ಪ್ರಧಾನ ಮಂತ್ರಿಯವರ ಕಛೇರಿ

ಪೌರತ್ವ ತಿದ್ದುಪಡಿ ಕಾಯ್ದೆ 2019 ಕುರಿತಂತೆ ಪ್ರಧಾನಮಂತ್ರಿಯವರ ಮಹತ್ವದ ಸಂದೇಶ

Posted On: 16 DEC 2019 2:28PM by PIB Bengaluru

ಪೌರತ್ವ ತಿದ್ದುಪಡಿ ಕಾಯ್ದೆ 2019 ಕುರಿತಂತೆ ಪ್ರಧಾನಮಂತ್ರಿಯವರ ಮಹತ್ವದ ಸಂದೇಶ

 

ಪೌರತ್ವ ತಿದ್ದುಪಡಿ ಕಾಯ್ದೆ  ಭಾರತದ ಯಾವುದೇ ನಾಗರಿಕರಿಗೆ ಮತ್ತು ಯಾವುದೇ ಧರ್ಮಕ್ಕೆ ಪರಿಣಾಮ ಉಂಟುಮಾಡುವುದಿಲ್ಲ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಭರವಸೆ ನೀಡಿದ್ದಾರೆ. ಸರಣಿ ಟ್ವೀಟ್ ನಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ  ಕುರಿತಂತೆ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವುದು ದುರ್ದೈವ ಮತ್ತು ತೀವ್ರ ಯಾತನೆಮಯ ವಿಚಾರ.

ಚರ್ಚೆ, ಸಮಾಲೋಚನೆ ಮತ್ತು ಪ್ರತಿರೋಧಗಳು ಪ್ರಜಾಪ್ರಭುತ್ವದ ಅತ್ಯಗತ್ಯ ಭಾಗ ಆದರೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಮಾಡುವುದು ಮತ್ತು ಸಾಮಾನ್ಯ ಜನಜೀವನಕ್ಕೆ ತೊಂದರೆ ನೀಡುವುದು ನಮ್ಮ ಸಿದ್ಧಾಂತವಲ್ಲ ಎಂದು ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ  2019ನ್ನು ಸಂಸತ್ತಿನ ಉಭಯ ಸದನಗಳೂ ಅಗಾಧ ಬೆಂಬಲದೊಂದಿಗೆ ಅನುಮೋದಿಸಿವೆ. ದೊಡ್ಡ ಸಂಖ್ಯೆಯ ರಾಜಕೀಯ ಪಕ್ಷಗಳು ಮತ್ತು ಸಂಸತ್ ಸದಸ್ಯರು ಇದರ ಅನುಮೋದನೆಗೆ ಬೆಂಬಲ ನೀಡಿದ್ದಾರೆ. ಈ ಕಾಯ್ದೆ  ಭಾರತದ ಶತಮಾನಗಳಷ್ಟು ಹಳೆಯ ಸಮ್ಮತಿಯ ಸಂಸ್ಕೃತಿ, ಸೌಹಾರ್ದತೆ, ಸಹಾನುಭೂತಿ ಮತ್ತು ಭ್ರಾತೃತ್ವಕ್ಕೆ ಉದಾಹರಣೆಯಾಗಿದೆ.

ಸಿಎಎ ಭಾರತದ ಯಾವುದೇ ನಾಗರಿಕರ ಮೇಲೆ ಯಾವುದೇ ಧರ್ಮದ ಪರಿಣಾಮ ಬೀರುವುದಿಲ್ಲ ಎಂದು ನನ್ನ ಭಾರತದ ದೇಶವಾಸಿಗಳಿಗೆ ನಿಸ್ಸಂದಿಗ್ಧವಾಗಿ ಭರವಸೆ ನೀಡಲು ಇಚ್ಛಿಸುತ್ತೇನೆ. ಈ ಕಾಯ್ದೆ ಯ ಕುರಿತಂತೆ ಯಾವುದೇ ಭಾರತೀಯರು ಚಿಂತೆ ಮಾಡುವ ಅಗತ್ಯ ಇಲ್ಲ. ಈ ಕಾಯ್ದೆ ದೇಶದ ಹೊರಗೆ ಹಲವಾರು ವರ್ಷಗಳ ಕಿರುಕುಳವನ್ನು ಎದುರಿಸಿದವರಿಗೆ ಮಾತ್ರ, ಅವರಿಗೆ ಭಾರತವನ್ನು ಹೊರತುಪಡಿಸಿ ಹೋಗಲು ಬೇರೆ ಸ್ಥಳವಿಲ್ಲ.

