ಪ್ರಧಾನ ಮಂತ್ರಿಯವರ ಕಛೇರಿ

ಕೋಲ್ಕತ್ತಾ ಬಂದರು ಟ್ರಸ್ಟ್ ನ 150ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

Posted On: 12 JAN 2020 2:52PM by PIB Bengaluru

ಕೋಲ್ಕತ್ತಾ ಬಂದರು ಟ್ರಸ್ಟ್  150ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

 

ಕೋಲ್ಕತ್ತಾ ಬಂದರಿನ ಬಹು ಮಾದರಿ ಅಭಿವೃದ್ಧಿ ಯೋಜನೆಗೆ ಚಾಲನೆ

ಬಂದರು ಗೀತೆಯ ಬಿಡುಗಡೆಕರಾವಳಿ ಅಭಿವೃದ್ಧಿಯ ಹಬ್ಬಾಗಿಲು ಎಂದ ಪ್ರಧಾನಮಂತ್ರಿ

ಕೋಲ್ಕತ್ತಾ ಬಂದರು ಟ್ರಸ್ಟ್ ಗೆ ಪ್ರಧಾನಮಂತ್ರಿಯವರಿಂದ ಡಾಶ್ಯಾಮಾ ಪ್ರಸಾದ್ ಮುಖರ್ಜಿ ಬಂದರು ಟ್ರಸ್ಟ್ ಎಂದು ಪುನರ್ ನಾಮಕರಣ,

ಕೋಲ್ಕತ್ತಾ ಬಂದರು ಟ್ರಸ್ಟ್  ಸಿಬ್ಬಂದಿಯ ಪಿಂಚಣಿ ಖಾತೆಗೆ 501 ಕೋಟಿ ರೂಚೆಕ್ ಹಸ್ತಾಂತರ.

ಸುಂದರಬನ್ಸ್  ಬುಡಕಟ್ಟುವಿದ್ಯಾರ್ಥಿನಿಯರಿಗಾಗಿ ಪ್ರೀತಿಲತಾ ಛತ್ರ ನಿವಾಸ ಮತ್ತು ಕೌಶಲ ವಿಕಾಶ ಕೇಂದ್ರಗಳ ಉದ್ಘಾಟನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕೋಲ್ಕತ್ತಾ ಬಂದರು ಟ್ರಸ್ಟ್  150ನೇ ಭವ್ಯ ಸಮಾರಂಭದಲ್ಲಿಂದು ಭಾಗಿಯಾಗಿದ್ದರು.

ಪ್ರಧಾನಮಂತ್ರಿ ಮೂಲ ಬಂದರು ಜಟ್ಟಿಯ ನೆಲೆಯಲ್ಲಿ ಕೋಲ್ಕತ್ತಾ ಬಂದರು ಟ್ರಸ್ಟ್ (ಕೆಓಪಿಟಿ) 150ನೇ ವರ್ಷದ ಸ್ಮರಣಾರ್ಥ ಫಲಕ ಅನಾವರಣ ಮಾಡಿದರು.

ದೇಶದ ಜಲ ಶಕ್ತಿಯ ಸಂಕೇತವಾಗಿರುವ ಐತಿಹಾಸಿಕ ಕೋಲ್ಕತ್ತಾ ಬಂದರು ಟ್ರಸ್ಟ್  150ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಚಾರ ಎಂದು ಶ್ರೀ ಮೋದಿ ಹೇಳಿದರು.

