ಪ್ರಧಾನ ಮಂತ್ರಿಯವರ ಕಛೇರಿ

ಬ್ಯಾಂಕಾಕ್ ನಲ್ಲಿ ‘ಸಾವಾಸ್ ದಿ ಪ್ರಧಾನಮಂತ್ರಿ ಮೋದಿ’ ಸಮುದಾಯ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ

Posted On: 02 NOV 2019 8:40PM by PIB Bengaluru

ಬ್ಯಾಂಕಾಕ್ ನಲ್ಲಿ ‘ಸಾವಾಸ್ ದಿ ಪ್ರಧಾನಮಂತ್ರಿ ಮೋದಿ’ ಸಮುದಾಯ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ



‘ತಿರುಕ್ಕುರುಳ್’ ಥಾಯ್ ಭಾಷಾಂತರ ಮತ್ತು ಗುರು ನಾನಕ್ ಅವರ 550ನೇ ಜನ್ಮ ಜಯಂತಿ ಮಹೋತ್ಸವ ಅಂಗವಾಗಿ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ, ಭಾರತ – ಮ್ಯಾನ್ಮಾರ್- ಥಾಯ್ ಲ್ಯಾಂಡ್ ನಡುವೆ ತ್ರಿಪಕ್ಷೀಯ ಹೆದ್ದಾರಿಯ ತಡೆರಹಿತ ಸಂಪರ್ಕ ಇಡೀ ವಲಯದ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ:ಪ್ರಧಾನಮಂತ್ರಿ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥಾಯ್ ಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ‘ಸಾವಾಸ್ ದಿ ಪಿಎಂ ಮೋದಿ’ ಸಮುದಾಯ ಕಾರ್ಯಕ್ರಮ ಉದ್ದೇಶಿಸಿ ಇಂದು ಮಾತನಾಡಿದರು. ಥಾಯ್ ಲ್ಯಾಂಡ್ ಆದ್ಯಂತದಿಂದ ಆಗಮಿಸಿದ್ದ ಭಾರತೀಯ ಸಮುದಾಯದ ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ಭಾರತ – ಥಾಯ್ ಲ್ಯಾಂಡ್ ನ ಐತಿಹಾಸಿಕ ಬಾಂಧವ್ಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಥಾಯ್ ಲ್ಯಾಂಡ್ ನಲ್ಲಿರುವ ಭಾರತೀಯ ಸಮುದಾಯದ ವೈವಿಧ್ಯತೆಯನ್ನು ಬಿಂಬಿಸಲು ಅನೇಕ ಭಾರತೀಯ ಭಾಷೆಗಳಲ್ಲಿ ಸಭಿಕರನ್ನು ಸ್ವಾಗತಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತ – ಆಸಿಯಾನ್ ಶೃಂಗಸಭೆಯಲ್ಲಿ ಭಾಗಿಯಾಗಲು ಇದು ಥಾಯ್ ಲ್ಯಾಂಡ್ ಗೆ ತಮ್ಮ ಮೊದಲ ಅಧಿಕೃತ ಭೇಟಿ ಎಂದು ಹೇಳಿದರು. ಆಗ್ನೇಯ ಏಷ್ಯಾದೊಂದಿಗೆ ಭಾರತೀಯ ಕರಾವಳಿ ರಾಜ್ಯಗಳ ವಾಣಿಜ್ಯ ಬಾಂಧವ್ಯ ಭಾರತ ಮತ್ತು ಥಾಯ್ ಲ್ಯಾಂಡ್ ನಡುವಿನ ಪುರಾತನ ಐತಿಹಾಸಿಕ ಬಾಂಧವ್ಯವನ್ನು ಬಿಂಬಿಸಿದೆ ಎಂದು ಹೇಳಿದರು. ಈ ಎರಡು ದೇಶಗಳ ನಡುವಿನ ಸಂಬಂಧಗಳು ಕಾಲಾನಂತರದಲ್ಲಿ ಸಾಮ್ಯತೆಯ ಸಾಂಸ್ಕೃತಿಕ ಮತ್ತು ಜೀವನಶೈಲಿಯಿಂದ ಬಲಗೊಂಡವೆಂದರು.

