ಆಯುಷ್

ಆಯುಷ್ ಸಚಿವಾಲಯದ ವರ್ಷಾಂತ್ಯದ ಅವಲೋಕನ 2019

Posted On: 23 DEC 2019 12:05PM by PIB Bengaluru

ಆಯುಷ್ ಸಚಿವಾಲಯದ ವರ್ಷಾಂತ್ಯದ ಅವಲೋಕನ 2019

 

1,032 ಆಯುಷ್ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳ ಸ್ಥಾಪನೆಗೆ  89.92 ಕೋಟಿ ರೂ. ಮತ್ತು 91 ಸಮಗ್ರ ಆಯುಷ್ ಆಸ್ಪತ್ರೆಗಳ ಸ್ಥಾಪನೆಗೆ ಹಣಕಾಸು ಸಹಾಯ:  ಸಮಗ್ರ ಆರೋಗ್ಯ ಸಂಶೋಧನಾ ಮತ್ತು ಯೋಜನೆ(ಶಿರ್)ಗೆ ನೀತಿ ಆಯೋಗ ಮತ್ತು ಇನ್ವೆಸ್ಟ್ ಇಂಡಿಯಾ ಸಹಭಾಗಿತ್ವದಲ್ಲಿ 140 ಸಾಂಪ್ರದಾಯಿಕ ಔಷಧಿಗಳಿಗೆ ಕೇಂದ್ರೀಯ ಮಂಡಳಿಯಿಂದ 2019ನೇ ಸಾಲಿನಲ್ಲಿ 70 ಷರತ್ತುಗಳೊಂದಿಗೆ ಮೌಲ್ಯಾಂಕನ

 

ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಆಯುಷ್ ಪದ್ಧತಿಗಳು ಭಾರತೀಯ ಸಾರ್ವಜನಿಕ ಆರೋಗ್ಯ ವಲಯದಲ್ಲಿ ಅತ್ಯಂತ ಪ್ರಮುಖ ಸಂಪನ್ಮೂಲವಾಗಿದ್ದು, ಅವುಗಳು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಆಳವಾಗಿ ಬೇರೂರಿವೆ. ದೇಶದ ನಾನಾ ಭಾಗಗಳಲ್ಲಿ ಸಾಮಾನ್ಯ ಜನರು ಅವುಗಳ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಅವುಗಳ ಪ್ರಸ್ತುತತೆ ಅಗತ್ಯವಾಗಿದ್ದು, ವಿಶೇಷವಾಗಿ ಜೀವನಶೈಲಿ ಆಧಾರಿತ ಗಂಭೀರ ಕಾಯಿಲೆಗಳ ನಿರ್ವಹಣೆ ಮತ್ತು ವೃದ್ಧ ನಾಗರಿಕರ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಇವೆರಡೂ ನಮ್ಮ ದೇಶದಲ್ಲಿ ಆರೋಗ್ಯ ಕಾಳಜಿಗಳ ಬಗ್ಗೆ ಗಂಭೀರ ಕಳವಳ ತೋರುತ್ತಿವೆ.

ಆಯುಷ್ ಸಚಿವಾಲಯ ಆರಂಭವಾಗಿ ಐದು ವರ್ಷಗಳು ಕಳೆದಿದ್ದು, ಪರ್ಯಾಯ ವೈದ್ಯಕೀಯ ವಿಧಾನಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸವನ್ನು ಮಾಡಿದೆ ಮತ್ತು ಅದಕ್ಕಾಗಿ ಅಗತ್ಯ ವ್ಯವಸ್ಥೆ ಮತ್ತು ಉತ್ತೇಜನವನ್ನು ನೀಡುತ್ತಿದೆ. ಸಚಿವಾಲಯ 2019ನೇ ಸಾಲಿನಲ್ಲಿ ಆಯುಷ್ ಪದ್ಧತಿಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ ಮತ್ತು ಅದರಲ್ಲಿ ಗಮನಾರ್ಹ ಪ್ರಗತಿಯನ್ನೂ ಸಹ ಸಾಧಿಸಿದೆ. ಈ ಎಲ್ಲ ಪ್ರಯತ್ನಗಳು ಒಟ್ಟಾರೆ ಏಳು ವಿಸ್ತೃತ ವಿಭಾಗಗಳಲ್ಲಿ ನಡೆದಿವೆ. ಅವುಗಳೆಂದರೆ ಆಯುಷ್ ಆರೋಗ್ಯ ರಕ್ಷಣೆ ವ್ಯವಸ್ಥೆ ಸುಧಾರಣೆ, ಆಯುಷ್ ಸಂಶೋಧನೆಗೆ ಉತ್ತೇಜನ, ಆಯುಷ್ ಶಿಕ್ಷಣ, ಆಯುಷ್ ಔಷಧಿಗಳು ಮತ್ತು ಸಂಬಂಧಿಸಿದ ವಿಷಯಗಳು, ಜಾಗೃತಿ ಮೂಡಿಸುವುದು ಆಯುಷ್ ಪದ್ಧತಿಗಳನ್ನು ಜಾಗತಿಕರಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮತ್ತು ಆಯುಷ್ ವಲಯಕ್ಕೆ ಮಾಹಿತಿ ತಂತ್ರಜ್ಞಾನದ ಸೇರ್ಪಡೆ.

ಆಯುಷ್ ಆರೋಗ್ಯ ರಕ್ಷಣಾ ವ್ಯವಸ್ಥೆ ಸುಧಾರಣೆ

ಆಯುಷ್ ಆರೋಗ್ಯ ರಕ್ಷಣಾ ವ್ಯವಸ್ಥೆ ಲಭ್ಯವಾಗುವಂತೆ ಉತ್ತೇಜಿಸಲು ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ರಾಷ್ಟ್ರೀಯ ಆಯುಷ್ ಮಿಷನ್(ಎನ್ಎಎಂ) ಕೈಗೊಂಡಿದ್ದು, ಅದು ಪ್ರಮುಖ ಸಾಧನವಾಗಿದೆ. ಈ ಯೋಜನೆಯಲ್ಲಿ ಆಯುಷ್ ವಲಯದ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳುವ ಪ್ರಯತ್ನಗಳನ್ನು ಬೆಂಬಲಿಸಲಾಗುವುದು. ಆಯುಷ್ ಸಚಿವಾಲಯದ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಶೇ.10ರಷ್ಟು ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳು(ಎಚ್ ಡಬ್ಲ್ಯೂಸಿಎಸ್)ಗಳನ್ನು ಕಾರ್ಯಾಚರಣೆಗೊಳಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಚಿವಾಲಯ 1,032 ಆಯುಷ್ ಡಿಸ್ಪೆನ್ಸರಿಗಳಿಗೆ 89.92 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಹಾಲಿ ಇರುವ ಕೇಂದ್ರ ಸರ್ಕಾರದ ಎನ್ಎಎಂ ಯೋಜನೆಯಲ್ಲಿ ಅವುಗಳನ್ನು ಆಯುಷ್ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಪ್ರಧಾನಮಂತ್ರಿಗಳು 2019ರ ಆಗಸ್ಟ್ 30ರಂದು ಹರಿಯಾಣ ರಾಜ್ಯದಲ್ಲಿ 10 ಆಯುಷ್ ಎಚ್ ಡಬ್ಲ್ಯೂಸಿಎಸ್ ಗಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಚಾಲನೆ ನೀಡಿದರು. ಈ 1,032 ಎಚ್ ಡಬ್ಲ್ಯೂಸಿಎಸ್ ಗಳಲ್ಲಿ ಸಾರ್ವಜನಿಕರಿಗೆ ಅದರಲ್ಲೂ ದೇಶದ ಗುಡ್ಡಗಾಡು ಪ್ರದೇಶಗಳ ಜನರಿಗೆ ಆಯುಷ್ ಆರೋಗ್ಯ ರಕ್ಷಣಾ ವ್ಯವಸ್ಥೆ ಲಭ್ಯವಾಗುತ್ತಿದ್ದು, ಅದು ಮಹತ್ವದ ಪರಿಣಾಮವನ್ನು ಉಂಟುಮಾಡಿದೆ.

