ಪ್ರಧಾನ ಮಂತ್ರಿಯವರ ಕಛೇರಿ

ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಹೊರತಾಗಿಯೂ, ಬ್ರಿಕ್ಸ್ ದೇಶಗಳು ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಿವೆ, ಲಕ್ಷಾಂತರ ಜನರನ್ನು ಬಡತನದಿಂದ ಮುಕ್ತಗೊಳಿಸಿವೆ: ಪ್ರಧಾನಮಂತ್ರಿ

Posted On: 14 NOV 2019 4:11AM by PIB Bengaluru

ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಹೊರತಾಗಿಯೂ, ಬ್ರಿಕ್ಸ್ ದೇಶಗಳು ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಿವೆ, ಲಕ್ಷಾಂತರ ಜನರನ್ನು ಬಡತನದಿಂದ ಮುಕ್ತಗೊಳಿಸಿವೆ: ಪ್ರಧಾನಮಂತ್ರಿ



ಅಂತರ್-ಬ್ರಿಕ್ಸ್ ವ್ಯಾಪಾರ ಮತ್ತು ಹೂಡಿಕೆ ಗುರಿಗಳು ಹೆಚ್ಚು ಮಹತ್ವಾಕಾಂಕ್ಷೆಯಾಗಿರಬೇಕು: ಪ್ರಧಾನಿ

ರಾಜಕೀಯ ಸ್ಥಿರತೆ, ನಿರ್ವಹಿಸಬಹುದಾದ ನೀತಿ ಮತ್ತು ವ್ಯಾಪಾರ ಸ್ನೇಹಿ ಸುಧಾರಣೆಗಳಿಂದಾಗಿ ಭಾರತ ವಿಶ್ವದ ಅತ್ಯಂತ ಮುಕ್ತ ಮತ್ತು ಹೂಡಿಕೆ ಸ್ನೇಹಿ ಆರ್ಥಿಕತೆಯಾಗಿದೆ: ಪ್ರಧಾನಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬ್ರಿಕ್ಸ್ ವ್ಯವಹಾರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು.

ಬ್ರೆಜಿಲ್ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರಿಕ್ಸ್ ಬಿಸಿನೆಸ್ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದರು. ಇತರ ಬ್ರಿಕ್ಸ್ ದೇಶಗಳ ಮುಖ್ಯಸ್ಥರು ಸಹ ವ್ಯವಹಾರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ, ವಿಶ್ವದ ಆರ್ಥಿಕ ಬೆಳವಣಿಗೆಯ ಶೇ.50% ರಷ್ಟನ್ನು ಬ್ರಿಕ್ಸ್ ದೇಶಗಳು ಹೊಂದಿವೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಹೊರತಾಗಿಯೂ, ಬ್ರಿಕ್ಸ್ ದೇಶಗಳು ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಿವೆ, ಲಕ್ಷಾಂತರ ಜನರನ್ನು ಬಡತನದಿಂದ ಮುಕ್ತಗೊಳಿಸಿವೆ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಹೊಸ ಪ್ರಗತಿಯನ್ನು ಸಾಧಿಸಿವೆ ಎಂದು ಅವರು ಹೇಳಿದರು.

ಅಂತರ್-ಬ್ರಿಕ್ಸ್ ವ್ಯಾಪಾರ ಮತ್ತು ಹೂಡಿಕೆ ಗುರಿಗಳು ಹೆಚ್ಚು ಮಹತ್ವಾಕಾಂಕ್ಷೆಯಾಗಿರಬೇಕು ಎಂದು ಪ್ರಧಾನಿ ಆಶಿಸಿದರು. ಬ್ರಿಕ್ಸ್ ದೇಶಗಳ ನಡುವಿನ ವ್ಯಾಪಾರ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಲು ಅವರ ಸಲಹೆಗಳನ್ನು ಆಹ್ವಾನಿಸಿದರು. ಮುಂದಿನ ಬ್ರಿಕ್ಸ್ ಶೃಂಗಸಭೆಯ ಹೊತ್ತಿಗೆ, ಕನಿಷ್ಠ ಐದು ಕ್ಷೇತ್ರಗಳನ್ನು ಗುರುತಿಸಬೇಕು, ಇದರಲ್ಲಿ ಬ್ರಿಕ್ಸ್ ದೇಶಗಳ ನಡುವೆ ಜಂಟಿ ಉದ್ಯಮಗಳನ್ನು ಪೂರಕತೆಯ ಆಧಾರದ ಮೇಲೆ ರಚಿಸಬಹುದು ಎಂದರು.

ನಾಳೆಯ ಶೃಂಗಸಭೆಯಲ್ಲಿ ಚರ್ಚೆಗೆ ಪ್ರಮುಖ ಆವಿಷ್ಕಾರಗಳಾದ ನಾವೀನ್ಯತೆ ಬ್ರಿಕ್ಸ್ ನೆಟ್ವರ್ಕ್, ಮತ್ತು ಬ್ರಿಕ್ಸ್ ಇನ್ಸ್ಟಿಟ್ಯೂಷನ್ ಫಾರ್ ಫ್ಯೂಚರ್ ನೆಟ್ವರ್ಕ್ ಅನ್ನು ಪರಿಗಣಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಮಾನವ ಸಂಪನ್ಮೂಲವನ್ನು ಕೇಂದ್ರೀಕರಿಸಿದ ಈ ಪ್ರಯತ್ನಗಳಿಗೆ ಖಾಸಗಿ ವಲಯವು ಸೇರಿಕೊಳ್ಳಬೇಕೆಂದು ಅವರು ವಿನಂತಿಸಿದರು. ಐದು ದೇಶಗಳು ಪರಸ್ಪರ ಸಾಮಾಜಿಕ ಭದ್ರತಾ ಒಪ್ಪಂದವನ್ನೂ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು.

ರಾಜಕೀಯ ಸ್ಥಿರತೆ, ನಿರ್ವ ಹಿಸಬಹುದಾದ ನೀತಿ ಮತ್ತು ವ್ಯಾಪಾರ ಸ್ನೇಹಿ ಸುಧಾರಣೆಗಳಿಂದಾಗಿ ಭಾರತವು ವಿಶ್ವದ ಅತ್ಯಂತ ಮುಕ್ತ ಮತ್ತು ಹೂಡಿಕೆ ಸ್ನೇಹಿ ಆರ್ಥಿಕತೆಯಾಗಿದೆ ಎಂದು ಪ್ರಧಾನಿ ಹೇಳಿದರು.



(Release ID: 1592713) Visitor Counter : 90