲುಗಳತ್ತ ನೋಡದ ಪ್ರವೃತ್ತಿಯನ್ನೂ ಕಂಡಿದೆ. ನಾವು. ಸವಾಲುಗಳನ್ನು ಆರಿಸಿಕೊಳ್ಳುವ ಸಾಮರ್ಥ್ಯ ಇರುವುದಂಥ ಜನರನ್ನೂ ನೋಡಿದ್ದೇವೆ. ಆದರೆ ಇಂದು ವಿಶ್ವ ಭಾರತದಿಂದ ಏನನ್ನು ಅಪೇಕ್ಷಿಸುತ್ತದೆ ಎಂದರೆ,.. ನಾವು ಸವಾಲುಗಳಿಗೆ ಸವಾಲಾಗಿ ನಿಲ್ಲದಿದ್ದರೆ, ನಾವು ಧೈರ್ಯ ತೋರದಿದ್ದರೆ, ದೇಶ ಹಲವು ಸಮಸ್ಯೆಗಳ ಜೊತೆ ದೀರ್ಘಕಾಲ ಸೆಣಸಾಡಬೇಕಾಗುತ್ತದೆ.

ಇದರ ತರುವಾಯ ಮಾನ್ಯ ಸಭಾಧ್ಯಕ್ಷರೆ, ನಾವು ಕಾಂಗ್ರೆಸ್ ಮಾರ್ಗ ಅನುಸರಿಸಿದ್ದರೆ, ಐವತ್ತು ವರ್ಷಗಳ ಬಳಿಕವೂ ದೇಶ ಶತ್ರುಗಳ ಆಸ್ತಿಯ ಕುರಿತಂತೆ ಕಾನೂನಿಗೆ ಕಾಯಬೇಕಾಗುತ್ತಿತ್ತು. 35 ವರ್ಷಗಳ ಬಳಿಕವೂ ದೇಶ ಮುಂದಿನ ಪೀಳಿಗೆಯ ಯುದ್ಧ ವಿಮಾನಗಳಿಗೆ ಕಾಯಬೇಕಾಗುತ್ತಿತ್ತು. 28 ವರ್ಷಗಳ ತರುವಾಯವೂ ಬೇನಾಮಿ ಆಸ್ತಿ ಕಾಯಿದೆ ಜಾರಿಗೆ ಬರುತ್ತಲೇ ಇರಲಿಲ್ಲ. 20 ವರ್ಷಗಳ ನಂತರವೂ ಸೇನಾ ಮುಖ್ಯಸ್ಥರ ನೇಮಕ ಆಗುತ್ತಲೇ ಇರಲಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ, ಮೊದಲ ಹಂತದಲ್ಲಿ ನಮ್ಮ ಸರ್ಕಾರದ ಉದ್ದೇಶ ಹೊಸ ಮಾರ್ಗವನ್ನು ಅನುಸರಿಸುವ ಮೂಲಕ ಹಳೆಯದನ್ನು ತೊರೆಯುವುದಾಗಿದೆ. ಹೀಗಾಗಿಯೇ ಸ್ವಾತಂತ್ರ್ಯ ಬಂದು 70 ವರ್ಷಗಳ ತರುವಾಯ ನಾವು, ದೇಶ ಇನ್ನು ಕಾಯಲು ತಯಾರಿಲ್ಲ ಮತ್ತು ಕಾಯಲೂ ಬಾರದು ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಹೀಗಾಗಿ ವೇಗ ಮತ್ತು ಗಾತ್ರ ದೊಡ್ಡದಾಗಿ ಬೆಳೆಯಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ಇದಕ್ಕೆ ದೃಢ ಸಂಕಲ್ಪವೂ ಇರಬೇಕು ಮತ್ತು ನಿರ್ಣಯವೂ ಇರಬೇಕು. ಪರಿಹಾರದ ಜೊತೆಗೆ ಸಂವೇದನಾಶೀಲತೆ ಇರಬೇಕು. ನಾವು ಕಾರ್ಯ ನಿರ್ವಹಿಸುತ್ತಿರುವ ತ್ವರಿತ ವೇಗ, ಮತ್ತು ಅದರ ಫಲಿತಾಂಶವನ್ನು ದೇಶದ ಜನರು ಪ್ರಥಮ ಐದು ವರ್ಷಗಳಲ್ಲಿ ನೋಡಿದ್ದಾರೆ. ಅದನ್ನು ನೋಡಿದ ಮೇಲೆಯೇ ಇನ್ನೂ ಹೆಚ್ಚು ಬಲದೊಂದಿಗೆ ಅದೇ ವೇಗವಾಗಿ ಸಾಗಲು ಮತ್ತೊಮ್ಮೆ ಇಲ್ಲಿ ನಿಲ್ಲುವ ಅವಕಾಶ ನೀಡಿದ್ದಾರೆ. ಇಷ್ಟು ಅಲ್ಪಾವಧಿಯಲ್ಲಿ 37 ಕೋಟಿ ಜನರು ಬ್ಯಾಂಕ್ ಖಾತೆ ತೆರೆದಿರುವುದು ತ್ವರಿತ ವೇಗವಲ್ಲವೇ. 11 ಕೋಟಿ ಜನರ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಮುಗಿದಿರುವುದು ವೇಗವಲ್ಲವೇ. ಅದು ವೇಗವಾಗಿಲ್ಲದಿದ್ದರೆ 13 ಕೋಟಿ ಮನೆಗಳಲ್ಲಿ ಅಡುಗೆ ಅನಿಲ ಒಲೆಗಳು ಉರಿಯುತ್ತಿದ್ದವೇ. ವೇಗ ಇಲ್ಲದೆ ಇದ್ದಿದ್ದರೆ 2 ಕೋಟಿ ಮನೆಗಳು ಬಡವರಿಗಾಗಿ ನಿರ್ಮಾಣವಾಗುತ್ತಿದ್ದವೇ. ವೇಗ ಇಲ್ಲದೆ ಇದ್ದಿದ್ದರೆ ದೆಹಲಿಯ 1700 ಅಕ್ರಮ ಕಾಲೋನಿಗಳು ದೀರ್ಘಕಾಲದಿಂದ ಹಾಗೆ ಇದ್ದಂತೆ ಇರುತ್ತಿದ್ದವು, 4 ದಶಲಕ್ಷ ಜನರ ಜೀವನ ತೂಗುಯ್ಯಾಲೆಯಲ್ಲೇ ಇರುತ್ತಿತ್ತು. ಕಾರ್ಯ ಮುಗಿದಿರುವುದಷ್ಟೇ ಅಲ್ಲ, ಇಂದು ಅವರು ತಮ್ಮ ಮನೆಯ ಒಡೆತನ ಪಡೆದಿದ್ದಾರೆ.

ಗೌರವಾನ್ವಿತ ಸಭಾಧ್ಯಕ್ಷರೆ,

ಈಶಾನ್ಯ ವಲಯದ ಬಗ್ಗೆಯೂ ಇಲ್ಲಿ ಚರ್ಚೆ ಆಯಿತು. ಈಶಾನ್ಯ ಭಾಗ ತನ್ನ ರಾಜಕೀಯ ಸಮೀಕರಣಗಳನ್ನು ಬದಲಾಯಿಸಿಕೊಳ್ಳಲು ಹಲವು ದಶಕಗಳೇ ಕಾಯಬೇಕಾಯಿತು. ಪರಿಸ್ಥಿತಿ ಅಲ್ಲಿಲ್ಲ, ಹೀಗಾಗಿಯೇ ರಾಜಕೀಯ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪ್ರದೇಶಗಳನ್ನು ಯಾವಾಗಲೂ ಕಡೆಗಣಿಸಲಾಗುತ್ತಿತ್ತು. ನಮಗೆ, ಈಶಾನ್ಯವು ಮತ ಮಾಪಕಗಳಿಂದ ತೂಗಬೇಕಾಗಿರುವ ಪ್ರದೇಶವಲ್ಲ. ಭಾರತದ ನಾಗರಿಕರಿಗೆ, ದೂರದ ಪ್ರದೇಶದಲ್ಲಿ ಕುಳಿತು, ಭಾರತದ ಏಕತೆ ಮತ್ತು ಸಮಗ್ರತೆಗಾಗಿ ಮತ್ತು ದೇಶದ ಪ್ರಗತಿಗೆ ಶ್ರಮಿಸುವ ಅಧಿಕಾರಯುತ ಗೌರವದೊಂದಿಗೆ ಭಾರತದ ಅಭಿವೃದ್ಧಿಗೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವುದಾಗಿದೆ. ಅಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಪ್ರಜೆಯ ಮೇಲೆ ದೊಡ್ಡ ವಿಶ್ವಾಸದೊಂದಿಗೆ ಮುಂದೆ ಸಾಗುವುದು ನಮ್ಮ ಪ್ರಯತ್ನವಾಗಿದೆ. ಇದಕ್ಕಾಗಿಯೇ ಕಳೆದ ಐದು ವರ್ಷಗಳಲ್ಲಿ ಈಶಾನ್ಯದವರಿಗೆ ಸಾಮಾನ್ಯವಾಗಿ ದೂರವಾಗಿ ಹೋಗಿದ್ದ ದೆಹಲಿಯನ್ನು ಅವರ ಮನೆ ಬಾಗಿಲಿಗೇ ನಿಲ್ಲಿಸಲಾಗಿದೆ. ಸಚಿವರು ತಮ್ಮ ಕಚೇರಿಗೆ ನಿಯಮಿತವಾಗಿ ಬರುವುದನ್ನು ಮುಂದುವರಿಸಿದ್ದಾರೆ. 2ನೇ ಹಂತ ಮತ್ತು 3ನೇ ಹಂತದ ಸಣ್ಣ ಪಟ್ಟಣಗಳಲ್ಲಿ ರಾತ್ರಿ ವಾಸ್ತವ್ಯ ಹೂಡುತ್ತಾರೆ. ಜನರೊಂದಿಗೆ ಮಾತುಕತೆ ನಡೆಸುತ್ತಾರೆ ಮತ್ತು ಅವರ ವಿಶ್ವಾಸ ಗಳಿಸಿದ್ದಾರೆ. ಅದು ವಿದ್ಯುತ್ ಇರಲಿ, ಅದು ರೈಲು ಮಾರ್ಗವೇ ಇರಲಿ, ಅದು ವಿಮಾನ ನಿಲ್ದಾಣ ಅಥವಾ ಮೊಬೈಲ್ ಸಂಪರ್ಕವೇ ಇರಲಿ ನಾವು 21ನೇ ಶತಮಾನದ ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿದ್ದೇವೆ.

ವಿಶ್ವಾಸಾರ್ಹ ಫಲಿತಾಂಶವು ನಮ್ಮ ಸರ್ಕಾರದ ಅವಧಿಯಲ್ಲಿ ಗೋಚರಿಸುತ್ತಿದೆ. ಬೋಡೋ ಚರ್ಚೆಯೂ ಇಲ್ಲಿ ಕೇಳಿಬಂತು. ಇದು ಇದೇ ಮೊದಲ ಬಾರಿಗೇನೂ ಆಗಿಲ್ಲ ಎಂದು ಹೇಳಲಾಯಿತು. ನಾವು ಕೂಡ ಇದು ಮೊದಲ ಬಾರಿಗೆ ಆಗಿದೆ ಎಂದು ಹೇಳೇ ಇಲ್ಲ. ಇಂಥ ಹಲವು ಪ್ರಯೋಗಗಳು ನಡೆದಿವೆ. ಇನ್ನೂ ಪ್ರಯೋಗಗಳನ್ನು ಮಾಡಲಾಗುತ್ತಿದೆ ಎಂದು ನಾವು ಹೇಳುತ್ತಿದ್ದೇವೆ. ಆದರೆ, ಇಲ್ಲಿ ಏನೆಲ್ಲಾ ಆಗಿತ್ತೋ ಅದನ್ನು ರಾಜಕೀಯ ಮಾನದಂಡಗಳ ಆಧಾರದ ಮೇಲೆ ಮಾಡಲಾಗಿತ್ತು. ಏನು ಮಾಡಲಾಗಿತ್ತೋ ಅದನ್ನು ಅರೆ ಹೃದಯದಿಂದ ಮಾಡಲಾಗಿತ್ತು. ಏನೆಲ್ಲಾ ಮಾಡಲಾಗಿತ್ತೋ ಅದು ಔಪಚಾರಿಕವಾಗಿತ್ತು. ಹೀಗಾಗಿಯೇ ಒಪ್ಪಂದಗಳು ಕೇವಲ ಕಾಗದದಲ್ಲಿ ಮಾತ್ರ ಉಳಿದಿತ್ತು. ಚಿತ್ರಗಳು ಪ್ರಕಟವಾಗುತ್ತಿದ್ದವು ಮತ್ತು ಚಪ್ಪಾಳೆ ಗಿಟ್ಟುತ್ತಿತ್ತು. . ಅದರ ಬಗ್ಗೆಯೂ ಇಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗುತ್ತಿದೆ.

ಆದರೆ, ಕಾಗದದ ಮೇಲಷ್ಟೇ ಒಪ್ಪಂದ ಉಳಿದಿದೆ, ಹಲವು ವರ್ಷಗಳ ನಂತರವೂ ಬೋಡೋ ಒಪ್ಪಂದ ಸಮಸ್ಯೆ ಪರಿಹರಿಸಿರಲಿಲ್ಲ. 4 ಸಾವಿರ ಮುಗ್ಧ ಜನರು ಹತ್ಯೆಯಾಗಿದ್ದರು. ಹಲವು ಬಗೆಯ ಕಾಯಿಲೆಗಳು ಅವರ ಜೀವಕ್ಕೆ ಕುತ್ತು ತರುತ್ತಿದ್ದವು, ಇದು ಹಾಗೇ ಮುಂದುವರಿದಿತ್ತು. ಈಗ ಮಾಡಿಕೊಳ್ಳಲಾಗಿರುವ ಒಪ್ಪಂದ, ಈಶಾನ್ಯ ವಲಯಕ್ಕೂ ಮತ್ತು ದೇಶದ ಶ್ರೀಸಾಮಾನ್ಯನಿಗೆ ನ್ಯಾಯ ಕೊಡಿಸುವ ಎಲ್ಲರಿಗೂ ತಲುಪಿದೆ. ನಾವು ಪ್ರಯತ್ನ ಮಾಡುವುದೇ ಇಲ್ಲ, ಆದರೂ ನಮ್ಮ ಕಾರ್ಯಗಳು ಪದೇ ಪದೇ ಪ್ರಚಾರಗೊಳ್ಳಬೇಕು, ಸುತ್ತಲೂ ಪಸರಿಸಬೇಕು ಎಂಬುದೂ ಇದೆ, ಆದರೆ ನಾವು ಪ್ರಯತ್ನಿಸುತ್ತೇವೆ ಮತ್ತು ಕಠಿಣ ಪರಿಶ್ರಮ ಹಾಕುತ್ತೇವೆ..

ಆದರೆ, ಬಾರಿ ಒಪ್ಪಂದದಲ್ಲಿ ವೈಶಿಷ್ಟ್ಯತೆ ಇದೆ. ಎಲ್ಲ ಸಶಸ್ತ್ರ ಪಡೆಗಳೂ ಒಟ್ಟಿಗೆ ಬಂದಿವೆ, ಎಲ್ಲ ಭೂಗತರೂ, ಎಲ್ಲ ಶಸ್ತ್ರಾಗಳೊಂದಿಗೆ ಶರಣಾಗಿದ್ದಾರೆ. ಎರಡನೆಯದು, ಇದು ಶಾಂತಿ ಒಪ್ಪಂದವಾಗಿದ್ದು, . ಒಪ್ಪಂದದ ಬಳಿಕ ಬೋಡೋ ಸಮಸ್ಯೆಗೆ ಸಂಬಂಧಿಸಿದ ಯಾವುದೇ ಬೇಡಿಕೆಯಿರುವುದಿಲ್ಲ ಎಂದು ಹೇಳಲಾಗುತ್ತದೆ. ಈಶಾನ್ಯದಲ್ಲಿ ಉದಯಿಸಿದ ಮೊದಲ ಸೂರ್ಯ ನಾವಾಗಿದ್ದೇವೆ ಎನ್ನುತ್ತಾರೆ. ಆದರೂ ಬೆಳಗು ಮಾತ್ರ ಆಗಲಿಲ್ಲ. ಸೂರ್ಯ ಬರುತ್ತಿದ್ದ ಆದರೆ ಕತ್ತಲು ದೂರವಾಗಲೇ ಇಲ್ಲ. ಇಂದು, ನಾನು ಹೇಳುತ್ತೇನೆ. ಇಲ್ಲಿ ಹೊಸ ಸೂರ್ಯೋದಯವಾಗಿದೆ. ಹೊಸ ಬೆಳಕೂ ಮೂಡಿದೆ. ನೀವು ಕನ್ನಡಕ ಬದಲಿಸಿದರೆ ಬೆಳಕೂ ಕಾಣುತ್ತದೆ.

ನಾನು ನಿಮಗೆ ಆಭಾರಿಯಾಗಿದ್ದೇನೆ ಕಾರಣ ನೀವು ನನಗೆ ಮಾತಿನ ಮಧ್ಯೆ ಕೊಂಚ ವಿರಾಮ ನೀಡಿದಿರಿ.