ಪ್ರಧಾನಮಂತ್ರಿಗಳ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಅಡಿಯಲ್ಲಿ ಆಯುಷ್ ವಿಮಾ ಯೋಜನೆಗಳನ್ನು ಸೇರ್ಪಡೆ ಮಾಡಲು 19 ಆಯುರ್ವೇದ, ಸಿದ್ಧ ಹಾಗೂ ಯುನಾನಿ, 14 ಯೋಗ ಮತ್ತು ನ್ಯಾಚುರೋಪತಿ ಚಿಕಿತ್ಸಾ ಪ್ಯಾಕೇಜ್ ಗಳ ಪ್ರಸ್ತಾವವನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಆಯುಷ್ ಆರೋಗ್ಯ ರಕ್ಷಣಾ ಸೇವೆಗಳನ್ನು ಉತ್ತೇಜಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳು(ಪಿಎಚ್ ಸಿಎಸ್), ಸಮುದಾಯ ಆರೋಗ್ಯ ಕೇಂದ್ರಗಳು(ಸಿಎಚ್ ಸಿಎಸ್) ಮತ್ತು ಜಿಲ್ಲಾ ಆಸ್ಪತ್ರೆಗಳು(ಡಿಎಚ್ ಎಸ್)ಗಳಲ್ಲಿ ಎನ್ಎಎಂ ಮತ್ತು ರಾಷ್ಟ್ರೀಯ ಆರೋಗ್ಯ ಯೋಜನೆ(ಎನ್ಎಚ್ಎಂ) ಅಡಿಯಲ್ಲಿ ಆಯುಷ್ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಆಯುಷ್ ಪದ್ಧತಿಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 2019ರ ಜೂನ್ 30ರ ವೇಳೆಗೆ 7620 ಪಿಎಚ್ ಸಿಗಳು, 2758 ಸಿಎಚ್ ಸಿ ಎಸ್ ಗಳು ಮತ್ತು 495 ಡಿಎಚ್ಎಸ್ ಗಳಲ್ಲಿ ಆಯುಷ್ ಸೌಕರ್ಯಗಳನ್ನು ಒದಗಿಸಲಾಗಿದೆ. ಆ ಮೂಲಕ ದೇಶದ ನಾನಾ ಭಾಗಗಳಲ್ಲಿ ಸಾರ್ವಜನಿಕರಿಗೆ ಆಯುಷ್ ಚಿಕಿತ್ಸೆ ದೊರಕುವಂತೆ ಮಾಡಲಾಗಿದೆ.

ದ್ವಿತೀಯ/ತೃತೀಯ ಹಂತದ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಆಯುಷ್ ಮೂಲಕ ಶಕ್ತಿ ತುಂಬಲು ಆಯುಷ್ ಸಚಿವಾಲಯ ದೇಶದಲ್ಲಿ 50 ಹಾಸಿಗೆಗಳ ಸಮಗ್ರ ಆಯುಷ್ ಆಸ್ಪತ್ರೆಗಳನ್ನು ಸ್ಥಾಪಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಬೆಂಬಲ ನೀಡಲಾಗುತ್ತಿದೆ. ಸಚಿವಾಲಯ 91 ರಿಂದ 50 ಹಾಸಿಗೆಗಳುಳ್ಳ ಸಮಗ್ರ ಆಯುಷ್ ಆಸ್ಪತ್ರೆಗಳನ್ನು ಆರಂಭಿಸಲು ಹಣಕಾಸಿನ ನೆರವನ್ನು ಒದಗಿಸಿದೆ. ಅವುಗಳಲ್ಲಿ ಆರು ಆಸ್ಪತ್ರೆಗಳಿಗೆ ಈ ವರ್ಷ ಸಹಾಯ ನೀಡಲಾಗಿದೆ. ಆಯುಷ್ ಸಚಿವಾಲಯ ಆಯುಷ್ ಔಷಧಗಳ ಬೇಡಿಕೆಯನ್ನು ಪೂರೈಸಲು ಮತ್ತು ಅರಣ್ಯದ ಮೇಲಿನ ಅವಲಂಬನೆ ತಗ್ಗಿಸಲು ರೈತರ ಹೊಲಗಳಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಲು 48,050 ಹೆಕ್ಟೇರ್ ಪ್ರದೇಶಕ್ಕೆ ಸಹಾಯ ಧನ ನೀಡಿದೆ. ಇದಕ್ಕಾಗಿ 1,544 ಕ್ಲಸ್ಟರ್ ಗಳ ಅಡಿಯಲ್ಲಿ 56,711 ರೈತರಿಗೆ ಸಬ್ಸಿಡಿಗಳನ್ನು ನೀಡಲಾಗಿದೆ. ಅಲ್ಲದೆ ಆಯುಷ್ ಸಚಿವಾಲಯ ದೇಶಾದ್ಯಂತ ಗುಣಮಟ್ಟದ ಸಸ್ಯಗಳನ್ನು ಒದಗಿಸಲು 190 ನರ್ಸರಿಗಳಿಗೆ ಆರ್ಥಿಕ ನೆರವು ನೀಡಿದೆ.

ಸೋವಾ-ರಿಗ್ಪಾ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದ್ದು, ಲೇಹ್ ನ ಸೋವಾ-ರಿಗ್ಪಾದಲ್ಲಿ ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲು ಅನುಮೋದನೆಯನ್ನು ಮಂಜೂರು ಮಾಡಲಾಗಿದ್ದು, ಆ ಮೂಲಕ ಜನಸಂಖ್ಯೆ ಬಹು ದೊಡ್ಡ ವರ್ಗಕ್ಕೆ ಅದು ಲಭ್ಯವಾಗುವಂತೆ ಮಾಡಲಾಗಿದೆ. ಸೋವಾ-ರಿಗ್ಪಾ ಭಾರತದ ಹಿಮಾಲಯ ಪರ್ವತ ಸಾಲಿನಲ್ಲಿನ ಒಂದು ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯಾಗಿದೆ. ಇದನ್ನು ಸಿಕ್ಕಿಂ, ಅರುಣಾಚಲಪ್ರದೇಶ, ಡಾರ್ಜಲಿಂಗ್(ಪಶ್ಚಿಮ ಬಂಗಾಳ), ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿ ಜನಪ್ರಿಯ ವೈದ್ಯಕೀಯ ಪದ್ಧತಿಯಾಗಿದೆ. ಸೋವಾ-ರಿಗ್ಪಾ ರಾಷ್ಟ್ರೀಯ ಸಂಸ್ಥೆ ಸ್ಥಾಪನೆಯಿಂದಾಗಿ ಇಡೀ ಭಾರತದ ಉಪಖಂಡದಲ್ಲಿ ಸೋವಾ-ರಿಗ್ಪಾ ಪುನರುಜ್ಜೀವನಕ್ಕೆ ಒತ್ತು ನೀಡಲು ನೆರವಾಗುತ್ತದೆ.

ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಕೇಂದ್ರ (ಎಂಡಿಎನ್ಐವೈ) ಆಯುಷ್ ಸಚಿವಾಲಯದ ಜೊತೆಗೂಡಿ ನವದೆಹಲಿಯ ತಿಹಾರ್ ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ಕಾರಾಗೃಹ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ತರಬೇತಿಯನ್ನು 2019ರ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯೋಜಿಸಿತ್ತು, ಅದರಲ್ಲಿ ಸಾಮಾನ್ಯ ಯೋಗ ಶಿಷ್ಟಾಚಾರದಂತೆ ಸುಮಾರು 16,000ಕ್ಕೂ ಅಧಿಕ ಕೈದಿಗಳು ಯೋಗ ತರಬೇತಿಯನ್ನು ಪಡೆದರು.

