ಸಂಪುಟ

ಜಮ್ಮು ಮತ್ತು ಕಾಶ್ಮೀರದ ಪುನರ್ ಸಂಘಟನೆ ಕಾಯ್ದೆ, 2019 ರ ಸೆಕ್ಷನ್ 96 ರ ಅಡಿಯಲ್ಲಿ ಕೇಂದ್ರಾಡಳಿತ  ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರೀಯ ಕಾನೂನುಗಳನ್ನು ಅಳವಡಿಸಿಕೊಳ್ಳಲು ಆದೇಶಕ್ಕೆ ಸಂಪುಟದ ಅನುಮೋದನೆ

Posted On: 26 FEB 2020 3:44PM by PIB Bengaluru

ಜಮ್ಮು ಮತ್ತು ಕಾಶ್ಮೀರದ ಪುನರ್ ಸಂಘಟನೆ ಕಾಯ್ದೆ, 2019 ರ ಸೆಕ್ಷನ್ 96 ರ ಅಡಿಯಲ್ಲಿ ಕೇಂದ್ರಾಡಳಿತ  ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರೀಯ ಕಾನೂನುಗಳನ್ನು ಅಳವಡಿಸಿಕೊಳ್ಳಲು ಆದೇಶಕ್ಕೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಮ್ಮು ಮತ್ತು ಕಾಶ್ಮೀರ ಪುನರ್ ಸಂಘಟನೆ ಕಾಯ್ದೆ 2019 ರ ಸೆಕ್ಷನ್ 96ರ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರೀಯ ಕಾಯ್ದೆಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಲು ತನ್ನ ಅನುಮೋದನೆ ನೀಡಿದೆ.

ಜಮ್ಮು ಮತ್ತು ಕಾಶ್ಮೀರ ಪುನರ್ ಸಂಘಟನೆ ಕಾಯ್ದೆ, 2019 ರ ಜಾರಿಗೆ ಬಂದ ನಂತರ, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು 2019 ರ ಅಕ್ಟೋಬರ್ 31 ರಿಂದ ಅನ್ವಯವಾಗುವಂತೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಿ ಪುನಾರಚನೆ ಮಾಡಲಾಗಿತ್ತು.

31.10.2019ಕ್ಕೆ ಮೊದಲು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯ ಹೊರತು ಪಡಿಸಿ ಇಡೀ ಭಾರತಕ್ಕೆ ಅನ್ವಯವಾಗುತ್ತಿದ್ದ ಕೇಂದ್ರೀಯ ಕಾನೂನುಗಳು ಈಗ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೂ 31.10.2019ರಿಂದ ಅನ್ವಯವಾಗುತ್ತವೆ. ಜೊತೆಗೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ಆಡಳಿತ ಮತ್ತು ಸುಗಮ ವ್ಯವಹಾರಗಳನ್ನು ಖಾತ್ರಿಪಡಿಸಿಕೊಳ್ಳಲು, ಅಗತ್ಯ ಮಾರ್ಪಾಡುಗಳು ಮತ್ತು ತಿದ್ದುಪಡಿಗಳೊಂದಿಗೆ ಸಹವರ್ತಿ ಪಟ್ಟಿಯಡಿಯಲ್ಲಿ ಮಾಡಲಾದ ಕೇಂದ್ರೀಯ ಕಾನೂನುಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ ಮತ್ತು ಆ ಮೂಲಕ ಅದು ಭಾರತೀಯ ಸಂವಿಧಾನದ ಅನುಸಾರವಾಗಿ ಆ ನಿಟ್ಟಿನಲ್ಲಿ ಇರಬಹುದಾದ ಯಾವುದೇ ಅಸ್ಪಷ್ಟತೆಯನ್ನು ತೆಗೆದುಹಾಕುತ್ತದೆ.

ಜಮ್ಮು ಮತ್ತು ಕಾಶ್ಮೀರ ಪುನರ್ ಸಂಘಟನೆ ಕಾಯ್ದೆ 2019 ರ ಸೆಕ್ಷನ್ 96 ರ ಅನ್ವಯ, ಉತ್ತರಾಧಿಕಾರಿ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ನಿಗದಿತ ದಿನಾಂಕದಿಂದ ಒಂದು ವರ್ಷದ ಅವಧಿ ಮುಗಿಯುವವರೆಗೆ ನಿಗದಿತ ದಿನಾಂಕದ ಮೊದಲು ಮಾಡಿದ ಯಾವುದೇ ಕಾನೂನುಗಳನ್ನು ಅಗತ್ಯಕ್ಕೆ ಅನುಗುಣವಾಗಿ ಅಥವಾ ಅಗತ್ಯಕ್ಕೆ ಅನ್ವಯಿಸಲು ಅನುವಾಗುವಂತೆ  ಕಾನೂನನ್ನು ರದ್ದುಗೊಳಿಸುವ ಅಥವಾ ತಿದ್ದುಪಡಿ ಮಾಡುವ ಮೂಲಕ, ಕಾನೂನುಗಳನ್ನು ಅಳವಡಿಸಿಕೊಳ್ಳಲು ಮತ್ತು ಮಾರ್ಪಾಡು ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿರುತ್ತದೆ.  

ಆ ಪ್ರಕಾರವಾಗಿ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರೀಯ ಕಾನೂನು ಅನ್ವಯವಾಗುವಂತೆ ತನಗೆ ಜಮ್ಮು ಕಾಶ್ಮೀರ ಪುನರ್ಸಂಘಟನೆ ಕಾಯಿದೆ 2019ರ ಸೆಕ್ಷನ್ 96ರ ಅಡಿಯಲ್ಲಿ ದತ್ತವಾದ ಅಧಿಕಾರ ಬಳಸಿಕೊಂಡು ಇಂಥ 37ಕೇಂದ್ರೀಯ ಕಾನೂನುಗಳನ್ನು ಅಳವಡಿಸಿಕೊಳ್ಳುವ ಮತ್ತು ಮಾರ್ಪಾಡು ಮಾಡಲು, ಕೇಂದ್ರ ಸರ್ಕಾರದಿಂದ ಆದೇಶವನ್ನು ಹೊರಡಿಸಲು ಸಂಪುಟವು ತನ್ನ ಇಂದಿನ ಸಭೆಯಲ್ಲಿ  ಅನುಮೋದನೆ ನೀಡಿದೆ. ಮೇಲಿನ ಕೇಂದ್ರೀಯ ಕಾನೂನುಗಳ ಅಳವಡಿಕೆಯನ್ನು ಅಂಥ ಮಾರ್ಪಾಡುಗಳೊಂದಿಗೆ ಮಾಡುವುದು ಜಮ್ಮು ಮತ್ತು ಕಾಶ್ಮೀರದಲ್ಲಿನ ಆಡಳಿತದಲ್ಲಿ ದಕ್ಷತೆಯನ್ನು ಖಾತ್ರಿಪಡಿಸಲು ಮತ್ತು ಭಾರತೀಯ ಸಂವಿಧಾನಕ್ಕೆ ಅನುಗುಣವಾಗಿ ಈ ಕಾನೂನುಗಳನ್ನು ಜಾರಿ ಮಾಡುವಲ್ಲಿ ಇರುವ ಅಸ್ಪಷ್ಟತೆಗಳನ್ನು ನಿವಾರಿಸುತ್ತದೆ.

 

******



(Release ID: 1604614) Visitor Counter : 193