ಸಂಪುಟ

ಅಭಿವೃದ್ಧಿ ವಂಚಿತ ಪ್ರದೇಶಗಳು, ಸಮಾಜದ ನಿರ್ಲಕ್ಷಿತ ವರ್ಗಗಳು ಮತ್ತು ಆದ್ಯತಾ ಕ್ಷೇತ್ರಗಳ ಕೇಂದ್ರೀಕೃತ ಅಭಿವೃದ್ಧಿಗಾಗಿ ಹೊಸ ಯೋಜನೆಗಳಿಗೆ ಈಶಾನ್ಯ ಮಂಡಳಿ ಹಂಚಿಕೆಯ ಶೇ.30ರಷ್ಟು ಹಂಚಿಕೆಗೆ ಸಂಪುಟದ ಅನುಮೋದನೆ

Posted On: 29 JAN 2020 2:00PM by PIB Bengaluru

 ಅಭಿವೃದ್ಧಿ ವಂಚಿತ ಪ್ರದೇಶಗಳು, ಸಮಾಜದ ನಿರ್ಲಕ್ಷಿತ ವರ್ಗಗಳು ಮತ್ತು ಆದ್ಯತಾ ಕ್ಷೇತ್ರಗಳ ಕೇಂದ್ರೀಕೃತ ಅಭಿವೃದ್ಧಿಗಾಗಿ ಹೊಸ ಯೋಜನೆಗಳಿಗೆ ಈಶಾನ್ಯ ಮಂಡಳಿ ಹಂಚಿಕೆಯ ಶೇ.30ರಷ್ಟು ಹಂಚಿಕೆಗೆ ಸಂಪುಟದ ಅನುಮೋದನೆ

 

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಅನುಮೋದಿಸಿರುವ ಅಂಶಗಳು:

i. ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ವಂಚಿತ ಪ್ರದೇಶಗಳು, ಸಮಾಜದ ನಿರ್ಲಕ್ಷಿತ ವರ್ಗಗಳು ಮತ್ತು ಆದ್ಯತಾ ಕ್ಷೇತ್ರಗಳ ಕೇಂದ್ರೀಕೃತ ಅಭಿವೃದ್ಧಿಗಾಗಿ ಅಸ್ತಿತ್ವದಲ್ಲಿರುವ “ಈಶಾನ್ಯ ಮಂಡಳಿ ಯೋಜನೆಗಳು” ಅಡಿಯಲ್ಲಿ ಹೊಸ ಯೋಜನೆಗಳಿಗೆ ಈಶಾನ್ಯ ಮಂಡಳಿಯ (ಎನ್ಇಸಿಶೇ.30 ರಷ್ಟು ಹಂಚಿಕೆಬಾಕಿ ಹಂಚಿಕೆಯನ್ನು ಅಸ್ತಿತ್ವದಲ್ಲಿರುವ ಎರಡು ಘಟಕಗಳಲ್ಲಿ ವಿಭಜಿಸಲಾಗುತ್ತದೆ (ರಾಜ್ಯ ಘಟಕ ಶೇ.60 ಮತ್ತು ಕೇಂದ್ರ ಘಟಕ ಶೇ.40)

ii. ಮೌಲ್ಯಮಾಪನ ಮತ್ತು ಅನುಮೋದನೆ ಕಾರ್ಯವಿಧಾನವನ್ನು ಸರಳೀಕರಿಸಲು ಎನ್ಇಸಿ ಮಾರ್ಗಸೂಚಿಗಳ ಪರಿಷ್ಕರಣೆ

iii. ಎನ್ಇಸಿಯಲ್ಲಿ ಒಳಗೊಳ್ಳದ ಕ್ಷೇತ್ರಗಳಿಗೆಆದರೆ ರಾಜ್ಯ ಸರ್ಕಾರಗಳ  ಶಿಫಾರಸ್ಸಿನ ಆಧಾರದಲ್ಲಿ ಹಾಗೂ  ಸ್ಥಳೀಯ ಭಾವನೆಗಳ ಪ್ರಕಾರ ಮುಖ್ಯವೆಂದು ಪರಿಗಣಿಸಲಾಗುವ ಕ್ಷೇತ್ರಗಳಿಗೆಪ್ರತಿ ರಾಜ್ಯದ ಪ್ರಮಾಣಿತ ಹಂಚಿಕೆಯ ಶೇ.25 ರವರೆಗೆ ರಾಜ್ಯ ಘಟಕದ ಅಡಿಯಲ್ಲಿ ಯೋಜನೆಗಳಿಗೆ ಅವಕಾಶ ನೀಡುವುದು.

ಅಸ್ತಿತ್ವದಲ್ಲಿರುವ "ಎನ್ಇಸಿ ಯೋಜನೆಗಳುಅಡಿಯಲ್ಲಿನ ಯೋಜನೆಗಳು ಈಶಾನ್ಯ ರಾಜ್ಯಗಳ ಹಿಂದುಳಿದ ಮತ್ತು ನಿರ್ಲಕ್ಷಿತ ಪ್ರದೇಶಗಳ ದೀನ ಮತ್ತು ದುರ್ಬಲ ವರ್ಗಗಳಿಗೆ ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ನೀಡುತ್ತವೆಇದು ತ್ವರಿತ ನಿರ್ಧಾರ ಕೈಗೊಳ್ಳಲು ಮತ್ತು ಯೋಜನೆಗಳನ್ನು ತ್ವರಿತ ವಾಗಿ ಅನುಷ್ಠಾನಗೊಳಿಸಲು ಕಾರಣವಾಗುತ್ತದೆ.


(Release ID: 1601008) Visitor Counter : 148