ಪ್ರಧಾನ ಮಂತ್ರಿಯವರ ಕಛೇರಿ

ಅತ್ಯುನ್ನತ ಉದಾಹರಣೆಗೆ ಸಾಕ್ಷಿ, ಮಾಮಲ್ಲಪುರಂ ಬೀಚ್‌ನಲ್ಲಿ ಪ್ರಧಾನಿ ಪ್ಲಾಗ್ಗಿಂಗ್‌ ನಮ್ಮ ಪರಿಸರವನ್ನು ಸ್ವಚ್ಛವಾಗಿಡುವ ಪ್ರಯತ್ನದ ಭಾಗವಾಗಿ ಕಸವನ್ನು ಮತ್ತು ಪ್ಲಾಸ್ಟಿಕ್‌ ಹೆಕ್ಕಿ ತೆಗೆದ ಪ್ರಧಾನಿ

Posted On: 12 OCT 2019 10:06AM by PIB Bengaluru

ಅತ್ಯುನ್ನತ ಉದಾಹರಣೆಗೆ ಸಾಕ್ಷಿ, ಮಾಮಲ್ಲಪುರಂ ಬೀಚ್‌ನಲ್ಲಿ ಪ್ರಧಾನಿ ಪ್ಲಾಗ್ಗಿಂಗ್‌

ನಮ್ಮ ಪರಿಸರವನ್ನು ಸ್ವಚ್ಛವಾಗಿಡುವ ಪ್ರಯತ್ನದ ಭಾಗವಾಗಿ ಕಸವನ್ನು ಮತ್ತು ಪ್ಲಾಸ್ಟಿಕ್‌ ಹೆಕ್ಕಿ ತೆಗೆದ ಪ್ರಧಾನಿ

 

ಸ್ವಚ್ಛ ಭಾರತಕ್ಕೆ ಶ್ರಮಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಮತ್ತೊಮ್ಮೆ ಮೇಲ್ಪಂಕ್ತಿಯ ಉದಾಹರಣೆಯನ್ನು ರಾಷ್ಟ್ರಕ್ಕೆ ಹಾಕಿಕೊಟ್ಟಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.

 

ಮಾಮಲ್ಲಪುರಂ ಬೀಚ್‌ನಲ್ಲಿ ಪ್ರಧಾನಿ ಅವರು ಬೆಳಗಿನ ವಾಯುವಿಹಾರಕ್ಕೆ ತೆರಳುತ್ತಿದ್ದಾಗ ಸುಮಾರು 30 ನಿಮಿಷಗಳ ಕಾಲ ಪ್ಲಾಗ್ಗಿಂಗ್ ಮಾಡಿದ್ದಾರೆ. ಬೆಳಗಿನ ಜಾವದ ಜಾಗ್ಗಿಂಗ್‌ ಜತೆ ಕಸ ಸಂಗ್ರಹಿಸಿದ್ದಾರೆ. ಪ್ಲಾಸ್ಟಿಕ್‌  ಮತ್ತು ತ್ಯಾಜ್ಯಗಳನ್ನು ಸಂಗ್ರಹಿಸಿದ್ದಾರೆ.

 

ಬಳಿಕ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ‘ಇಂದು ಬೆಳಿಗ್ಗೆ ಮಾಮಲ್ಲಪುರಂ ಬೀಚ್‌ನಲ್ಲಿ ಪ್ಲಾಗ್ಗಿಂಗ್‌ ಮಾಡಿದೆ. ಸುಮಾರು 30 ನಿಮಿಷಗಳ ಕಾಲ ಪ್ಲಾಗ್ಗಿಂಗ್‌ ನಡೆಯಿತು. ಅಲ್ಲಿನ ಹೋಟೆಲ್‌ ಸಿಬ್ಬಂದಿ ಜೆಯರಾಜ್‌ ಎನ್ನುವವರಿಗೆ ಈ ತ್ಯಾಜ್ಯ ಸಂಗ್ರಹವನ್ನು ನೀಡಿದೆ. ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿರಬೇಕು ಮತ್ತು ಸುಂದರವಾಗಿರಬೇಕು. ನಾವು ಸದೃಢ ಮತ್ತು ಆರೋಗ್ಯವಾಗಿರಲು ಗಮನಹರಿಸೋಣ’ ಎಂದು ಟ್ವೀಟ್‌ ಮಾಡಿದ್ದಾರೆ.



(Release ID: 1588336) Visitor Counter : 96