ನಿನ್ನೆ, ಸ್ವಾಮಿ ವಿವೇಕಾನಂದರ ಹೆಗಲ ಮೇಲಿಂದ ಬಂದೂಕಿನಲ್ಲಿ ಗುಂಡು ಹಾರಿಸಲಾಯಿತು. ಆದರೆ, ನಾನು ಒಂದು ಸಣ್ಣ ಕಥೆಯನ್ನು ಸ್ಮರಿಸುತ್ತೇನೆ. ಒಮ್ಮೆ ಕೆಲವು ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ನಾವು ರೈಲಿನಲ್ಲಿ ಹೋಗುವಾಗ ಅದು ವೇಗ ಪಡೆದುಕೊಂಡಾಗ ಹಳಿಯಿಂದ ಶಬ್ದ ಬರುತ್ತದೆ ಎಂಬುದು ಎಲ್ಲರ ಅನುಭವ. ಅಲ್ಲಿ ಒಬ್ಬ ಸಂತ ಮಹಾತ್ಮ ಕುಳಿತಿದ್ದರು, ಅವರು, ನೋಡಿ ಹಳಿಯಲ್ಲಿ ಏನೋ ಶಬ್ದ ಬರುತ್ತಿದೆ ನೋಡಿ ನಿರ್ಜೀವವಾದ ಹಳಿ ಕೂಡ ಪ್ರಭು ಕರ್ ದೇ ಬೇಡ ಪಾರ್ ( ದೇವರೆ ನಮ್ಮ ಗಣ್ಯ ತಲುಪಲು ಸಹಾಯ ಮಾಡು) ಎಂದು ಹೇಳುತ್ತಿದೆ.. ಎಂದರು. ಆಗ ಮತ್ತೊಬ್ಬ ಸಂತರು ಇಲ್ಲ, . ನನಗೆ ಪ್ರಭು ತೇರಿ ಲೀಲಾ ಅಪರಂಪರ್ ( ದೇವರೆ ನಿನ್ನ ಸೃಷ್ಟಿ ಅಪರಿಮಿತ) ಎಂದು ಕೇಳುತ್ತಿದೆ ಎಂದರು. ಅವರಲ್ಲಿ ಒಬ್ಬರು ಮೌಲ್ವಿ ಇದ್ದರು ಇಲ್ಲ ನನಗೆ ಬೇರೆಯದೇ ಕೇಳುತ್ತಿದೆ. ಆಗ ಸಂತರು ಕೇಳಿದರು ನಿನಗೆ ಏನು ಕೇಳಿಸುತ್ತಿದೆ. ಆಗ ಮೌಲ್ವಿ ಹೇಳಿದರು ಯಾ ಅಲ್ಹಾ ತೇರಿ ರಹಮತ್... ( ಹೇ ದೇವರೇ ನಿನ್ನ ಕೃಪೆ) ಅಲ್ಲ ಒಬ್ಬರು ಪೈಲ್ವಾನ್ ಇದ್ದರು, ಅವರು ನನಗೆ ಖಾ ರಬ್ಡಿ, ಕರ್ ಕಸರತ್ (ರಬ್ಡಿ ತಿನ್ನಿ ಕಸರತ್ತು ಮಾಡಿ) ಎಂದು ಕೇಳುತ್ತಿದೆ ಎಂದರು.

ನಿನ್ನೆ, ವಿವೇಕಾನಂದರ ಹೆಸರಿನಲ್ಲಿ ಹೇಳಿರುವುದು ಅವರ ಮನಸ್ಸಿನಲ್ಲಿ ಏನಿರುತ್ತದೋ ಅದೇ ರೀತಿ ಹೊರಬಂದಿದೆ. ಅದನ್ನು ನೋಡಲು ಇಷ್ಟು ದೂರ ನೋಡುವ ಅಗತ್ಯ ಇರಲಿಲ್ಲ. ಹತ್ತಿರದಲ್ಲೇ ಇತ್ತು.

ಮಾನ್ಯ ಸಭಾಧ್ಯಕ್ಷರೇ,

ನಾನು ರೈತರ ಬಗ್ಗೆ ಚರ್ಚೆಯನ್ನೂ ಕೇಳಿದೆ. ಹಲವು ಮಹತ್ವ ಕಾರ್ಯಗಳ, ಹೊಸ ವಿಧಾನಗಳ ಬಗ್ಗೆ, ಹೊಸ ಆಲೋಚನೆಯಲ್ಲಿ ಹೇಳಲಾಗಿದೆ. ಮಾನ್ಯ ರಾಷ್ಟ್ರಪತಿಯವರು ಕೂಡ ತಮ್ಮ ಭಾಷಣದಲ್ಲಿ ಇದನ್ನು ಹೇಳಿದ್ದಾರೆ. ಆದರೆ, ಇಲ್ಲಿ ಯಾವ ರೀತಿ ಚರ್ಚೆ ಮಾಡುವ ಪ್ರಯತ್ನ ನಡೆದಿದೆಯೋ. ಅದು ಉದ್ದೇಶಪೂರ್ವಕವೋ ಅಥವಾ ಅರಿವಿನ ಕೊರತೆಯೋ ಗೊತ್ತಿಲ್ಲ. ಆದರೆ ಕಲವು ಹೀಗೆ ಇರುತ್ತವೆ, ನಮಗೆ ಅರಿವಿದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ.ನಮಗೆಲ್ಲಾ ಗೊತ್ತು ಒಂದೂವರೆ ಪಟ್ಟು ಆದಾಯ ಪ್ರತ್ಯೇಕ ವಿಚಾರ. ಇದು ಹಲವು ವರ್ಷದಿಂದ ಹಾಗೇ ಇದೆ. ಇದು ನಮ್ಮ ಕಾಲದ್ದಲ್ಲ. ಆದರೂ ಅದು ನಮ್ಮ ಜವಾಬ್ದಾರಿ. ನಾವು ಕಾರ್ಯವನ್ನು ಮಾಡಿದ್ದೇವೆ. ನೀರಾವರಿ ಯೋಜನೆಗಳು 20-20 ವರ್ಷಗಳಿಂದ ಹಾಗೇ ಬಿದ್ದಿವೆ. ಯಾರೊಬ್ಬರೂ ಕೇಳುತ್ತಿರಲಿಲ್ಲ. ಫೋಟೋ ತೆಗೆಸಿಕೊಂಡರೆ ಮುಗಿದು ಹೋಗುತ್ತಿತ್ತು. ನಾವು ಅಂತಹ 99 ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು 1 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ ಮತ್ತು ಈಗ ರೈತರಿಗೆ ಅದರ ಪ್ರಯೋಜನ ದೊರಕುತ್ತಿದೆ.

ಪ್ರಧಾನಮಂತ್ರಿ ಫಸಲು ವಿಮೆ ಯೋಜನೆ ಅಡಿಯಲ್ಲಿ ಒಪ್ಪಂದ ಬರುತ್ತದೆ. ರೈತರಲ್ಲಿ ಇದರ ಬಗ್ಗೆ ನಿರಂತರ ವಿಶ್ವಾಸ ಮೂಡಿದೆ. 13 ಸಾವಿರ ಕೋಟಿ ರೂಪಾಯಿ ವಿಮಾ ಕಂತು ರೈತರಿಂದ ಬರುತ್ತಿದೆ. ಆದರೆ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ರೈತರು ಪಡೆದಿರುವ ಪರಿಹಾರ 56 ಸಾವಿರ ಕೋಟಿ ರೂಪಾಯಿ. ರೈತರ ಆದಾಯ ಹೆಚ್ಚಳವಾಗಿದೆ. ಇದು ನಮ್ಮ ಆದ್ಯತೆಯಾಗಿದೆ. ರೈತರ ಕೃಷಿ ವೆಚ್ಚ ತಗ್ಗಿಸುವುದು ನಮ್ಮ ಆದ್ಯತೆಯಾಗಿದೆ. ಹಿಂದೆ ಎಂ.ಎಸ್.ಪಿ. ಹೆಸರಲ್ಲಿ ಏನಾಗುತ್ತಿತ್ತು, ದೇಶದಲ್ಲಿ ಲಕ್ಷ ಟನ್ ಎಣ್ಣೆ ಕಾಳು ಮತ್ತು ದ್ವಿದಳ ಧಾನ್ಯ ಖರೀದಿಸಲಾಗುತ್ತಿತ್ತು. ಆದರೆ ಈಗ ನಮ್ಮ ಅವಧಿಯಲ್ಲಿ 100 ಲಕ್ಷ ಟನ್ ಆಗಿದೆ. -ನಾಮ್ ಯೋಜನೆ ಇಂದು ಡಿಜಿಟಲ್ ವಿಶ್ವವಾಗಿದೆ. ರೈತರು ಜಾಗತಿಕ ಬೆಲೆಯನ್ನು ತಮ್ಮ ಮೊಬೈಲ್ ಗಳಲ್ಲಿ ನೋಡಿ ಅರ್ಥ ಮಾಡಿಕೊಳ್ಳುತ್ತಾರೆ. ನಾಮ್ ಯೋಜನೆಯಡಿ ರೈತರು ತಮ್ಮ ಉತ್ಪನ್ನ ಮಾರಾಟ ಮಾಡುತ್ತಾರೆ. 1 ಕೋಟಿ 75 ಸಾವಿರ ರೈತರು ಯೋಜನೆಯಲ್ಲಿ ಈಗ ಸೇರಿದ್ದಾರೆ. ರೈತರಿಂದ ನಾಮ್ ಯೋಜನೆಯಲ್ಲಿ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಉತ್ಪನ್ನ ಮಾರಾಟವಾಗಿದೆ. ನಾವು ಕಿಸಾನ್ ಕ್ರೆಡಿಟ್ ಕಾರ್ಡ್ ಜನಪ್ರಿಯಗೊಳಿಸಿದ್ದೇವೆ. ಕೃಷಿಗೆ ಪೂರಕ ಚಟುವಟಿಕೆಗಳಾದ ಪಶು ಸಂಗೋಪನೆ, ಮೀನು ಕೃಷಿ, ಕೋಳಿ ಸಾಕಾಣಿಕೆಗೆ ಉತ್ತೇಜನ ನೀಡಿದ್ದೇವೆ. ಸೌರ ವಿದ್ಯುತ್ ನತ್ತ ಸಾಗಲು ಒಂದು ಪ್ರಯತ್ನ ನಡೆಯಬೇಕಿದೆ. ಸೌರ ಪಂಪ್ ಗಳ ಬಗ್ಗೆ ಮಾತನಾಡುತ್ತೇವೆ. ಹಲವು ಹೊಸ ಅಂಶಗಳ ಸೇರ್ಪಡೆಯಾಗಿದೆ. ಇದೆಲ್ಲದರಿಂದಾಗಿ ನಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಇಂದು ದೊಡ್ಡ ಬದಲಾವಣೆ ಆಗಿದೆ.

2014ರಲ್ಲಿ ನಾವು ಅಧಿಕಾರಕ್ಕೆ ಬರುವ ಮೊದಲು, ಕೃಷಿ ಸಚಿವಾಲಯದ ಬಜೆಟ್ ಗಾತ್ರ 27 ಸಾವಿರ ಕೋಟಿ ರೂಪಾಯಿ ಆಗಿತ್ತು. ಈಗ ಅದು 5 ಪಟ್ಟು ಹೆಚ್ಚಳವಾಗಿದೆ. 27 ಸಾವಿರ ಕೋಟಿ ರೂ.ನಿಂದ ಒಂದೂವರೆ ಲಕ್ಷ ಕೋಟಿ ರೂ. ಆಗಿದೆ. ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ನೇರವಾಗಿ ಹಣ ಹೋಗುತ್ತದೆ. ಈವರೆಗೆ 45 ಸಾವಿರ ಕೋಟಿ ರೂಪಾಯಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಯಾವುದೇ ಮಧ್ಯವರ್ತಿಗೆ ಅವಕಾಶವಿಲ್ಲ. ಯಾವುದೇ ಕಡತಗಳ ಸಂಘರ್ಷವಿಲ್ಲ. ಒಂದು ಗುಂಡಿ ಒತ್ತಿದರೆ ಹಣ ವರ್ಗಾವಣೆ ಆಗುತ್ತದೆ. ಖಂಡಿತ ನಾವು ರಾಜಕೀಯ ಮಾಡಬೇಕು, ನನಗೆ ಗೊತ್ತು ಆದರೂ ನಾನು ಇಲ್ಲಿರುವ ಅನೇಕ ಸದಸ್ಯರನ್ನು ಒತ್ತಾಯಿಸುತ್ತೇನೆರೈತರ ಹಿತಾಸಕ್ತಿಗಳೊಂದಿಗೆ ರಾಜಕೀಯ ಮಾಡುವುದು ಸರಿಯೇ. ಆದರೂ ನಾವು ರೈತರ ಹಿತಾಸಕ್ತಿಯ ವಿಚಾರದಲ್ಲಿ ಆಟ ಆಡುತ್ತೇವೆ. ರೈತರ ಹೆಸರಿನಲ್ಲಿ ಜೋರಾಗಿ ಮಾತನಾಡುವ ಸದಸ್ಯರು ತಮ್ಮ ತಮ್ಮ ರಾಜ್ಯದ ವಿಷಯದ ಬಗ್ಗೆ ಗಮನ ಹರಿಸುವಂತೆ ಕೋರುತ್ತೇನೆ. ತಮ್ಮ ರಾಜ್ಯದ ರೈತರು ಕಿಸಾನ್ ಸಮ್ಮಾನ್ ನಿಧಿಯನ್ನು ಪಡೆಯುತ್ತಿದ್ದಾರೋ ಇಲ್ಲವೋ ಎಂಬುದನ್ನೂ ನೋಡಬೇಕು.

ಅದಕ್ಕಾಗಿ, ಇನ್ನೂ ಕೆಲವು ಸರ್ಕಾರಗಳು ಏಕೆ ತಮ್ಮ ರೈತರ ಪಟ್ಟಿಯನ್ನು ನೀಡಿಲ್ಲ. ಅವರು ಏಕೆ ಯೋಜನೆಯಲ್ಲಿ ಸೇರ್ಪಡೆಯಾಗಿಲ್ಲ?.ಇದರಿಂದ ಯಾರಿಗೆ ತೊಂದರೆಯಾಗಿದೆ, ಯಾರು ನಷ್ಟ ಅನುಭವಿಸಿದ್ದಾರೆ, ಅದು ರಾಜ್ಯದ ರೈತರು ಮಾತ್ರ. ಇದರ ಬಗ್ಗೆ ಕೆಲವರಿಗೆ ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ, ಅದರಿಂದ ಏನಾಗುತ್ತಿದೆ ಎಂದು ನನಗೆ ಗೊತ್ತು. ರೈತರ ಬಗ್ಗೆ ಮಾತನಾಡಿರುವ ಅಂಥ ಗೌರವಾನ್ವಿತ ಸದಸ್ಯರುಗಳಿಗೆ ನಾನು ಹೇಳಲು ಇಚ್ಛಿಸುತ್ತೇನೆ. ತಮ್ಮ ರಾಜ್ಯದಲ್ಲಿ ಅಂಥ ದೊಡ್ಡ ಮಾತುಗಳನ್ನು ಆಡಿ, ಮತ ಪಡೆದು ಅಧಿಕಾರ ಹಿಡಿದವರು, ರೈತರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿದ್ದಾರೆಯೇ.? ಇಲ್ಲ ಅದು ಈಡೇರಿಲ್ಲ. ಕನಿಷ್ಠ ಇಲ್ಲಿ ಕುಳಿತಿರುವ ರಾಜ್ಯದ ಪ್ರತಿನಿಧಿಗಳೂ ಆದ ಕೆಲವು ಗೌರವಾನ್ವಿತ ಸದಸ್ಯರು ರೈತರಿಗೆ ಅವರ ಹಕ್ಕು ಕೊಡುವ ನಿಟ್ಟಿನಲ್ಲಿ ಹಿಂಜರಿಯಬಾರದು ಎಂಬುದನ್ನು ತಿಳಿಸಬೇಕು.

ಮಾನ್ಯ ಸಭಾಧ್ಯಕ್ಷರೇ,

ಸರ್ವ ಪಕ್ಷ ಸಭೆ ನಡೆದಾಗ, ನಾನು ಸವಿಸ್ತಾರವಾಗಿ ಮನವಿ ಮಾಡಿದ್ದೆ ಮತ್ತು ನನ್ನ ನಿಲುವು ವ್ಯಕ್ತಪಡಿಸಿದ್ದೆ. ಆದಾದ ತರುವಾಯ ಮತ್ತು ಸಂಸತ್ತಿನ ಅಧಿವೇಶನ ಆರಂಭಕ್ಕೆ ಮುನ್ನ ನಾನು ಮಾಧ್ಯಮಗಳೊಂದಿಗೆ ಮಾತನಾಡುವಾಗ, ನಾನು ದೇಶದ ಆರ್ಥಿಕ ಸನ್ನಿವೇಶದ ಬಗ್ಗೆ ಚರ್ಚೆ ಮಾಡಲು ನಮ್ಮ ಸಮಯವನ್ನು ಮುಡಿಪಾಗಿಡಬೇಕು ಎಂದು ತಿಳಿಸಿದ್ದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಸನ್ನಿವೇಶದ ಲಾಭ ಪಡೆಯಲು ಭಾರತ ತೆಗೆದುಕೊಳ್ಳಬೇಕಾದ ಕ್ರಮಗಳು ಯಾವುವು ಮತ್ತು ಸಾಗಬೇಕಾದ ದಿಕ್ಕಿನ ಕುರಿತಂತೆ ಗ್ರಹಿಕೆ, ಸಾಮರ್ಥ್ಯ ಮತ್ತು ಪ್ರತಿಭೆಗಳ ಸಂಯೋಜನೆಯನ್ನು ನಾವು ಸದನದ ಮುಂದೆ ತಂದಿದ್ದೇವೆ. ಅಧಿವೇಶನ ಎಲ್ಲಿಯವರೆಗೆ ನಡೆಯುತ್ತದೆಯೋ ಮತ್ತು ವಿರಾಮದ ಬಳಿಕ ಮತ್ತೆ ಸೇರುವಾಗ ನಾವು ಸಮಗ್ರವಾಗಿ ಹೊಸ ಸಲಹೆಗಳೊಂದಿಗೆ ಮಾತನಾಡಬೇಕು, ಆಗ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ದೇಶ ಮುನ್ನಡೆಯಲು ಸಾಧ್ಯವಾಗುತ್ತದೆ. ನಾನು ಇದಕ್ಕೆ ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ.