ತಾವು ಪ್ರವಾಸ ಮಾಡುವ ದೇಶಗಳಲ್ಲಿರುವ ಭಾರತೀಯ ಸಮುದಾಯವನ್ನು ಭೇಟಿ ಮಾಡುವುದು ತಮ್ಮ ಪ್ರಯತ್ನವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯದ ಸ್ಪಷ್ಟ ರಾಯಭಾರಿಗಳು ನೀವು ಎಂದು ಉಪಸ್ಥಿತರಿದ್ದ ಜನರನ್ನು ಶ್ಲಾಘಿಸಿದರು.

ತಿರುಕ್ಕುರುಳ್ ಥಾಯ್ ಭಾಷಾಂತರ ಮತ್ತು ಗುರು ನಾನಕ್ ಅವರ 550ನೇ ಜನ್ಮ ಜಯಂತಿ ಮಹೋತ್ಸವದ ಅಂಗವಾಗಿ ಸ್ಮರಣಾರ್ಥ ನಾಣ್ಯ ಬಿಡುಗಡೆ

ಪ್ರಧಾನಮಂತ್ರಿ ಅವರು ತಿರುವಳ್ಳುವರ್ ಅವರ ತಮಿಳಿನ ಅಮೂಲ್ಯ ಕೃತಿ ತಿರುಕ್ಕುರುಳ್ ನ ಥಾಯ್ ಭಾಷಾಂತರ ಬಿಡುಗಡೆ ಮಾಡಿದರು. ಈ ಪುಸ್ತಕ ಒಬ್ಬರ ಬದುಕಿಗೆ ಜೀವಂತ ಬೆಳಕಾಗುತ್ತದೆ ಎಂದು ಹೇಳಿದರು. ಗುರು ನಾನಕ್ ಅವರ 550 ಜನ್ಮ ಜಯಂತಿ ಮಹೋತ್ಸವದ ಸ್ಮರಣಾರ್ಥ ಠಂಕಿಸಿರುವ ನಾಣ್ಜ್ಯವನ್ನೂ ಅವರು ಬಿಡುಗಡೆ ಮಾಡಿ, ಗುರು ನಾನಕ್ ಅವರ ಬೋಧನೆಗಳು ಇಡೀ ಮಾನವತೆಯ ಪರಂಪರೆಯಾಗಿದೆ ಎಂದರು. ನವೆಂಬರ್ 9ರಂದು ಕರ್ತಾರ್ ಪುರ್ ಸಾಹೀಬ್ ಗೆ ಕರ್ತಾಪುರ ಕಾರಿಡಾರ್ ಮೂಲಕ ನೇರ ಸಂಪರ್ಕ ಸಾಧ್ಯವಾಗಲಿದೆ ಎಂದ ಅವರು ಪ್ರತಿಯೊಬ್ಬರಿಗೂ ಬಂದು ಭೇಟಿ ಮಾಡುವಂತೆ ಆಹ್ವಾನಿಸಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ ಮತ್ತು ಪೂರ್ವದತ್ತ ಕ್ರಮದ ಬದ್ಧತೆ

ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಬೌದ್ಧ ಯಾತ್ರಾ ಸ್ಥಳಗಳ ಸರ್ಕ್ಯೂಟ್ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸದರು. ಕಳೆದ 4 ವರ್ಷಗಳಲ್ಲಿ ಭಾರತ ಪ್ರವಾಸ ಮತ್ತು ಪ್ರವಾಸೋದ್ಯಮ ಜಾಗತಿಕ ಶ್ರೇಯಾಂಕದಲ್ಲಿ 18 ಶ್ರೇಣಿ ಏರಿಕೆಯಾಗಿದ್ದು, ಸರ್ಕಾರ ಪ್ರವಾಸೋದ್ಯಮ ಉತ್ತೇಜನಕ್ಕೆ ಮೂಲಸೌಕರ್ಯ ಸಂಪರ್ಕಗಳ ಅಭಿವೃದ್ಧಿಯ ಮೂಲಕ ಪಾರಂಪರಿಕ, ಆಧ್ಯಾತ್ಮಿಕ ಮತ್ತು ವೈದ್ಯ ಪ್ರವಾಸೋದ್ಯಮ ಉತ್ತೇಜನಕ್ಕೆ ಗಮನ ಹರಿಸಿದೆ ಎಂದು ಹೇಳಿದರು.

