ಸಂಪುಟ

ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ, 2020 ಕ್ಕೆ ಸಂಪುಟದ ಅನುಮೋದನೆ

Posted On: 29 JAN 2020 1:57PM by PIB Bengaluru

ವೈದ್ಯಕೀಯ ಗರ್ಭಪಾತ (ತಿದ್ದುಪಡಿಮಸೂದೆ, 2020 ಕ್ಕೆ ಸಂಪುಟದ ಅನುಮೋದನೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯುವೈದ್ಯಕೀಯ ಗರ್ಭಪಾತ ಕಾಯ್ದೆ, 1971 ಕ್ಕೆ ತಿದ್ದುಪಡಿ ಮಾಡಿದ ವೈದ್ಯಕೀಯ ಗರ್ಭಪಾತ (ತಿದ್ದುಪಡಿಮಸೂದೆ, 2020 ಕ್ಕೆ ಅನುಮೋದನೆ ನೀಡಿದೆಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು.

ಪ್ರಸ್ತಾವಿತ ತಿದ್ದುಪಡಿಗಳ ಪ್ರಮುಖ ಲಕ್ಷಣಗಳು

·         20 ವಾರಗಳವರೆಗಿನ ಗರ್ಭಧಾರಣೆಯನ್ನು ಮುಕ್ತಾಯಗೊಳಿಸಲು ಒಬ್ಬರು ಮತ್ತು 20 ರಿಂದ 24 ವಾರಗಳ ಗರ್ಭಾವಸ್ಥೆಯನ್ನು ಮುಕ್ತಾಯಗೊಳಿಸಲು ಇಬ್ಬರು ತಜ್ಞರ ಅಭಿಪ್ರಾಯದ ಅಗತ್ಯವಿರುತ್ತದೆ.

·         ಅತ್ಯಾಚಾರಕ್ಕೊಳಗಾದವರುರಕ್ತ ಸಂಬಂಧಿಗಳೊಂದಿಗಿನ ಲೈಂಗಿಕ ದೌರ್ಜನ್ಯದಿಂದಾಗಿ ಮತ್ತು ಇತರ ದುರ್ಬಲ ಮಹಿಳೆಯರು ಸೇರಿದಂತೆ (ವಿಶಿಷ್ಟ ಚೇತನ ಮಹಿಳೆಯರುಅಪ್ರಾಪ್ತ ವಯಸ್ಕರುವಿಶೇಷ ವರ್ಗದ ಮಹಿಳೆಯರಿಗೆ ಎಮ್ಟಿಪಿ ನಿಯಮಗಳ ತಿದ್ದುಪಡಿಗಳಲ್ಲಿ ವ್ಯಾಖ್ಯಾನಿಸಲಾಗುವ ಗರ್ಭಾವಸ್ಥೆ ಅವಧಿಯ ಮಿತಿಯನ್ನು 20 ರಿಂದ 24 ವಾರಗಳವರೆಗೆ ಹೆಚ್ಚಿಸುವುದು.

·         ಭ್ರೂಣದ ಅಸಹಜತೆಗಳ ಬಗ್ಗೆ ವೈದ್ಯಕೀಯ ಮಂಡಳಿಯಿಂದ ರೋಗನಿರ್ಣಯ ಮಾಡಲ್ಪಟ್ಟ ಸಂದರ್ಭದಲ್ಲಿ ಗರ್ಭಾವಸ್ಥೆ ಅವಧಿಯ ಮಿತಿ ಅನ್ವಯಿಸದಿರುವುದುವೈದ್ಯಕೀಯ ಮಂಡಳಿಯ ಸಂಯೋಜನೆಕಾರ್ಯಗಳು ಮತ್ತು ಇತರ ವಿವರಗಳನ್ನು ನಂತರ ಕಾಯ್ದೆಯಡಿ ನಿಯಮಗಳಲ್ಲಿ ಸೂಚಿಸಬೇಕು.

·         ಗರ್ಭಪಾತವನ್ನು ಮಾಡಿಸಿಕೊಂಡ ಮಹಿಳೆಯ ಹೆಸರು ಮತ್ತು ಇತರ ವಿವರಗಳನ್ನು ಯಾವುದೇ ಕಾನೂನಾತ್ಮಕ ವ್ಯಕ್ತಿಗೆ ಹೊರತುಪಡಿಸಿ ಇತರರಿಗೆ ಬಹಿರಂಗಪಡಿಸುವಂತಿಲ್ಲ.

