ಸಂಪುಟ

ಭಾರತ ಮತ್ತು ಕುವೈತ್ ನಡುವೆ ಲೆಕ್ಕಪತ್ರ, ಹಣಕಾಸು ಮತ್ತು ಲೆಕ್ಕ  ಪರಿಶೋಧನಾ ಜ್ಞಾನ ವಲಯದಲ್ಲಿನ ಒಡಂಬಡಿಕೆಗೆ ಸಂಪುಟ ಅನುಮೋದನೆ

Posted On: 23 OCT 2019 5:06PM by PIB Bengaluru

ಭಾರತ ಮತ್ತು ಕುವೈತ್ ನಡುವೆ ಲೆಕ್ಕಪತ್ರ, ಹಣಕಾಸು ಮತ್ತು ಲೆಕ್ಕ  ಪರಿಶೋಧನಾ ಜ್ಞಾನ ವಲಯದಲ್ಲಿನ ಒಡಂಬಡಿಕೆಗೆ ಸಂಪುಟ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಕುವೈತ್ ನಡುವೆ ಲೆಕ್ಕಪತ್ರ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಜ್ಞಾನ ವಲಯದಲ್ಲಿ ಸಾಮರ್ಥ್ಯವೃದ್ಧಿ ಮತ್ತು ಬಲವರ್ಧನೆಯ  ಒಡಂಬಡಿಕೆಗೆ ಸಂಪುಟ ಅನುಮೋದನೆ ನೀಡಿತು.

ಅನುಕೂಲಗಳು:

ಭಾರತ ಮತ್ತು ಕುವೈತ್ ನ ಎರಡು ಸಂಸ್ಥೆಗಳು ಮಾಡಿಕೊಂಡಿರುವ ಒಪ್ಪಂದದ ಅಂಶಗಳು ಹೀಗಿವೆ.

1.      ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ(ಐಸಿಎಐ) ಮತ್ತು ಕುವೈತ್ ಅಕೌಂಟೆಂಟ್ ಗಳು ಮತ್ತು ಆಡಿಟರ್ ಗಳ ಅಸೋಸಿಯೇಷನ್(ಕೆಎಎಎ) ಎರಡು ಒಗ್ಗೂಡಿ ತಮ್ಮ ಸಂಸ್ಥೆಗಳ ಸದಸ್ಯರು ಮತ್ತು ವೃತ್ತಿಪರ ಪರಿಣಿತರ ಅಭಿವೃದ್ಧಿಯ ಅನುಕೂಲಕ್ಕಾಗಿ ಕುವೈತ್ ನಲ್ಲಿ ತಾಂತ್ರಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಮತ್ತು ಸಮಾವೇಶಗಳನ್ನು ಆಯೋಜಿಸುವುದು ಹಾಗೂ ನಡೆಸುವುದು. ಪ್ರತಿಯೊಂದು ಕಾರ್ಯಕ್ರಮದ ವೆಚ್ಚವನ್ನು ಲಿಖಿತ ಒಪ್ಪಿಗೆಯಂತೆ ಉಭಯ ಸಂಸ್ಥೆಗಳು ಸಮಾನವಾಗಿ ಹಂಚಿಕೊಳ್ಳುವುದು.

