ಪ್ರಧಾನ ಮಂತ್ರಿಯವರ ಕಛೇರಿ
ಇಂಡೋನೇಷ್ಯಾದ ಅಧ್ಯಕ್ಷರನ್ನು ಪ್ರಧಾನಮಂತ್ರಿ ಭೇಟಿ ಮಾಡಿದರು
Posted On:
03 NOV 2019 5:25PM by PIB Bengaluru
ಇಂಡೋನೇಷ್ಯಾದ ಅಧ್ಯಕ್ಷರನ್ನು ಪ್ರಧಾನಮಂತ್ರಿ ಭೇಟಿ ಮಾಡಿದರು
ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ಜರುಗಿದ ಅಸಿಯಾನ್ / ಇ.ಎ.ಎಎಸ್ ಸಂಬಂಧಿತ ಸಭೆಗಳ ಸಂದರ್ಭದಲ್ಲಿ ಇಂಡೋನೇಷ್ಯಾ ಗಣತಂತ್ರದ ಅಧ್ಯಕ್ಷ ಘನತೆವೆತ್ತ ಜೊಕೊ ವಿಡೊಡೊ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 03,2019 ರಂದು ಭೇಟಿ ಮಾಡಿದರು
ಇಂಡೋನೇಷ್ಯಾ ಅಧ್ಯಕ್ಷರಾಗಿ ಎರಡನೇ ಅವಧಿಯನ್ನು ಪ್ರಾರಂಭಗೊಳಿಸಿದ್ದಕ್ಕಾಗಿ ಅಧ್ಯಕ್ಷ ಶ್ರೀ ಜೊಕೊ ವಿಡೊಡೊ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದರು. ವಿಶ್ವದ ಎರಡು ಬೃಹತ್ ಪ್ರಜಾಪ್ರಭುತ್ವ ಮತ್ತು ಬಹುಸಮಾಜಿಕ ವ್ಯವಸ್ಥೆಯ ದೇಶಗಳಾಗಿ, ರಕ್ಷಣಾ, ಸುರಕ್ಷಾ , ಸಂಪರ್ಕ, ವ್ಯಾಪಾರ ಮತ್ತು ಹೂಡಿಕೆ ಹಾಗೂ ಜನರಿಂದ ಜನರಿಗೆ ನೇರ ವಿನಿಮಯಗಳೇ ಮುಂತಾದ ಕ್ಷೇತ್ರಗಳಲ್ಲಿ ಇಂಡೋನೇಷ್ಯಾ ಜೊತೆ ಹೊಂದಿರುವ ಸಂಬಂಧವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಭಾರತವು ಕಟಿಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು
ಭಾರತ ಮತ್ತು ಇಂಡೋನೇಷ್ಯಾ ಕಡಲ ಕಿನಾರೆಯ ಸಮೀಪದ ನೆರೆರಾಷ್ಟ್ರಗಳಾಗಿದ ಹಿನ್ನಲೆಯಲ್ಲಿ ಭಾರತ-ಫೆಸಿಫಿಕ್ ವಲಯದ ಸಾಮುದ್ರಿಕ ಸಹಕಾರಗಳಲ್ಲಿ ಪರಸ್ಪರ ಹಂಚಿಕೊಂಡ ಸಂಕಲ್ಪಯೋಜನೆಗಳು ಸಾಕಾರವಾಗುವ ನಿಟ್ಟಿನಲ್ಲಿ ಶಾಂತಿ, ಸುರಕ್ಷತೆ ಮತ್ತು ಸಮೃದ್ಧಿಗಾಗಿ ಕೆಲಸ ಮಾಡುವ ತಮ್ಮ ಬದ್ಧತೆಗಳನ್ನು ಎರಡೂ ನಾಯಕರು ಪುನರುಚ್ಛರಿಸಿದರು. ಅತಿಉಗ್ರತೆ ಮತ್ತು ಭಯೋತ್ಪಾದನೆಗಳ ಭಯವನ್ನು ಇಬ್ಬರೂ ನಾಯಕರು ಚರ್ಚಿಸಿದರು ಮತ್ತು ಈ ಸಮಸ್ಯೆಯನ್ನು ನಿಯಂತ್ರಿಸಿ ಪರಿಹರಿಸಲು ದ್ವಿಪಕ್ಷೀಯವಾಗಿ ಹಾಗೂ ಜಾಗತಿಕವಾಗಿ ಅತ್ಯಂತ ಸನಿಹದಿಂದ ಕೆಲಸ ಮಾಡಲು ಒಪ್ಪಿಕೊಂಡರು
ದ್ವಿಪಕ್ಷೀಯ ವ್ಯಾಪಾರ/ವಾಣಿಜ್ಯಗಳ ಉತ್ತಮ ಪಡಿಸುವಿಕೆ ಮತ್ತು ಕೃಷಿ ಉತ್ಪನ್ನಗಳು, ವಾಹನ, ಔಷಧಿಯ ಕ್ಷೇತ್ರಗಳೂ ಸೇರಿದಂತೆ ಭಾರತೀಯ ವಾಣಿಜ್ಯೋತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಲಭ್ಯತೆಯ ಆವಶ್ಯಕತೆಗಳಿಗೆ ಹೆಚ್ಚಿನ ಮಹತ್ವ ನೀಡುವ ವಿಷಯಗಳ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸಕ್ತಿ ವ್ಯಕ್ತಪಡಿಸಿದರು. ಭಾರತೀಯ ಸಂಸ್ಥೆಗಳು ಇಂಡೋನೇಷ್ಯಾದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿರುವುದನ್ನು ಉಲ್ಲೇಖಿಸಿ, ಭಾರತದಲ್ಲಿ ಇರುವ ಅವಕಾಶಗಳನ್ನು ಹೂಡಿಕೆ ಮಾಡುವ ಮೂಲಕ ಸದುಪಯೋಗ ಮಾಡಿಕೊಳ್ಳಲು ಇಂಡೋನೇಷ್ಯಾದ ಸಂಸ್ಥೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಹ್ವಾನಿಸಿದರು
ಪರಸ್ಪರ ಅನುಕೂಲ ಸಮಯಕ್ಕೆ ಅನುಗುಣವಾಗಿ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಅಧ್ಯಕ್ಷ ಶ್ರೀ ಜೊಕೊ ವಿಡೊಡೊ ಅವರನ್ನು ಆಮಂತ್ರಿಸಿದರು
ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಂದಿರುವ ಇಂಡೋನೇಷ್ಯಾ ಜೊತೆ ದ್ವಿಪಕ್ಷೀಯ ಸಂಬಂಧಗಳಿಗೆ ಭಾರತವು ಅತಿ ಮಹತ್ವದ ಪ್ರಾಮುಖ್ಯತೆಯನ್ನು ಭಾರತ ನೀಡುತ್ತದೆ. ಪರಸ್ಪರ ರಾಜತಾಂತ್ರಿಕ ಸಂಬಂಧ ಪ್ರಾರಂಭಿಸಿ, ಈ ವರ್ಷಕ್ಕೆ 70 ವರ್ಷಗಳಾಗಿದ ಸಂಭ್ರಮ ಭಾರತ ಮತ್ತು ಇಂಡೋನೇಷ್ಯಾ ಹೊಂದಿದೆ
(Release ID: 1592613)
Visitor Counter : 73