ಪುಣೆಯ ರಾಷ್ಟ್ರೀಯ ನ್ಯಾಚುರೋಪತಿ ಸಂಸ್ಥೆ (ಎನ್ಐಎನ್), ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆಯನ್ನು ಬಳಸಿಕೊಂಡು ಮಹಾತ್ಮ ಗಾಂಧೀಜಿ ಅವರ ಹೃದಯಕ್ಕೆ ಹತ್ತಿರವಾದ ನ್ಯಾಚುರೋಪತಿ ಥೆರಪಿ ಮತ್ತು ಪದ್ಧತಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಎನ್ಐಎನ್ “ನಿಸರ್ಗೋಪಚಾರ ಮಹೋತ್ಸವ” ಘೋಷವಾಕ್ಯದ ಹೆಸರಿನಲ್ಲಿ 150ಕ್ಕೂ ಅಧಿಕ ನ್ಯಾಚುರೋಪತಿ ಶಿಬಿರಗಳನ್ನು ನಡೆಸುವುದನ್ನು ಕೈಗೆತ್ತಿಕೊಂಡಿದ್ದು, 2019ರ ಅಕ್ಟೋಬರ್ 2ರಿಂದ ಒಂದು ವರ್ಷಗಳ ಕಾಲ ದೇಶಾದ್ಯಂತ ಈ ಶಿಬಿರಗಳನ್ನು ನಡೆಸಲಾಗುವುದು. ಮೊದಲ ಶಿಬಿರ 2019ರ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2ರ ವರೆಗೆ ಗೋವಾದಲ್ಲಿ ನಡೆಸಲಾಯಿತು. ಅದರಲ್ಲಿ ಸುಮಾರು ಐದು ಸಾವಿರ ಮಂದಿ ಭಾಗವಹಿಸಿದ್ದರು ಮತ್ತು ನ್ಯಾಚುರೋಪತಿ ಚಿಕಿತ್ಸೆಯಿಂದ ಅವರು ಲಾಭ ಪಡೆದುಕೊಂಡರು.

ಆಯುಷ್ ಪದ್ಧತಿಗಳಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ

ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಗೆ ನಿಗದಿತ ಕೇಂದ್ರೀಯ ಸಂಶೋಧನಾ ಮಂಡಳಿಗಳಿದ್ದು, ಅವುಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಅವು ಸಚಿವಾಲಯದಡಿ ಬರುತ್ತವೆ ಮತ್ತು ಸಚಿವಾಲಯ ಆಯುಷ್ ಸಂಶೋಧನೆಯ ಮುಖ್ಯ ವಾಹಿನಿಯಲ್ಲಿ ಮುಂದುವರಿದಿವೆ. ಆಯುರ್ವೇದ, ಯುನಾನಿ, ಹೋಮಿಯೋಪತಿ ಮತ್ತು ಸಿದ್ಧ ಕೇಂದ್ರೀಯ ಸಂಶೋಧನಾ ಮಂಡಳಿಗಳು ಒಟ್ಟಾರೆ ಈ ಅವಧಿಯಲ್ಲಿ 70 ಷರತ್ತುಗಳೊಂದಿಗೆ 140 ಸಾಂಪ್ರದಾಯಿಕ ಔಷಧಿಗಳಿಗೆ ಮೌಲ್ಯಾಂಕನ ಪಡೆದಿವೆ. ಪ್ರಯೋಗಾಲಯದ ಸುರಕ್ಷತೆ ಮತ್ತು ಪರಿಣಾಮವನ್ನು ಆಧರಿಸಿ ಅವು ಔಷಧಿಯನ್ನು ತಯಾರಿಸಿವೆ. ಭವಿಷ್ಯದ ಮೇಲೆ ಭಾರೀ ಪರಿಣಾಮ ಬೀರುವ ಅಭಿವೃದ್ಧಿಯಲ್ಲಿ ಸಮಗ್ರ ಆರೋಗ್ಯ ಸಂಶೋಧನಾ ಯೋಜನೆ(ಎಸ್ಐಎಚ್ಆರ್) ಅನ್ನು ರೂಪಿಸಲಾಗಿದ್ದು, ಅದಕ್ಕೆ ನೀತಿ ಆಯೋಗ ಮತ್ತು ಇನ್ವೆಸ್ಟ್ ಇಂಡಿಯಾ(ಅಗ್ನಿ ಪ್ಲಾಟ್ ಫಾರ್ಮ್ ) ಅಡಿಯಲ್ಲಿ ಸಹಭಾಗಿತ್ವ ಪಡೆಯಲಾಗಿದೆ. ಇದರಿಂದ ಸಾಕ್ಷ್ಯ ಆಧರಿಸಿದ ಸಮಗ್ರ ಪದ್ಧತಿಗಳ ಮೂಲಕ ಸಾರ್ವಜನಿಕ ಆರೋಗ್ಯದ ಸವಾಲುಗಳನ್ನು ಎದುರಿಸಲು ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗಳಲ್ಲಿ ಬಳಕೆ ಮಾಡದಿರುವಂತಹ ಸಮಗ್ರ ಆಯುಷ್ ಪದ್ಧತಿಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಈ ಯೋಜನೆಗೆ ಎರಡು ವರ್ಷಗಳ ಅವಧಿಗೆ 490 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದ್ದು, ಅದು ವಿಶ್ವವ್ಯಾಪಿ ಪರಿಣಾಮವನ್ನು ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾರ್ವಜನಿಕ ವಲಯದ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್ ಸಿ ಎಚ್)ನಲ್ಲಿ ಆಯುರ್ವೇದ ಪದ್ಧತಿಗಳನ್ನು ಪರಿಚಯಿಸಲು ಭಾರೀ ಪರಿಣಾಮದ ಸಂಶೋಧನಾ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಅದು ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರಂಭವಾಗಿದೆ. ಇದರಲ್ಲಿ 10,000ಕ್ಕೂ ಅಧಿಕ ಗರ್ಭಿಣಿಯರನ್ನು ಪ್ರಯೋಗಕ್ಕೆ ಒಳಪಡಿಸಲಾಗಿದ್ದು, ವೈದ್ಯಕೀಯ ಸಂಶೋಧನಾ ಯೋಜನೆಯಲ್ಲಿ ಈ ಮಾದರಿಯ ಗಾತ್ರ ಅತಿದೊಡ್ಡದಾಗಿದೆ.  

