ಪ್ರಧಾನ ಮಂತ್ರಿಯವರ ಕಛೇರಿ

ಪರೀಕ್ಷಾ ಪೆ ಚರ್ಚಾ – 2020 ಕಾರ್ಯಕ್ರಮ: ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಪ್ರಧಾನಮಂತ್ರಿ ಸಂವಾದ

Posted On: 19 JAN 2020 11:06AM by PIB Bengaluru

ಪರೀಕ್ಷಾ ಪೆ ಚರ್ಚಾ – 2020 ಕಾರ್ಯಕ್ರಮ:
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಪ್ರಧಾನಮಂತ್ರಿ ಸಂವಾದ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಜನವರಿ 20ರಂದು “ಪರೀಕ್ಷಾ ಪೆ ಚರ್ಚಾ 2020”, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಂವಾದ ನಡೆಸುವರು. ಪ್ರಧಾನಮಂತ್ರಿಗಳು ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂರನೇ ಆವೃತ್ತಿಯ ‘ಪರೀಕ್ಷಾ ಪೆ ಚರ್ಚಾ 2020’ ಕಾರ್ಯಕ್ರಮ, ನವದೆಹಲಿಯ ತಾಲ್ಕಟೋರ ಕ್ರೀಡಾಂಗಣದಲ್ಲಿ 2020ರ ಜನವರಿ 20ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಗೆ ಪರೀಕ್ಷಾ ಒತ್ತಡವನ್ನು ನಿಭಾಯಿಸುವುದು ಎನ್ನುವ ಕುರಿತು ಆಯ್ದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಸಂವಾದ ನಡೆಸುವರು.
ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಭಾರೀ ಉತ್ಸಾಹ ಹಾಗೂ ಕುತೂಹಲ ಕಂಡುಬಂದಿದ್ದು, ಇದೊಂದು ವಿಭಿನ್ನ ಕಾರ್ಯಕ್ರಮವಾಗಿದೆ. ಇದರಲ್ಲಿ ಭವಿಷ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಲು ವಿದ್ಯಾರ್ಥಿಗಳು, ಉತ್ತಮ ವಾತಾವರಣದಲ್ಲಿ ಒತ್ತಡವಿಲ್ಲದೆ ಪರೀಕ್ಷೆ ಬರೆಯುವ ಕುರಿತು ಪ್ರಧಾನಿ ಅವರಿಂದ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸುವರು.
ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿಗಳ ಸಂವಾದ ಕಾರ್ಯಕ್ರಮ ‘ಪರೀಕ್ಷಾ ಪೆ ಚರ್ಚಾ 1.0’ಯ ಮೊದಲ ಆವೃತ್ತಿ 2018ರ ಫೆಬ್ರವರಿ 16ರಂದು ನವದೆಹಲಿಯ ತಾಲ್ಕಟೋರ ಸ್ಟೇಡಿಯಂನಲ್ಲಿ ನಡೆದಿತ್ತು. ಎರಡನೇ ಆವೃತ್ತಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮ ‘ಪರೀಕ್ಷಾ ಪೆ ಚರ್ಚಾ 2.0’ 2019ರ ಜನವರಿ 29ರಂದು ನವದೆಹಲಿಯ ತಾಲ್ಕಟೋರ ಸ್ಟೇಡಿಯಂನಲ್ಲಿ ನಡೆದಿತ್ತು.

 



(Release ID: 1599826) Visitor Counter : 102