ಹೌದು, ಮಹತ್ವದ ಆರ್ಥಿಕ ವಿಚಾರಗಳಲ್ಲಿ ಸಂಘಟಿತ ಜವಾಬ್ದಾರಿ ಇರುತ್ತದೆ ಎಂಬುದನ್ನು ನಾನು ಒಪ್ಪುತ್ತೇನೆ. ನಾವು ಹಿಂದಿನದನ್ನು ಮರೆಯಲು ಸಾಧ್ಯವಿಲ್ಲ ಏಕೆಂದರೆ ನಾವು ಇಂದು ಎಲ್ಲಿ ನಿಲ್ಲುತ್ತೇವೆ ಎಂದು ತಿಳಿಯಲು, ನಾವು ಹಿಂದೆ ಎಲ್ಲಿದ್ದೆವು ಎಂದು ತಿಳಿದುಕೊಳ್ಳುವುದು ಅವಶ್ಯಕ. ಇದು ನಿಜ, ಆದರೆ, ನಮ್ಮ ಗೌರವಾನ್ವಿತ ಸದಸ್ಯರು ಇದು ಏಕೆ ಆಗಲಿಲ್ಲ, ಯಾವಾಗ ಆಗುತ್ತದೆ, ಅದು ಹೇಗೆ ಆಗುತ್ತದೆ ಮತ್ತು ಯಾವಾಗ ಆಗುತ್ತದೆ ಎಂಬುದನ್ನು ಹೇಳಬೇಕು. ನೀವು ಟೀಕಿಸುತ್ತೀರಿ ಎಂದು ಕೆಲವರು ಭಾವಿಸುತ್ತಾರೆ, ಆದರೆ ನೀವು ಟೀಕಿಸುತ್ತಿದ್ದೀರಿ ಎಂಬುದನ್ನು ನಾನು ಒಪ್ಪುವುದಿಲ್ಲ. ನೀವು ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಏನಾದರೂ ಆಗಬೇಕಾದರೆ ಅವರು ಅದನ್ನು ಮಾಡುತ್ತಾರೆ ಎಂಬ ನಂಬಿಕೆ ನಿಮ್ಮಲ್ಲಿದೆಮತ್ತು ಆದ್ದರಿಂದ, ನಾನು ವಿಷಯಗಳನ್ನು ಟೀಕೆ ಎಂದು ತೆಗೆದುಕೊಳ್ಳುವುದಿಲ್ಲ. ನಾನು ಮಾರ್ಗದರ್ಶನ, ಸ್ಫೂರ್ತಿಯನ್ನು ನಂಬುತ್ತೇನೆ ಮತ್ತು ಆದ್ದರಿಂದ ನಾನು ಎಲ್ಲಾ ಸಲಹೆಗಳನ್ನು ಸ್ವಾಗತಿಸುತ್ತೇನೆ ಮತ್ತು ಅದನ್ನು ಸ್ವೀಕರಿಸಲು ನಾನು ಪ್ರಯತ್ನಿಸುತ್ತೇನೆ. ಆದ್ದರಿಂದ, ಯಾವುದೇ ಸಲಹೆಗಳು ಮುಂದೆ ಬಂದಿರುವುದನ್ನು ನಾನು ವಿಶೇಷವಾಗಿ ಸ್ವಾಗತಿಸುತ್ತೇನೆ. ನಾನು ಮಾರ್ಗದರ್ಶನದಲ್ಲಿ, ಸ್ಫೂರ್ತಿಯಲ್ಲಿ ನಂಬಿಕೆ ಇಟ್ಟಿದ್ದೇನೆ. ಹೀಗಾಗಿ ನಾನು ಎಲ್ಲ ಸಲಹೆಗಳನ್ನು ಸ್ವಾಗತಿಸುತ್ತೇನೆ ಮತ್ತು ಅದನ್ನು ಒಪ್ಪಿಕೊಳ್ಳಲು ಪ್ರಯತ್ನಿಸುತ್ತೇನೆ. ಆದ್ದರಿಂದ ಯಾವುದೇ ರೀತಿಯ ಸಲಹೆ ಬಂದರೂ ಸ್ವಾಗತಿಸುತ್ತೇನೆ. ಅದು ಆಗಿಲ್ಲ. ಯಾವಾಗ ಆಗುತ್ತದೆ, ಅದು ಹೇಗೆ ಆಗುತ್ತದೆ ಎಂಬುದಕ್ಕೆ ಇವೆಲ್ಲವೂ ಉತ್ತಮ ಅಂಶಗಳು. ನಾವೆಲ್ಲರೂ ನಮ್ಮ ದೇಶದ ಬಗ್ಗೆ ಚಿಂತಿಸುತ್ತೇವೆ. ಆದರೆ, ಭೂತಕಾಲದ ಅರಿವಿಲ್ಲದೆ ವರ್ತಮಾನವನ್ನು ಬೆಸೆಯುವುದು ಕಷ್ಟಸಾಧ್ಯ. ನಮಗೆಲ್ಲರಿಗೂ ಭೂತಕಾಲದ ಅರಿವಿದೆ. ಪತ್ರಿಕೆಗಳ ಶೀರ್ಷಿಕೆಗಳಲ್ಲಿ ಭ್ರಷ್ಟಾಚಾರ ಪ್ರಮುಖವಾಗಿ ಕಾಣುತ್ತಿತ್ತು. ಮನೆಗಳಲ್ಲೂ ಭ್ರಷ್ಟಾಚಾರದ ವಿರುದ್ಧ ಆಕ್ರೋಶಗಳು ಕೇಳಿಬರುತ್ತಿದ್ದವು. ಆಗಲೂ ಇದನ್ನೇ ಹೇಳುತ್ತಿದ್ದರು. ವೃತ್ತಿಪರವಲ್ಲದ ಬ್ಯಾಕಿಂಗ್ ಅನ್ನು ಯಾರು ತಾನೆ ಮರೆಯಲು ಸಾಧ್ಯ. ಯಾರು ತಾನೆ ದುರ್ಬಲವಾದ ಮೂಲಸೌಕರ್ಯ ನೀತಿಯನ್ನು ಮರೆಯುತ್ತಾರೆ? ಒಂದು ನಿರ್ದಿಷ್ಟ ದಿಕ್ಕಿನೊಂದಿಗೆ ಮತ್ತು ದೀರ್ಘಕಾಲೀನ ಗುರಿಗಳೊಂದಿಗೆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಪರಿಸ್ಥಿತಿಯಿಂದ ಹೊರಬರಲು ನಾವು ಏಕೀಕೃತ ಪ್ರಯತ್ನಗಳನ್ನು ಮಾಡಿದ್ದೇವೆ. ಎಲ್ಲ ಪ್ರಯತ್ನಗಳ ಫಲವಾಗಿ ಇಂದು, ನಾವು ವಿತ್ತೀಯ ಕೊರತೆಯನ್ನು ತಗ್ಗಿಸಿದ್ದೇವೆ, ಬೆಲೆ ಏರಿಕೆ ನಿಯಂತ್ರಣದಲ್ಲಿದೆ. ವಿಸ್ತೃತ ಆರ್ಥಿಕ ಸ್ಥಿರತೆಯೂ ಇದೆ ಎಂಬ ವಿಶ್ವಾಸ ನನಗಿದೆ. ನೀವೆಲ್ಲರೂ ನನ್ನ ಮೇಲೆ ವಿಶ್ವಾಸವಿಟ್ಟಿದ್ದೀರಿ ಅದಕ್ಕಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ. ನಾವು ಅದನ್ನು ಮಾಡುತ್ತೇವೆ. ಆದರೆ, ಒಂದು ಕಾರ್ಯವನ್ನಂತೂ ನಾವು ಮಾಡುವುದಿಲ್ಲ. ಅದು ಆಗಲೂ ಬಿಡುವುದಿಲ್ಲ, ಅದೇನೆಂದರೆ ನಿಮ್ಮ (ಪ್ರತಿಪಕ್ಷದವರ) ನಿರುದ್ಯೋಗವನ್ನು ನಿವಾರಿಸಲು ಬಿಡುವುದಿಲ್ಲ. ಜಿಎಸ್ಟಿ ಕುರಿತಂತೆ ಒಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದು ಸಾಂಸ್ಥಿಕ ತೆರಿಗೆ ಕಡಿತ ಆಗಿರಲಿ, ಐಬಿಸಿ ಜಾರಿ ಇರಲಿ, ಎಫ್.ಡಿ.. ಆಡಳಿತದ ಉದಾರೀಕರಣವಿರಲಿ, ಅಥವಾ ಬ್ಯಾಂಕ್ ಗಳ ಪುನರ್ ಬಂಡವಾಳೀಕರಣವೇ ಆಗಿರಲಿ. ಆರ್ಥಿಕತೆಗೆ ದೀರ್ಘಕಾಲೀನ ಚೈತನ್ಯ ನೀಡುವಂಥ ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಳ್ಳುತ್ತಿದೆ. ನಾವು ಕ್ರಮಗಳಿಂದ ಪಡೆದ ಫಲವನ್ನು ಕಾಣಬಹುದಾಗಿದೆ. ನಮ್ಮ ಸರ್ಕಾರ ಎಲ್ಲ ಸುಧಾರಣೆಗಳನ್ನೂ ಜಾರಿ ಮಾಡುತ್ತಿದೆ, ಇದರ ಬಗ್ಗೆ ನಿಮ್ಮ ಸರ್ಕಾರದ ಅವಧಿಯಲ್ಲಿ ತಜ್ಞರು ಮತ್ತು ಆರ್ಥಿಕ ತಜ್ಞರು ವಿವರವಾಗಿ ಮಾತನಾಡುತ್ತಿದ್ದರು, ಆದರೆ ಅದು ಎಂದಿಗೂ ಅನುಷ್ಠಾನಕ್ಕೆ ಬರಲೇ ಇಲ್ಲ. ನಾವು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡೆವು ಮತ್ತು ಆರ್ಥಿಕತೆಗೆ ಬಲ ನೀಡಿದೆವು.

ಜನವರಿ 2019ರಿಂದ ಜನವರಿ 2020ರವರೆಗೆ ಜಿಎಸ್ಟಿ ಆದಾಯ ಆರು ಬಾರಿ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ದಾಖಲಾಗಿದೆ. ನಾನು ಎಫ್.ಡಿ.. ಬಗ್ಗೆ ಮಾತನಾಡುವುದಾದರೆ, 2018 ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಅದು 22 ಶತಕೋಟಿ ಡಾಲರ್ ಆಗಿತ್ತು. ಇಂದು ಅದೇ ಅವಧಿಯಲ್ಲಿ ಎಫ್.ಡಿ.. 26 ಶತಕೋಟಿ ಡಾಲರ್ ಮೀರಿದೆ. ಇದು ವಿದೇಶೀ ಹೂಡಿಕೆದಾರರಲ್ಲಿ ದೇಶದ ಬಗ್ಗೆ ಮತ್ತು ಆರ್ಥಿಕತೆಯ ಬಗ್ಗೆ ವಿಶ್ವಾಸ ಹೆಚ್ಚಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆರ್ಥಿಕ ಜಗತ್ತಿನಲ್ಲಿ ಅಸಂಖ್ಯಾತ ಅವಕಾಶಗಳಿವೆ. ಇದು ವಿದೇಶೀ ಹೂಡಿಕೆದಾರರ ದೃಢ ನಿಲುವಾಗಿದೆ ಮತ್ತು ಹೀಗಾಗಿಯೇ ಜನರು ಇಲ್ಲಿ ಬಂದು ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿಯೇ ವದಂತಿಗಳ ನಡುವೆಯೂ ಜನ ಬಂದು ಹೂಡಿಕೆ ಮಾಡುತ್ತಿರುವುದು ದೊಡ್ಡ ಸಾಧನೆಯಾಗಿದೆ.

ನಮ್ಮ ಮುನ್ನೋಟ ಬೃಹತ್ ಹೂಡಿಕೆಯಾಗಿದೆ, ಉತ್ತಮ ಮೂಲಸೌಕರ್ಯವಾಗಿದೆ, ಮೌಲ್ಯವರ್ಧನೆಯ ಹೆಚ್ಚಳವಾಗಿದೆ ಮತ್ತು ಗರಿಷ್ಠ ಉದ್ಯೋಗ ಸೃಷ್ಟಿ ನಮ್ಮ ಉದ್ದೇಶವಾಗಿದೆ.

ನಾನು ರೈತರಿಂದ ಸಾಕಷ್ಟು ಕಲಿತಿದ್ದೇನೆ. ರೈತರು ಜಮೀನಿನಲ್ಲಿ ಸುಡು ಬಿಸಿಲಲ್ಲಿ ಹೆಜ್ಜೆ ಇಡುತ್ತಾರೆ, ಅವರು ಸರಿಯಾದ ಸಮಯದಲ್ಲಿ ಬೀಜಗಳನ್ನು ನೆಡುತ್ತಾರೆ. ಅಲ್ಲಿಯವರೆಗೆ ಅವರು ಬೀಜಗಳನ್ನು ಬಿತ್ತುವುದಿಲ್ಲ. ಕಳೆದ 10 ನಿಮಿಷಗಳಿಂದ ಏನು ನಡೆಯುತ್ತಿದೆ ಎಂದರೆ,, ನಾನು ಹೊಲವನ್ನು ಉಳುತ್ತಿದ್ದೇನೆ. ಈಗ ನೀವು ಸಿದ್ಧರಾಗಿದ್ದೀರಿ, ಹೀಗಾಗಿ ನಾನು ಬೀಜವನ್ನು ಒಂದೊಂದಾಗಿ ಬಿತ್ತನೆ ಮಾಡುತ್ತೇನೆ.

ಗೌರವಾನ್ವಿತ ಸಭಾಧ್ಯಕ್ಷರೆ,

ಮುದ್ರಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾಗಳು ಸ್ವಯಂ ಉದ್ಯೋಗದಲ್ಲಿ ಅಪಾರ ನೆರವು ನೀಡಿವೆ. ಮುದ್ರಾ ಯೋಜನೆ ಬಳಸಿಕೊಂಡು ಕೇವಲ ಕೋಟ್ಯಂತರ ಜನರು ತಾವೇ ಸಂಪಾದಿಸುತ್ತಿರುವುದಷ್ಟೇ ಅಲ್ಲ, ಒಬ್ಬರಿಗೆ, ಇಬ್ಬರಿಗೆ ಮೂರು ಜನರಿಗೆ ಉದ್ಯೋಗ ನೀಡುವಲ್ಲೂ ಯಶಸ್ವಿಯಾಗಿದ್ದಾರೆ. ಇದಷ್ಟೇ ಅಲ್ಲ, ಬ್ಯಾಂಕ್ ನಿಂದ ಹಣ ಪಡೆಯುವ ಶೇಕಡ 70ರಷ್ಟು ಮುದ್ರಾ ಯೋಜನೆಯ ಫಲಾನುಭವಿಗಳು ನಮ್ಮ ತಾಯಂದಿರು ಮತ್ತು ಸೋದರಿಯರಾಗಿದ್ದಾರೆ. ಇವರೆಲ್ಲರೂ ಆರ್ಥಿಕವಾಗಿ ಸಕ್ರಿಯರಾಗಿದ್ದವರಲ್ಲ ಆದರೂ ಅವರು ದೇಶದ ಆರ್ಥಿಕ ವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. 28 ಸಾವಿರ ನವೋದ್ಯಮಗಳನ್ನು ಗುರುತಿಸಲಾಗಿದೆ ನನಗೆ ಹರ್ಷ ತರುವ ವಿಷಯ ಎಂದರೆ, ಇವೆಲ್ಲವೂ 2-3ನೇ ಹಂತದ ನಗರಗಳಲ್ಲಿವೆ. ಅಂದರೆ ದೇಶದ ಯುವಜನರು ಹೊಸ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದಾರೆ. 22 ಕೋಟಿಗೂ ಹೆಚ್ಚು ಸಾಲ ಅಂಗೀಕರಿಸಲಾಗಿದ್ದು, ಕೋಟ್ಯಂತರ ಜನರಿಗೆ ಉದ್ಯೋಗ ಸಿಕ್ಕಿದೆ.

