ಪ್ರಧಾನ ಮಂತ್ರಿಯವರ ಕಛೇರಿ

ಮುಂದಿನ ಶೃಂಗಸಭೆಯ ಹೊತ್ತಿಗೆ 500 ಶತಕೋಟಿ ಅಮೆರಿಕನ್ ಡಾಲರ್ ಅಂತರ ಬ್ರಿಕ್ಸ್ ವಾಣಿಜ್ಯ ಗುರಿ ಸಾಧನೆಗೆ ಮಾರ್ಗ ನಕ್ಷೆ ರೂಪಿಸಿದ ಬ್ರಿಕ್ಸ್ ವಾಣಿಜ್ಯ ಮಂಡಳಿ: ಪ್ರಧಾನಮಂತ್ರಿ

Posted On: 14 NOV 2019 10:23PM by PIB Bengaluru

ಮುಂದಿನ ಶೃಂಗಸಭೆಯ ಹೊತ್ತಿಗೆ 500 ಶತಕೋಟಿ ಅಮೆರಿಕನ್ ಡಾಲರ್ ಅಂತರ ಬ್ರಿಕ್ಸ್ ವಾಣಿಜ್ಯ ಗುರಿ ಸಾಧನೆಗೆ ಮಾರ್ಗ ನಕ್ಷೆ ರೂಪಿಸಿದ ಬ್ರಿಕ್ಸ್ ವಾಣಿಜ್ಯ ಮಂಡಳಿ: ಪ್ರಧಾನಮಂತ್ರಿ

ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯ ಉಪಕ್ರಮ ಮೈತ್ರಿಯಲ್ಲಿ ಸೇರುವಂತೆ ಬ್ರಿಕ್ಸ್ ರಾಷ್ಟ್ರಗಳು ಮತ್ತು ಎನ್.ಡಿ.ಬಿ.ಗೆ ಪ್ರಧಾನಮಂತ್ರಿ ಮನವಿ, ನವ ಅಭಿವೃದ್ಧಿ ಬ್ಯಾಂಕ್ ಮತ್ತು ಬ್ರಿಕ್ಸ್ ವಾಣಿಜ್ಯ ಮಂಡಳಿ ನಾಯಕರ ಮಾತುಕತೆಯಲ್ಲಿ ಭಾಗಿಯಾದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಿಕ್ಸ್ ನ ಇತರ ರಾಷ್ಟ್ರಗಳ ಮುಖ್ಯಸ್ಥರುಗಳೊಂದಿಗೆ ಬ್ರಿಕ್ಸ್ ವಾಣಿಜ್ಯ ಮಂಡಳಿ ಮತ್ತು ನವ ಅಭಿವೃದ್ಧಿ ಬ್ಯಾಂಕ್ ಮಾತುಕತೆಯಲ್ಲಿ ಭಾಗಿಯಾಗಿದ್ದರು.
ಬ್ರಿಕ್ಸ್ ವಾಣಿಜ್ಯ ಮಂಡಳಿ ಮುಂದಿನ ಶೃಂಗಸಭೆಯ ಹೊತ್ತಿಗೆ 500 ಶತಕೋಟಿ ಅಮೆರಿಕನ್ ಡಾಲರ್ ಅಂತರ ಬ್ರಿಕ್ಸ್ ವಾಣಿಜ್ಯ ಗುರಿ ಸಾಧನೆಗಾಗಿ ಮಾರ್ಗನಕ್ಷೆ ರೂಪಿಸಿದೆ ಮತ್ತು ಬ್ರಿಕ್ಸ್ ರಾಷ್ಟ್ರಗಳ ನಡುವೆ ಆರ್ಥಿಕ ಪೂರಕಗಳನ್ನು ಗುರುತಿಸಿದ್ದು ಇದು ಈ ಪ್ರಯತ್ನದಲ್ಲಿ ಮಹತ್ವದ್ದಾಗಿದೆ ಎಂದು ಹೇಳಿದರು. ನ್ಯೂ ಅಭಿವೃದ್ಧಿ ಬ್ಯಾಂಕ್ ಮತ್ತು ಬ್ರಿಕ್ಸ್ ವಾಣಿಜ್ಯ ಮಂಡಳಿಯ ನಡುವೆ ಪಾಲುದಾರಿಕೆ ಒಪ್ಪಂದ ಎರಡೂ ಸಂಸ್ಥೆಗಳಿಗೆ ಉಪಯುಕ್ತವಾಗಿದೆ ಎಂದೂ ಅವರು ಹೇಳಿದರು.
ಪ್ರಧಾನಮಂತ್ರಿಯವರು, ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯ ಉಕ್ರಮದ ಮೈತ್ರಿಯಲ್ಲಿ ಸೇರ್ಪಡೆಯಾಗುವಂತೆ ಬ್ರಿಕ್ಸ್ ರಾಷ್ಟ್ರಗಳು ಮತ್ತು ಎನ್.ಡಿ.ಬಿ.ಗೆ ಮನವಿ ಮಾಡಿದರು. ಎನ್.ಬಿ.ಡಿ.ಯ ಪ್ರಾದೇಶಿಕ ಕಚೇರಿಯನ್ನು ಭಾರತದಲ್ಲಿ ಸ್ಥಾಪಿಸುವ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಸಹ ಮನವಿ ಮಾಡಿದರು. ಇದು ಆದ್ಯತೆಯ ವಲಯದಲ್ಲಿನ ಯೋಜನೆಗಳಿಗೆ ಚೈತನ್ಯ ನೀಡಲಿದೆ ಎಂದೂ ತಿಳಿಸಿದರು.
ಪ್ರಧಾನಮಂತ್ರಿಯವರು ನಮ್ಮ ಕನಸು ಬ್ರಿಕ್ಸ್ ಆರ್ಥಿಕ ಸಹಕಾರವನ್ನು ಬಲಪಡಿಸುವುದಾಗಿದೆ, ಇದು ಬ್ರಿಕ್ಸ್ ವಾಣಿಜ್ಯ ಮಂಡಳಿ ಮತ್ತು ನವ ಅಭಿವೃದ್ಧಿ ಬ್ಯಾಂಕ್ ಸಹಕಾರದಿಂದ ಮಾತ್ರವೇ ಸಾಕಾರಗೊಳ್ಳಲಿದೆ ಎಂದು ನಿರ್ಣಯಿಸಿದರು.

 

***



(Release ID: 1592718) Visitor Counter : 85