ಪ್ರಧಾನ ಮಂತ್ರಿಯವರ ಕಛೇರಿ

ಆಸ್ಟ್ರೇಲಿಯಾ ಮಾಜಿ ಪ್ರಧಾನ ಮಂತ್ರಿ ಶ್ರೀ ಟೋನಿ ಆಬ್ಬೋಟ್ ಜೊತೆ ಪ್ರಧಾನ ಮಂತ್ರಿ ಮಾತುಕತೆ

Posted On: 20 NOV 2019 9:34PM by PIB Bengaluru

ಆಸ್ಟ್ರೇಲಿಯಾ ಮಾಜಿ ಪ್ರಧಾನ ಮಂತ್ರಿ ಶ್ರೀ ಟೋನಿ ಆಬ್ಬೋಟ್ ಜೊತೆ ಪ್ರಧಾನ ಮಂತ್ರಿ ಮಾತುಕತೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನ ಮಂತ್ರಿ ಶ್ರೀ ಟೋನಿ ಅಬ್ಬೋಟ್ ಅವರನ್ನು ಭೇಟಿಯಾದರು.

ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವ ಹಾನಿ ಮತ್ತು ಆಸ್ತಿ ಹಾನಿ ಆಗಿರುವುದಕ್ಕೆ ಪ್ರಧಾನ ಮಂತ್ರಿ ಅವರು ತಮ್ಮ ಸಂತಾಪವನ್ನು ಸೂಚಿಸಿದರು.

ಶ್ರೀ ಟೋನಿ ಅಬ್ಬೋಟ್ ಅವರು ಗುರು ನಾನಕ್ ದೇವ್ ಜೀ ಅವರ  550 ನೇ ಜನ್ಮ ವರ್ಷವಾದ ಪ್ರಕಾಶ ಪರ್ವ ಸಂದರ್ಭದಲ್ಲಿ ಸುವರ್ಣ ಮಂದಿರ ಸಹಿತ  ಭಾರತ ಭೇಟಿಗೆ ಆಗಮಿಸಿರುವುದಕ್ಕೆ  ನೀಡಿರುವುದಕ್ಕೆ ಪ್ರಧಾನ ಮಂತ್ರಿ ಅವರು ಹರ್ಷ ವ್ಯಕ್ತಪಡಿಸಿದರು.

2014 ರ ನವೆಂಬರ್ ತಿಂಗಳಲ್ಲಿ ಬ್ರಿಸ್ಬೇನ್ ನಲ್ಲಿ ಏರ್ಪಟ್ಟ ಜಿ-20 ಶೃಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದನ್ನು ಪ್ರೀತಿಯಿಂದ ಸ್ಮರಿಸಿಕೊಂಡ ಪ್ರಧಾನ ಮಂತ್ರಿ ಅವರು ಕ್ಯಾನ್ ಬೆರಾ, ಸಿಡ್ನಿ ಮತ್ತು ಮೆಲ್ಬೋರ್ನ್ ಗಳಲ್ಲಿ ಏರ್ಪಟ್ಟ ಫಲಪ್ರದ ದ್ವಿಪಕ್ಷೀಯ ಮಾತುಕತೆಗಳನ್ನು ಹಾಗು ಆಸ್ಟ್ರೇಲಿಯಾ ಸಂಸತ್ತಿನ ಜಂಟಿ ಅಧಿವೇಶನವನ್ನುದೇಶಿಸಿ ಭಾಷಣ ಮಾಡಿದ್ದನ್ನೂ ನೆನೆಪಿಸಿಕೊಂಡರು.

ಭಾರತ-ಆಸ್ಟ್ರೇಲಿಯಾ ಬಾಂಧವ್ಯ ವರ್ಧನೆಯಲ್ಲಿ ಶ್ರೀ ಟೋನಿ ಅಬ್ಬೋಟ್ ಅವರು ವಹಿಸಿದ ಪಾತ್ರವನ್ನೂ ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು.  



(Release ID: 1593046) Visitor Counter : 72