ಈ ವರ್ಷ ಆಯುಷ್ ಸಚಿವರಾದ ಶ್ರೀ ಶ್ರೀಪಾದ್ ಯಸ್ಸೋ ನಾಯಕ್, ಹೈದರಾಬಾದ್ ನ ಎರ್ರಗಡ್ಡದಲ್ಲಿನ ಮೇಲ್ದರ್ಜೆಗೇರಿಸಲಾದ ಕೇಂದ್ರೀಯ ಯುನಾನಿ ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಅಲ್ಲಿನ ಚರ್ಮ ರೋಗಗಳಿಗೆ ಚಿಕಿತ್ಸೆ ನೀಡುವ ಯುನಾನಿ ಔಷಧಗಳ ರಾಷ್ಟ್ರೀಯ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು. ಅಲ್ಲದೆ ಸಚಿವರು ನವದೆಹಲಿಯ ಸಫ್ದಾರ್ ಜಂಗ್ ಆಸ್ಪತ್ರೆಯಲ್ಲಿ ಸಿದ್ಧ ಕ್ಲಿನಿಕಲ್ ಸಂಶೋಧನಾ ಘಟಕ ಮತ್ತು ಯುನಾನಿ ವೈದ್ಯಕೀಯ ಕೇಂದ್ರವನ್ನು ಉದ್ಘಾಟಿಸಿದರು. ಅದರಲ್ಲಿ ಸಮಗ್ರ ವೈದ್ಯಕೀಯ ಸಂಶೋಧನೆಗೆ ಹಲವು ಅವಕಾಶಗಳು ಸೃಷ್ಟಿಯಾಗಿದೆ. ನವದೆಹಲಿಯ ದೆಹಲಿ ಕಂಟೋನ್ಮೆಂಟ್ ನ ಬೇಸ್ ಆಸ್ಪತ್ರೆಯಲ್ಲಿ ಪ್ಯಾಲೆಟಿವ್ ಕೇರ್ ಘಟಕದಲ್ಲಿ ಆಯುರ್ವೇದ ಪ್ಯಾಲೆಟಿವ್ ಘಟಕವನ್ನು ಉದ್ಘಾಟಿಸಿದರು. ಇದು ಈ ವರ್ಷ ಆರಂಭಿಸಲಾದ ಮತ್ತೊಂದು ಭರವಸೆಯ ಸಂಸ್ಥೆಯಾಗಿದೆ. ಸಂಶೋಧನಾ ಚಟುವಟಿಕೆಯಲ್ಲಿ ಮತ್ತೊಂದು ಪ್ರಮುಖ ಕಾರ್ಯವೆಂದರೆ ಹೋಮಿಯೋಪತಿ ಕುರಿತಾದ ಕೇಂದ್ರೀಯ ಸಂಶೋಧನಾ ಮಂಡಳಿ ಮೆದುಳು ಜ್ವರ (ಎನ್ಸೆಫಾಲಿಟೀಸ್)ಕುರಿತ ಅಧ್ಯಯನವನ್ನು ಪೂರ್ಣಗೊಳಿಸಿದೆ. ಈ ಜ್ವರ 2019ರಲ್ಲಿ ಗೋರಖ್ ಪುರ್ ನಲ್ಲಿ ಕಾಣಿಸಿಕೊಂಡಿದ್ದು, ಡೆಂಘಿ ಮಾದರಿಯ ಈ ಜ್ವರ ಬಾರೀ ಸಮಸ್ಯೆಯನ್ನು ಉಂಟುಮಾಡಿತು.

ಆಯುಷ್ ಶಿಕ್ಷಣ

ಆಯುಷ್ ಸಚಿವಾಲಯ 2019ನೇ ಸಾಲಿನಲ್ಲಿ ಆಯುಷ್ ಶಿಕ್ಷಣ ವಲಯದ ಪ್ರಗತಿ ಮತ್ತು ಆಧುನೀಕರಣ ನಿಟ್ಟಿನಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದೆ. ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಕುರಿತಂತೆ ಎಲ್ಲ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಅನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇದು ಮಹತ್ವದ ಸಾಧನೆಯಾಗಿದ್ದು, ದೇಶದಲ್ಲಿ ಆಯುಷ್ ಶಿಕ್ಷಣದ ಗುಣಮಟ್ಟದ ಮೇಲೆ ಇದು ದೀರ್ಘಕಾಲದ ಪರಿಣಾಮಗಳನ್ನು ಬೀರುತ್ತದೆ.

ಆಯುರ್ವೇದ, ಸಿದ್ಧ ಮತ್ತು ಯುನಾನಿ ಮತ್ತು ಹೋಮಿಯೋಪತಿ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಕ್ಕೆ ಅಖಿಲ ಭಾರತ ಸ್ನಾತಕೋತ್ತರ ಅರ್ಹತಾ ಪರೀಕ್ಷೆ (ಎಐಪಿಜಿಇಟಿ)ಯನ್ನು ಸುಗಮವಾಗಿ ನಡೆಸಲಾಗಿದೆ. ಇದನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ನಡೆಸಿತು. 2019ರಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ, ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ಕೋರ್ಸಗಳಿಗೆ ಕನಿಷ್ಠ ಶೇ.15ರ ಅಖಿಲ ಭಾರತ ಕೋಟಾದಡಿ ಪ್ರವೇಶಕ್ಕೆ ಆನ್ ಲೈನ್ ಕೌನ್ಸಲಿಂಗ್ ನೋಂದಣಿ ಹಂಚಿಕೆ ಮತ್ತು ಪ್ರವೇಶಾತಿಯನ್ನು ನಡೆಸಿತು. ಇದರಿಂದಾಗಿ ಅಭ್ಯರ್ಥಿಗಳಿಗೆ ಮಾತ್ರವಲ್ಲದೆ ಸರ್ಕಾರ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕಾಲೇಜುಗಳು, ಡೀಮ್ಡ್ ವಿಶ್ವವಿದ್ಯಾಲಯಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ರಾಷ್ಟ್ರೀಯ ಸಂಸ್ಥೆಗಳಿಗೆ ಅನುಕೂಲವಾಗಿದೆ.

ಆಯುಷ್ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಉನ್ನತೀಕರಿಸಲಾಗಿದೆ. ಇದರಿಂದಾಗಿ ವಾರ್ಷಿಕ ಪ್ರಕ್ರಿಯೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ನಿಗದಿತ ಅವಧಿಗೆ ಮುನ್ನವೇ ಪೂರ್ಣಗೊಂಡಿದೆ. ಆಯುಷ್ ಸಚಿವಾಲಯದಡಿ ಬರುವ ಹತ್ತು ರಾಷ್ಟ್ರೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳು ಆಯಾ ವಿಷಯಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ನಿಗದಿಪಡಿಸುವಲ್ಲಿ ಮಹತ್ವದ  ಕೆಲಸ ಮಾಡುತ್ತಿವೆ. ಈ ರಾಷ್ಟ್ರೀಯ ಸಂಸ್ಥೆಗಳು ಈ ವರ್ಷ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿವೆ ಮತ್ತು ಮಹತ್ವದ ಸಾಧನೆಗಳ ಮೂಲಕ ಹೊರಹೊಮ್ಮಿವೆ. ಜೈಪುರದ ರಾಷ್ಟ್ರೀಯ ಆಯುರ್ವೇದ ಸಂಸ್ಥೆ(ಎನ್ಐಎ) ಉನ್ನತೀಕರಿಸುವ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕೆ ಕಟ್ಟಡ ಮತ್ತು ಎರಡನೇ ಕ್ಯಾಂಪಸ್ ನಿರ್ಮಾಣಕ್ಕೆ 1.37 ಎಕರೆ ಭೂಮಿಯನ್ನು ಖರೀದಿಸಲು ಅಂತಿಮಗೊಳಿಸಲಾಗಿದೆ. ಅದೇ ರೀತಿ ಕೇಂದ್ರಕ್ಕೆ ಡೀಮ್ಡ್ ವಿಶ್ವವಿದ್ಯಾಲಯ ಸ್ಥಾನಮಾನ ಕೋರಿ ಯುಜಿಸಿಗೆ ಅರ್ಜಿ ಸಲ್ಲಿಸಲಾಗಿದೆ.