ಭಾರತದ ಪೂರ್ವದತ್ತ ಕ್ರಮದ ಬದ್ಧತೆಯನ್ನು ಒತ್ತಿ ಹೇಳಿದ ಅವರು, ಭಾರತವು ಈಶಾನ್ಯ ರಾಜ್ಯಗಳನ್ನು ಥಾಯ್ ಲ್ಯಾಂಡ್ ನೊಂದಿಗೆ ಗಾಢವಾಗಿ ಸಂಪರ್ಕಿಸಲು ಗಮನ ಹರಿಸಿದೆ ಎಂದರು. ಆಗ್ನೇಯ ಏಷ್ಯಾಗೆ ಈ ಪ್ರದೇಶಗಳನ್ನು ಪ್ರವೇಶ ದ್ವಾರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು. ಭಾರತ- ಮ್ಯಾನ್ಮಾರ್ – ಥಾಯ್ ಲ್ಯಾಂಡ್ ತ್ರಿಪಕ್ಷೀಯ ಹೆದ್ದಾರಿಯು ಈ ರಾಷ್ಟ್ರಗಳ ನಡುವೆ ತಡೆರಹಿತ ಸಂಚಾರ ಕಲ್ಪಿಸಲಿದ್ದು, ಇದು ಇಡೀ ವಲಯದ ಅಭಿವೃದ್ಧಿಗೆ ಚೈತನ್ಯ ನೀಡಲಿದೆ ಎಂದರು.

ಜನರ ಕಲ್ಯಾಣಕ್ಕೆ ಸರ್ಕಾರ ಬದ್ಧ

ಪ್ರಜಾಪ್ರಭುತ್ವದ ಬಗ್ಗೆ ಭಾರತದ ಬದ್ಧತೆಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಐತಿಹಾಸಿಕ 2019ರ ಸಾರ್ವತ್ರಿಕ ಚುನಾವಣೆಗಳ ಬಗ್ಗೆ ವಿವರಿಸಿ, ಇನ್ನೂ ಹೆಚ್ಚಿನ ಬಹುಮತದೊಂದಿಗೆ ಎರಡನೇ ಅವಧಿಗೆ ಸರ್ಕಾರವನ್ನು ಆಡಳಿತಕ್ಕೆ ತಂದಿದೆ ಎಂದರು.

ಪ್ರಧಾನಮಂತ್ರಿಯವರು ವಿಧಿ 370ರ ರದ್ದತಿ ಸೇರಿದಂತೆ ಸರ್ಕಾರದ ಇತ್ತೀಚಿನ ನಿರ್ಧಾರಗಳು ಮತ್ತು ಸಾಧನೆಗಳ ಪಟ್ಟಿ ಮಾಡಿದದರು. ಕಳೆದ ಮೂರು ವರ್ಷಗಳಲ್ಲಿ 8 ಕೋಟಿ ಕುಟುಂಬಗಳಿಗೆ ಎಲ್.ಪಿ.ಜಿ. ಸಂಪರ್ಕ ಕಲ್ಪಿಸಲಾಗಿದೆ ಈ ಫಲಾನುಭವಿಗಳ ಸಂಖ್ಯೆ ಇಡೀ ಥಾಯ್ ಲ್ಯಾಂಡ್ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ ಎಂದು ತಿಳಿಸಿದರು. ಆಯುಷ್ಮಾನ್ ಭಾರತ ಯೋಜನೆಯನ್ನು 50 ಕೋಟಿ ಭಾರತೀಯರ ಪ್ರಯೋಜನಕ್ಕಾಗಿ ಆರಂಭಿಸಲಾಗಿದೆ ಎಂದರು. 2022ರ ಹೊತ್ತಿಗೆ ಪ್ರತಿ ಮನೆಗೂ ಮತ್ತು ಪ್ರತಿಯೊಬ್ಬರಿಗೂ ನೀರಿನ ಲಭ್ಯತೆಯ ಖಾತ್ರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.



(Release ID: 1592604) Visitor Counter : 57