ಪ್ರತಿಯೊಬ್ಬ ಭಾರತೀಯರ ಅದರಲ್ಲೂ ಬಡವರು, ದುರ್ಬಲರು ಮತ್ತು ಅಂಚಿನಲ್ಲಿರುವವರ ಸಬಲೀಕರಣಕ್ಕೆ ಮತ್ತು ದೇಶದ ಅಭಿವೃದ್ಧಿಗೆ ಒಗ್ಗೂಡಿ ಶ್ರಮಿಸುವುದು ಈ ಹೊತ್ತಿನ ಅಗತ್ಯವಾಗಿದೆ.

ನಾವು ಪಟ್ಟಭದ್ರಹಿತಾಸಕ್ತಿಯ ಗುಂಪುಗಳು ಅಶಾಂತಿ ಉಂಟು ಮಾಡಲು ಮತ್ತು ನಮ್ಮನ್ನು ನಡೆಸಲು ಅವಕಾಶ ನೀಡಬಾರದು.

ಇದು ಶಾಂತಿ, ಏಕತೆ ಮತ್ತು ಭ್ರಾತೃತ್ವವನ್ನು ಕಾಪಾಡುವ ಸಮಯವಾಗಿದೆ, ನಾನು ಪ್ರತಿಯೊಬ್ಬರಿಗೂ ಯಾವುದೇ ವದಂತಿಗಳಿಂದ, ಸುಳ್ಳು ಸುದ್ದಿಗಳಿಂದ ದೂರ ಇರುವಂತೆ ಮನವಿ ಮಾಡುತ್ತದೆ.

 

 

Narendra Modi

@narendramodi

Violent protests on the Citizenship Amendment Act are unfortunate and deeply distressing.
Debate, discussion and dissent are essential parts of democracy but, never has damage to public property and disturbance of normal life been a part of our ethos.

25.3K

2:03 PM - Dec 16, 2019

Twitter Ads info and privacy

11.1K people are talking about this

 

Narendra Modi

@narendramodi

The Citizenship Amendment Act, 2019 was passed by both Houses of Parliament with overwhelming support. Large number of political parties and MPs supported its passage. This Act illustrates India’s centuries old culture of acceptance, harmony, compassion and brotherhood.

13.1K

2:04 PM - Dec 16, 2019

Twitter Ads info and privacy

5,417 people are talking about this

 

Narendra Modi

@narendramodi

I want to unequivocally assure my fellow Indians that CAA does not affect any citizen of India of any religion. No Indian has anything to worry regarding this Act. This Act is only for those who have faced years of persecution outside and have no other place to go except India.

17.7K

2:04 PM - Dec 16, 2019

Twitter Ads info and privacy

8,468 people are talking about this

 

Narendra Modi

@narendramodi

The need of the hour is for all of us to work together for the development of India and the empowerment of every Indian, especially the poor, downtrodden and marginalised.
We cannot allow vested interest groups to divide us and create disturbance.

14.7K

2:05 PM - Dec 16, 2019

Twitter Ads info and privacy

6,090 people are talking about this

 

Narendra Modi

@narendramodi

This is the time to maintain peace, unity and brotherhood. It is my appeal to everyone to stay away from any sort of rumour mongering and falsehoods.

19.9K

2:12 PM - Dec 16, 2019

Twitter Ads info and privacy

8,561 people are talking about this

 

***


(Release ID: 1596590) Visitor Counter : 170