ವಿಶ್ವ ಬ್ಯಾಂಕ್ ದತ್ತಾಂಶದ ರೀತ್ಯ ಭಾರತ ಉದ್ಯಮಶೀಲತೆಯಲ್ಲಿ 3ನೇ ಸ್ಥಾನದಲ್ಲಿದೆ. 2017 ಸೆಪ್ಟಂಬರ್ ನಿಂದ 2019 ನವೆಂಬರ್ ವರೆಗೆ ಒಂದು ಕೋಟಿ 49 ಲಕ್ಷ ಹೊಸ ಚಂದಾದಾರರು ಇಪಿಎಫ್. ವೇತನ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಅವರೆಲ್ಲರೂ ಕೆಲಸ ಇಲ್ಲದೆ ಹಣ ಜಮೆ ಮಾಡಲು ಸಾಧ್ಯವಿಲ್ಲ. ನಿನ್ನೆ, ಕಾಂಗ್ರೆಸ್ ನಾಯಕರೊಬ್ಬರ ಭಾಷಣ ನಾನು ಕೇಳಿದೆ. ಮುಂದಿನ ಆರು ತಿಂಗಳುಗಳಲ್ಲಿ ಜನರು ಮೋದಿಗೆ ದೊಣ್ಣೆಯಿಂದ ಹೊಡೆಯುತ್ತಾರೆ ಎಂದು ಹೇಳಿದರು. ಇದು ನಿಜಕ್ಕೂ ಕಷ್ಟ ಅದಕ್ಕಾಗಿಯೇ ಅದಕ್ಕೆ ಆರು ತಿಂಗಳುಗಳ ಸಮಯ ಬೇಕು. ಆರು ತಿಂಗಳು ಒಳ್ಳೇದೆ. ನಾನು ಮುಂದಿನ ಆರು ತಿಂಗಳುಗಳಲ್ಲಿ ಸೂರ್ಯ ನಮಸ್ಕಾರಕ್ಕೆ ಹೆಚ್ಚಿನ ಸಮಯ ಕೊಡುತ್ತೇನೆ. ನಾನು ಕಳೆದ 20 ವರ್ಷಗಳಿಂದ ನಿಂದನೆ ಕೇಳುತ್ತಲೇ ಇದ್ದೇನೆ ಜೊತೆಗೆ ನನ್ನನ್ನು ನಾನು ಬೈಗುಳ ನಿರೋಧಕ ಮಾಡಿಕೊಂಡಿದ್ದೇನೆ. ನಾನು ಸೂರ್ಯ ನಮಸ್ಕಾರದ ಮೂಲಕ ನನ್ನ ಬೆನ್ನನ್ನೂ ಗಟ್ಟಿ ಮಾಡಿಕೊಳ್ಳುತ್ತೇನೆ. ಅದು ನನಗೆ ದೊಣ್ಣೆಯ ಹೊಡೆತ ತಡೆಯುವ ಶಕ್ತಿ ನೀಡುತ್ತದೆ. ತುಂಬಾ ಮೊದಲೇ ಇದನ್ನು ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು. ನನಗೆ ಮುಂದಿನ ಆರು ತಿಂಗಳುಗಳಲ್ಲಿ ವ್ಯಾಯಾಮ ಹೆಚ್ಚಿಸಲು ನೆರವಾಯಿತು.

ಗೌರವಾನ್ವಿತ ಸಭಾಧ್ಯಕ್ಷರೆ,

ಕೈಗಾರಿಕೆ 4.0 ಮತ್ತು ಡಿಜಿಟಲ್ ಆರ್ಥಿಕತೆ ಕೋಟ್ಯಂತರ ಉದ್ಯೋಗ ಸೃಷ್ಟಿಸುವ ಭವಿಷ್ಯ ಹೊಂದಿವೆ. ನಾವು ಹೊಸ ಕೌಶಲ್ಯ ಪಡೆ ಮತ್ತು ಕಾರ್ಮಿಕ ಸುಧಾರಣೆಗಾಗಿ ಸದನದಲ್ಲಿ ಕೌಶಲ್ಯಾಭಿವೃದ್ಧಿಯ ಒಂದು ಪ್ರಸ್ತಾಪ ಮುಂದಿಟ್ಟೆದ್ದೆವು. ಸದನ ಅದನ್ನು ಅನುಮೋದಿಸುತ್ತದೆ ಎಂಬ ವಿಶ್ವಾಸ ನನಗಿದೆ, ಇದರಿಂದ ದೇಶದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ನಾವು ಹೊಸ ಚಿಂತನೆಗಳೊಂದಿಗೆ ಮುಂದೆ ಬರುವ ಅಗತ್ಯವಿದೆ. ನಾನು ಸದನದ ಎಲ್ಲ ಗೌರವಾನ್ವಿತ ಸದಸ್ಯರಲ್ಲಿ ಕೇಳಿಕೊಳ್ಳುವುದೇನೆಂದರೆ, ಕಾರ್ಮಿಕ ಸುಧಾರಣೆಗೆ ನೆರವಾಗಿ, ಇದರಿಂದ ನೂತನ ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತದೆ. ಸುಗಮ ವಾಣಿಜ್ಯ ಮತ್ತು ಸುಗಮ ಜೀವನದೊಂದಿಗೆ ನಾವು ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಏರಿಸುವ ಸಾಮರ್ಥ್ಯವಿದೆ ಎಂದು ನಾನು ನಂಬುತ್ತೇನೆ.

ಗೌರವಾನ್ವಿತ ಸಭಾಧ್ಯಕ್ಷರೆ,

ಮುಂದಿನ ದಿನಗಳಲ್ಲಿ ನಾವು 16 ಕೋಟಿ ಮೂಲಸೌಕರ್ಯದ ಅಭಿಯಾನವನ್ನು ಕೈಗೊಳ್ಳುತ್ತಿದ್ದೇವೆ ಎಂಬುದು ನಿಜ. ನಮ್ಮ ಆರ್ಥಿಕತೆಗೆ ಮೂಲಸೌಕರ್ಯ ವ್ಯಾಪಕತೆ ನೀಡಿದ್ದನ್ನು ನಮ್ಮ ಹಿಂದಿನ ಆಡಳಿತಾವಧಿಯಲ್ಲಿ ನೀವು ಗಮನಿಸಿರಬಹುದು. ಮೂಲಸೌಕರ್ಯಕ್ಕೆ ನೀಡುವ ಒತ್ತು ಆರ್ಥಿಕತೆಯ ಚಾಲನೆಗೆ ಉತ್ತೇಜನ ನೀಡುತ್ತದೆ ಮತ್ತು ಉದ್ಯೋಗವನ್ನೂ ಒದಗಿಸುತ್ತದೆ. ಇದು ಹೊಸ ಕೈಗಾರಿಕೆಗಳಿಗೆ ಅವಕಾಶವನ್ನೂ ನೀಡುತ್ತದೆ. ಆದ್ದರಿಂದ ನಾವು ಮೂಲಸೌಕರ್ಯಕ್ಕೆ ಇಂಬು ನೀಡಲು ನಿರ್ಧರಿಸಿದ್ದೇವೆ. ಮುನ್ನ ಮೂಲಸೌಕರ್ಯ ಕಾಂಕ್ರೀಟ್ ಸಿಮೆಂಟ್ ಗೆ ಮಾತ್ರ ಸೀಮಿತವಾಗಿತ್ತು. ಹಿಂದೆ ಮೂಲಸೌಕರ್ಯ ಅಂದರೆ ಮಧ್ಯವರ್ತಿಯ ಟೆಂಡರ್ ಪ್ರಕ್ರಿಯೆಯಾಗಿತ್ತು. ಮೂಲಸೌಕರ್ಯಗಳ ಬಗ್ಗೆ ಯಾವುದೇ ಮಾತುಗಳನ್ನಾಡುವಾಗ ಜನರಿಗೆ ಇಂತ ಕೆಟ್ಟ ವಾಸನೆ ಬಡಿಯುತ್ತಿತ್ತು.

ಇಂದು ನಾವು 21ನೇ ಶತಮಾನದ ಆಧುನಿಕ ಭಾರತದ ಮೂಲಸೌಕರ್ಯ ಸೃಷ್ಟಿಗೆ ಒತ್ತು ನೀಡಿದ್ದೇವೆ, ನಮಗೆ ಮೂಲಸೌಕರ್ಯ ಎಂದರೆ ಕೇವಲ ಕಾಂಕ್ರೀಟ್ ಸಿಮೆಂಟ್ ಕಾಡಲ್ಲ, ಮೂಲಸೌಕರ್ಯ ಹೊಸ ಭವಿಷ್ಯ ತರುತ್ತದೆ ಎಂಬ ವಿಶ್ವಾಸ ನನಗಿದೆ. ಮೂಲಸೌಕರ್ಯ ಮಾತ್ರವೇ ಕಾರ್ಗಿಲ್ ನಿಂದ ಕನ್ಯಾಕುಮಾರಿವರೆಗೆ, ಕಚ್ ನಿಂದ ಕೋಹಿಮಾವರೆಗೆ ಬೆಸೆಯಲು ಸಾಧ್ಯ. ಮೂಲಸೌಕರ್ಯ ಆಶಯಗಳು ಅಥವಾ ಸಾಧನೆಯನ್ನು ಒಗ್ಗೂಡಿಸಲು ನೆರವಾಗುತ್ತದೆ.

ಮೂಲಸೌಕರ್ಯ ಮಾತ್ರವೇ ಜನರ ಕನಸುಗಳಿಗೆ ರೆಕ್ಕೆ ಮೂಡಿಸುತ್ತದೆ. ಮೂಲಸೌಕರ್ಯದಿಂದ ಮಾತ್ರವೇ ಜನರ ಸೃಜನಶೀಲತೆ ಗ್ರಾಹಕರೊಂದಿಗೆ ಸಂಪರ್ಕ ಪಡೆಯಲು ಸಾಧ್ಯ. ಮಕ್ಕಳನ್ನು ಶಾಲೆಯೊಂದಿಗೆ ಸಂಪರ್ಕಿಸಲು ಸಾಧ್ಯ ಇದು ಚಿಕ್ಕದು ಎನಿಸಬಹುದು ಆದರೆ, ಮೂಲಸೌಕರ್ಯವಷ್ಟೇ ಅದನ್ನು ಮಾಡುತ್ತದೆ. ಮೂಲಸೌಕರ್ಯ ವ್ಯಾಪಾರಿಗಳೊಂದಿಗೆ ಗ್ರಾಹಕರನ್ನು ಬೆಸೆಯುತ್ತದೆ. ಇದು ಜನರನ್ನೂ ಸಂಪರ್ಕಿಸುತ್ತದೆ. ಮೂಲಸೌಕರ್ಯ ಗರ್ಭಿಣಿ ತಾಯಂದಿರಿಗೆ ಆಸ್ಪತ್ರೆಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಆದ್ದರಿಂದ ನಾವು ನೀರಾವರಿಯಿಂದ ಕೈಗಾರಿಕೆಯವರೆಗೆ, ಸಾಮಾಜಿಕ ಮೂಲಸೌಕರ್ಯದಿಂದ ಗ್ರಾಮೀಣ ಮೂಲಸೌಕರ್ಯದವರೆಗೆ, ರಸ್ತೆಯಿಂದ ಬಂದರಿನವರೆಗೆ, ವಾಯು ಮಾರ್ಗದಿಂದ ಜಲಮಾರ್ಗದವರೆಗೆ ಹಲವು ಉಪಕ್ರಮ ಕೈಗೊಂಡಿದ್ದೇವೆ. ಕಳೆದ ಐದು ವರ್ಷಗಳಲ್ಲಿ ದೇಶ ಎಲ್ಲವನ್ನೂ ನೋಡಿದೆ. ಜನ ಎಲ್ಲವನ್ನೂ ನೋಡಿರುವುದರಿಂದ ಜನರು ನಮಗೆ ಸ್ಥಾನಕ್ಕೆ ಬರಲು ಸಹಾಯ ಮಾಡಿದ್ದಾರೆ. ಇದು ಮೂಲಸೌಕರ್ಯದ ಶಕ್ತಿ.

ಗೌರವಾನ್ವಿತ ಸಭಾಧ್ಯಕ್ಷರೆ,

ಮೂಲಸೌಕರ್ಯ ಕ್ಷೇತ್ರದಲ್ಲಿ ಕೆಲಸ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಒಂದು ಉದಾಹರಣೆಯನ್ನು ನೀಡಲು ಇಚ್ಛಿಸುತ್ತೇನೆ. ದೆಹಲಿಯನ್ನೇ ತೆಗೆದುಕೊಳ್ಳಿ, ಹೇಗೆ ಸಾವಿರಾರು ಟ್ರಕ್ ಗಳು ದೆಹಲಿಯ ಮೂಲಕ ಹಾದು ಸಂಚಾರದಟ್ಟಣೆ ಮತ್ತು ಮಾಲಿನ್ಯ ಉಂಟು ಮಾಡುತ್ತಿದ್ದವು. 2009ರೊಳಗೆ ದೆಹಲಿ ಸುತ್ತುವರಿದು ಎಕ್ಸ್ ಪ್ರೇಸ್ ವೇ ಪೂರ್ಣಗೊಳಿಸುವ ನಿರ್ಧಾರವನ್ನು ಯುಪಿಎ ಸರ್ಕಾರ ಮಾಡಿತು. ನಾವು 2014ರಲ್ಲಿ ಅಧಿಕಾರಕ್ಕೆ ಬಂದಾಗ ಅದು ಕೇವಲ ಕಾಗದದ ಮೇಲೆ ಮಾತ್ರ ಇತ್ತು ಎಂಬುದು ನಮ್ಮ ಗಮನಕ್ಕೆ ಬಂತು. ನಾವು ಅಭಿಯಾನದೋಪಾದಿಯಲ್ಲಿ ಯೋಜನೆ ಕೈಗೊಂಡೆವು. ಇಂದು ಪೆರಿಫರಲ್ ಎಕ್ಸ್ ಪ್ರೆಸ್ ಮಾರ್ಗ ಪೂರ್ಣಗೊಂಡಿದೆ. ಇಂದು 40 ಸಾವಿರ ಟ್ರಕ್ ಗಳು ದೆಹಲಿ ಪ್ರವೇಶಿಸದೆ ದೆಹಲಿಯ ಹೊರಗೆ ಸಂಚರಿಸುತ್ತವೆ. ಇದು ದೆಹಲಿಯನ್ನು ಮಾಲಿನ್ಯದಿಂದ ರಕ್ಷಿಸಲು ಒಂದು ಒಳ್ಳೆ ಕ್ರಮವಾಗಿದೆ. ಆದರೆ ಮೂಲಸೌಕರ್ಯದಲ್ಲಿ ಯಾವುದು ಮುಖ್ಯವಾದ್ದು? 2009 ಕನಸನ್ನು ನನಸು ಮಾಡಲು 201ರವರೆಗೆ ಅದು ಕಾಗದದ ಚೂರಲ್ಲಿ ಉಳಿದಿತ್ತು. ಇದೇ ವ್ಯತ್ಯಾಸ. ಇದನ್ನು ಅರ್ಥ ಮಾಡಿಕೊಳ್ಳಲು ನಾನು ಕೆಲ ಸಮಯ ತೆಗೆದುಕೊಂಡೆ.

ಮಾನ್ಯ ಸಭಾಧ್ಯಕ್ಷರೆ,

ನಾವು ಕೆಲವೊಂದು ವಿಚಾರಗಳ ಮೇಲೆ ಸ್ಪಷ್ಟನೆ ನೀಡಲಿಚ್ಛಿಸುತ್ತೇನೆ. ಕ್ಷಮಿಸಿ ತರೂರ್ ಅವರೇ, ಕಾಲ ಕಾಲಕ್ಕೆ ಸಂವಿಧಾನವನ್ನು ಉಳಿಸುವ ಬಗ್ಗೆ ಇಲ್ಲಿ ಕೆಲವು ಜನರು ಮಾತನಾಡಿದರು. ನಾನೂ ಕೂಡ ಕಾಂಗ್ರೆಸ್ ಸಂವಿಧಾನ ಉಳಿಸುವ ಬಗ್ಗೆ ದಿನಕ್ಕೆ 100 ಬಾರಿ ಮಾತನಾಡುತ್ತದೆ ಎಂದು ನಂಬುತ್ತೇನೆ. ಇದು ನೂರು ಬಾರಿ ಸಂವಿಧಾನ ಉಳಿಸಿ, ಸಂವಿಧಾನ ಉಳಿಸಿ ಎನ್ನುವುದು ಕಾಂಗ್ರೆಸ್ ಗೆ ಮಂತ್ರವಾಗಿ ಹೋಗಿದೆ. ನೀವು ಸಂವಿಧಾನದ ಮಹತ್ವ ಅರಿತಿದ್ದೀರಾ, ಸಂವಿಧಾನದ ಬಗ್ಗೆ ಏನೆಲ್ಲಾ ಆಗಿದೆ ತಿಳಿದುಕೊಂಡಿದ್ದೀರಾ, ಅದು ತಿಳಿದರೆ ಇಂಥದ್ದೇನೂ ಸಂವಿಧಾನಕ್ಕೆ ಆಗುತ್ತಿರಲಿಲ್ಲ. ಹೀಗಾಗಿ ನೀವು ಸಂವಿಧಾನದ ಬಗ್ಗೆ ಮಾತನಾಡುವಾಗ ನಿಮ್ಮ ತಪ್ಪುಗಳನ್ನು ಅರಿತುಕೊಳ್ಳಿ. ಆಗ ಅದು ನಿಮಗೆ ಸಂವಿಧಾನದ ಶಕ್ತಿ ತಿಳಿಯಲು ನೆರವಾಗುತ್ತದೆ.