2.      ಕಾರ್ಪೊರೇಟ್ ಆಡಳಿತ, ತಾಂತ್ರಿಕ ಸಂಶೋಧನೆ ಮತ್ತು ಸಲಹೆ, ಗುಣಮಟ್ಟ ಖಾತ್ರಿ, ವಿಧಿ ವಿಜ್ಞಾನ ಲೆಕ್ಕಪತ್ರ, ಸಣ್ಣ ಮತ್ತು ಮಧ್ಯಮ ವರ್ಗದ ಪದ್ಧತಿಗಳಿಗೆ(ಎಸ್ಎಂಪಿಎಸ್) ಸಂಬಂಧಿಸಿದ ವಿಷಯಗಳು ಮತ್ತು ಇಸ್ಲಾಮಿಕ್ ಫೈನಾನ್ಸ್, ನಿರಂತರ ವೃತ್ತಿಪರ ಅಭಿವೃದ್ಧಿ(ಸಿಪಿಡಿ) ಮತ್ತು ಪರಸ್ಪರ ಹಿತಾಸಕ್ತಿಯ ಇತರೆ ವಿಷಯಗಳಲ್ಲಿ ಪರಸ್ಪರ ಸಹಕಾರ ಹೊಂದಲು ಐಸಿಎಐ ಮತ್ತು ಕೆಎಎಎಗೆ ಜಂಟಿಯಾಗಿ ಕಾರ್ಯನಿರ್ವಹಿಸುವುದು. ಐಸಿಎಐ ಮತ್ತು ಕೆಎಎಎ ಒಡಂಬಡಿಕೆಯ ಅಂಶಗಳಾದ ಸಹಕಾರ, ಲೆಕ್ಕಪತ್ರ ಜ್ಞಾನವೃದ್ಧಿ, ತಾಂತ್ರಿಕ ಕಾರ್ಯಕ್ರಮಗಳು ಹಾಗೂ ವೃತ್ತಿಪರ ಅಭಿವೃದ್ಧಿಗಾಗಿ ವಿಚಾರ ಸಂಕಿರಣಗಳು ಮತ್ತು ಸಮಾವೇಶಗಳನ್ನು ನಡೆಸುವ ಕಾರ್ಯಕ್ರಮ ಜಾರಿಗೊಳಿಸುವುದು ಮತ್ತು ಬೆಂಬಲ ನೀಡುವುದು.

ಕೆಎಎಎ ಅಂತಹ ಕಾರ್ಯಕ್ರಮಗಳಿಗೆ ಅಗತ್ಯ ಸ್ಥಳವನ್ನು ಒದಗಿಸಲಿದೆ ಮತ್ತು ಅದು ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಲಿದೆ.

3.      ಒಡಂಬಡಿಕೆಯ ಉದ್ದೇಶಿತ ಅಂಶಗಳ ಪ್ರಕಾರ ಐಸಿಎಐ ಮತ್ತು ಕೆಎಎಎ ಪರಸ್ಪರ ಸಹಭಾಗಿತ್ವದ ಕುರಿತು ಈ ವಲಯದಲ್ಲಿನ ಸಂಭಾವ್ಯ ಭವಿಷ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಿವೆ. ಮೊದಲಿಗೆ ಈ ಚರ್ಚೆಗಳು ವ್ಯವಸ್ಥೆ ಮತ್ತು ಸಹಕಾರದ ಒಳನೋಟವನ್ನು ಅರ್ಥಮಾಡಿಕೊಳ್ಳುವುದು ಆಧರಿಸಿದೆ. ಜೊತೆಗೆ ಬಾಹ್ಯ ನಿಯಂತ್ರಣ ಮತ್ತು ಸ್ವಯಂ ನಿಯಂತ್ರಣ ಒಪ್ಪಂದವಿರುತ್ತದೆ ಹಾಗೂ ಎರಡು ಸಂಸ್ಥೆಗಳ ಸದಸ್ಯರು ವೃತ್ತಿಪರರಾಗಿ ಬೆಳೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಇದರಿಂದಾಗಿ ಆಡಳಿತ ಸುಧಾರಣೆಯಾಗುವ ಆಸಕ್ತಿ ಮೂಡುವುದಲ್ಲದೆ, ಆಯಾ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿವೆ.

4.      ಕೆಎಎಎ ಹಾಗೂ ಐಸಿಎಐ ಎರಡೂ ಕುವೈತ್ ನಲ್ಲಿ ಅಲ್ಲಿನ ಪ್ರಜೆಗಳು ಮತ್ತು ಐಸಿಎಐನ ಸದಸ್ಯರಿಗಾಗಿ ಲೆಕ್ಕಪತ್ರ, ಹಣಕಾಸು ಮತ್ತು ಲೆಕ್ಕಪರಿಶೋಧನಾ ವಿಭಾಗಗಳಲ್ಲಿ ಅಲ್ಪಾವಧಿ ವೃತ್ತಿಪರ ಕೋರ್ಸ್ ಗಳನ್ನು ತೆರೆಯಲು ಸಹಭಾಗಿತ್ವವನ್ನು ಸಾಧಿಸುವುದು.

