ಪ್ರಧಾನ ಮಂತ್ರಿಯವರ ಕಛೇರಿ
ಕಳೆದ ಆರು ತಿಂಗಳಲ್ಲಿ ಕೈಗೊಂಡ ನಿರ್ಧಾರಗಳು 130 ಕೋಟಿ ಭಾರತೀಯರ ಜೀವನವನ್ನು ಸಬಲೀಕರಣಗೊಳಿಸಿದೆ: ಪ್ರಧಾನ ಮಂತ್ರಿ
प्रविष्टि तिथि:
30 NOV 2019 9:00PM by PIB Bengaluru
ಕಳೆದ ಆರು ತಿಂಗಳಲ್ಲಿ ಕೈಗೊಂಡ ನಿರ್ಧಾರಗಳು 130 ಕೋಟಿ ಭಾರತೀಯರ ಜೀವನವನ್ನು ಸಬಲೀಕರಣಗೊಳಿಸಿದೆ: ಪ್ರಧಾನ ಮಂತ್ರಿ
ಕಳೆದ ಆರು ತಿಂಗಳಲ್ಲಿ ಕೈಗೊಂಡ ಹಲವಾರು ನಿರ್ಧಾರಗಳು 130 ಕೋಟಿ ಭಾರತೀಯರ ಬದುಕನ್ನು ಸಬಲೀಕರಣಗೊಳಿಸಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ’ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ “ ಎಂಬ ಧ್ಯೇಯದಿಂದ ಉತ್ತಜಿತರಾಗಿ, 130 ಕೋಟಿ ಭಾರತೀಯರ ಆಶೀರ್ವಾದದೊಂದಿಗೆ ಸರಕಾರವು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಮತ್ತು 130 ಕೋಟಿ ಭಾರತೀಯರ ಬದುಕನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಹೊಸ ಹುರುಪಿನಿಂದ ಕಾರ್ಯಾಚರಿಸುತ್ತಿದೆ ಎಂದರು.
ಕಳೆದ ಆರು ತಿಂಗಳಲ್ಲಿ, ಸರಕಾರವು ಅಭಿವೃದ್ಧಿಯನ್ನು ಉತ್ತೇಜಿಸುವ, ಸಾಮಾಜಿಕ ಸಶಕ್ತೀಕರಣವನ್ನು ತ್ವರಿತಗೊಳಿಸುವ ಮತ್ತು ಭಾರತದ ಏಕತೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಲವಾರು ನಿರ್ಧಾರಗಳನ್ನು ಕೈಗೊಂಡಿದೆ ಎಂದವರು ಹೇಳಿದ್ದಾರೆ. “ ಮುಂಬರುವ ದಿನಗಳಲ್ಲಿ ನಾವು ಸಮೃದ್ಧ ಮತ್ತು ಪ್ರಗತಿಶೀಲ ನವ ಭಾರತವನ್ನು ರೂಪಿಸುತ್ತೇವೆ” ಎಂದೂ ಅವರು ಹೇಳಿದ್ದಾರೆ.
’ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ “ ಎಂಬ ಧ್ಯೇಯದಿಂದ ಪ್ರೇರಣೆ ಪಡೆದು , ಮತ್ತು 130 ಕೋಟಿ ಭಾರತೀಯರ ಆಶೀರ್ವಾದದೊಂದಿಗೆ ಎನ್.ಡಿ.ಎ. ಸರಕಾರ, ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಮತ್ತು 130 ಕೋಟಿ ಭಾರತೀಯರನ್ನು ಸಶಕ್ತರನ್ನಾಗಿಸುವ ನಿಟ್ಟಿನಲ್ಲಿ ಹೊಸ ಉತ್ಸಾಹದಿಂದ ಕಾರ್ಯಪ್ರವೃತ್ತವಾಗಿದೆ” #6MonthsOfIndiaFirst
(रिलीज़ आईडी: 1594499)
आगंतुक पटल : 94