ಮಾನ್ಯ ಸಭಾಧ್ಯಕ್ಷರೇ,

ಇದು ಸಕಾಲ. ನೀವು ತುರ್ತುಪರಿಸ್ಥಿತಿಯ ಸಮಯದಲ್ಲಿ ಸಂವಿಧಾನವನ್ನು ಉಳಿಸಲು ಏಕೆ ಪ್ರಯತ್ನ ಮಾಡಲಿಲ್ಲ? ಇದೇ ಜನ ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ಯಾರು ನ್ಯಾಯಾಂಗದ ಹಕ್ಕು ಮತ್ತು ನ್ಯಾಯಾಂಗದ ಪರಾಮರ್ಶೆಗಳನ್ನು ಕಸಿದುಕೊಂಡರೋ, ಅವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ.

ಯಾರು ಬದುಕಿನ ಹಕ್ಕನ್ನೇ ಕಸಿದುಕೊಂಡರೋ, ಅವರು ಸಂವಿಧಾನ ಎಂದು ಪುನರಾವರ್ತಿಸುವ ಅಗತ್ಯವಿಲ್ಲ, ಅವರು ಅದನ್ನು ಓದಬೇಕು. ಸಂವಿಧಾನದ ತಿದ್ದುಪಡಿಗೆ ಗರಿಷ್ಠ ಪ್ರಸ್ತಾವನೆಗಳನ್ನು ಜನರಿಗೆ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕೇ ಇಲ್ಲ. ರಾಜ್ಯ ಸರ್ಕಾರಗಳನ್ನು 12ಕ್ಕೂ ಹೆಚ್ಚು ಬಾರಿ ಕೆಡವಿದ್ದರು. ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ವಜಾ ಮಾಡಿದ್ದರು.

ಸಂಪುಟ ಒಂದು ನಿರ್ಣಯ ಅನುಮೋದಿಸಿದೆ. ಪ್ರಜಾಸತ್ತಾತ್ಮಕ ಮತ್ತು ಸಂವಿಧಾನಾತ್ಮಕವಾಗಿ ಸಂಪುಟ ನಿರ್ಣಯ ಅನುಮೋದಿಸಿದೆ. ಯಾರು ಸುದ್ದಿಗೋಷ್ಠಿಯ ವೇಳೆ ಅಂಥ ಸಂಪುಟದ ನಿರ್ಣಯವನ್ನು ಹರಿದು ಹಾಕಿದರಲ್ಲ ಅಂಥ ಜನರಿಂದ ಸಂವಿಧಾನ ಉಳಿಸುವುದನ್ನು ಕಲಿಯಬೇಕೇ. ಹೀಗಾಗಿ ಯಾವ ಜನರು ಸಂವಿಧಾನ ಉಳಿಸಿ ಎಂಬ ಮಂತ್ರ ಪಠಿಸುತ್ತಿದ್ದಾರೋ, ಪ್ರಧಾನಮಂತ್ರಿ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದ ಮೇಲೆ ರಾಷ್ಟ್ರೀಯ ಸಲಹಾ ಮಂಡಳಿ ರಚಿಸಿ ಯಾರು ರಿಮೋಟ್ ಕಂಟ್ರೋಲರ್ ಮೂಲಕ ಸರ್ಕಾರ ನಡೆಸುತ್ತಿದ್ದರೋ ಅಂಥವರು ಸಂವಿಧಾನದ ಮಹತ್ವ ತಿಳಿಯುವ ಅಗತ್ಯವಿದೆ.

ಮಾನ್ಯ ಸಭಾಧ್ಯಕ್ಷರೆ,

ಸಂವಿಧಾನ ಉಳಿಸಿ ಹೆಸರಿನಲ್ಲಿ ದೆಹಲಿಯಲ್ಲಿ ಮತ್ತು ದೇಶದಲ್ಲಿ ಏನಾಗುತ್ತಿದೆ. ದೇಶ ಎಲ್ಲವನ್ನೂ ಗಮನಿಸುತ್ತಿದೆ ಮತ್ತು ಅರಿತುಕೊಳ್ಳುತ್ತಿದೆ. ದೇಶದ ಮೌನ ಏನೆಂಬುದು ಒಂದು ದಿನ ತಿಳಿಯುತ್ತದೆ.

ಸುಪ್ರೀಂಕೋರ್ಟ್ ನಮ್ಮ ಸಂವಿಧಾನದ ಮಹತ್ವದ ಭಾಗವಾಗಿದೆ. ಸುಪ್ರೀಂಕೋರ್ಟ್ ಪದೇ ಪದೆ ಜನರಿಗೆ ತೊಂದರೆ ಆಗುವಂತೆ ಯಾವುದೇ ಪ್ರತಿಭಟನೆ ನಡೆಯಬಾರದು, ಯಾವುದೇ ಪ್ರತಿಭಟನೆ ಹಿಂಸೆಗೆ ತಿರುಗಬಾರದು ಎಂದು ಹೇಳುತ್ತಿದೆ.

ಸಂವಿಧಾನ ಉಳಿಸಿ ಎಂದು ಹೇಳುತ್ತಿರುವ ಅದೇ ಜನರು, ಇದೇ ಎಡಪಂಥೀಯ ಜನರು, ಇದೇ ಕಾಂಗ್ರೆಸ್ ಮಂದಿ ತಮ್ಮ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಜನರನ್ನು ಪ್ರಚೋದಿಸುತ್ತಿದ್ದಾರೆ.

ಮಾನ್ಯ ಸಭಾಧ್ಯಕ್ಷರೆ, ಒಬ್ಬ ಕವಿ ಹೇಳುತ್ತಾರೆ: ಖೂಬ್ ಪರ್ದಾ ಹೈ ಕೆ ಚಿಲ್ಮನ್ ಸೆ ಲಗೇ ಬೀತೇ ಹೇ. ಖೂಬ್ ಪರ್ದಾ ಹೈ ಕಿ ಸಾಫ್ ಚುಪ್ತೇ ಭೀ ನಹಿ ಸಾಮ್ನೆ ಆತಿ ಭೀ ನಹೀ”. ಜನ ಎಲ್ಲವನ್ನೂ ತಿಳಿದಿದ್ದಾರೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಸದನದ ಕೆಲವು ನಾಯಕರು ಬಳಸಿದ ಭಾಷೆ ಮತ್ತು ಹೇಳಿಕೆಗಳು ವಿಷಾದನೀಯವಾದ್ದು. ಇಲ್ಲಿ ಕುಳಿತಿರುವ ಹಲವು ಜನರು ಪಶ್ಚಿಮ ಬಂಗಾಳದಲ್ಲಿ ನರಳಿದ್ದಾರೆ. ದಾದಾ ಅಲ್ಲಿ ಏನಾಗುತ್ತಿದೆ ಎಂದು ವಿವರವಾಗಿ ಹೇಳಿದರೆ ನಿಮಗೆ ನೋವಾಗುತ್ತದೆ. ಅಲ್ಲಿ ಮುಗ್ಧ ಜನರು ಹೇಗೆ ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಗೊತ್ತಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾವು ಅವರಿಗೆ ಕೇಳಲು ಬಯಸುತ್ತೇನೆ, ಕಾಂಗ್ರೆಸ್ ಕಾಲದಲ್ಲಿ ಸಂವಿಧಾನದ ಸ್ಥಿತಿ ಏನಾಗಿತ್ತು. ಜನರ ಹಕ್ಕುಗಳ ಸ್ಥಿತಿ ಏನಾಗಿತ್ತು? ಸಂವಿಧಾನ ಅಷ್ಟು ಮುಖ್ಯವಾಗಿದ್ದರೆ, ನಾವೆಲ್ಲರೂ ಒಪ್ಪುವುದಾದರೆ, ನೀವೂ ಒಪ್ಪುವುದಾದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸಂವಿಧಾನವನ್ನು ಜಾರಿ ಮಾಡಲು ನಿಮ್ಮನ್ನು ತಡೆದವರಾದರೂ ಯಾರು? ಜಮ್ಮು ಮತ್ತು ಕಾಶ್ಮೀರದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಸಂವಿಧಾನ ನೀಡಿದ ಹಕ್ಕುಗಳನ್ನು ತಡೆಯುವ ಪಾಪ ಮಾಡಿದವರು ಯಾರು? ಶಶಿ ಅವರೇ, ನೀವು ಜಮ್ಮು ಮತ್ತು ಕಾಶ್ಮೀರದ ಅಳಿಯ. ನೀವು ಸಂವಿಧಾನದ ಬಗ್ಗೆ ಮಾತನಾಡುತ್ತೀರಿ. ನೀವು ಕಾಶ್ಮೀರದ ಹೆಣ್ಣುಮಗಳ ಬಗ್ಗೆ ಹೇಳಬಹುದಾಗಿತ್ತು.

ಮಾನ್ಯ ಸಭಾಧ್ಯಕ್ಷರೆ,

ಒಬ್ಬರು ಗೌರವಾನ್ವಿತ ಸದಸ್ಯರು ಹೇಳಿದರು. ಜಮ್ಮು ಕಾಶ್ಮೀರ ಅದರ ಗುರುತನ್ನೇ ಕಳೆದುಕೊಂಡಿದೆ ಎಂದು. ಕೆಲವರು ಹೇಳಿದರು, ಕೆಲವರಿಗೆ ಕಾಶ್ಮೀರ ಕೇವಲ ಭೂಭಾಗವಾಗಿ ಮಾತ್ರವೇ ಉಳಿದಿದೆ ಎಂದು.

ಗೌರವಾನ್ವಿತ ಸಭಾಧ್ಯಕ್ಷರೇ,

ಯಾರು ಕಾಶ್ಮೀರವನ್ನು ಕೇವಲ ಒಂದು ಭೂ ಭಾಗ ಎಂದು ನೋಡುತತಾರೋ, ಅವರಿಗೆ ದೇಶದ ಬಗ್ಗೆ ಏನೇನೂ ತಿಳಿದಿಲ್ಲ. ಇದು ಅವರ ಬೌದ್ಧಿಕ ದಿವಾಳಿತನವನ್ನು ತೋರುತ್ತದೆ. ಕಾಶ್ಮೀರ ಭಾರತದ ಮಣಿ ಮಕುಟ.

ಗೌರವಾನ್ವಿತ ಸಭಾಧ್ಯಕ್ಷರೇ,

ಕಾಶ್ಮೀರದ ಗುರುತನ್ನು ಒಂದು ಬಾಂಬ್ ಮತ್ತು ಪ್ರತೇಕತಾವಾದವಾಗಿ ಮಾಡಿದ್ದರು. 1990 ಜನವರಿ 19ರಂದು ಕತ್ತಲ ರಾತ್ರಿಯಲ್ಲಿ ಕಾಶ್ಮೀರದ ಗುರುತನ್ನೇ ಸಮಾಧಿ ಮಾಡಿದ್ದವರು ಅದರ ಹೆಗ್ಗುರುತಿನ ಬಗ್ಗೆ ಮಾತನಾಡುತ್ತಾರೆ. ಕಾಶ್ಮೀರದ ಗುರುತು ಸೂಫಿ ಸಂಪ್ರದಾಯ. ಕಾಶ್ಮೀರಿಗಳ ಪ್ರತಿನಿಧಿಗಳು ಮನ್ ಲಾಲ್ ದೇಡ್, ನಂದರ್ಷಿ, ಸಯ್ಯದ್ ಬುಲ್ಬುಲ್ ಶಾ, ಮೀರ್ ಸಯ್ಯದ್ ಅಲಿ ಹಮ್ದಾನಿ. ಅವರು ಕಾಶ್ಮೀರದ ಹೆಗ್ಗುರುತುಗಳು.

ಗೌರವಾನ್ವಿತ ಸಭಾಧ್ಯಕ್ಷರೆ,

ಕೆಲವರು ವಿಧಿ 370ನ್ನು ರದ್ದು ಮಾಡಿದ ತರುವಾಯ ಕಾಶ್ಮೀರ ಹೊತ್ತಿ ಉರಿಯುತ್ತದೆ ಎಂದು ಹೇಳುತ್ತಿದ್ದರು. ಇವರು ಯಾವ ರೀತಿಯ ಭವಿಷ್ಯಕಾರರು. ನಾನು ಜನರಿಗೆ ಹೇಳ ಬಯಸುತ್ತೇನೆ ಯಾರು 370ನ್ನು ರದ್ದು ಮಾಡಿದ ತರುವಾಯ ಕಾಶ್ಮೀರ ಹೊತ್ತಿ ಉರಿಯುತ್ತಿದೆ, ಕೆಲವರು ಈಗ ಜೈಲಿನಲ್ಲಿದ್ದಾರೆ.ಎಂದೆಲ್ಲಾ ಹೇಳುತ್ತಿದ್ದಾರೆ. ಸದನ ಸಂವಿಧಾನವನ್ನು ರಕ್ಷಿಸುವ ಸದನ. ಸಂವಿಧಾನಕ್ಕೆ ಸಮರ್ಪಿತವಾದ ಸದನ. ಸಂವಿಧಾನದ ಬಗ್ಗೆ ಗೌರವ ಇರುವ ಸದನ, ಸಂವಿಧಾನದ ಬಗ್ಗೆ ಬದ್ಧತೆ ಇರುವ ಸದಸ್ಯರ ಸದನ. ಹೀಗಾಗಿ ನಾನು ಗೌರವಾನ್ವಿತ ಸದಸ್ಯರ ಆತ್ಮ (ಇದ್ದರೆ) ಮುಟ್ಟುವ ಪ್ರಯತ್ನ ಮಾಡುತ್ತಿದ್ದೇನೆ.

ಗೌರವಾನ್ವಿತ ಸಭಾಧ್ಯಕ್ಷರೆ,

ಆಗಸ್ಟ್ 5ರಂದು ಮಹಬೂಬಾ ಮುಫ್ತಿ ಅವರು ಏನು ಹೇಳಿದ್ದರು. ಸಂವಿಧಾನದ ಬಗ್ಗೆ ಮಾತನಾಡುವವರು ಸ್ವಲ್ಪ ಗಮನ ಇಟ್ಟು ಕೇಳಿ, ಇದು ಅತ್ಯಂತ ಗಂಭೀರ ವಿಚಾರ, ಸ್ವಲ್ಪ ಗಮನ ಇಟ್ಟು ಕೇಳಿ, ಅವರು ಹೇಳಿದ್ದರು, ಭಾರತ ಕಾಶ್ಮೀರಕ್ಕೆ ದ್ರೋಹ ಮಾಡಿದೆ. ನಾವು ದೇಶದೊಂದಿಗೆ ಇರುವ ನಿರ್ಧಾರ ಮಾಡಿದ್ದೆವು. ಆದರೆ ದೇಶ ನಮಗೆ ದ್ರೋಹ ಮಾಡಿದೆ. ಅಂದರೆ ನಾವು 1947ರಲ್ಲಿ ತಪ್ಪು ಆಯ್ಕೆ ಮಾಡಿದ್ದೆವು ಎಂಬುದಾಗಿದೆ. ಸಂವಿಧಾನವನ್ನು ಒಪ್ಪುವ ಜನರು ಇಂಥ ಭಾಷೆಯನ್ನು ಸ್ವೀಕರಿಸುವರೇ. ನೀವು ಅವರನ್ನು ಬೆಂಬಲಿಸುವಿರಾ. ಅದೇ ರೀತಿ ಶ್ರೀ ಓಮರ್ ಅಬ್ದುಲ್ಲಾ ಅವರು ಹೇಳಿದ್ದರು, ವಿಧಿ 370 ಹಿಂಪಡೆದರೆ ಎಂಥ, ಭೂಕಂಪಕ್ಕೆ ಕಾರಣವಾಗುತ್ತದೆ ಎಂದರೆ ಕಾಶ್ಮೀರ ಭಾರತದಿಂದ ಪ್ರತ್ಯೇಕವಾಗುತ್ತದೆ.

ಮಾನ್ಯ ಸಭಾಧ್ಯಕ್ಷರೆ,

ಫಾರೂಕ್ ಅಬ್ದುಲ್ಲಾ ಅವರು ಹೇಳಿದ್ದರು, ವಿಧಿ 370 ಹಿಂಪಡೆದರೆ, ಕಾಶ್ಮೀರ ಜನರ ಸ್ವಾತಂತ್ರ್ಯಕ್ಕೆ ನಾಂದಿ ಹಾಡುತ್ತದೆ ಎಂದು. 370ನೇ ವಿಧಿ ರದ್ದು ಮಾಡಿದರೆ, ಅಲ್ಲಿ ತ್ರಿವರ್ಣ ಧ್ವಜ ಹಾರಿಸಲು ಯಾರೊಬ್ಬರೂ ಇರುವುದಿಲ್ಲ. ಸಂವಿಧಾನದ ಬಗ್ಗೆ ಗೌರವ ಇರುವವರು ಇಂಥ ಭಾವನೆ, ಭಾಷೆಯ ಹೇಳಿಕೆಗಳನ್ನು ಭಾರತದ ಯಾರಾದರೂ ಸಮರ್ಥಿಸುತ್ತೀರಾ. ಇದನ್ನು ಯಾರಾದರೂ ಒಪ್ಪುತ್ತಾರಾ. ಆತ್ಮ ಇರುವವರನ್ನು ನಾನು ಕೇಳ ಬಯಸುತ್ತೇನೆ.

