ಸಂಪುಟ

ಜಾಮ್ ನಗರದ ಗುಜರಾತ್ ಆಯುರ್ವೇದ ವಿಶ್ವ ವಿದ್ಯಾಲಯದ ಆಯುರ್ವೇದ ಸಂಸ್ಥೆಗಳ ಸಮೂಹಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಾನಮಾನ ನೀಡುವ ಕುರಿತು ಸಚಿವ ಸಂಪುಟ ಅನುಮೋದನೆ  

Posted On: 08 JAN 2020 3:11PM by PIB Bengaluru

ಜಾಮ್ ನಗರದ ಗುಜರಾತ್ ಆಯುರ್ವೇದ ವಿಶ್ವ ವಿದ್ಯಾಲಯದ ಆಯುರ್ವೇದ ಸಂಸ್ಥೆಗಳ ಸಮೂಹಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಾನಮಾನ ನೀಡುವ ಕುರಿತು ಸಚಿವ ಸಂಪುಟ ಅನುಮೋದನೆ  

 

ಜಾಮ್ ನಗರದ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದಲ್ಲಿರುವ  ಆಯುರ್ವೇದ ಸಂಸ್ಥೆಗಳ ಸಮೂಹವನ್ನು ಒಗ್ಗೂಡಿಸುವ ಮೂಲಕ ಜಾಮ್ ನಗರದ ಆಯುರ್ವೇದ ಕಲಿಕೆ ಮತ್ತು ಸಂಶೋಧನೆ ಸಂಸ್ಥೆಗೆ ರಾಷ್ಟ್ರೀಯ ಮಾನ್ಯತೆಯನ್ನು ನೀಡಲು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿರುವ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಮೂಹ (ಎ) ಆಯುರ್ವೇದದಲ್ಲಿ ಸ್ನಾತಕೋತ್ತರ ಬೋಧನೆ ಮತ್ತು ಸಂಶೋಧನಾ ಸಂಸ್ಥೆ (ಬಿ) ಶ್ರೀ ಗುಲಾಬ್ ಕುನ್ವೆರ್ಬಾ ಆಯುರ್ವೇದ ಮಹಾವಿದ್ಯಾಲಯ ಮತ್ತು (ಸಿ) ಫಾರ್ಮಸಿ ಘಟಕ ಸೇರಿದಂತೆ ಆಯುರ್ವೇದ ಧೀಯ ವಿಜ್ಞಾನ ಸಂಸ್ಥೆ ಮತ್ತು ಸ್ವಾಸ್ಥ್ಯ ವೃತ್ತ ಇಲಾಖೆಯ ಆಯುರ್ವೇದದ ಬೋಧನೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಹರ್ಷಿ ಪತಂಜಲಿ ಇನ್ಸ್ಟಿಟ್ಯೂಟ್ ಫಾರ್ ಯೋಗ ಮತ್ತು ನ್ಯಾಚುರೋಪತಿ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆಯನ್ನು ವಿಲೀನಗೊಳಿಸುವುದನ್ನು ಒಳಗೊಂಡಿದೆ.    

ಜಾಮ್ ನಗರದ ಆಯುರ್ವೇದ ಕಲಿಕೆ ಮತ್ತು ಸಂಶೋಧನೆ ಸಂಸ್ಥೆಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯನ್ನಾಗಿ ಘೋಷಿಸಲು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು.

ಭಾರತದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಲ್ಲಿ ಆಯುಷ್ ಪದ್ಧತಿಗಳ ಪಾತ್ರ ತೀವ್ರವಾಗಿ ವೃದ್ಧಿಸುತ್ತಿರುವುದನ್ನು ಪರಿಗಣಿಸಿ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಾನಮಾನ ನೀಡುವುದು ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಆಯುರ್ವೇದದ ಪಾತ್ರ ಮತ್ತು ಮಹತ್ವಕ್ಕೆ ಮತ್ತಷ್ಟು ಪುಷ್ಟಿ ದೊರೆಯಲಿದೆ. ಆಯುರ್ವೇದ ವೆಚ್ಚದಾಯಕವಲ್ಲ ಮತ್ತು ನಿರೋಧಕ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿರುವುದರಿಂದ ಆಯುರ್ವೇದವನ್ನು ಬಲಪಡಿಸುವುದರಿಂದ ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರದ ವೆಚ್ಚವನ್ನು ತಗ್ಗಿಸುತ್ತದೆ.

ವಿಶ್ವಾದ್ಯಂತ ಆಯುರ್ವೇದ ಸೇವೆಗಳು ಮತ್ತು ಜ್ಞಾನದ ಕುರಿತು ಆಸಕ್ತಿ ಮತ್ತು ಬೇಡಿಕೆ ಹೆಚ್ಚಿದೆ. ಭಾರತ ಆಯುರ್ವೇದದ ತವರು ಮತ್ತು ಆಯುರ್ವೇದದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಸಂಸ್ಥೆಗಳು ತಮ್ಮ ವಿಶಿಷ್ಟತೆಯನ್ನು ಮೆರೆಯಲಿವೆ  ಎಂದು ವಿಶ್ವವೇ ಭಾರತದೆಡೆ ದೃಷ್ಟಿ ನೆಟ್ಟಿದೆ. ಪ್ರಸ್ತಾವಿತ ಸಂಸ್ಥೆಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಾನಮಾನವನ್ನು ನೀಡುವ ಮೂಲಕ ಆಯುರ್ವೇದ ಶಿಕ್ಷಣ ಗುಣಮಟ್ಟ ಉನ್ನತೀಕರಣಕ್ಕೆ ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬೇಡಿಕೆಗೆ ತಕ್ಕಂತೆ ಆಯುರ್ವೇದದಲ್ಲಿ ವಿವಿಧ ಕೋರ್ಸ್ ಗಳನ್ನು ರೂಪಿಸುವುದು ಮತ್ತು ಸುಧಾರಿತ ಮೌಲ್ಯಮಾಪನ ವಿಧಾನ ಅಳವಡಿಕೆಗೆ ಸಹಕಾರಿಯಾಗುತ್ತದೆ.     

ಜನ ಸಮೂಹಗಳಲ್ಲಿ ಆಯುಷ್ ಗಾಢ ಪರಿಣಾಮ ಬೀರುವಂತೆ ತನ್ನದೇ ಆದ ಸರ್ಟಿಫಿಕೇಟ್ ಕೋರ್ಸ್ ಗಳನ್ನು ರೂಪಿಸುವ ಶಕ್ತಿಯನ್ನು ಇದು ಹೊಂದಿರುತ್ತದೆ. ದೇಶ ಎದುರಿಸುತ್ತಿರುವ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಆಯುರ್ವೇದದ ಅಸಾಮಾನ್ಯ ಸಾಮರ್ಥ್ಯವನ್ನು ಹೊರತರುವಲ್ಲಿ ನೆರವಾಗುತ್ತದೆ. ಆಯುರ್ವೇದದಲ್ಲಿ ಭಾಗಶಃ ಶೃದ್ಧೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಂಸ್ಥೆಗೆ ಇದು ಸಹಾಯಕರವಾಗಲಿದೆ ಮತ್ತು ಆಯುರ್ವೇದಕ್ಕೆ ಸಮಕಾಲೀನ ಬಲವನ್ನು ನೀಡಲು ಆಂತರಿಕ ಶಿಸ್ತಿನ ಸಹಯೋಗವನ್ನು ಖಾತರಿಪಡಿಸುತ್ತದೆ.   

****



(Release ID: 1598783) Visitor Counter : 101