ಸಂಪುಟ
ರಾಜ್ಯ ಸಭೆಯಿಂದ ಹಿಂಪಡೆದ ನಂತರ ಲೋಕ ಸಭೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ ಮಸೂದೆ, 2019 ಪರಿಚಯಿಸಲು ಸಂಪುಟ ಸಭೆ ಅನುಮೋದನೆ
प्रविष्टि तिथि:
20 NOV 2019 10:36PM by PIB Bengaluru
ರಾಜ್ಯ ಸಭೆಯಿಂದ ಹಿಂಪಡೆದ ನಂತರ ಲೋಕ ಸಭೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ ಮಸೂದೆ, 2019 ಪರಿಚಯಿಸಲು ಸಂಪುಟ ಸಭೆ ಅನುಮೋದನೆ
2019 ರ ಫೆಬ್ರುವರಿ 12 ರಂದು ರಾಜ್ಯ ಸಭೆಯಲ್ಲಿ ಮಂಡಿಸಲಾದ ಅಂತಾರಾಷ್ಟ್ರೀಯ ಆರ್ಥಿಕ ಸೇವಾಕೇಂದ್ರಗಳ ಪ್ರಾಧೀಕಾರ ಮಸೂದೆ 2019 ಅನ್ನು ಹಿಂತೆಗೆದುಕೊಳ್ಳಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಮತ್ತು ರಾಜ್ಯ ಸಭೆಯಲ್ಲಿ ಇದು ಇನ್ನೂ ಬಾಕಿ ಇದೆ. ಸಂಸತ್ತಿನ ನಂತರದ ಅಧಿವೇಶನದಲ್ಲಿ ಲೋಕ ಸಭೆಯಲ್ಲಿ ಅಂತಾರಾಷ್ಟ್ರೀಯ ಆರ್ಥಿಕ ಸೇವಾಕೇಂದ್ರಗಳ ಪ್ರಾಧೀಕಾರ ಮಸೂದೆ 2019 ಅನ್ನು ಪರಿಚಯಿಸಲಾಗುತ್ತಿದೆ.
ಲಾಭಗಳು
ಪ್ರಸ್ತುತ ಐ ಎಫ್ ಎಸ್ ಸಿ ಯಲ್ಲಿನ ಬ್ಯಾಂಕಿಂಗ್, ಬಂಡವಾಳ ಮಾರುಕಟ್ಟೆಗಳು ಮತ್ತು ವಿಮಾ ಕ್ಷೇತ್ರಗಳನ್ನು ಆರ್ ಬಿ ಐ, ಸೆಬಿ ಮತ್ತು ಐ ಆರ್ ಡಿ ಎ ಐ ನಂತಹ ನಿಯಂತ್ರಕರು ನಿಯಂತ್ರಿಸುತ್ತಿದ್ದಾರೆ. ಐ ಎಫ್ ಎಸ್ ಸಿ ಗಳಲ್ಲಿನ ಶಕ್ತಿಯುತ ಸ್ವರೂಪವು ಉನ್ನತ ಮಟ್ಟದ ಅಂತರ್ ನಿಯಂತ್ರಕ ಸಮನ್ವಯತೆಯನ್ನು ಕಡ್ಡಾಯಪಡಿಸುತ್ತದೆ. ಐ ಎಫ್ ಎಸ್ ಸಿ ಗಳಲ್ಲಿನ ಹಣಕಾಸು ಚಟುವಟಿಕೆಗಳನ್ನು ನಿಯಂತ್ರಿಸಲು ಅಸ್ಥಿತ್ವದಲ್ಲಿರುವ ನಿಯಮಗಳಲ್ಲಿ ಸ್ಪಷ್ಠೀಕರಣ ಮತ್ತು ಕಾಲ ಕಾಲಕ್ಕೆ ತಿದ್ದುಪಡಿಗಳ ಅಗತ್ಯವೂ ಇರುತ್ತದೆ.