ಮಾನ್ಯ ಸಭಾಧ್ಯಕ್ಷರೇ,

ಇವರು ಕಾಶ್ಮೀರ ಜನರ ಬಗ್ಗೆ ವಿಶ್ವಾಸ ಇಲ್ಲದವರು. ಮತ್ತು ಹೀಗಾಗಿಯೇ ಇಂಥ ಭಾಷೆಯಲ್ಲಿ ಮಾತನಾಡುತ್ತಾರೆ. ನಾವು ಕಾಶ್ಮೀರದ ಜನತೆಯಲ್ಲಿ ವಿಶ್ವಾಸ ಇರುವವರು. ನಾವು ನಮ್ಮ ನಂಬಿಕೆ ಇಟ್ಟೆವು, ನಾವು ಕಾಶ್ಮೀರದ ಜನರ ಬಗ್ಗೆ ವಿಶ್ವಾಸ ಇಟ್ಟೆವು, ವಿಧಿ 370 ರದ್ದು ಮಾಡಿದೆವು. ನಾವು ಇಂದು ವೇಗವಾಗಿ ಅಭಿವೃದ್ಧಿ ಕಾಣುತ್ತಿದ್ದೇವೆ. ದೇಶದ ಯಾವುದೇ ಭಾಗದಲ್ಲಿ ಪರಿಸ್ಥಿತಿ ಕೈ ಮೀರಲು ಬಿಡುವುದಿಲ್ಲ, ಅದು ಕಾಶ್ಮೀರವೇ ಆದರೂ ಸರಿ, ಈಶಾನ್ಯವೇ ಆದರೂ ಸರಿ, ಅದು ಕೇರಳ ಆದರೂ ಸರಿಯೇ, ಯಾರಿಗೂ ಅವಕಾಶ ನೀಡುವುದಿಲ್ಲ. ನಮ್ಮ ಸಚಿವರುಗಳು ಕೂಡ ಕಳೆದ ಕೆಲವು ದಿನಗಳಲ್ಲಿ ನಿರಂತರವಾಗಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. ನಾವು ಅಲ್ಲಿನ ಜನರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. .

ಮಾನ್ಯ ಸಭಾಧ್ಯಕ್ಷರೆ,

ಸದನದ ಮೂಲಕ ಇಂದು ನಾನು ಜಮ್ಮು ಮತ್ತು ಕಾಶ್ಮೀರದ ಉಜ್ವಲ ಭವಿಷ್ಯಕ್ಕಾಗಿ, ಜಮ್ಮು ಕಾಶ್ಮೀರದ ಅಭಿವೃದ್ಧಿಗಾಗಿ ಅಲ್ಲಿನ ಜನರ ನಂಬಿಕೆ ಮತ್ತು ಆಶೋತ್ತರಗಳನ್ನು ಪೂರೈಸಲು ಬದ್ಧ ಎಂದು ತಿಳಿಸಲಿಚ್ಛಿಸುತ್ತೇನೆ. ನಾವು ಸಂವಿಧಾನಕ್ಕೆ ಬದ್ಧರಾಗಿದ್ದೇವೆ ಮತ್ತು ಬದ್ಧರಾಗಿರುತ್ತೇವೆ. ಆದರೆ, ಅದೇ ವೇಳೆ ನಾನು ಲಡಾಕ್ ಬಗ್ಗೆ ಕೆಲವೊಂದು ವಿಚಾರ ಹೇಳಲು ಬಯಸುತ್ತೇನೆ.

ಮಾನ್ಯ ಸಭಾಧ್ಯಕ್ಷರೇ,

ಸಿಕ್ಕಿಂ ನಮ್ಮ ದೇಶದಲ್ಲಿ ಎಂಥ ಒಂದು ರಾಜ್ಯವಾಗಿದೆ ಎಂದರೆ, ಅದು ತನ್ನನ್ನು ಸಾವಯವ ಕೃಷಿ ರಾಜ್ಯ ಎಂದು ಗುರುತಿಸಿಕೊಂಡಿದೆ. ಅದೇ ರೀತಿ ಸಿಕ್ಕಿಂನಂಥ ಸಣ್ಣ ರಾಜ್ಯಗಳು ಇತರ ಹಲವು ರಾಜ್ಯಗಳಿಗೆ ಪ್ರೇರಣೆಯಾಗಿವೆ. ಸಿಕ್ಕಿಂನ ರೈತರು, ಸಿಕ್ಕಿನ ಜನತೆ, ಇಂಥ ಶ್ಲಾಘನೆಗೆ ಅರ್ಹರಾಗಿದ್ದಾರೆ. ಲಡಾಕ್ ಬಗ್ಗೆ ಚಿತ್ರಣ ನನ್ನ ಮನದಲ್ಲಿ ಸ್ಪಷ್ಟವಾಗಿದೆ. ಹೀಗಾಗಿಯೇ ನಾವು ಬಯಸುತ್ತೇವೆ ಹೇಗೆ ನಮ್ಮ ಪಕ್ಕದ ಭೂತಾನ್ ಪರಿಸರಕ್ಕಾಗಿ ಪ್ರಶಂಸೆಗೆ ಒಳಪಟ್ಟಿದೆಯೋ ಹೇಗೆ ಅದು ವಿಶ್ವದಲ್ಲಿ ಇಂಗಾಲಾಮ್ಲ ತಟಸ್ಥ ರಾಷ್ಟ್ರವಾಗಿ ಹೇಗೆ ಗುರುತಿಸಿಕೊಂಡಿದೆಯೋ ಹಾಗಿ, ಲಡಾಕ್ ಅನ್ನು ಕೂಡ ಕಾರ್ಬನ್ ನ್ಯೂಟ್ರಲ್ ಪ್ರದೇಶವಾಗಿ ಅಭಿವೃದ್ಧಿಪಡಿಸಲು ಭಾರತೀಯರಾದ ನಾವೆಲ್ಲರೂ ಪ್ರಯತ್ನಿಸೋಣ. ನಾವು ದೇಶಕ್ಕೆ ಒಂದು ಮೈಲಿಗಲ್ಲು ಸ್ಥಾಪಿಸೋಣ. ಇದು ಭವಿಷ್ಯದ ಪೀಳಿಗೆಗೆ ಒಂದು ಮಾದರಿಯಾಗಿ ನೆರವಾಗಲಿದೆ. ನಾನು ಲಡಾಕ್ ಗೆ ಹೋದಾಗ ನಾನು ಅವರೊಂದಿಗೆ ಉಳಿಯುತ್ತೇನೆ. ನಾನು ಅದರ ವಿನ್ಯಾಸಕ್ಕೆ ಮುಂದಾಗುತ್ತೇನೆ.

ಮಾನ್ಯ ಸಭಾಧ್ಯಕ್ಷರೆ,

ಸದನದ ಮೂಲಕ ಒಂದು ಶಾಸನ ಅನುಮೋದನೆಗೊಂಡಿದೆ, ಎರಡೂ ಸದನಗಳಲ್ಲಿ ತಿದ್ದುಪಡಿ ಅನುಮೋದನೆಗೊಂಡಿದೆ, ಅದರ ಅಧಿಸೂಚನೆಯೂ ಆಗಿದೆ. ಸಿಎಎ ಜಾರಿಯ ಬಗ್ಗೆ ಕೆಲವು ಪ್ರಯತ್ನಗಳೂ ನಡೆದಿವೆ. ಕೆಲವರು ಸಿಎಎ ತರಲು ಇಷ್ಟು ಆತುರ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವು ಗೌರವಾನ್ವಿತ ಸದಸ್ಯರು ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ, ಸರ್ಕಾರ ಹಿಂದೂ ಮತ್ತು ಮುಸ್ಲಿಂ ಎಂದು ಭೇದ ಮಾಡುತ್ತಿದೆ ಎನ್ನುತ್ತಾರೆ. ನಾವು ದೇಶವನ್ನು ಒಡೆಯುತ್ತಿದ್ದೇವೆ ಎಂದು ಮತ್ತೆ ಕೆಲವರು ಹೇಳಿದ್ದಾರೆ. ಸಾಕಷ್ಟು ಹೇಳಿದ್ದಾರೆ. ಕಾಲ್ಪನಿಕ ಆತಂಕವನ್ನು ಸೃಷ್ಟಿಸಲು ತಮ್ಮ ಸಂಪೂರ್ಣ ಶಕ್ತಿಯನ್ನು ಬಳಸಿಕೊಂಡಿದ್ದಾರೆ. ದೇಶವನ್ನು ತುಂಡು ತುಂಡು ಮಾಡುವವರ ಜೊತೆ ಫೋಟೋ ತೆಗೆಸಿಕೊಳ್ಳುವ ಅವರು ಹೇಳುತ್ತಾರೆ. ಪಾಕಿಸ್ತಾನ ದಶಕಗಳಿಂದ ಆಡುತ್ತಿರುವ ಭಾಷೆಯಲ್ಲಿ ಮಾತನಾಡುತ್ತಾರೆ.ಪಾಕಿಸ್ತಾನವೂ ಇದನ್ನೆ ಮಾತನಾಡುತ್ತದೆ.

ಪಾಕಿಸ್ತಾನವು ಭಾರತದಲ್ಲಿನ ಮುಸ್ಲಿಂರನ್ನು ಪ್ರಚೋದಿಸಲು ಯಾವ ಅವಕಾಶವನ್ನೂ ಬಿಟ್ಟಿಲ್ಲ, ಎಲ್ಲ ಬಳಸಿಕೊಂಡಿದೆ. ಭಾರತದಲ್ಲಿನ ಮುಸ್ಲಿಂರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದೆ. ಪಾಕಿಸ್ತಾನ ಪ್ರತಿಯೊಂದು ಆಟವನ್ನೂ ಆಡಿದೆ. ಎಲ್ಲ ಬಣ್ಣವನ್ನೂ ತೋರಿದೆ. ಆದರೂ ಪಾಕಿಸ್ತಾನದ ಮಾತು ನಡೆಯುತ್ತಿಲ್ಲ. ನನಗೆ ಅಚ್ಚರಿ ಎನಿಸುತ್ತದೆ, ಹಿಂದೂಸ್ತಾನದ ಜನರು ಅಧಿಕಾರದ ಸಿಂಹಾಸನದಿಂದ ಯಾರನ್ನು ಮನೆಗೆ ಕಳುಹಿಸಿದ್ದಾರೋ, ಅವರು ದೇಶದ ಜನರಿಗೆ ಊಹಿಸಲೂ ಸಾಧ್ಯವಾಗದ ಕೆಲಸವನ್ನು ಮಾಡುತ್ತಿದ್ದಾರೆ. ಕ್ವಿಟ್ ಇಂಡಿಯಾ ಘೋಷಣೆ ನೀಡಿದವರು, ಜೈ ಹಿಂದ್ ಘೋಷಣೆ ನೀಡಿದವರು ಮುಸ್ಲಿಂರೇ ಆಗಿದ್ದಾರೆ. ಈಗ ಸಮಸ್ಯೆ ಇರುವುದು ಕಾಂಗ್ರೆಸ್ ನಲ್ಲಿ ಮತ್ತು ಅದರ ಕಣ್ಣಿನಲ್ಲಿ. ಅವರಿಗೆ ಸದಾ ಕೇವಲ ಮುಸ್ಲಿಂಮರಾಗಿ ಮಾತ್ರ ಕಾಣುತ್ತಾರೆ. ಆದರೆ ನಮಗೆ, ನಮ್ಮ ದೃಷ್ಟಿಕೋನದಲ್ಲಿ ಮುಸ್ಲಿಂರು ಕೂಡ ಭಾರತೀಯರು, ಅವರು ಹಿಂದೂಸ್ತಾನಿಗಳು. ಅದು ಖಾನ್ ಅಬ್ದುಲ್ ಗಫಾರ್ ಖಾನ್...

ಗೌರವಾನ್ವಿತ ಸಭಾಧ್ಯಕ್ಷರೇ,

ನನಗೆ ಬಾಲಕನಾಗಿದ್ದಾಗ ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಚರಣ ಸ್ಪರ್ಶಿಸುವ ಅವಕಾಶ ಲಭಿಸಿತ್ತು. ಅದನ್ನು ನಾನು ಹೆಮ್ಮೆಯೆಂದು ಭಾವಿಸುತ್ತೇನೆ.

ಮಾನ್ಯ ಸಭಾಧ್ಯಕ್ಷರೇ,

ಅದು ಖಾನ್ ಅಬ್ದುಲ್ ಗಫಾರ್ ಖಾನ್ ಅಗಿರಲಿ, ಅಷ್ಫಾಕ್ ಉಲ್ಲಾ ಖಾನ್ ಆಗಿರಲಿ, ಬೇಗಮ್ ಹಜರತ್ ಮಹಲ್ ಆಗಿರಲಿ, ವೀರ್ ಶಹೀದ್ ಅಬ್ದುಮಲ್ ಕರೀಮ್ ಆಗಿರಲಿ ಅಥವಾ ಮಾಜಿ ರಾಷ್ಟ್ರಪತಿ ಶ್ರೀಮಾನ್ .ಪಿ.ಜೆ. ಅಬ್ದುಲ್ ಕಲಾಂ ಆಗಿರಲಿ, ಅವರೆಲ್ಲರೂ ನಮ್ಮ ದೃಷ್ಟಿಯಲ್ಲಿ ಭಾರತೀಯರು.

ಮಾನ್ಯ ಸಭಾಧ್ಯಕ್ಷರೇ,

ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಯಾವಾಗ ಭಾರತವನ್ನು ಭಾರತದ ಕಣ್ಣಿನಿಂದ ನೋಡುತ್ತಾರೋ ಆಗ ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ನಾನು ಕಾಂಗ್ರೆಸ್ ಗೆ ಮತ್ತು ಅದರ ಪರಿಸರ ವ್ಯವಸ್ಥೆಗೆ ಆಭಾರಿಯಾಗಿದ್ದೇನೆ ಅವರು ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ದೇಶದಲ್ಲಿ ದೊಡ್ಡ ಗೊಂದಲ ಉಂಟು ಮಾಡಿದ್ದಾರೆ. ಅವರು ಅದನ್ನು ವಿರೋಧಿಸದೇ ಇದ್ದಿದ್ದರೆ, ಅದರ ಬಗ್ಗೆ ಇಷ್ಟು ಕೂಗೆಬ್ಬಿಸದೇ ಇದ್ದಿದ್ದರೆ, ಬಹುಶಃ ಜನರಿಗೆ ಅವರ ನಿಜ ರೂಪ ದೇಶಕ್ಕೆ ತಿಳಿಯುತ್ತಿರಲಿಲ್ಲ. ಈಗ ದೇಶದ ಜನರಿಗೆ ಪಕ್ಷದ ಪರವಾಗಿ ಯಾರಿದ್ದಾರೆ. ದೇಶದ ಪರವಾಗಿ ಯಾರಿದ್ದಾರೆ ಎಂಬುದು ವೇದ್ಯವಾಗಿದೆ. ಜಬ್ ಚರ್ಚಾ ನಿಕಲ್ ಪಡಿ ಹೇ ತೋ ಬಾತ್ ದೂರ್ ತಕ್ ಜಾಯೇಗಿಯಾವಾಗ ಚರ್ಚೆ ಆರಂಭವಾಗುತ್ತದೋ ಅದು ದೂರ ದೂರದವರೆಗೆ ಹೋಗುತ್ತದೆ.

ಮಾನ್ಯ ಸಭಾಧ್ಯಕ್ಷರೇ,

ಯಾರಾದರೂ ಪ್ರಧಾನಮಂತ್ರಿಯಾಗುವ ಆಸೆ ಇಟ್ಟುಕೊಳ್ಳಬಹುದು. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಯಾರೋ ಪ್ರಧಾನಿಯಾಗಲು ದೇಶದ ಮಧ್ಯೆ ಒಂದು ಗೆರೆ ಎಳೆದರು. ದೇಶವನ್ನು ಒಡೆಯುವ ಕೆಲಸ ಮಾಡಿದರು. ದೇಶ ವಿಭಜನೆಯ ಬಳಿಕ, ಪಾಕಿಸ್ತಾನದಲ್ಲಿ ಹಿಂದೂ, ಸಿಖ್ ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ನಡೆಯಿತು, ಧಾರ್ಮಿಕ ಶೋಷಣೆ ನಡೆಯಿತು. ಅಪರಾಧಗಳನ್ನು ಊಹಿಸಲೂ ಸಾಧ್ಯವಿಲ್ಲ. ನಾನು ಕಾಂಗ್ರೆಸಿನ ಸಹೋದ್ಯೋಗಿಗಳನ್ನು ಕೇಳಲು ಇಚ್ಛಿಸುತ್ತೇನೆ, ನೀವು ಯಾವಾಗಲಾದರೂ ಭೂಪೀಂದರ್ ಕುಮಾರ್ ದತ್ತಾ ಹೆಸರು ಕೇಳಿದ್ದೀರಾ?ಇವರ ಬಗ್ಗೆ ತಿಳಿಯುವುದು ಕಾಂಗ್ರೆಸ್ ಗೆ ಅತ್ಯಾವಶ್ಯಕ ಮತ್ತು ಯಾರು ಅವರ ಬಗ್ಗೆ ತಿಳಿದಿಲ್ಲವೋ ತಿಳಿಯುವುದೂ ಸೂಕ್ತ.