ಗುಣಕಾರಕಸುಸಂತಾನಿಕಮಾನವೀಯ ಅಥವಾ ಸಾಮಾಜಿಕ ಆಧಾರದ ಮೇಲೆ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತ ಸೇವೆಗಳನ್ನು ಮಹಿಳೆಯರಿಗೆ ವಿಸ್ತರಿಸುವುದು 2020  ವೈದ್ಯಕೀಯ ಗರ್ಭಪಾತ (ತಿದ್ದುಪಡಿಮಸೂದೆಯ ಉದ್ದೇಶಸುರಕ್ಷಿತ ಗರ್ಭಪಾತದ ಆರೈಕೆಸೇವೆ ಮತ್ತು ಸುರಕ್ಷಿತ ಗರ್ಭಪಾತದ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳದೆ ಪ್ರಸ್ತಾವಿತ ತಿದ್ದುಪಡಿಗಳಲ್ಲಿ ಕೆಲವು ಹೊಸ ಷರತ್ತುಗಳನ್ನು ಅಸ್ತಿತ್ವದಲ್ಲಿರುವ ವೈದ್ಯಕೀಯ ಗರ್ಭಪಾತ ಕಾಯ್ದೆ 1971 ರಲ್ಲಿ ಕೆಲವು ವಿಭಾಗಗಳ ಅಡಿಯಲ್ಲಿ ಸೇರಿಸುವುದುಕೆಲವು ಷರತ್ತುಗಳ ಅಡಿಯಲ್ಲಿ ಗರ್ಭಧಾರಣೆಯನ್ನು ಮುಕ್ತಾಯಗೊಳಿಸಲು ಗರ್ಭಾವಸ್ಥೆಯ ಅವಧಿಯ ಮಿತಿಯನ್ನು ಹೆಚ್ಚಿಸುವ ಮತ್ತು ಪ್ರವೇಶವನ್ನು ಬಲಪಡಿಸುವ ಉದ್ದೇಶವನ್ನು ಮಸೂದೆ ಒಳಗೊಂಡಿದೆ.

ಇದು ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯದತ್ತ ಒಂದು ಹೆಜ್ಜೆಯಾಗಿದ್ದುಇದರಿಂದ ಅನೇಕ ಮಹಿಳೆಯರಿಗೆ ಅನುಕೂಲವಾಗಲಿದೆಮಹಿಳೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯದಿಂದಾಗಿ ಭ್ರೂಣದ ವೈಪರೀತ್ಯಗಳು ಅಥವಾ ಗರ್ಭಾವಸ್ಥೆಯ ಆಧಾರದ ಮೇಲೆ ಪ್ರಸ್ತುತ ಅನುಮತಿಸುವ ಮಿತಿಯನ್ನು ಮೀರಿ ಗರ್ಭಪಾತಕ್ಕೆ ಅನುಮತಿ ಕೋರಿ ಇತ್ತೀಚೆಗೆ ಹಲವಾರು ಅರ್ಜಿಗಳು ನ್ಯಾಯಾಲಯಗಳಿಗೆ ಬಂದಿವೆವುಗರ್ಭಾವಸ್ಥೆ ಅವಧಿಯ ಪ್ರಸ್ತಾಪಿತ ಹೆಚ್ಚಳವು ಗರ್ಭಧಾರಣೆಯನ್ನು ಕೊನೆಗೊಳಿಸಬೇಕಾದ ಮಹಿಳೆಯರಿಗೆ ಘನತೆಸ್ವಾಯತ್ತತೆಗೌಪ್ಯತೆ ಮತ್ತು ನ್ಯಾಯವನ್ನು ಖಾತ್ರಿಪಡಿಸುತ್ತದೆ.

ಮಹಿಳೆಯರಿಗೆ ಸುರಕ್ಷಿತ ಗರ್ಭಪಾತ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಮತ್ತು ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಪರಿಗಣಿಸಿಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವಿವಿಧ ಪಾಲುದಾರರು ಹಾಗೂ ಹಲವಾರು ಸಚಿವಾಲಯಗಳೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ.

 

***



(Release ID: 1600988) Visitor Counter : 303