ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಯುರೋಪ್ ಉನ್ನತ ಪ್ರತಿನಿಧಿ / ಉಪಾಧ್ಯಕ್ಷ (ಎಚ್‌ಆರ್‌ವಿಪಿ) ಘನತೆವೆತ್ತ ಜೋಸೆಫ್  ಬೊರೆಲ್ ಫಾಂಟೆಲ್ಸ್

Posted On: 17 JAN 2020 10:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಯುರೋಪ್ ಉನ್ನತ ಪ್ರತಿನಿಧಿ / ಉಪಾಧ್ಯಕ್ಷ (ಎಚ್‌ಆರ್‌ವಿಪಿ) ಘನತೆವೆತ್ತ ಜೋಸೆಫ್  ಬೊರೆಲ್ ಫಾಂಟೆಲ್ಸ್ 
 

ಯುರೋಪ್ ಉನ್ನತ ಪ್ರತಿನಿಧಿ/ ಉಪಾಧ್ಯಕ್ಷ (ಎಚ್.ಆರ್.ವಿ.ಪಿ.) ಘನತೆವೆತ್ತ ಜೋಸೆಪ್ ಬೋರೆಲ್ ಫಾಂಟೆಲ್ಸ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಬೋರೆಲ್ ಅವರು ರೈಸಿನಾ ಸಂವಾದ 2020ರಲ್ಲಿ ಭಾಗಿಯಾಗಲು ಜನವರಿ 16-18ರವರೆಗೆ ಭಾರತ ಭೇಟಿ ಕೈಗೊಂಡಿದ್ದಾರೆ, ಅವರು ನಿನ್ನೆ ಅಲ್ಲಿ ಸಮಾರೋಪ ಭಾಷಣ ಮಾಡಿದರು. ಅವರು ಎಚ್.ಆರ್.ವಿ.ಪಿ.ಯಾಗಿ 2019ರ ಡಿಸೆಂಬರ್ 1ರಂದು ಅಧಿಕಾರ ವಹಿಸಿಕೊಂಡ ತರುವಾಯ ಐರೋಪ್ಯ ಒಕ್ಕೂಟದ ಹೊರಗೆ ಕೈಗೊಂಡ ಪ್ರಥಮ ಭೇಟಿಯಾಗಿದೆ.
ಪ್ರಧಾನಮಂತ್ರಿಯವರು ಎಚ್.ಆರ್.ವಿ.ಪಿ. ಬೋರೆಲ್ ಅವರಿಗೆ ಆತ್ಮೀಯವಾದ ಸ್ವಾಗತ ನೀಡಿ, ಎಚ್.ಆರ್.ವಿ.ಪಿಯಾಗಿ ಅಧಿಕಾರ ವಹಿಸಿಕೊಂಡ ಅವರಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಅವರ ಯಶಸ್ವಿ ಆಡಳಿತಾವಧಿಗೆ ಶುಭ ಕೋರಿದರು. ಎಚ್.ಆರ್.ವಿ.ಪಿಗಳು ರೈಸಿನಾ ಸಂವಾದದಲ್ಲಿ ನಿರಂತರವಾಗಿ ಭಾಗಿಯಾಗುತ್ತಿರುವುದಕ್ಕೆ ಪ್ರಧಾನಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ ಮತ್ತು ಐರೋಪ್ಯ ಒಕ್ಕೂಟಗಳು ಸ್ವಾಭಾವಿಕ ಸಹಯೋಗಿಗಳು ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಮಾರ್ಚ್ 2020ರಲ್ಲಿ ಫಲಪ್ರದವಾದ ಭಾರತ – ಐರೋಪ್ಯ ಒಕ್ಕೂಟದ ಶೃಂಗಸಭೆಯನ್ನು ತಾವು ಎದಿರುನೋಡುತ್ತಿರುವುದಾಗಿ ತಿಳಿಸಿದರು. ಐರೋಪ್ಯ ಒಕ್ಕೂಟದೊಂದಿಗೆ ಅದರಲ್ಲೂ ಹವಾಮಾನ ಬದಲಾವಣೆ, ವಾಣಿಜ್ಯ ಮತ್ತು ಆರ್ಥಿಕ ಬಾಂಧವ್ಯದ ಕ್ಷೇತ್ರಗಳಲ್ಲಿ ಕಾರ್ಯಚಟುವಟಿಕೆಯನ್ನು ಮತ್ತಷ್ಟು ಆಳಗೊಳಿಸುವ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಐರೋಪ್ಯ ಆಯೋಗ ಮತ್ತು ಐರೋಪ್ಯ ಮಂಡಳಿಯ ನಾಯಕತ್ವದೊಂದಿಗೆ ತಾವು ಈ ಮುನ್ನ ನಡೆಸಿದ ಮಾತುಕತೆಗಳನ್ನು ಪ್ರಧಾನಮಂತ್ರಿ ಸ್ಮರಿಸಿದರು.
ಎಚ್.ಆರ್.ವಿ.ಪಿ. ಬೋರೆಲ್ ಅವರು ಐರೋಪ್ಯ ಒಕ್ಕೂಟದ ನಾಯಕತ್ವವು ಮುಂದಿನ ಭಾರತ- ಐರೋಪ್ಯ ಒಕ್ಕೂಟದ ಶೃಂಗಸಭೆಯನ್ನು ಬ್ರುಸೆಲ್ಸ್ ನಲ್ಲಿ ಹತ್ತಿರದ ಭವಿಷ್ಯದಲ್ಲೇ ಆಯೋಜಿಸಲು ಎದಿರು ನೋಡುತ್ತಿದೆ ಎಂದರು. ಪ್ರಜಾಪ್ರಭುತ್ವ, ಬಹುಪಕ್ಷೀಯತೆ ಮತ್ತು ನಿಯಮ-ಆಧಾರಿತ ಅಂತಾರಾಷ್ಟ್ರೀಯ ಕ್ರಮವನ್ನು ಒಳಗೊಂಡಿರುವ ಐರೋಪ್ಯ ಒಕ್ಕೂಟ ಮತ್ತು ಭಾರತದ ಹಂಚಿಕೆಯ ಆದ್ಯತೆಗಳು ಮತ್ತು ಬದ್ಧತೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.


***



(Release ID: 1599825) Visitor Counter : 96