ಭೂಪೀಂದರ್ ಕುಮಾರ್ ದತ್ತಾ ಒಂದು ಕಾಲದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿದ್ದರು. ಅವರು ಸದಸ್ಯರಾಗಿದ್ದರು. ಅವರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ 23 ವರ್ಷ ಸೆರೆ ವಾಸ ಅನುಭವಿಸಿದರು. ಅವರು ಶ್ರೇಷ್ಠ ವ್ಯಕ್ತಿ, ಅವರು ಸೆರೆಮನೆಯಲ್ಲಿ ನ್ಯಾಯಕ್ಕಾಗಿ 78 ದಿನ ಉಪವಾಸ ಸತ್ಯಾಗ್ರಹ ಕೈಗೊಂಡರು ಇದು ದಾಖಲಾಗಿದೆ. ದೇಶ ವಿಭಜನೆಯ ಬಳಿಕ, ಭೂಪೀಂದರ್ ಕುಮಾರ್ ದತ್ತಾ ಪಾಕಿಸ್ತಾನದಲ್ಲಿ ಉಳಿದರು. ಅವರು ಅಲ್ಲಿನ ಸಂವಿಧಾನ ರಚನಾ ಸಮಿತಿಯ ಸದಸ್ಯರೂ ಆಗಿದ್ದರು.

ಯಾವಾಗ ಅಲ್ಲಿ ಸಂವಿಧಾನ ರಚನೆ ಪ್ರಕ್ರಿಯೆ ಪ್ರಗತಿಯಲ್ಲಿತ್ತೋ, ಅದು ಆರಂಭ ಮಾತ್ರವಾಗಿತ್ತು. ಸಂವಿಧಾನ ರಚನಾ ಸಭೆಯಲ್ಲಿ ಆಗ ಭೂಪೀಂದರ್ ಕುಮಾರ್ ದತ್ತಾ ಹೇಳಿದ ಮಾತುಗಳನ್ನು ನಾನು ಪುನರುಚ್ಚರಿಸಲು ಇಚ್ಛಿಸುತ್ತೇನೆ, ಏಕೆಂದರೆ ಅದು ನಮ್ಮ ಮೇಲೆ ಆರೋಪ ಮಾಡುತ್ತಿರುವ ಜನರಿಗೆ ಅತ್ಯಂತ ಮಹತ್ವದ್ದು, ಅವರು ಅದನ್ನು ಅರಿತುಕೊಳ್ಳಬೇಕು.

ಭೂಪೀಂದರ್ ಕುಮಾರ್ ದತ್ತಾ ಹೇಳಿದ್ದರು- ಇಲ್ಲಿಯವರೆಗೆ ಪಾಕಿಸ್ತಾನದ ಭಾಗಕ್ಕೆ ಸಂಬಂಧಿಸಿದಂತೆ, ಅದರಲ್ಲೂ ಅಲ್ಪಸಂಖ್ಯಾತರು ದಿವಾಳಿಯಾಗುತ್ತಾರೆ. ಇಲ್ಲಿರುವ ನಾವು ಪೂರ್ವ ಬಂಗಾಳದಲ್ಲಿ ಇನ್ನೂ ಉಳಿದಿರುವ ಕೋಟ್ಯಂತರ ಜನರು ಒಟ್ಟು ಹತಾಶೆಯ ಭಾವದಲ್ಲಿ ಬದುಕುತ್ತಿರುವುದನ್ನು ಪ್ರತಿನಿಧಿಸುತ್ತೇವೆ. ಮಾತುಗಳನ್ನು ಭೂಪೀಂದರ್ ಕುಮಾರ್ ದತ್ತಾ ಸಂವಿಧಾನ ರಚನಾ ಸಭೆಯಲ್ಲಿ ದೇಶ ವಿಭಜನೆಯ ಬಳಿಕ ಹೇಳಿದ್ದರು. ಇದು ಸ್ವಾತಂತ್ರ್ಯ ಬಂದಾಗಿನಿಂದ ಅಲ್ಲಿರುವ ಅಲ್ಪಸಂಖ್ಯಾತರ ಸ್ಥಿತಿ, ಇರುವ ನಿಜ ಸ್ಥಿತಿ. ತರುವಾಯ ಪಾಕಿಸ್ತಾನದಲ್ಲಿನ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಯಿತು, ಅದು ಎಷ್ಟಾಯಿತು ಎಂದರೆ, ಭೂಪೀಂದರ್ ಕುಮಾರ್ ದತ್ತಾ ಭಾರತಕ್ಕೆ ಮರಳಿದರು ಮತ್ತು ನಿರಾಶ್ರಿತರಾಗಿ ಆಶ್ರಯ ಪಡೆದರು ಅವರು ಭಾರತ ಮಾತೆಯ ಮಡಿಲಲ್ಲೇ ಕೊನೆಯ ಉಸಿರೆಳೆದರು.

ಮಾನ್ಯ ಸಭಾಧ್ಯಕ್ಷರೇ,

ಕಾಲದಲ್ಲಿ ಪಾಕಿಸ್ತಾನದಲ್ಲಿ ಉಳಿದ ಮತ್ತೊಬ್ಬ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ, ಜೋಗಿಂದರ್ ನಾಥ್ ಮಂಡಲ್. ಅವರು ಸಮಾಜದ ಪೀಡಿತ, ಶೋಷಿತ ದುರ್ಬಲ ಸಮಾಜ ಪ್ರತಿನಿಧಿಸುತ್ತಿದ್ದರು. ಅವರು ಪಾಕಿಸ್ತಾನದ ಪ್ರಥಮ ಕಾನೂನು ಸಚಿವರಾಗಿದ್ದರು. 1950 ಅಕ್ಟೋಬರ್ 9ರಂದು ಅಂದರೆ,ಸ್ವತಂತ್ರ್ಯ ಬಂದ ದೇಶ ವಿಭಜನೆಯಾದ 2-3 ವರ್ಷದ ಬಳಿಕ. ಅವರು 1950 ಅಕ್ಟೋಬರ್ 9ರಂದು ರಾಜೀನಾಮೆ ನೀಡಿದರು. ಅವರ ರಾಜೀನಾಮೆಯ ಒಂದು ಪ್ಯಾರಾವನ್ನು ನಾನು ಉಲ್ಲೇಖಿಸಲು ಇಚ್ಛಿಸುತ್ತೇನೆ. ಅದರಲ್ಲಿ ಅವರು ಹೀಗೆ ಬರೆಯುತ್ತಾರೆ ಪಾಕಿಸ್ತಾನದಿಂದ ಹಿಂದೂಗಳನ್ನು ಹೊರ ಹಾಕುವ ಕಾರ್ಯ ಪಶ್ಚಿಮ ಪಾಕಿಸ್ತಾನದಲ್ಲಿ ಯಶಸ್ವಿಯಾಗಿದೆ, ಅದು ಪೂರ್ವ ಪಾಕಿಸ್ತಾನದಲ್ಲೂ ಪೂರ್ಣವಾಗುವ ಹಂತದಲ್ಲಿದೆ ಎಂದು ನಾನು ಹೇಳಲೇ ಬೇಕು..

ಅವರು ಮತ್ತೆ ಹೇಳುತ್ತಾರೆ ಪಾಕಿಸ್ತಾನ ಮುಸ್ಲಿಂ ಲೀಗ್ ಗೆ ಸಂಪೂರ್ಣ ತೃಪ್ತಿ ತಂದಿಲ್ಲ ಮತ್ತು ಸಂಪೂರ್ಣ ಭದ್ರತೆಯನ್ನೂ ನೀಡಿಲ್ಲ. ಪಾಕಿಸ್ತಾನದ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕ ಜೀವನದ ಮೇಲೆ ಪ್ರಭಾವ ಬೀರದಂತೆ ಅವರು ಈಗ ಹಿಂದೂ ಬುದ್ಧಿಜೀವಿಗಳನ್ನು ತೊಡೆದುಹಾಕಲು ಬಯಸುತ್ತಾರೆ. ಇದನ್ನು ಮಂಡಲ್ ಜಿ ಅವರು ತಮ್ಮ ರಾಜೀನಾಮೆಯಲ್ಲಿ ಬರೆದಿದ್ದಾರೆ. ಅಂತಿಮವಾಗಿ ಅವರೂ ಭಾರತಕ್ಕೆ ಬರಬೇಕಾಯಿತು ಮತ್ತು ಅವರು ತಾಯಿ ಭಾರತಿಯ ಮಡಿಲಲ್ಲಿ ನಿಧನರಾದರು. ಇಷ್ಟು ದಶಕಗಳ ನಂತರವೂ ಪಾಕಿಸ್ತಾನದ ಚಿಂತನೆ ಬದಲಾಗಲಿಲ್ಲ. ಇಂದಿಗೂ ಅಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಗುತ್ತಿದೆ. ನನ್ ಖಾನಾ ಸಾಹೀಬ್ ಗೆ ಏನಾಯಿತು ಎಂಬುದನ್ನು ಇಡೀ ದೇಶ ಮತ್ತು ಇಡೀ ವಿಶ್ವ ನೋಡಿದೆ. ಅದು ಕೇವಲ ಹಿಂದೂ ಮತ್ತು ಸಿಖ್ ರಿಗೆ ಮಾತ್ರವೇ ಆಗಿಲ್ಲ. ಇದು ಇತರ ಅಲ್ಪಸಂಖ್ಯಾತರ ವಿಚಾರದಲ್ಲೂ ಆಗಿದೆ. ಕ್ರೈಸ್ತರು ಕೂಡ ಇದೇ ಸ್ಥಿತಿ ಎದುರಿಸಿದ್ದಾರೆ.

ಸದನದಲ್ಲಿ ಚರ್ಚೆಯ ವೇಳೆ ಗಾಂಧೀಜಿ ಅವರ ಹೇಳಿಕೆಯನ್ನು ಉಲ್ಲೇಖಿಸಲಾಯಿತು. ಸಿಎಎ ಬಗ್ಗೆ ಸರ್ಕಾರ ಹೇಳುತ್ತಿರುವುದು ಗಾಂಧೀಜೀ ಅವರ ಭಾವನೆಯಲ್ಲ ಎಂದು ಹೇಳಲಾಯಿತು.

ಆಯಿತು ಬಿಡಿ, ಕಾಂಗ್ರೆಸ್ಸಿನಂತಹ ಪಕ್ಷಗಳು ದಶಕಗಳ ಹಿಂದೆ ಗಾಂಧೀಜಿಯವರ ಬೋಧನೆಗಳನ್ನು ಕೈಬಿಟ್ಟವು. ನೀವು ಗಾಂಧೀಜಿಯನ್ನು ತೊರೆದಿದ್ದೀರಿ ಹೀಗಾಗಿ, ನಾನು ಅಥವಾ ದೇಶ ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೆ ಕಾಂಗ್ರೆಸ್ ಯಾವ ಆಧಾರದ ಮೇಲೆ ಉಳಿದಿದೆ, ಎಂಬ ಬಗ್ಗೆ ಇಂದು ನಾನು ಮಾತನಾಡಲು ಬಯಸುತ್ತೇನೆ.

ನೆಹರೂ ಲಿಖಾಯತ್ ಒಪ್ಪಂದಕ್ಕೆ 1950ರಲ್ಲಿ ಅಂಕಿತ ಹಾಕಲಾಯಿತು. ಭಾರತ ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಒಪ್ಪಂದ ಆಗಿತ್ತು. ಒಪ್ಪಂದದ ಆಧಾರದ ಮೇಲೆ, ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಯಾವುದೇ ತಾರತಮ್ಯ ಮಾಡುವಂತಿರಲಿಲ್ಲ. ನಾವು ಇಂದು ಮಾತನಾಡುತ್ತಿರುವ ಪಾಕಿಸ್ತಾನದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಕುರಿತಂತೆ ಅಂದು ನೆಹರೂ ಮತ್ತು ಲಿಖಾಯತ್ ನಡುವೆ ಒಪ್ಪಂದ ಆಗಿತ್ತು. ಈಗ ಕಾಂಗ್ರೆಸ್ ಇದಕ್ಕೆ ಉತ್ತರ ನೀಡಬೇಕು, ನೆಹರೂರಂಥ ಜಾತ್ಯತೀತವಾದಿ, ಅಂಥ ದೊಡ್ಡ ಚಿಂತಕರು, ಅಂಥ ದೊಡ್ಡ ದೂರದರ್ಶಿತ್ವ ಇದ್ದವರು, ನಿಮಗೆ ಸರ್ವಸ್ವ ಆಗಿರುವವರು, ಏಕೆ ಕಾಲದಲ್ಲಿ ಅಲ್ಪಸಂಖ್ಯಾತರು ಎಂಬುವ ಬದಲು ಎಲ್ಲ ಪ್ರಜೆಗಳು ಎಂಬ ಪದ ಬಳಸಲಿಲ್ಲ? ಅವರು ಅಷ್ಟು ಶ್ರೇಷ್ಠರಾಗಿದ್ದರೆ, ಅದು ದಯಾಳುವಾಗಿದ್ದರೆ, ಏಕೆ ಬಳಸಲಿಲ್ಲ, ಅದಕ್ಕೆ ಒಂದು ಕಾರಣ ಇದೆ ಅಲ್ಲವೇ. ನೀವು ಇನ್ನೂ ಎಷ್ಟು ಕಾಲ ಸತ್ಯವನ್ನು ನಿರಾಕರಿಸುತ್ತೀರಿ?

ಸಹೋದರ ಸಹೋದರಿಯರೇ, ಗೌರವಾನ್ವಿತ ಸಭಾಧ್ಯಕ್ಷರೇ ಮತ್ತು ಗೌರವಾನ್ವಿತ ಸದಸ್ಯರೇ, ಇದು ಆಕಾಲದ ವಿಚಾರ, ನಾನು ಕಾಲದ ಬಗ್ಗೆ ಮಾತನಾಡುತಿದ್ದೇನೆ. ಹೇಗೆ ನೆಹರೂ ಅವರ ಒಪ್ಪಂದ ಪಾಕಿಸ್ತಾನದ ಅಲ್ಪಸಂಖ್ಯಾತರನ್ನು ಒಪ್ಪಿಕೊಂಡಿತು, ಅದಕ್ಕೆ ಕಾರಣ ಇರಬೇಕಲ್ಲವೇ. ನಾವು ಇಂದು ಏನು ಹೇಳುತ್ತಿದ್ದೇವೋ ಅದನ್ನೇ ನೆಹರೂ ಅವರು ಅಂದು ಹೇಳಿದ್ದರು.

ಗೌರವಾನ್ವಿತ ಸಭಾಧ್ಯಕ್ಷರೇ,

ಏಕೆ ನೆಹರೂ ಅವರು ಅಲ್ಪಸಂಖ್ಯಾತ ಎಂಬ ಪದ ಬಳಸಿದರು, ನೀವು ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದರೆ ನಿಮಗೆ ಸಮಸ್ಯೆ ಇದೆ. ಆದರೆ ನೆಹರೂ ಅವರೇ ಇದಕ್ಕೆ ಉತ್ತರ ನೀಡಿದ್ದಾರೆ. ನೆಹರೂ -ಲಿಖಾಯತ್ ಒಪ್ಪಂದಕ್ಕೆ ಅಂಕಿತ ಹಾಕಿದ ಒಂದು ವರ್ಷದ ಬಳಿಕ, ನೆಹರೂ ಅಸ್ಸಾಂ ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸುತ್ತಾರೆ, ಶ್ರೀಮಾನ್ ಗೋಪಿನಾಥ್ ಜೀ... ನಾನು ನೆಹರೂ ಅವರು ಗೋಪಿನಾಥ್ ಜೀ ಅವರಿಗೆ ಬರೆದ ಪತ್ರದ ಸಾಲು ಉಲ್ಲೇಖಿಸಲು ಇಚ್ಛಿಸುತ್ತೇನೆ.

ನೆಹರೂ ಬರೆಯುತ್ತಾರೆ ನೀವು ಹಿಂದೂ ನಿರಾಶ್ರಿತರು ಮತ್ತು ಮುಸ್ಲಿಂ ವಲಸಿಗರ ನಡುವೆ ಭೇದ ಮಾಡಬೇಕು. ದೇಶ ನಿರಾಶ್ರಿತರ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಪತ್ರವನ್ನು ಅಂದಿನ ಅಸ್ಸಾಂ ಮುಖ್ಯಮಂತ್ರಿಯವರಿಗೆ ಅಂದಿನ ಪ್ರಧಾನಮಂತ್ರಿ ಪಂಡಿತ್ ನೆಹರೂ ಅವರು ಬರೆದಿದ್ದರು. ನೆಹರೂ ಲಿಖಾಯತ್ ಒಪ್ಪಂದ ಆದ ಕೆಲವೇ ತಿಂಗಳುಗಳ ತರುವಾಯ ನೆಹರೂ ಅವರು 1950 ನವೆಂಬರ್ 5ರಂದು ಇದೇ ಸಂಸತ್ತಿನಲ್ಲಿ ಹೀಗೆ ಹೇಳಿದ್ದರು ಬಾಧಿತ ಜನರು ಭಾರತಕ್ಕೆ ಬಂದು ನೆಲೆಸಲು ಬಯಸುತ್ತಾರೆ ಎಂಬುದರಲ್ಲಿ ಸಂದೇಶವಿಲ್ಲ, ಅವರು ಪೌರತ್ವ ಪಡೆಯಲು ಅರ್ಹರಾಗಿದ್ದಾರೆ ಮತ್ತು ಕಾನೂನು ಅದಕ್ಕೆ ಪೂರಕವಾಗಿಲ್ಲದಿದ್ದರೆ, ಅದಕ್ಕಾಗಿ ಕಾನೂನು ಬದಲಾಯಿಸಬೇಕು.