ಚೆನ್ನೈನ ಸಿದ್ಧ ರಾಷ್ಟ್ರೀಯ ಕೇಂದ್ರ(ಎನ್ಐಎಸ್) ಪುರಾತನ ವರ್ಮಾಮ್ ಪದ್ಧತಿಯ ಪುನರುಜ್ಜೀವನ ಮತ್ತು ಉತ್ತೇಜನಕ್ಕಾಗಿ ಕೆಲವು ಕ್ರಮಗಳನ್ನು ಕೈಗೊಂಡಿದೆ. ಆಗಸ್ಟ್ 2019ರಲ್ಲಿ  ವೈದ್ಯಕೀಯ ಪದ್ಧತಿಯಲ್ಲಿ ಸಿದ್ಧ ವ್ಯವಸ್ಥೆಯಲ್ಲಿ ವರ್ಮಾಮ್ ವಿಜ್ಞಾನದ ಇತಿಹಾಸ ಮತ್ತು ಥೆರಪಿ ಮೌಲ್ಯಗಳ ಶೋಧನೆ ಕುರಿತ ರಾಷ್ಟ್ರೀಯ ಸಮಾವೇಶ ನಡೆಯಿತು. ಇದಕ್ಕೆ ಸಾರ್ವಜನಿಕರು ಮತ್ತು ವೈದ್ಯರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು. ವರ್ಮಾಮ್ ಹಲವು ನರ (ನ್ಯೂರೊಲಾಜಿಕಲ್), ಡಿಜನರೇಟಿವ್ ಮತ್ತು ಮೂಳೆಗೆ ಸಂಬಂಧಿಸಿದ (ಆರ್ಥೋಪೆಡಿಕ್) ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಎನ್ಐಎಸ್ ವರ್ಮಾಮ್ ಪದ್ಧತಿ ಕುರಿತಂತೆ ಸಮಗ್ರ ಮಾಹಿತಿಯನ್ನು ಒಳಗೊಂಡ “ವರ್ಮಾಮ್ ವಿಜ್ಞಾನದ ಪಠ್ಯ ಪುಸ್ತಕ”ಅನ್ನು ಸಂಪಾದಿಸಿದೆ. ವರ್ಮಾಮ್ ಕುರಿತಂತೆ ಸಂಸ್ಥೆ ವಿಶೇಷ ಒಪಿಡಿಯನ್ನು ಆರಂಭಿಸಿದೆ. 2019ರಲ್ಲಿ ಚಿಕೂನ್ ಗುನ್ಯಾ, ಪೊಸೊರಿಯಾಸಿಸ್ ಸೇರಿದಂತೆ ಹಲವು ಕಾಯಿಲೆಗಳು ಮತ್ತು ಆರೋಗ್ಯ ರಕ್ಷಣೆ ಕುರಿತ ಹತ್ತು ಮಹತ್ವದ ಸಂಶೋಧನೆಗಳು ನಡೆದಿವೆ. ಇವುಗಳನ್ನು ನಾನಾ ರಾಷ್ಟ್ರೀಯ ಸಂಸ್ಥೆಗಳಲ್ಲಿ ಆರಂಭಿಸಲಾಗಿದೆ.

ಆಯುಷ್ ಔಷಧ ನೀತಿ ಮತ್ತು ಸಂಬಂಧಿ ವಿಚಾರಗಳು

            ಆಯುಷ್ ಔಷಧಿಗಳ ನಿಯಂತ್ರಣ ಮತ್ತು ಇದು ಈ ವರ್ಷ ಆಯುಷ್ ಔಷಧಿಗಳ ಪರಿಣಾಮಕಾರಿ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆಯುಷ್ ಔಷಧ ನೀತಿ ಮತ್ತು ಸಂಬಂಧಿಸಿದ ವಿಚಾರಗಳಲ್ಲಿ 2019ರಲ್ಲಿ ಸಾಧಿಸಿರುವ ಪ್ರಮುಖ ಸಾಧನೆಗಳು ಹೀಗಿವೆ. – 9 ನಿಯಂತ್ರಣ ಹುದ್ದೆಗಳನ್ನು ಒಳಗೊಂಡ ಆಯುಷ್ ಔಷಧ ನಿಯಂತ್ರಣ ವ್ಯವಸ್ಥೆಗೆ ಅಧಿಸೂಚನೆ ಹೊರಡಿಸಲಾಯಿತು. ಇದು ಆಯುಷ್ ಔಷಧ ಉದ್ಯಮ ಉತ್ಪಾದನೆಯನ್ನು ಸೂಚಿಸುತ್ತದೆ. ಭಾರತ ಸಾಂಪ್ರದಾಯಿಕ ಮತ್ತು ಪೂರಕ ವೈದ್ಯಕೀಯ ಪದ್ಧತಿಗಳ ಔಷಧ ಉತ್ಪಾದನೆ ಮತ್ತು ನಿಯಂತ್ರಣದಲ್ಲಿ ಪರಿಣಿತಿ ಸಾಧಿಸಿರುವ ಕೆಲವೇ ರಾಷ್ಟ್ರಗಳಲ್ಲಿ ಒಂದು: ಇ-ಔಷಧಿ ಪೋರ್ಟಲ್ ಮೂಲಕ ಆನ್ ಲೈನ್ ಮೂಲಕ ಲೈಸೆನ್ಸ್ ಅರ್ಜಿಗಳನ್ನು ಪಡೆಯುವ ವ್ಯವಸ್ಥೆ ಬಲವರ್ಧನೆಗೊಳಿಸಲಾಗಿದ್ದು, ಅದರಲ್ಲಿ ರಾಜ್ಯ ಪರವಾನಗಿ ಪ್ರಾಧಿಕಾರಗಳನ್ನು ಸಹ ಸೇರಿಸಲಾಗಿದೆ. ಜನೌಷಧಿ ಯೋಜನೆಯಲ್ಲಿ ಆಯುಷ್ ಔಷಧಿಗಳನ್ನೂ ಸಹ ಸೇರಿಸಲಾಗಿದೆ. ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿಯ ಅಗತ್ಯ ಔಷಧಗಳ ಪಟ್ಟಿಯನ್ನು ಪರಿಷ್ಕರಿಸಿ ಅದನ್ನು ಅಪ್ ಡೇಟ್ ಮಾಡಲಾಗಿದೆ.

ಈ ವರ್ಷ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ ಔಷಧಗಳ ಕುರಿತಂತೆ ತಪ್ಪು ಗ್ರಹಿಕೆಯ ಜಾಹಿರಾತುಗಳ ಮೇಲೆ ನಿಗಾವಹಿಸಲು ಮೇಲ್ವಿಚಾರಣಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಅಲ್ಲದೆ ಔಷಧಗಳ ಸುರಕ್ಷತೆಗೆ ಕೇಂದ್ರ ವಲಯದ ಫಾರ್ಮಕೊವಿಜಿಲೆನ್ಸ್ ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ಫಾರ್ಮಕೊವಿಜಿಲೆನ್ಸ್ ಸಮನ್ವಯ ಸಮಿತಿ (ಎನ್ ಪಿ ವಿ ಸಿಸಿ)ಗೆ, ಐದು ಇಂಟರ್ ಮಿಡಿಯರಿ ಫಾರ್ಮಕೊವಿಜಿಲೆನ್ಸ್ ಕೇಂದ್ರಗಳು(ಐಪಿವಿಸಿಎಸ್) ಮತ್ತು ಫೆರಿಫೆರಲ್ ಫಾರ್ಮಕೊವಿಜಿಲೆನ್ಸ್ ಸೆಂಟರ್(ಪಿಪಿವಿಸಿಎಸ್) ಈ ಮೂರು ಹಂತದ ಜಾಲ ಸ್ಥಾಪನೆಗೆ ಅನುದಾನವನ್ನು ಮಂಜೂರು ಮಾಡಲಾಗಿದೆ, 63 ಪಿಪಿವಿಸಿಗಳನ್ನು ಸ್ಥಾಪಿಸಲಾಗಿದೆ ಮತ್ತು ಒಂದು ರಾಷ್ಟ್ರೀಯ ಕೇಂದ್ರ ಹಾಗೂ ಐದು ಇಂಟರ್ ಮೀಡಿಯೇಟ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 2019ರ ಜನವರಿಯಿಂದ ಆರಂಭವಾಗಿರುವ ಎಎಸ್ ಯು&ಎಚ್  ಸೇವನೆಯಿಂದ ಕೆಲವು ಪ್ರತಿಕೂಲ ಘಟನೆಗಳು ವರದಿಯಾಗಿದ್ದು, ಅಕ್ಟೋಬರ್ 2019ರಲ್ಲಿ ಎಎಸ್ ಯು&ಎಚ್ ಔಷಧಗಳ ಪ್ರತಿಕೂಲ ಪರಿಣಾಮದ ಬಗ್ಗೆ 250 ಪ್ರಕರಣಗಳು ದಾಖಲಾಗಿವೆ.