 ಬಂದರು ಭಾರತವು ವಿದೇಶಿಯರ ಆಡಳಿತದಿಂದ ಸ್ವಾತಂತ್ರ್ಯ ಪಡೆದಂತಹ ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆಸತ್ಯಾಗ್ರಹದಿಂದ ಸ್ವಚ್ಛಾ ಗ್ರಹದವರೆಗೆ  ಬಂದರು ದೇಶ ಬದಲಾಗುತ್ತಿರುವುದನ್ನು ಕಂಡಿದೆ ಬಂದರು ಸಾಗಣೆದಾರರನ್ನಷ್ಟೇ ಅಲ್ಲದೇಶ ಮತ್ತು ಪ್ರಪಂಚದ ಮೇಲೆ ಒಂದು ಛಾಪು ಮೂಡಿಸಿದ ಜ್ಞಾನವಾಹಿಗಳನ್ನು ಸಹ ನೋಡಿದೆಒಂದು ರೀತಿಯಲ್ಲಿಕೋಲ್ಕತ್ತಾದ  ಬಂದರು ಕೈಗಾರಿಕೆಆಧ್ಯಾತ್ಮಿಕ ಮತ್ತು ಸ್ವಾವಲಂಬನೆಗಾಗಿ ಭಾರತದ ಆಕಾಂಕ್ಷೆಯನ್ನು ಸಂಕೇತಿಸುತ್ತದೆ ಎಂದು ಪ್ರಧಾನಿ ಹೇಳಿದರು.

 ಸಮಾರಂಭದ ವೇಳೆ ಪ್ರಧಾನಮಂತ್ರಿಯವರು ಬಂದರು ಗೀತೆಯನ್ನು ಬಿಡುಗಡೆ ಮಾಡಿದರು.

ಗುಜರಾತ್ ಲೋಥಾಲ್ ಬಂದರಿನಿಂದ ಕೋಲ್ಕತಾ ಬಂದರಿನವರೆಗಿನ ಭಾರತದ ದೀರ್ಘ ಕರಾವಳಿ ಮಾರ್ಗವು ವ್ಯಾಪಾರ ಮತ್ತು ವ್ಯವಹಾರದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಪಸರಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

"ನಮ್ಮ ಕರಾವಳಿಗಳು ಅಭಿವೃದ್ಧಿಯ ಹೆಬ್ಬಾಗಿಲುಗಳು ಎಂದು ನಮ್ಮ ಸರ್ಕಾರ ಭಾವಿಸುತ್ತದೆಹೀಗಾಗಿಯೇ ಮೂಲಸೌಕರ್ಯಗಳನ್ನು ಆಧುನೀಕರಿಸಲು ಮತ್ತು ಬಂದರುಗಳ ಸಂಪರ್ಕವನ್ನು ಸುಧಾರಿಸಲು ಸರ್ಕಾರವು ಸಾಗರಮಾಲಾ ಯೋಜನೆಯನ್ನು ಪ್ರಾರಂಭಿಸಿದೆ ಯೋಜನೆಯಡಿ 6 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಮೂರು ಸಾವಿರದ ಆರುನೂರು ಯೋಜನೆಗಳನ್ನು ಗುರುತಿಸಲಾಗಿದೆಇವುಗಳಲ್ಲಿಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 200 ಕ್ಕೂ ಹೆಚ್ಚು ಯೋಜನೆಗಳು ಪ್ರಗತಿಯಲ್ಲಿವೆ ಮತ್ತು ಸುಮಾರು ನೂರ ಇಪ್ಪತ್ತೈದು ಪೂರ್ಣಗೊಂಡಿವೆಕೋಲ್ಕತ್ತಾ ಬಂದರು ನದಿ ಜಲ ಮಾರ್ಗಗಳ ನಿರ್ಮಾಣದಿಂದಾಗಿ ಪೂರ್ವ ಭಾರತದ ಕೈಗಾರಿಕಾ ಕೇಂದ್ರಗಳಿಗೆ ಸಂಪರ್ಕಿತವಾಗಿದೆನೇಪಾಳಬಾಂಗ್ಲಾದೇಶಭೂತಾನ್ ಮತ್ತು ಮಯನ್ಮಾರ್ ನೊಂದಿಗೆ ವಾಣಿಜ್ಯ ಸುಗಮವಾಗಿದೆ ", ಎಂದು ಪ್ರಧಾನಮಂತ್ರಿ ಹೇಳಿದರು.