1963ರಲ್ಲಿ ಗಮನ ಸೆಳೆಯುವ ಸೂಚನೆ ಬಂದಿತ್ತು. ಇದೇ ಸದನದಲ್ಲಿ, ಇದೇ ಸ್ಥಳದಲ್ಲಿ 1963ರಲ್ಲಿ ಬಂದಿತ್ತು. ಆಗ ಪ್ರಧಾನಮಂತ್ರಿ ನೆಹರೂ ಅವರೇ ವಿದೇಶಾಂಗ ಖಾತೆ ನಿರ್ವಹಿಸುತ್ತಿದ್ದರು. ಆಗ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವರಾಗಿದ್ದ ಶ್ರೀರಾಮ್ ದಿನೇಶ್ ಅವರು ಸೂಚನೆಗೆ ಉತ್ತರ ನೀಡುತ್ತಿದ್ದಾಗ, ನೆಹರೂ ಮಧ್ಯಪ್ರವೇಶಿಸಿದರು ಆಗ ಅವರು ಏನು ಹೇಳಿದರು ಎಂಬುದನ್ನು ನಾನು ಉಲ್ಲೇಖಿಸುತ್ತೇನೆ, ಅವರು ಹೇಳಿದ್ದರು ಪೂರ್ವ ಪಾಕಿಸ್ತಾನದಲ್ಲಿನ ಪ್ರಾಧಿಕಾರಗಳು ಹಿಂದೂಗಳ ಮೇಲೆ ಅತಿಯಾದ ಒತ್ತಡ ಹೇರುತ್ತಿವೆ, ಇದು ಪಂಡಿತ್ ನೆಹರೂ ಅವರ ಹೇಳಿಕೆ. ಪಾಕಿಸ್ತಾನದ ಪರಿಸ್ಥಿತಿಯ ಬಗ್ಗೆ ಇದು ಗಾಂಧೀ ಅವರೊಬ್ಬರದೇ ಅಲ್ಲ ನೆಹರೂ ಅವರ ಹೇಳಿಕೆಯೂ ಆಗಿತ್ತು. ಸಾಕಷ್ಟು ದಾಖಲೆಗಳು, ಪತ್ರಗಳು, ಸ್ಥಾಯಿ ಸಮಿತಿ ವರದಿಗಳು, ಇವೆ ಎಲ್ಲವೂ ಕಾಯಿದೆಯ ಪರವಾಗಿವೆ.

ಸದನದ ತತ್ವಗಳ ಆಧಾರದ ಮೇಲೆ, ನಾನು ಕಾಂಗ್ರೆಸ್ ಪಕ್ಷಕ್ಕೆ ಕೇಳಬಯಸುತ್ತೇನೆ, ಅದರಲ್ಲೂ ಅದರ ಪರಿಸರ ವ್ಯವಸ್ಥೆಯೂ ನನ್ನ ಪ್ರಶ್ನೆ ಅರ್ಥ ಮಾಡಿಕೊಳ್ಳುತ್ತದೆ ಎಂದು ಕೊಂಡಿದ್ದೇನೆ. ನಾನು ಹೇಳಿದ ಎಲ್ಲವೂ ಪಂಡಿತ ನೆಹರೂ ಅವರನ್ನು ಕೋಮುವಾದಿ ಮಾಡುತ್ತದೆಯೇ? ನಾನು ತಿಳಿಯಲು ಬಯಸುತ್ತೇನೆ. ನೆಹರೂ ಅವರು ಹಿಂದೂ ಮುಸ್ಲಿಂ ನಡುವೆ ಭೇದ ಮಾಡಿದ್ದರೆ? ಪಂಡಿತ್ ನೆಹರೂ ಅವರು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದರೆ?

ಗೌರವಾನ್ವಿತ ಸಭಾಧ್ಯಕ್ಷರೆ,

ಇದು ಕಾಂಗ್ರೆಸ್ ಗೆ ಇರುವ ಸಮಸ್ಯೆ. ಅದು ಮಾತನಾಡತ್ತೆ, ಸುಳ್ಳು ಭರವಸೆ ನೀಡತ್ತೆ. ದಶಕಗಳಿಂದ ಹೀಗೆ ಮಾಡುತ್ತಿದೆ. ಇಂದು ನಮ್ಮ ಸರ್ಕಾರ ನಮ್ಮ ದೇಶದ ನಿರ್ಮಾತೃಗಳ ಭಾವನೆಯಂತೆ ನಿರ್ಧಾರ ಕೈಗೊಂಡರೆ, ಕಾಂಗ್ರೆಸ್ ಗೆ ಸಮಸ್ಯೆ ಎದುರಾಗುತ್ತದೆ. ನಾನು ಮತ್ತೊಮ್ಮೆ ಸದನದ ಮೂಲಕ ದೇಶದ 130 ಕೋಟಿ ಜನರಿಗೂ, ಸಂಪೂರ್ಣ ಜವಾಬ್ದಾರಿಯೊಂದಿಗೆ ಮತ್ತು ಸಂವಿಧಾನದ ಮೇಲಿನ ಗೌರವ ಅರಿತು ತಿಳಿಸಲು ಇಚ್ಛಿಸುತ್ತೇನೆ. ಸಂವಿಧಾನದ ಬಗ್ಗೆ ಸಮರ್ಪಣ ಭಾವದಿಂದ ಹೇಳಲು ಬಯಸುತ್ತೇನೆ. ಸಿಎಎ ಕಾಯಿದೆಯಿಂದ ಹಿಂದೂಸ್ತಾನದಲ್ಲಿರುವ ಯಾವುದೇ ನಾಗರಿಕರಿಗೆ, ಯಾವುದೇ ರೀತಿಯ ಪರಿಣಾಮ ಆಗುವುದಿಲ್ಲ. ಅವರು ಹಿಂದೂ ಇರಲಿ, ಮುಸ್ಲಿಂ ಇರಲಿ, ಸಿಖ್ ಇಸಾಯಿಯೇ ಇರಲಿ, ಯಾರಿಗೂ ಯಾವುದೇ ಪರಿಣಾಮ ಆಗುವುದಿಲ್ಲ. ಇದು ಭಾರತೀಯ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆ ನೀಡುವುದಿಲ್ಲ. ಆದರೂ ದೇಶದ ಜನರಿಂದ ತಿರಸ್ಕರಿಸಲ್ಪಟ್ಟಿರುವವರು, ಮತ ಬ್ಯಾಂಕ್ ರಾಜಕೀಯಕ್ಕಾಗಿ ಎಲ್ಲ ಆಟ ಆಡುತ್ತಿದ್ದಾರೆ.

ನಾನು ಕೇಳಲು ಬಯಸುತ್ತೇನೆ. ಅದರಲ್ಲೂ ಕಾಂಗ್ರೆಸ್ ನಿಂದ ಬಂದವರಿಗೆ ಕೇಳಲು ಬಯಸುತ್ತೇನೆ. ಯಾರು ಅಲ್ಪಸಂಖ್ಯಾತರ ಹೆಸರಿನಲ್ಲಿ ತಮ್ಮ ರಾಜಕೀಯ ಕಾರ್ಯಕ್ರಮ ಮುಂದುವರಿಸುತ್ತಿದ್ದಾರೆ. ಕಾಂಗ್ರೆಸ್ ಗೆ 1984 ದೆಹಲಿ ಗಲಭೆಯ ನೆನಪಿದೆಯೇ, ಅವರು ಅಲ್ಪ ಸಂಖ್ಯಾತರಾಗಿರಲಿಲ್ಲವೇ? ನೀವು ನಮ್ಮ ಸಿಖ್ ಸೋದರರ ಕುತ್ತಿಗೆಗೆ ಟೈರ್ ಹಾಕಿ ಬೆಂಕಿ ಹಚ್ಚಿ ಜೀವಂತ ಸುಟ್ಟಿರಿ. ಇದಷ್ಟೇ ಅಲ್ಲ, ಸಿಖ್ ವಿರೋಧಿ ದಂಗೆಯ ಆರೋಪಿಗಳನ್ನು ಜೈಲಿಗೆ ಅಟ್ಟಲು ನೀವು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದಿಷ್ಟೇ ಅಲ್ಲ, ಇಂದು ಆರೋಪ ಮಾಡುತ್ತಿರುವವರೇ, ಸಿಖ್ ವಿರೋಧಿ ದಂಗೆ ಆರಂಭಿಸಿದವರು. ನೀವು ಅವರನ್ನು ಇಂದು ಮುಖ್ಯಮಂತ್ರಿ ಮಾಡುತ್ತೀರಿ. ಸಿಖ್ ವಿರೋಧಿ ದಂಗೆಯ ತಪ್ಪಿತಸ್ಥರಿಗೆ ಶಿಕ್ಷೆಯಾಗಿ, ವಿಧವೆ ತಾಯಂದಿರು ತಮಗೆ ನ್ಯಾಯ ದೊರಕಲು 3 ದಶಕ ಕಾಯಬೇಕಾಯಿತು. ಅವರು ಅಲ್ಪಸಂಖ್ಯಾತರಾಗಿರಲಿಲ್ಲವೇ? ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಎರಡು ಮಾನದಂಡ ಇದೆಯೇ? ಇದು ನಿಮ್ಮ ಮಾರ್ಗವೇ?

ಗೌರವಾನ್ವಿತ ಸಭಾಧ್ಯಕ್ಷರೇ,

ಇಷ್ಟು ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಇಂದು, ದೇಶದ ನಿರೀಕ್ಷೆಗೆ ತಕ್ಕಂತೆ ಜವಾಬ್ದಾರಿಯುತ ಪ್ರತಿಪಕ್ಷವಾಗಿಯೂ ಸೇವೆ ಮಾಡುತ್ತಿಲ್ಲ ಎಂಬುದು ದುರ್ದೈವ. ಅದು ತಪ್ಪು ಮಾರ್ಗದಲ್ಲಿ ಸಾಗುತ್ತಿದೆ. ಮಾರ್ಗ ನಿಮಗೂ ತೊಂದರೆ ನೀಡುತ್ತದೆ, ಜೊತೆಗೆ ದೇಶವನ್ನೂ ತೊಂದರೆಗೆ ಸಿಲುಕಿಸುತ್ತದೆ. ದೇಶದ ಬಗ್ಗೆ, ನಮ್ಮ ದೇಶದ ಉಜ್ವಲ ಭವಿಷ್ಯದ ಬಗ್ಗೆ ಕಾಳಜಿ ಇರಬೇಕು. ಅದರಿಂದಲೇ ನಾನು ಎಚ್ಚರಿಕೆಯನ್ನು ನೀಡುತ್ತಿದ್ದೇನೆ.

ನೀವು ಬಗ್ಗೆ ಯೋಚಿಸಿ, ರಾಜಾಸ್ಥಾನ ವಿಧಾನಸಭೆ ಯಾವುದೇ ನಿರ್ಣಯ ಕೈಗೊಂಡರೆ, ಒಂದು ವ್ಯವಸ್ಥೆ ರೂಪಿಸಿದರೆ, ಅದನ್ನು ರಾಜಾಸ್ಥಾನದಲ್ಲಿ ಯಾರೊಬ್ಬರೂ ಪಾಲಿಸಲು ಸಿದ್ಧರಿಲ್ಲದಿದ್ದರೆ, ಪ್ರತಿಭಟನೆ ನಡೆಸಿದರೆ, ಹಿಂಸಾಚಾರದಲ್ಲಿ ತೊಡಗಿದರೆ, ಬೆಂಕಿ ಹಚ್ಚಿದರೆ, ಅಲ್ಲಿ ಇರುವ ನಿಮ್ಮ ಸರ್ಕಾರದ ಪರಿಸ್ಥಿತಿ ಏನು? ಮಧ್ಯಪ್ರದೇಶ ಅಲ್ಲಿ ನೀವು ಅಧಿಕಾರದಲ್ಲಿದ್ದೀರಿ. ಮಧ್ಯಪ್ರದೇಶ ವಿಧಾನಸಭೆ ಒಂದು ನಿರ್ಧಾರ ಕೈಗೊಂಡರೆ, ಅದರ ವಿರುದ್ಧ ಜನರು ಬೀದಿಗಿಳಿದರೆ, ಏನಾಗುತ್ತದೆ. ರೀತಿ ಅರಾಜಕತೆಯಲ್ಲಿ ದೇಶ ಸಾಗಲು ಸಾಧ್ಯವೇ?

ನೀವು ಹಲವು ತಪ್ಪು ಮಾಡಿದ್ದೀರಿ, ಹೀಗಾಗಿಯೇ ನೀವು ಅಲ್ಲಿ ಕೂರುವಂತಾಗಿದೆ. ನೀವು ಸ್ವಯಂಕೃತವಾಗಿ ಮಾಡಿಕೊಂಡ ತಪ್ಪಿನಿಂದ ಜನ ನಿಮ್ಮನ್ನು ಅಲ್ಲಿ ಕೂರುವಂತೆ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಮಾತನಾಡುವ ಹಕ್ಕಿದೆ. ಆದರೆ, ಸುಳ್ಳು ಮತ್ತು ವದಂತಿ ಹಬ್ಬಿಸಿ, ಜನರ ದಾರಿ ತಪ್ಪಿಸಿ ದೇಶಕ್ಕೆ ನಾವು ಯಾವುದೇ ಉತ್ತಮ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ.

ಹೀಗಾಗಿಯೇ ನಾನು ಸಂವಿಧಾನದ ಬಗ್ಗೆ ಮಾತನಾಡುವವರಿಗೆ ಇಂದು ವಿಶೇಷ ರೂಪದಲ್ಲಿ ಹೇಳಲು ಇಚ್ಛಿಸುತ್ತೇನೆ,

ಬನ್ನಿ - ಸಂವಿಧಾನಕ್ಕೆ ಗೌರವ ನೀಡಿ

ಬನ್ನಿ - ಒಗ್ಗೂಡಿ ದೇಶವನ್ನು ಮುಂದೆ ನಡೆಸೋಣ, ದೇಶವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರ ಮಾಡುವ ಸಂಕಲ್ಪ ಮಾಡೋಣ.

ಬನ್ನಿ ಶುದ್ಧ ಕುಡಿಯುವ ನೀರು ದೊರಕದ ದೇಶದ 15 ಕೋಟಿ ಕುಟುಂಬಗಳಿಗೆ ನೀರು ಪೂರೈಸುವ ಸಂಕಲ್ಪ ಮಾಡೋಣ.

ಬನ್ನಿ - ಎಲ್ಲ ಬಡಜನರಿಗೂ ಪಕ್ಕಾ ಮನೆಗಳನ್ನು ದೊರಕಿಸಲು ಒಗ್ಗೂಡಿ ಶ್ರಮಿಸೋಣ, ಅವರಿಗೂ ಉತ್ತಮ ಮನೆ ದೊರಕಲಿ.

ಬನ್ನಿ - ದೇಶದ ರೈತರಾಗಿರಲಿ, ಮೀನುಗಾರರಾಗಿರಲಿ, ಪಶು ಪಾಲಕರಾಗಿರಲಿ,ಅವರ ಆದಾಯ ಹೆಚ್ಚಿಸಲು ಒಗ್ಗೂಡಿ ಶ್ರಮಿಸೋಣ.

ಪ್ರತಿಯೊಂದು ಪಂಚಾಯ್ತಿಗೂ ಬ್ರಾಡ್ ಬ್ಯಾಂಡ್ ದೊರಕಿಸಲು ಶ್ರಮಿಸೋಣ.

ಬನ್ನಿ - ಏಕ ಭಾರತ ಶ್ರೇಷ್ಠ ಭಾರತ ಸಂಕಲ್ಪದೊಂದಿಗೆ ಮುಂದಡಿ ಇಡೋಣ.

ಮಾನ್ಯ ಸಭಾಧ್ಯಕ್ಷರೇ, ಉಜ್ವಲ ಭವಿಷ್ಯದ ಭಾರತಕ್ಕಾಗಿ ಒಗ್ಗೂಡೋಣ, ಹೇಳಿಕೆಗಳೊಂದಿಗೆ ನಾನು ರಾಷ್ಟ್ರಪತಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಮಾತು ಮುಗಿಸುತ್ತೇನೆ. ನಿಮಗೆಲ್ಲರಿಗೂ ವಿಶೇಷ ಕೃತಜ್ಞತೆ ಅರ್ಪಿಸುತ್ತೇನೆ.

 

***


(Release ID: 1605874) Visitor Counter : 220