ಭಾರತೀಯ ಔಷಧ ಮತ್ತು ಹೋಮಿಯೋಪತಿ ಕುರಿತ ಫಾರ್ಮಕೋಪಿಯಾ ಆಯೋಗ (ಪಿಸಿಐಎಂ&ಎಚ್) ಘಾಜಿಯಾಬಾದ್ ನ ಈ ಸ್ವಾಯತ್ತ ಸಂಸ್ಥೆ ಆಯುಷ್ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದ್ದು, ಆಯುಷ್ ಫಾರ್ಮಕೋಪಿಯಾಸ್ ಸುಧಾರಣೆಗೆ ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ಆಮದು ಮಾಡಿಕೊಂಡ, ಮಾರಾಟಕ್ಕೆ ತಯಾರಿಸಲಾದ, ದಾಸ್ತಾನು ಮಾಡಿದ ಮತ್ತು ಮಾರಾಟಕ್ಕಿಟ್ಟ ಅಥವಾ ಭಾರತದಲ್ಲಿ ವಿತರಿಸಿದ ಔಷಧಗಳ ಗುಣಮಟ್ಟ ಮಾನದಂಡಗಳನ್ನು ಕಾಯ್ದುಕೊಳ್ಳುವಲ್ಲಿ ಫಾರ್ಮಕೋಪಿಯಾಸ್ ಅತ್ಯಂತ ಮಹತ್ವದ ಕೆಲಸ ಮಾಡುತ್ತಿದೆ. 2019ನೇ ಸಾಲಿನಲ್ಲಿ ಪಿಸಿಐಎಂ&ಎಚ್ ಈ ಕೆಳಗಿನ ಫಾರ್ಮಕೋಪಿಯಾ ಪ್ರಕಟಣೆಗಳನ್ನು ಬಿಡುಗಡೆ ಮಾಡಿದೆ.

ಯುನಾನಿ: 2019ರ ಫೆಬ್ರವರಿ 11ರ ಯುನಾನಿ ದಿನದಂದು 50 ಯುನಾನಿ ಫಾರ್ಮೊಲೇಶನ್ಸ್ ನ ಮೋನೊಗ್ರಾಫ್ ಗಳನ್ನು ಒಳಗೊಂಡ ಯುಪಿಐ, ಭಾಗ-2 ಸಂಚಿಕೆ 4 ಅನ್ನು ಬಿಡುಗಡೆ ಮಾಡಲಾಯಿತು.
 

ಹೋಮಿಯೋಪತಿ: ಹೋಮಿಯೋಪತಿ ದಿನದಂದು ಹೋಮಿಯೋಪತಿಕ್ ಫಾರ್ಮಸಿಟಿಕಲ್ ಕೊಡೆಕ್ಸ್ (ಇ-ಕಾಪಿ) (45 ಔಷಧಿಗಳು) ಬಿಡುಗಡೆ ಮಾಡಲಾಯಿತು.

ಆಯುಷ್ ಸಚಿವಾಲಯದ ಅಧ್ಯಯನದಲ್ಲಿ ಬರುವ ಮತ್ತೊಂದು ಕಚೇರಿ ಭಾರತೀಯ ವೈದ್ಯಕೀಯ ಫಾರ್ಮಕೋಪಿಯಲ್ ಲ್ಯಾಬೊರೇಟರಿ(ಪಿ ಎಲ್ ಐ ಎಂ) ಆಯುಷ್ ಪದ್ಧತಿಯನ್ನು ಆಧುನಿಕತೆಯ ಮಟ್ಟಕ್ಕೆ ಹಾಗೂ ಅದರ ಬಲವರ್ಧನೆಗೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. 2019ರಲ್ಲಿ ಈ ಪ್ರಯೋಗಾಲಯದ ಪ್ರಮುಖ ಸಾಧನೆಗಳು ಹೀಗಿವೆ.

2019-20ನೇ ಸಾಲಿನಲ್ಲಿ ಔಷಧ ಜಾರಿ ಅಧಿಕಾರಿಗಳು/ಡ್ರಗ್ ಇನ್ಸ್ ಪೆಕ್ಟರ್ಸ್ ಮತ್ತು ಗುಣಮಟ್ಟ ನಿಯಂತ್ರಣ ಸಿಬ್ಬಂದಿಗೆ 4 ತರಬೇತಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದೆ.

2019-20ನೇ ಸಾಲಿನಲ್ಲಿ 40 ಸುಗಂಧಿತ ದ್ರವ್ಯಗಳ ವಿಶ್ಲೇಷಣೆಯನ್ನು ಎಪಿಸಿಗೆ ಸಲ್ಲಿಸಲಾಗಿದೆ.

2019-20ನೇ ಸಾಲಿನಲ್ಲಿ ಔಷಧೀಯ ಸಸ್ಯಗಳ ಎರಡು ಸಮೀಕ್ಷೆ ಅಧ್ಯಯನಗಳನ್ನು ಪೂರ್ಣಗೊಳಿಸಿದೆ.

ಆಗಸ್ಟ್ 2019ರಲ್ಲಿ ವಸೈ (ಮುಂಬೈ0)ನಲ್ಲಿ ನಡೆದ ಒಂದು ರಾಷ್ಟ್ರ ಮಟ್ಟದ ಆರೋಗ್ಯ ಮೇಳದಲ್ಲಿ ಭಾಗವಹಿಸಿದೆ.

ಆಗಸ್ಟ್ 2019ರಲ್ಲಿ ಬಾಂಗ್ಲಾದೇಶದ ನಿಯೋಗ ಪಿಎಲ್ಐಎಂಗೆ ಭೇಟಿ ನೀಡಿತ್ತು.

ಆಯುಷ್ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವುದು

ಆಯುಷ್ ಪದ್ಧತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸಚಿವಾಲಯದ ಪ್ರಮುಖ ಕಡ್ಡಾಯ ಕರ್ತವ್ಯಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಸಾಧಿಸಿದ ಒಂದು ಪ್ರಮುಖ ಸಾಧನೆ ಎಂದರೆ 2019ರ ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನವನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಅಂತಾರಾಷ್ಟ್ರೀಯ ಯೋಗ ದಿನವನ್ನು ಜನಾಂದೋಲನವನ್ನಾಗಿ ಪರಿವರ್ತಿಸುವಲ್ಲಿ ಸಚಿವಾಲಯ ಯಶಸ್ವಿಯಾಗಿದೆ. ಅದಕ್ಕಾಗಿ 100ಕ್ಕೂ ಅಧಿಕ ಸಂಸ್ಥೆಗಳ ಜೊತೆ ಸೇರಿ ಸಹಭಾಗಿತ್ವದೊಂದಿಗೆ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. 5ನೇ ಅಂತಾರಾಷ್ಟ್ರೀಯ ಯೋಗ ದಿನ 2019ರ ವ್ಯಾಪ್ತಿ ಮತ್ತು ವಿಸ್ತಾರ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅತ್ಯಂತ ದೊಡ್ಡದಾಗಿತ್ತು. ಅದರ ಆಚರಣೆ ಕೇವಲ ಎಲ್ಲ ರಾಜ್ಯಗಳು ಮತ್ತು ಭಾರತದ ಜಿಲ್ಲೆಗಳಲ್ಲಿ ಮಾತ್ರವಲ್ಲ, 150 ವಿದೇಶಗಳಲ್ಲೂ ಆಚರಿಸಲಾಯಿತು. ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮ ಜಾರ್ಖಂಡ್ ನ ರಾಂಚಿ ನಗರದಲ್ಲಿ ನಡೆಯಿತು. ಅಲ್ಲಿ ಪ್ರಧಾನಮಂತ್ರಿಗಳು ಸುಮಾರು 30,000 ಯೋಗ ಸಾಧಕರ ಜೊತೆ ಯೋಗಾಭ್ಯಾಸ ಮಾಡಿದರು. ಪ್ಯಾರಿಸ್ ನ ಐಫೆಲ್ ಟವರ್, ಸಿಡ್ನಿಯ ಒಪೆರಾ ಹೌಸ್, ವಾಷಿಂಗ್ಟನ್ ನ ವಾಷಿಂಗ್ಟನ್ ಮಾನ್ಯುಮೆಂಟ್, ಬ್ರೆಸಿಲಿಯಾದ ಕೆಥೆಡ್ರಲ್ ಆಫ್ ಬ್ರೆಸಿಲಿಯಾ, ಚೈನಾದ ಸೋಲಿನ್  ಟೆಂಪಲ್, ಡೆಡ್ ಸಿ ಮತ್ತು ನೇಪಾಳದ ಮೌಂಟ್ ಎವರೆಸ್ಟ್ ಸೇರಿದಂತೆ ಜಗತ್ತಿನ ನಾನಾ ಆಯಕಟ್ಟಿನ ಜಾಗಗಳಲ್ಲಿ  ಯೋಗ ದಿನ ಕಾರ್ಯಕ್ರಮಗಳು ನಡೆದವು.