ಡಾಶ್ಯಾಮಾ ಪ್ರಸಾದ್ ಮುಖರ್ಜಿ ಬಂದರು ಟ್ರಸ್ಟ್

ಪ್ರಧಾನಮಂತ್ರಿಯವರು ಕೋಲ್ಕತ್ತಾ ಬಂದರು ಟ್ರಸ್ಟ್ ಗೆ ಡಾಶ್ಯಾಮಾ ಪ್ರಸಾದ್ ಮುಖರ್ಜಿ ಬಂದರು ಟ್ರಸ್ಟ್  ಎಂದು ಪುನರ್ನಾಮಕರಣ ಮಾಡುವುದಾಗಿ ಪ್ರಕಟಿಸಿದರುಬಂಗಾಲದ ಪುತ್ರರಾಗಿದ್ದ ಡಾಮುಖರ್ಜಿ ದೇಶದ ಆಧುನೀಕರಣಕ್ಕೆ ಅಡಿಗಲ್ಲು ಹಾಕಿದವರು ಮತ್ತು ಚಿತ್ತರಂಜನ್ ಲೋಕೋಮೋಟಿವ್ ಕಾರ್ಖಾನೆಹಿಂದೂಸ್ತಾನ್ ವಿಮಾನ ಕಾರ್ಖಾನೆಸಿಂಡ್ರಿ ರಸಗೊಬ್ಬರ ಕಾರ್ಖಾನೆ ಮತ್ತು ದಾಮೋದರ್ ವ್ಯಾಲಿ ಕಾರ್ಪೊರೇಷನ್ ಗಳಂಥ ಯೋಜನೆಗಳ ಅಭಿವೃದ್ಧಿಯ ರೂವಾರಿಯಾಗಿದ್ದರು.  ನಾನು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೂ ಸ್ಮರಿಸುತ್ತೇನೆಡಾಮುಖರ್ಜಿ ಮತ್ತು ಬಾಬಾ ಸಾಹೇಬ್ ಸ್ವಾತಂತ್ರ್ಯೋತ್ತರ ಭಾರತಕ್ಕೆ ಹೊಸ ಆಯಾಮ ನೀಡಿದರು ಎಂದು ಪ್ರಧಾನಮಂತ್ರಿ ಹೇಳಿದರು.

ಕೆಓಪಿಟಿಯ ಪಿಂಚಣಿದಾರರ ಕಲ್ಯಾಣ

ಕೋಲ್ಕತ್ತಾ ಬಂದರು ಟ್ರಸ್ಟ್  ನಿವೃತ್ತ ಮತ್ತು ಹಾಲಿ ಉದ್ಯೋಗಿಗಳ ಪಿಂಚಣಿಯ ಖಾತೆಯಲ್ಲಿನ ಕೊರತೆಯನ್ನು ಸರಿದೂಗಿಸಲು ಅಂತಿಮ ಕಂತಿನ 501 ಕೋಟಿ ರೂಪಾಯಿಗಳ ಚೆಕ್ ಅನ್ನು ಪ್ರಧಾನಮಂತ್ರಿ ಹಸ್ತಾಂತರಿಸಿದರು.

ಕೋಲ್ಕತ್ತಾ ಬಂದರು ಟ್ರಸ್ಟ್  ಅತ್ಯಂತ ಹಿರಿಯ ಪಿಂಚಣಿದಾರ ಶತಾಯುಷಿಗಳಾದ ಶ್ರೀ ನಗೀನಾ ಭಗತ್ ಮತ್ತು ಶ್ರೀ ನರೇಶ್ ಚಂದ್ರ ಚಕ್ರಬೋರ್ತಿ (ಅನುಕ್ರಮವಾಗಿ 105 ಮತ್ತು 100 ವರ್ಷಅವರನ್ನು ಪ್ರಧಾನಮಂತ್ರಿ ಸತ್ಕರಿಸಿದರು.

