ಸಂಪುಟ

ಮಾದಕ ವಸ್ತು, ಸೈಕೋಟ್ರೋಪಿಕ್ ಮತ್ತು ರಾಸಾಯನಿಕ ವಸ್ತುಗಳ ಅಕ್ರಮಸಾಗಣೆ ಮತ್ತು ಕಳ್ಳಸಾಗಾಣಿಕೆ ತಡೆಗೆ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ತಿಳುವಳಿಕೆ ಒಪ್ಪಂದಗಳಿಗೆ ಸಂಪುಟದ ಅನುಮೋದನೆ

Posted On: 27 NOV 2019 11:18AM by PIB Bengaluru

ಮಾದಕ ವಸ್ತು, ಸೈಕೋಟ್ರೋಪಿಕ್ ಮತ್ತು ರಾಸಾಯನಿಕ ವಸ್ತುಗಳ ಅಕ್ರಮಸಾಗಣೆ ಮತ್ತು ಕಳ್ಳಸಾಗಾಣಿಕೆ ತಡೆಗೆ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ತಿಳುವಳಿಕೆ ಒಪ್ಪಂದಗಳಿಗೆ ಸಂಪುಟದ ಅನುಮೋದನೆ
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮಾದಕ ವಸ್ತು, ಸೈಕೋಟ್ರೋಪಿಕ್ ಮತ್ತು ರಾಸಾಯನಿಕ ವಸ್ತುಗಳ ಅಕ್ರಮ ಸಾಗಣೆ ಮತ್ತು ಕಳ್ಳಸಾಗಾಣಿಕೆ ತಡೆಗೆ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಒಪ್ಪಂದಗಳಿಗೆ ಪೂರ್ವಾನ್ವಯ ಅನುಮೋದನೆ ನೀಡಿದೆ.

ಪ್ರಯೋಜನಗಳು

• ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಸಮಾವೇಶಗಳು ವ್ಯಾಖ್ಯಾನಿಸಿರುವ ಮಾದಕ ದ್ರವ್ಯಗಳು, ಸೈಕೋಟ್ರೋಪಿಕ್ ವಸ್ತುಗಳು ಮತ್ತು ರಾಸಾಯನಿಕ ಪೂರ್ವಗಾಮಿಗಳ ಅಕ್ರಮ ಸಾಗಣೆ ಮತ್ತು ಕಳ್ಳಸಾಗಾಣಿಕೆ ವಿರುದ್ಧದ ಹೋರಾಟಕ್ಕೆ ಅನುಗುಣವಾಗಿರುವ ಒಪ್ಪಂದವು ಉಭಯ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸುತ್ತದೆ.

• ತಿಳುವಳಿಕೆ ಒಪ್ಪಂದದಡಿಯಲ್ಲಿ, ಮಾದಕವಸ್ತು ಸಂಬಂಧಿತ ಆರೋಪದ ಮೇಲೆ ಬಂಧಿಸಲಾದವರ ಮಾಹಿತಿಯ ವಿನಿಮಯ ಮತ್ತು ಉತ್ಪಾದಕರು, ಕಳ್ಳಸಾಗಾಣಿಕೆದಾರರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರ ವಿಧಾನಗಳು, ಗುರುತುಗಳು ಮತ್ತು ಅನುಮಾನಾಸ್ಪದ ಚಟುವಟಿಕೆಗಳು, ಎನ್ಡಿಪಿಎಸ್ ಮತ್ತು ಪೂರ್ವಗಾಮಿ ರಾಸಾಯನಿಕಗಳ ಕಳ್ಳಸಾಗಣೆಯ ವಿವರಗಳು ಮತ್ತು ಕಳ್ಳಸಾಗಣೆದಾರರ ಹಣಕಾಸಿನ ವಿವರಗಳ ವಿನಿಮಯಕ್ಕೆ ಅವಕಾಶವಿದೆ.

