ಪ್ರಧಾನ ಮಂತ್ರಿಯವರ ಕಛೇರಿ

11ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಚೀನಾ ಪ್ರಜಾ ಗಣರಾಜ್ಯದ ಅಧ್ಯಕ್ಷ ಶ್ರೀ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 14 NOV 2019 5:24AM by PIB Bengaluru

11ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಚೀನಾ ಪ್ರಜಾ ಗಣರಾಜ್ಯದ ಅಧ್ಯಕ್ಷ ಶ್ರೀ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ನವೆಂಬರ್ 13ರಂದು ಬ್ರೆಸಿಲಿಯಾದಲ್ಲಿ 11ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಚೈನಾ ಪ್ರಜಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು, 2ನೇ ಅನೌಪಚಾರಿಕ ಶೃಂಗಸಭೆಯ ವೇಳೆ ಚೆನ್ನೈನಲ್ಲಿ ನೀಡಿದ ಆತಿಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಭಾರತದ ಜನರು ಮತ್ತು ಪ್ರಧಾನಮಂತ್ರಿ ಮೋದಿ ಅವರು ನೀಡಿದ ಆ ಸ್ವಾಗತವನ್ನು ತಾವು ಮರೆಯುವುದಿಲ್ಲ ಎಂದು ತಿಳಿಸಿದರು. 2020ರಲ್ಲಿ ಚೈನಾದಲ್ಲಿ ನಡೆಯಲಿರುವ 3ನೇ ಅನೌಪಚಾರಿಕ ಶೃಂಗಸಭೆಗೆ ಆಗಮಿಸುವಂತೆ ಪ್ರಧಾನಮಂತ್ರಿಯವರಿಗೆ ಅವರು ಆಹ್ವಾನ ನೀಡಿದರು. ಇದರ ದಿನಾಂಕ ಮತ್ತು ಸ್ಥಳವನ್ನು ರಾಜತಾಂತ್ರಿಕ ಮಾರ್ಗದಲ್ಲಿ ನಿರ್ಧರಿಸಲಾಗುವುದು.

ಹೂಡಿಕೆ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಆಪ್ತ ಮಾತುಕತೆಯನ್ನು ನಿರ್ವಹಿಸುವ ಮಹತ್ವವನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. ಅಧ್ಯಕ್ಷ ಕ್ಸಿ ಅವರು ಇತ್ತೀಚೆಗಷ್ಟೇ ಶಾಂಘೈನಲ್ಲಿ ಮುಕ್ತಾಯಗೊಂಡ ಚೈನಾ ಆಮದು ಮತ್ತು ರಫ್ತು ಎಕ್ಸ್ ಪೋನಲ್ಲಿ ಭಾರತದ ಗಣನೀಯ ಪಾಲ್ಗೊಳ್ಳುವಿಕೆಗೆ ಧನ್ಯವಾದ ಅರ್ಪಿಸಿದರು. ಇಬ್ಬರೂ ನಾಯಕರು ಹತ್ತಿರದ ದಿನಾಂಕದಲ್ಲಿ ಹೊಸ ಉನ್ನತ ಮಟ್ಟದ ವ್ಯವಸ್ಥೆ ಕುರಿತ ವಾಣಿಜ್ಯ ಮತ್ತು ಆರ್ಥಿಕತೆ ಸಭೆ ನಡೆಯಬೇಕೆಂಬುದಕ್ಕೆ ಸಮ್ಮತಿ ಸೂಚಿಸಿದರು.

ನಾಯಕರು ಎರಡೂ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯಾದ 70ನೇ ವಾರ್ಷಿಕೋತ್ಸವವನ್ನು ಮುಂದಿನ ವರ್ಷ ಆಚರಿಸುವ ಕುರಿತ ಸಿದ್ಧತೆಗಳನ್ನು ಪರಾಮರ್ಶಿಸಿದರು. ಇದು ಜನರೊಂದಿಗಿನ ಬಾಂಧವ್ಯವನ್ನು ಹೆಚ್ಚಿಸಲಿದೆ ಎಂಬುದನ್ನು ಅವರು ಒಪ್ಪಿಕೊಂಡರು.

ವಿಶೇಷ ಪ್ರತಿನಿಧಿಗಳು ಗಡಿ ಪ್ರಶ್ನೆಗಳಿಗೆ ಸಂಬಂಧಿಸಿದ ವಿಚಾರಗಳ ಕುರಿತಂತೆ ಮತ್ತೊಂದು ಸಭೆಯನ್ನು ನಡೆಸಲಿದ್ದಾರೆ ಎಂಬುದನ್ನು ಪ್ರಸ್ತಾಪಿಸಿದ ಇಬ್ಬರೂ ನಾಯಕರು, ಗಡಿ ಪ್ರದೇಶಗಳಲ್ಲಿ ಆಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಮಹತ್ವವನ್ನೂ ಪುನರುಚ್ಚರಿಸಿದರು.

ಡಬ್ಲ್ಯುಟಿಓ, ಬ್ರಿಕ್ಸ್ ಮತ್ತು ಆರ್.ಸಿ.ಇ.ಪಿ. ಸೇರಿದಂತೆ ಬಹುಪಕ್ಷೀಯ ವಿಚಾರಗಳ ಬಗ್ಗೆಯೂ ಇಬ್ಬರೂ ನಾಯಕರು ತಮ್ಮ ಅಭಿಪ್ರಾಯ ವಿನಿಮಯ ಮಾಡಿಕೊಂಡರು.

 

***



(Release ID: 1592720) Visitor Counter : 91