ಪ್ರಧಾನಮಂತ್ರಿಯವರು ಸುಂದರಬನ್ಸ್  200 ಬುಡಕಟ್ಟು ವಿದ್ಯಾರ್ಥಿನಿಯರಿಗಾಗಿ ಕೌಶಲ ವಿಕಾಸ ಕೇಂದ್ರ ಮತ್ತು ಪ್ರೀತಿಲತಾ ಛತ್ರ ನಿವಾಸವನ್ನು ಉದ್ಘಾಟಿಸಿದರು.

ಪಶ್ಚಿಮ ಬಂಗಾಳದ ಅಭಿವೃದ್ಧಿಗೆ, ಅದರಲ್ಲೂ ವಿಶೇಷವಾಗಿ ಬಡವರುದೀನ ದಲಿತರು ಮತ್ತು ಶೋಷಿತರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪಿಎಂ ಹೇಳಿದರುಆಯುಷ್ಮಾನ್ ಭಾರತ ಯೋಜನೆ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಅಂಗೀಕರಿಸಿದ ಕೂಡಲೇ ಪಶ್ಚಿಮ ಬಂಗಾಳದ ಜನರು ಸಹ  ಯೋಜನೆಗಳಿಂದ ಪ್ರಯೋಜನ ಪಡೆಯಲು ಪ್ರಾರಂಭಿಸುತ್ತಾರೆ ಎಂದು ಅವರು ಹೇಳಿದರು.

ಮೇಲ್ದರ್ಜೆಗೇರಿಸಲಾದ ಹಡಗು ದುರಸ್ಥಿ ವ್ಯವಸ್ಥೆ ಕೊಚಿನ್ ಕೋಲ್ಕತ್ತಾ ಹಡಗು ದುರಸ್ತಿ ಘಟಕವನ್ನು ನೇತಾಜಿ ಸುಭಾಷ್ ಡ್ರೈ ಡಾಕ್ ನಲ್ಲಿ ಪ್ರಧಾನಮಂತ್ರಿ ಉದ್ಘಾಟಿಸಿದರು.

ಪ್ರಧಾನಮಂತ್ರಿಯವರು ಪೂರ್ಣ ರೇಕ್ ಹ್ಯಾಂಡ್ಲಿಂಗ್ ಸೌಲಭ್ಯ ಮತ್ತು ಸುಗಮ ಸರಕು ಸಾಗಣೆಗಾಗಿ ಮತ್ತು ನಿಗದಿತ ಸಮಯದಲ್ಲಿನ ಕಾರ್ಯಪಾಲನೆಗಾಗಿ  ಕೋಲ್ಕತ್ತಾ ಬಂದರು ನ್ಯಾಸದ ಕೋಲ್ಕತಾ ಡಾಕ್ ವ್ಯವಸ್ಥೆಯ ನವೀಕೃತ ರೈಲ್ವೆ ಮೂಲಸೌಕರ್ಯವನ್ನು ಉದ್ಘಾಟಿಸಿದರು

ಪ್ರಧಾನಮಂತ್ರಿ ಅವರು ಕೋಲ್ಕತ್ತಾ ಬಂದರು ನ್ಯಾಸದ ಹಾಲ್ಡಿಯಾ ಡಾಕ್ ಸಮುಚ್ಛಯದ ನಂ.3ರಲ್ಲಿ ರೇವಿನ ಯಾಂತ್ರೀಕರಣಕ್ಕೆ ಮತ್ತು ಉದ್ದೇಶಿತ ನದಿಯ ಮುಂಭಾಗದ ಅಭಿವೃದ್ಧಿ ಯೋಜನೆಗೂ ಚಾಲನೆ ನೀಡಿದರು.


(Release ID: 1599247) Visitor Counter : 129