• ತಿಳುವಳಿಕೆ ಒಪ್ಪಂದದಡಿಯಲ್ಲಿ, ಅಕ್ರಮ ಕಳ್ಳಸಾಗಣೆ ಅಥವಾ ಮಾದಕ ವಸ್ತುಗಳು, ಸೈಕೋಟ್ರೋಪಿಕ್ ವಸ್ತುಗಳು ಮತ್ತು ರಾಸಾಯನಿಕ ಪೂರ್ವಗಾಮಿಗಳ ಕಳ್ಳಸಾಗಣೆಯಲ್ಲಿ ಇನ್ನೊಂದು ದೇಶದ ಬಂಧಿತ ನಾಗರಿಕನ ವಿವರಗಳನ್ನುಪ್ರಕಟಿಸಲು ಮತ್ತು ಬಂಧಿತ ವ್ಯಕ್ತಿಗೆ ರಾಯಭಾರ ಕಚೇರಿಯ ಲಭ್ಯತೆಯ ಬಗ್ಗೆ ತಿಳಿಸಲು ಅವಕಾಶವಿದೆ.

• ತಮ್ಮ ಭೂಪ್ರದೇಶದೊಳಗೆ ವಶಪಡಿಸಿಕೊಂಡ ಮಾದಕವಸ್ತು, ಸೈಕೋಟ್ರೋಪಿಕ್ ವಸ್ತುಗಳು ಮತ್ತು ರಾಸಾಯನಿಕ ಪೂರ್ವಭಾವಿಗಳ ರಾಸಾಯನಿಕ ವರದಿಗಳು, ವಿಶ್ಲೇಷಣೆಗಳ ವಿನಿಮಯ ಮತ್ತು ಮಾದಕ ವಸ್ತುಗಳು, ಸೈಕೋಟ್ರೋಪಿಕ್ ವಸ್ತುಗಳು ಮತ್ತು ರಾಸಾಯನಿಕಗಳ ಅಕ್ರಮ ಪ್ರಯೋಗಾಲಯಗಳು ಮತ್ತು ಅವುಗಳ ತಾಂತ್ರಿಕ ವಿಶೇಷಣಗಳ ಬಗ್ಗೆ ಮಾಹಿತಿ ವಿನಿಮಯಕ್ಕೆ ತಿಳುವಳಿಕೆ ಒಪ್ಪಂದ ಅವಕಾಶ ನೀಡುತ್ತದೆ.

ಹಿನ್ನೆಲೆ

ಅಕ್ರಮ ಮಾದಕವಸ್ತು ಕಳ್ಳಸಾಗಣೆ ಜಾಗತಿಕ ಅಕ್ರಮ ವ್ಯಾಪಾರವಾಗಿದೆ. ವಿವಿಧ ಅನುಕೂಲಕರ ಮಾರ್ಗಗಳ ಮೂಲಕ ವಿಶೇಷವಾಗಿ ಅಫ್ಘಾನಿಸ್ತಾನದ ಮೂಲಕ ಮಾದಕ ವಸ್ತುಗಳ ಬೃಹತ್ ಉತ್ಪಾದನೆ ಮತ್ತು ಪ್ರಸರಣವು ಯುವಜನರಲ್ಲಿ ಹೆಚ್ಚಿನ ಮಾದಕ ವಸ್ತುಗಳ ಬಳಕೆಗೆ ದಾರಿ ಮಾಡಿಕೊಡುತ್ತಿದೆ. ಇದರಿಂದಾಗಿ ಸಾರ್ವಜನಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಸಮಾಜದಲ್ಲಿ ಅಪರಾಧೀಕರಣ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮಾದಕವಸ್ತು ಕಳ್ಳಸಾಗಣೆ ಪ್ರಪಂಚದಾದ್ಯಂತದ ವಿವಿಧ ಪ್ರದೇಶಗಳಲ್ಲಿ ಉಗ್ರಗಾಮಿ ಮತ್ತು ಭಯೋತ್ಪಾದನೆಗೆ ಹಣವನ್ನು ಒದಗಿಸಿದೆ. ಅಕ್ರಮ ಮಾದಕವಸ್ತು ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಾರ್ಕೊ-ಭಯೋತ್ಪಾದಕರು ಮತ್ತು ಅಂತರರಾಷ್ಟ್ರೀಯ ಅಪರಾಧ ಸಂಘಟನೆಗಳು ಈಗ ಅನೇಕ ರಾಷ್ಟ್ರಗಳ ಭದ್ರತೆಗೆ ಅಪಾಯ ತಂದೊಡ್ಡಿವೆ.

 

***



(Release ID: 1593737) Visitor Counter : 84