ಸಂಪುಟ

ಭಾರತ ಮತ್ತು ಶ್ರೀಲಂಕಾ ನಡುವೆ ಅಂತರರಾಷ್ಟ್ರೀಯ ವಿಮಾನಯಾನ ಪ್ರಾರಂಭಿಸಲು ಅಲಯನ್ಸ್ ಏರ್ ಗೆ  ಕ್ಯಾಬಿನೆಟ್ ಅನುಮೋದನೆ

Posted On: 05 FEB 2020 1:45PM by PIB Bengaluru

ಭಾರತ ಮತ್ತು ಶ್ರೀಲಂಕಾ ನಡುವೆ ಅಂತರರಾಷ್ಟ್ರೀಯ ವಿಮಾನಯಾ ಪ್ರಾರಂಭಿಸಲು ಅಲಯನ್ಸ್ ಏರ್ ಗೆ  ಕ್ಯಾಬಿನೆಟ್ ಅನುಮೋದನೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು  ಭಾರತ ಮತ್ತು ಶ್ರೀಲಂಕಾ ನಡುವಿನ ಅಂತರರಾಷ್ಟ್ರೀಯ ವಲಯಗಳಲ್ಲಿ ವಿಮಾನಯಾನ ಪ್ರಾರಂಭಿಸಲು ಏರ್ ಇಂಡಿಯಾದ 100% ಅಂಗಸಂಸ್ಥೆಯಾದ ಅಲೈಯನ್ಸ್ ಏರ್ ಸಂಸ್ಥೆಗೆ ಮಧ್ಯಂತರ ಅವಧಿಗೆ ವಿಶೇಷ  ಅನುಮತಿಯನ್ನು ನೀಡಲಾಗಿದೆ. ಅಲೈಯನ್ಸ್ ಏರ್ ಕನಿಷ್ಠ 20 ವಿಮಾನಗಳನ್ನು ನಿಯೋಜಸುವುದು ಅಥವಾ ದೇಶೀಯ ಕಾರ್ಯಾಚರಣೆಗಳ ಒಟ್ಟು ಸಾಮರ್ಥ್ಯದ 20% ಅನ್ನು ಮುಟ್ಟುವುದುಇವುಗಳಲ್ಲಿ ಯಾವುದು ಹೆಚ್ಚೋ ಅದರ ಗುರಿಯನ್ನು ಮುಟ್ಟುವವರೆಗೆ ಈ ವಿಶೇಷ ಅನುಮತಿಯು ಚಾಲ್ತಿಯಲ್ಲಿರುತ್ತದೆ.

ಭಾರತವು ಶ್ರೀಲಂಕಾದೊಂದಿಗೆ ನಿಕಟವಾದ  ದ್ವಿಪಕ್ಷೀಯ ಸಂಬಂಧವನ್ನು ಹೊಂದಿದೆ ಮತ್ತು ಸಂಪರ್ಕವನ್ನು ಹೆಚ್ಚಿಸುವುದು ಮತ್ತು ಉಭಯ ದೇಶಗಳ ನಡುವಿನ ಜನರ ಸಂಪರ್ಕವನ್ನು ವಿಸ್ತರಿಸುವುದು ನಮ್ಮ ಆಸಕ್ತಿಯಾಗಿದೆ. ಈ ಅನುಮೋದನೆಗೆ ಮೊದಲು ಪಾಲಿ ಮತ್ತು ಬ್ಯಾಟಿಕೋಲಾ ವಿಮಾನ ನಿಲ್ದಾಣಗಳಿಂದ ಯಾವುದೇ ವಾಣಿಜ್ಯ ಕಾರ್ಯಾಚರಣೆಯನ್ನು ನಿಗದಿಪಡಿಸಲಾಗಿರಲಿಲ್ಲ.

***



(Release ID: 1602073) Visitor Counter : 133