ಪ್ರಧಾನ ಮಂತ್ರಿಯವರ ಕಛೇರಿ
ಮಹಿಳಾ ಸಾಧಕರಿಗೆ ಟ್ವಿಟರ್ ಹ್ಯಾಂಡಲ್ ಹಸ್ತಾಂತರಿಸಿದ ಪ್ರಧಾನಿ
Posted On:
08 MAR 2020 2:07PM by PIB Bengaluru
ಮಹಿಳಾ ಸಾಧಕರಿಗೆ ಟ್ವಿಟರ್ ಹ್ಯಾಂಡಲ್ ಹಸ್ತಾಂತರಿಸಿದ ಪ್ರಧಾನಿ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳಾ ಸಾಧಕರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ತಮ್ಮ ಜೀವನ ಪಯಣವನ್ನು ಹಂಚಿಕೊಳ್ಳಲಿದ್ದಾರೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದಾದ್ಯಂತದ ಮಹಿಳೆಯರು ತಮ್ಮ ಜೀವನಗಾಥೆಗಳನ್ನು ಪ್ರಧಾನಮಂತ್ರಿಯವರ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಎಲ್ಲಾ ಹಂತದ ಮಹಿಳೆಯರು ಹಂಚಿಕೊಂಡ ಜೀವನಗಾಥೆಗಳು ಅನುಕರಣೀಯ ಮತ್ತು ಪ್ರೇರಣಾದಾಯಕವಾಗಿದೆ.
Narendra Modi
✔@narendramodi
ಸೈನಿಕರಾಗಿ ಆದರೆ ವಿಭಿನ್ನ ರೀತಿಯಲ್ಲಿ !
ಜಲ ಸೈನಿಕರಾಗಿ.
ನೀರಿನ ಕೊರತೆಯ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ನಮ್ಮ ಮಕ್ಕಳಿಗಾಗಿ ನೀರಿನ ಸುರಕ್ಷತೆಯ ಭವಿಷ್ಯವನ್ನು ಸೃಷ್ಟಿಸಲು ನಾವು ಪ್ರತಿಯೊಬ್ಬರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು.
ನನ್ನಿಂದ ಆಗುತ್ತಿರುವುದನ್ನು ನಾನು ಹೇಗೆ ಮಾಡುತ್ತಿದ್ದೇನೆ ಎನ್ನುವುದು ಇಲ್ಲಿದೆ - ಕಲ್ಪನಾ @kalpana_designs
Narendra Modi
✔@narendramodi
ಅಂಗೀಕಾರವು ನಾವು ನಮಗೆ ನೀಡಬಹುದಾದ ದೊಡ್ಡ ಪುರಸ್ಕಾರವಾಗಿದೆ. ನಾವು ನಮ್ಮ ಜೀವನವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಆದರೆ ನಾವು ಖಂಡಿತವಾಗಿಯೂ ಜೀವನದ ಬಗೆಗಿನ ನಮ್ಮ ಮನೋಭಾವವನ್ನು ನಿಯಂತ್ರಿಸಬಹುದು. ದಿನದ ಕೊನೆಯಲ್ಲಿ, ನಮ್ಮ ಸವಾಲುಗಳನ್ನು ನಾವು ಹೇಗೆ ನಿಭಾಯಿಸಿದ್ದೇವೆ ಎನ್ನುವುದು ಹೆಚ್ಚು ಮುಖ್ಯ.
ನನ್ನ ಮತ್ತು ನನ್ನ ಕೆಲಸದ ಬಗ್ಗೆ ಇನ್ನಷ್ಟು ತಿಳಿಯಿರಿ- ಮಾಲ್ವಿಕಾ ಐಯರ್ @MalvikaIyer #SheInspiresUs
Narendra Modi
✔@narendramodi
ಚಿಂತನೆಗೆ ಆಹಾರ ಒದಗಿಸುವ ಬಗ್ಗೆ ನೀವು ಕೇಳಿದ್ದೀರಿ. ಈಗ, ಇದನ್ನು ನಮ್ಮ ಬಡವರ ಉತ್ತಮ ಭವಿಷ್ಯಕ್ಕಾಗಿ ಕಾರ್ಯರೂಪಕ್ಕೆ ಇಳಿಸುವ ಸಮಯ.
ಹಲೋ, ನಾನು ಸ್ನೇಹ ಮೋಹನ್ ದಾಸ್ @snehamohandoss. ಮನೆಯಿಲ್ಲದವರಿಗೆ ಆಹಾರ ನೀಡುವ ಅಭ್ಯಾಸವನ್ನು ಬೆಳೆಸಿದ ನನ್ನ ತಾಯಿಯಿಂದ ಪ್ರೇರಿತಳಾಗಿ ನಾನು ಫುಡ್ಬ್ಯಾಂಕ್ ಇಂಡಿಯಾ ಎಂಬ ಈ ಉಪಕ್ರಮವನ್ನು ಪ್ರಾರಂಭಿಸಿದೆ. #SheInspiresUs
Narendra Modi
✔@narendramodi
ಭಾರತದ ವಿವಿಧ ಭಾಗಗಳ ಕರಕುಶಲ ವಸ್ತುಗಳ ಬಗ್ಗೆ ನೀವು ಕೇಳಿದ್ದೀರಿ. ನನ್ನ ದೇಶಭಾಂದವರೇ, ಗ್ರಾಮೀಣ ಮಹಾರಾಷ್ಟ್ರದ ಬಂಜಾರ ಸಮುದಾಯದ ಕರಕುಶಲ ವಸ್ತುಗಳನ್ನು ನಾನು ನಿಮಗೆ ಪ್ರಸ್ತುತಪಡಿಸುತ್ತಿದ್ದೇನೆ. ನಾನು ಕಳೆದ 2 ದಶಕಗಳಿಂದ ಇದರ ಬಗ್ಗೆ ಕೆಲಸ ಮಾಡುತ್ತಿದ್ದೇನೆ ಮತ್ತು ಇನ್ನೂ ಒಂದು ಸಾವಿರ ಮಹಿಳೆಯರಿಂದ ಸಹಾಯ ಪಡೆದುಕೊಂಡಿದ್ದೇನೆ - ವಿಜಯಾ ಪವಾರ್
***
(Release ID: 1605871)
Visitor Counter : 173