ಆಯುಷ್ ಆರೋಗ್ಯ ರಕ್ಷಣೆಯ ನಾನಾ ಆಯಾಮಗಳ ಉತ್ತೇಜನ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಚಿವಾಲಯ ಹಾಗೂ ಅದರ ಸ್ವಾಯತ್ತ ಸಂಸ್ಥೆಗಳು ಸುಮಾರು ನೂರು ವಿಚಾರಸಂಕಿರಣ ಹಾಗೂ ಕಾರ್ಯಾಗಾರಗಳ ಮೂಲಕ ದೇಶದ ನಾನಾ ಭಾಗಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿದವು. ಅಲ್ಲದೆ ಸಚಿವಾಲಯದ ಆಯುಷ್ ಸಂಸ್ಥೆಗಳಲ್ಲಿ ಸುಮಾರು 50 ರೋಗಿಗಳ ಶಿಕ್ಷಣ ಶಿಬಿರಗಳನ್ನು ನಡೆಸಲಾಯಿತು. ಅಂತೆಯೇ ಆಯುಷ್ ವಿಷಯದ ಕುರಿತು 10 ಪ್ರಮುಖ ಎಕ್ಸ್ ಪೊ ಅಥವಾ ಪ್ರದರ್ಶನಗಳು ನಡೆದವು.

ಆಯುಷ್ ಸಚಿವಾಲಯ ಮುಂಬೈನ ಅಮರ ಚಿತ್ರಕತಾ ಸಂಸ್ಥೆಯ ಸಹಯೋಗದಲ್ಲಿ ಹಾಸ್ಯ ಪುಸ್ತಕ (ಕಾಮಿಕ್ ಪುಸ್ತಕ) ಪ್ರೊಫೆಸರ್ ಆಯುಷ್ಮಾನ್ ಹೆಸರಿನಲ್ಲಿ ಬಿಡುಗಡೆ ಮಾಡಿತು. ಈ ಕೃತಿಯಲ್ಲಿ ಔಷಧೀಯ ಸಸ್ಯಗಳು ಮತ್ತು ಅದರ ಔಷಧೀಯ ಗುಣಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗುವುದು. ಇದರ ಉದ್ದೇಶ ಔಷಧೀಯ ಸಸ್ಯಗಳ ಬಗ್ಗೆ ಜಾಗೃತಿ ಮತ್ತು ಜ್ಞಾನ ಹೆಚ್ಚಿಸುವುದು, ನಾನಾ ಬಗೆಯ ಔಷಧೀಯ ಸಸ್ಯಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಕೈತೋಟಗಳಲ್ಲಿ ಬೆಳೆಯುವುದು, ಆಹಾರದಲ್ಲಿ ಬಳಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳನ್ನು ಉತ್ತೇಜಿಸುವುದು, ಸಾಮಾನ್ಯವಾಗಿ ಲಭ್ಯವಾಗುವ ಔಷಧೀಯ ಸಸ್ಯಗಳ ಉಪಯೋಗವನ್ನು ಜನಪ್ರಿಯಗೊಳಿಸುವುದು, ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸಿ ಅದನ್ನು ಮುಂದಿನ ತಲೆಮಾರಿಗೆ ನೀಡುವುದನ್ನು ಹಾಸ್ಯ ರೂಪದಲ್ಲಿ ಮತ್ತು ವಾಸ್ತವಿಕತೆಯೊಂದಿಗೆ ಕಟ್ಟಿಕೊಡಲಾಗಿದೆ.

ಗುಡುಚಿ ಕುರಿತಂತೆ ವಿಶೇಷ ಅಭಿಯಾನದ ಬಗ್ಗೆ “ಅಮೃತ ಫಾರ್ ಲೈಪ್” ಹೆಸರಿನಲ್ಲಿ 11 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಅದರಡಿ ರೋಗ ನಿರೋಧಕ ಶಕ್ತಿ ಸುಧಾರಣೆ ಮತ್ತು ಸೋಂಕಿನಿಂದ ದೇಹ ರಕ್ಷಣೆ ಮತ್ತಿತರ ಬಗ್ಗೆ ವಿಷಯ ಜನಪ್ರಿಯಗೊಳಿಸಲಾಯಿತು.

ಆಯುಷ್ ಪದ್ಧತಿಗಳ ಜಾಗತಿಕರಣ

 ಆಯುಷ್ ಪದ್ಧತಿಗಳನ್ನು ಜಾಗತಿಕರಣಗೊಳಿಸುವ ಪ್ರಯತ್ನಗಳು 2019ರಲ್ಲಿ ಗಮನಾರ್ಹ ಯಶಸ್ಸು ಸಾಧಿಸಿವೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯುಷ್ ಸಚಿವಾಲಯ ಮತ್ತು ಅದರ ಸಂಸ್ಥೆಗಳು ಹಾಗೂ ಅದರಡಿ ಕಾರ್ಯನಿರ್ವಹಿಸುವ ಮಂಡಳಿಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಿವೆ. ಈ ಒಪ್ಪಂದಗಳನ್ನು ಆಯುಷ್ ಪದ್ಧತಿಗಳ ನಾನಾ ಆಯಾಮಗಳು, ಶಿಕ್ಷಣ, ಸಂಶೋಧನೆ ಕುರಿತ ಜಂಟಿ ಪ್ರಯತ್ನಗಳನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ. ಭಾರತದೊಂದಿಗೆ ಉತ್ತಮ ರಾಜಕೀಯ ಮತ್ತು ಸಾಮಾಜಿಕ ಸಂಬಂಧಗಳನ್ನು ಸಮೀಕರಣಗಳನ್ನು (ಇಕ್ವೇಷನ್ಸ್) ಹೊಂದಿರುವ ಬಿಮ್ ಸ್ಟೆಕ್ ರಾಷ್ಟ್ರಗಳು ಭಾರತದಲ್ಲಿ ಆಯುರ್ವೇದ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಬಿಮ್ ಸ್ಟೆಕ್ ವಿಶ್ವವಿದ್ಯಾಲಯ ಸ್ಥಾಪಿಸಲು ಒಪ್ಪಿವೆ. ಆಯುಷ್ ಸಚಿವಾಲಯದ ಪರವಾಗಿ ಎಐಐಎ 2019ರ ಅಕ್ಟೋಬರ್ 22ರಂದು ಸಾಂಪ್ರದಾಯಿಕ ಮತ್ತು ಪೂರಕ ಔಷಧ ಕುರಿತಂತೆ ಮೆಕೋಂಗ್  ಗಂಗಾ ಕೋಆಪರೇಷನ್(ಎಂಜಿಸಿ) ಕಾರ್ಯಾಗಾರವನ್ನು ಆಯೋಜಿಸಿತ್ತು.