5.      ಪರಸ್ಪರ ಹಿತಾಸಕ್ತಿಯ ವಿಷಯಗಳೆಂದು ಗುರುತಿಸಲ್ಪಟ್ಟಿರುವ ಪ್ರದೇಶಗಳಲ್ಲಿ ಸಂಭಾವ್ಯ ಸಹಕಾರ ಸ್ಥಾಪನೆಗೆ ಐಸಿಎಐ ಮತ್ತು ಕೆಎಎಎ ಸೂಕ್ತ ಹೆಜ್ಜೆ ಇಟ್ಟು, ಕ್ರಮಗಳನ್ನು ಕೈಗೊಂಡು ಜಂಟಿಯಾಗಿ ಕಾರ್ಯೋನ್ಮುಖವಾಗುವುದು. ಐಸಿಎಐ, ಕೆಎಎಎ ಸಹಭಾಗಿತ್ವದಲ್ಲಿ ಕುವೈತ್ ನಲ್ಲಿನ ಸರ್ಕಾರ/ಸಚಿವರುಗಳು/ಕೆಎಎಎ ಸದಸ್ಯರಿಗಾಗಿ ಐಸಿಎಐ ತಾಂತ್ರಿಕ ಕಾರ್ಯಕ್ರಮಗಳನ್ನು ನೀಡಲಿದೆ.

6.      ಕುವೈತ್ ನಲ್ಲಿ ಭಾರತೀಯ ಲೆಕ್ಕಪರಿಶೋಧಕರು ತಮ್ಮದೇ ವೃತ್ತಿಯ ಸ್ಥಳೀಯ ವ್ಯಾಪಾರ ಸಮುದಾಯ ಮತ್ತು ಅದಕ್ಕೆ ಸಂಬಂಧಿಸಿದ ವಲಯದವರಿಗೆ ಹಣಕಾಸು ನಿರ್ವಹಣೆ ವಿಷಯದಲ್ಲಿ ನೆರವು ನೀಡುವುದು ಮತ್ತು ಅದು ಅವರಿಗೆ ಹೆಮ್ಮೆ ಮೂಡಿಸುತ್ತದೆ. ಉದ್ದೇಶಿತ ಒಡಂಬಡಿಕೆ ಕುವೈತ್ ನಲ್ಲಿ ಭಾರತೀಯ ಲೆಕ್ಕಪರಿಶೋಧಕರಿಗೆ  ಸಕಾರಾತ್ಮಕ ವರ್ಚಸ್ಸು ಮತ್ತು ವಿಶ್ವಾಸ ವೃದ್ಧಿಸಲು ಸಹಾಯಕವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸಮರ್ಥನೆ:

ಎ) ಐಸಿಎಐ ಮಧ್ಯ ಪೂರ್ವ ಪ್ರಾಂತ್ಯದಲ್ಲಿ ಸುಮಾರು 6 ಸಾವಿರ ಸದಸ್ಯ ಬಲದ ಬಲಿಷ್ಠ ಸದಸ್ಯತ್ವ ಪಡೆಯನ್ನು ಹೊಂದಿದೆ ಮತ್ತು ಕೆಎಎಎಗೆ ನೆರವು ನೀಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ಆ ಪ್ರದೇಶದ ಐಸಿಎಐ ಸದಸ್ಯರಿಗೆ ಅನುಕೂಲವಾಗಲಿದೆ ಮತ್ತು ಐಸಿಎಐ ಸದಸ್ಯರ ಅಭಿವೃದ್ಧಿಗೆ ಹೆಚ್ಚುವರಿ ಪ್ರಚೋದನೆ ದೊರಕಲಿದೆ.

ಬಿ) ಐಸಿಎಐ ಸದಸ್ಯರು, ವಿದ್ಯಾರ್ಥಿಗಳು ಮತ್ತು ಆ ಸಂಸ್ಥೆಗಳ ಉತ್ತಮ ಹಿತಾಸಕ್ತಿಯಿಂದಾಗಿ ಪರಸ್ಪರ ಅನುಕೂಲಕಾರಿಯಾಗುವ ಸಂಬಂಧಗಳನ್ನು ಅಭಿವೃದ್ಧಿಪಡಿಸುವುದು ಈ ಒಡಂಬಡಿಕೆಯ ಗುರಿಯಾಗಿದೆ.

**********



(Release ID: 1589005) Visitor Counter : 150