ಹಣಕಾಸು ಸೇವೆಗಳು ಮತ್ತು ಐ ಎಫ್ ಎಸ್ ಸಿ ಗಳಲ್ಲಿನ ಉತ್ಪನ್ನಗಳ ಅಭಿವೃದ್ಧಿಗೆ ಕೇಂದ್ರೀಕೃತ ಮತ್ತು ಸಮರ್ಪಿತ ನಿಯಂತ್ರಿರ ಮಧ್ಯಸ್ಥಿಕೆಯ ಅವಶ್ಯಕತೆ ಇರುತ್ತದೆ. ಆದ್ದರಿಂದ, ಹಣಕಾಸು ಮಾರುಕಟ್ಟೆಯಲ್ಲಿ ಭಾಗವಹಿಸುವವರಿಗೆ ವಿಶ್ವದರ್ಜೆಯ ನಿಯಮಾವಳಿಯ ವಾತಾವರಣವನ್ನು ಒದಗಿಸಲು, ಭಾರತದಲ್ಲಿ ಐ ಎಫ್ ಎಸ್ ಸಿ ಗಳಿಗೆ ಏಕೀಕೃತ ಹಣಕಾಸು ನಿಯಂತ್ರಕದ ಅವಶ್ಯಕತೆಯಿದೆ.
ಜೊತೆಗೆ, ವ್ಯಾಪಾರ ಸರಳೀಕರಣ ದೃಷ್ಠಿಕೋಣದಿಂದಲೂ ಇದು ಅವಶ್ಯಕವಾಗಿದೆ. ಜಾಗತಿಕ ಅತ್ಯುತ್ತಮ ಅಭ್ಯಾಸಗಳಿಗೆ ಸರಿದೂಗುವಂತೆ ಭಾರತದಲ್ಲಿ ಐ ಎಫ್ ಎಸ್ ಸಿ ಗಳ ಮತ್ತಷ್ಟು ಅಭಿವೃದ್ಧಿಗೆ ಏಕೀಕೃತ ಪ್ರಾಧಿಕಾರವು ಅಗತ್ಯವಾದ ಉತ್ತೇಜನವನ್ನು ನೀಡುತ್ತದೆ.
ಹಿನ್ನೆಲೆ
ಅಂತಾರಾಷ್ಟ್ರೀಯ ಆರ್ಥಿಕ ಸೇವೆಗಳ ಕೇಂದ್ರಗಳ ಪ್ರಾಧಿಕಾರ ಮಸೂದೆ 2019 ನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ, ಎಲ್ಲಾ ಹಣಕಾಸು ಸೇವೆಗಳನ್ನು ನಿಯಂತ್ರಿಸುವ ಕೀಕೃತ ಪ್ರಾಧಿಕಾರವನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ 2019ರ ಫೆಬ್ರುವರಿ 6 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ನಂತರ, 2019ರ ಫೆಬ್ರುವರಿ 12 ರಂದು, ಅಂದಿನ ಮಾನ್ಯ ರಾಜ್ಯ ಸಚಿವರು (ಹಣಕಾಸು) ಅಂತಾರಾಷ್ಟ್ರೀಯ ಆರ್ಥಿಕ ಸೇವೆಗಳ ಕೇಂದ್ರಗಳ ಪ್ರಾಧಿಕಾರ ಮಸೂದೆ 2019 ನ್ನು ರಾಜ್ಯ ಸಭೆಯಲ್ಲಿ ಮಂಡಿಸಿದರು.
ಸಂವಿಧಾನದ 117(1) ನೇ ವಿಧಿಯ ಹಣಕಾಸು ಮಸೂದೆ ಇದಾಗಿದೆಯಂದು ಲೋಕಸಭಾ ಸಚಿವಾಲಯ ಇದೀಗ ತಿಳಿಸಿದೆ ಮತ್ತು ಇದನ್ನು ಸಂಸತ್ತಿನ 117(1) ಮತ್ತು 274(1) ವಿಧಿಯ ಅನುಸಾರ ರಾಷ್ಟ್ರಪತಿಗಳ ಶಿಫಾರಸ್ಸಿನ ಮೇರೆಗೆ ಲೋಕಸಭೆಯಲ್ಲಿ ಮಂಡಿಸ ಬೇಕಾಗುವುದು
*******
(रिलीज़ आईडी: 1593067)
आगंतुक पटल : 388