ಮತ್ತೊಂದು ಮಹತ್ವದ ಅಭಿವೃದ್ಧಿ ಎಂದರೆ ಭಾರತ ಮತ್ತು ಚೀನಾ 2019ರ ಆಗಸ್ಟ್ 12ರಂದು ಒಡಂಬಡಿಕೆಗೆ ಸಹಿ ಹಾಕುವ ಮೂಲಕ ವಿಶ್ವದ ಎರಡು ಅತಿದೊಡ್ಡ ಸಾಂಪ್ರದಾಯಿಕ ವೈದ್ಯಕೀಯ ಆಡಳಿತಗಳನ್ನು ಹೊಂದಿರುವ ಸಂಸ್ಥೆಗಳು ಒಟ್ಟಾಗಿ ಸೇರಿ ಎರಡೂ ದೇಶಗಳ ಜನತೆಗೆ ಅನುಕೂಲವಾಗುವ ಕ್ರಮ ಕೈಗೊಳ್ಳಲು ಮುಂದಾಗಿವೆ.

ಅಖಿಲ ಭಾರತ ಆಯುರ್ವೇದ ಸಂಸ್ಥೆ(ಎಐಐಎ) 2019ನೇ ಸಾಲಿನಲ್ಲಿ ಹಲವು ಒಪ್ಪಂದಗಳಿಗೆ ಸಹಿ ಹಾಕಿವೆ – ಅವುಗಳಲ್ಲಿ 2019ರ ಏಪ್ರಿಲ್ 18-20 ಬ್ರಿಟನ್ನಿನ ವೈದ್ಯಕೀಯ ಕಾಲೇಜು: ಅಮೆರಿಕದ ಸ್ಪೌಡಲಿಂಗ್ ರಿಹ್ಯಾಬಿಲಿಟೇಶನ್ ಆಸ್ಪತ್ರೆಯೊಂದಿಗೆ ಒಡಂಬಡಿಕೆ: 2019ರ ಅಕ್ಟೋಬರ್ 31ರಂದು ಆಯುರ್ವೇದ ಕ್ಷೇತ್ರದಲ್ಲಿ ಸಂಶೋಧನಾ ಸಹಭಾಗಿತ್ವಕ್ಕಾಗಿ ಜರ್ಮನಿಯ ಫ್ರಾಂಕ್ ಫರ್ಟ್ ಜೈವಿಕ ತಂತ್ರಜ್ಞಾನ ಅನ್ವೇಷಣಾ ಕೇಂದ್ರದೊಂದಿಗೆ ಸಹಿ: 2019ರ ನವೆಂಬರ್ 21ರಂದು ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ಯೂನಿವರ್ಸಿಟಿ(ಡಬ್ಲ್ಯೂಎಸ್ ಯು) ಜೊತೆ ಆಯುಷ್ ಸಚಿವಾಲಯದ ಒಪ್ಪಂದ.

ಆಯುಷ್ ವಲಯಕ್ಕೆ ಮಾಹಿತಿ ತಂತ್ರಜ್ಞಾನ ಸೇರ್ಪಡೆ

ಈ ವರ್ಷ ಸಚಿವಾಲಯ ಭವಿಷ್ಯ ಆಧಾರಿತ ಉಪಕ್ರಮಕ್ಕೆ ಒತ್ತು ನೀಡಿದ್ದು, ಅದರಡಿ ಆಯುಷ್ ವಲಯಕ್ಕೆ ಮಾಹಿತಿ ತಂತ್ರಜ್ಞಾನ ಸೇರ್ಪಡೆ ಪ್ರಮುಖವಾದುದು. ಅದಕ್ಕೆ ಆಯುಷ್ ಗ್ರಿಡ್ ಯೋಜನೆ ಎಂದು ಹೆಸರಿಡಲಾಗಿದ್ದು, ಅದರಡಿ ಈ ವಲಯಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಿಗೆ ಮಾಹಿತಿ ತಂತ್ರಜ್ಞಾನದ ಬೆಂಬಲ ಒದಗಿಸಲಾಗುವುದು. ಪ್ರಧಾನಮಂತ್ರಿಗಳು, ಸಚಿವಾಲಯದ ಆಯುಷ್ ಗ್ರಿಡ್ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಆಯುಷ್ ವಲಯದಲ್ಲಿ ಪರಿವರ್ತನೆಗೆ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಈ ವಲಯದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಗೆ ಸಚಿವಾಲಯ ಈ ವರ್ಷ ಹಲವು ಮಹತ್ವದ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿವೆ. ಅವುಗಳಲ್ಲಿ

      i.        ಹೊಸದಾಗಿ ಜಾರಿಗೊಳಿಸಿರುವ ಆಯುಷ್ – ಆರೋಗ್ಯ ಮಾಹಿತಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು, ಅದರಲ್ಲಿ ಕೇಂದ್ರೀಯ ಸಂಶೋಧನಾ ಮಂಡಳಿಗಳ ಎಲ್ಲ ಘಟಕಗಳ ವ್ಯಾಪ್ತಿಯನ್ನು ಸೇರಿಸಲಾಗಿದೆ.

     ii.        ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ಐಟಿ ಯೋಜನೆಗಳಿಗೆ ಸಮಗ್ರ ಬೆಂಬಲ ನೀಡುವ ಒಪ್ಪಂದಕ್ಕೆ ಸಹಿ ಹಾಕಲಾಯಿತು ಮತ್ತು ಅದರಡಿ ಅಹಮದಾಬಾದ್ ನ ಬಿಸಾಗ್ ಮತ್ತು ನವದೆಹಲಿಯ ಎನ್ಇಜಿಡಿ ಸಚಿವಾಲಯದ ಮಾಹಿತಿ ತಂತ್ರಜ್ಞಾನ ಯೋಜನೆಗಳಿಗೆ ಬೆಂಬಲ ನೀಡಲಾರಂಭಿಸಿವೆ.

    iii.        ಸಚಿವಾಲಯದ ಎಲ್ಲ ಚಟುವಟಿಕೆಗಳನ್ನು ವಿಸ್ತೃತವಾಗಿ ಮಾಹಿತಿಗಳನ್ನು ಒಳಗೊಳ್ಳುವ ಮೇಲ್ವಿಚಾರಣಾ ಡ್ಯಾಶ್ ಬೋರ್ಡ್ ಸ್ಥಾಪಿಸಲಾಗಿದೆ.

   iv.        ಅಂತಾರಾಷ್ಟ್ರೀಯ ಯೋಗ ದಿನ 2019 ಮತ್ತು ಫಾರ್ಮಕೋಪಿಯಾ ಆಯೋಗದ ಪೋರ್ಟಲ್ ಗಳನ್ನು ಬಿಡುಗಡೆಗೊಳಿಸಲಾಗಿದೆ.

    v.        ಆಯುರ್ವೇದ, ಸಿದ್ಧ ಹಾಗೂ ಯುನಾನಿ ವ್ಯವಸ್ಥೆಗಳ ಪರಿಭಾಷೆಗಳನ್ನು ಅಂತಿಮಗೊಳಿಸಲಾಗಿದ್ದು, ಭವಿಷ್ಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂ ಎಚ್ ಒ )ದ ಅಂತಾರಾಷ್ಟ್ರೀಯ ಕಾಯಿಲೆಗಳ ವರ್ಗೀಕರಣ (ಐಸಿಡಿ)ಯಲ್ಲಿ ಸೇರ್ಪಡೆಗೆ ಯತ್ನಿಸಲಾಗಿದೆ. ಇದರಿಂದಾಗಿ ಈ ಪದ್ಧತಿಗಳನ್ನು ಜಾಗತೀಕರಣಗೊಳಿಸಲು ಇನ್ನಷ್ಟು ಮಾರ್ಗಗಳು ತೆರೆದುಕೊಳ್ಳಲಿವೆ.

   vi.        ಯೋಗ ತರಬೇತಿಗೆ ಸಮೀಪದ ಕೇಂದ್ರಗಳನ್ನು ಹುಡುಕಲು ಸಾರ್ವಜನಿಕರಿಗೆ ನೆರವಾಗಲು ಯೋಗ ಲೊಕೇಟರ್ ಮೊಬೈಲ್ Appಅನ್ನು ಆರಂಭಿಸಲಾಗಿದೆ.

             

******


(Release ID: 1597333) Visitor Counter : 294