ಸಂಪುಟ

1947 ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಹೊರಹೋಗುವುದನ್ನು ಆಯ್ಕೆ ಮಾಡಿಕೊಂಡಿದ್ದ , ಆದರೆ ಬಳಿಕ ಮರಳಿ ಬಂದು ಇಲ್ಲಿ ನೆಲೆ ನಿಂತಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದ 5,300 ಡಿ.ಪಿ.ಕುಟುಂಬಗಳನ್ನು ಸಂಪುಟವು 30-11-2016ರಂದು ಅಂಗೀಕರಿಸಿದ ಪುನರ್ವಸತಿ ಪ್ಯಾಕೇಜಿನಲ್ಲಿ ಸೇರ್ಪಡೆ ಮಾಡಲು ಸಂಪುಟದ ಅನುಮೋದನೆ ನೀಡಿದೆ. 2016 ರಲ್ಲಿ ಸಂಪುಟವು ಪಿ.ಒ.ಜೆ.ಕೆ ಮತ್ತು ಛಂಬ್ ನಲ್ಲಿ ನಿರಾಶ್ರಿತರಾದವರಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕಾಗಿರುವ ಪ್ರಧಾನ ಮಂತ್ರಿ ಅವರ ಅಭಿವೃದ್ಧಿ ಪ್ಯಾಕೇಜ್ 2015 ರಡಿಯಲ್ಲಿ ಪುನರ್ವಸತಿ ಯೋಜನೆಯನ್ನು ರೂಪಿಸಿ ಅನುಮೋದಿಸಿತ್ತು.

Posted On: 09 OCT 2019 2:39PM by PIB Bengaluru

1947 ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಹೊರಹೋಗುವುದನ್ನು ಆಯ್ಕೆ ಮಾಡಿಕೊಂಡಿದ್ದ , ಆದರೆ ಬಳಿಕ ಮರಳಿ ಬಂದು ಇಲ್ಲಿ ನೆಲೆ ನಿಂತಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದ 5,300 ಡಿ.ಪಿ.ಕುಟುಂಬಗಳನ್ನು ಸಂಪುಟವು 30-11-2016ರಂದು ಅಂಗೀಕರಿಸಿದ ಪುನರ್ವಸತಿ ಪ್ಯಾಕೇಜಿನಲ್ಲಿ ಸೇರ್ಪಡೆ ಮಾಡಲು ಸಂಪುಟದ ಅನುಮೋದನೆ ನೀಡಿದೆ. 2016 ರಲ್ಲಿ ಸಂಪುಟವು ಪಿ.ಒ.ಜೆ.ಕೆ ಮತ್ತು ಛಂಬ್ ನಲ್ಲಿ ನಿರಾಶ್ರಿತರಾದವರಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕಾಗಿರುವ ಪ್ರಧಾನ ಮಂತ್ರಿ ಅವರ ಅಭಿವೃದ್ಧಿ ಪ್ಯಾಕೇಜ್ 2015 ರಡಿಯಲ್ಲಿ ಪುನರ್ವಸತಿ ಯೋಜನೆಯನ್ನು ರೂಪಿಸಿ ಅನುಮೋದಿಸಿತ್ತು.
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು 1947 ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ತೊರೆದು ಹೋದ, ಆದರೆ ಆ ಬಳಿಕ ಮರಳಿ ಬಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆ ನಿಂತ ಜಮ್ಮು ಮತ್ತು ಕಾಶ್ಮೀರದ 5,300 ಡಿ.ಪಿ.ಕುಟುಂಬಗಳನ್ನು 30-11-2016 ರಲ್ಲಿ ಪಿ.ಒ.ಜೆ.ಕೆ ಮತ್ತು ಛಂಬ್ ಗಳಿಂದ ನಿರಾಶ್ರಿತರಾದವರಿಗಾಗಿ ಸಂಪುಟವು ಅನುಮೋದಿಸಿದ ಪ್ರಧಾನ ಮಂತ್ರಿ ಅವರ ಅಭಿವೃದ್ಧಿ ಪ್ಯಾಕೇಜ್ 2015 ರ ಅಡಿಯಲ್ಲಿ ಪುನರ್ವಸತಿ ಕಲ್ಪಿಸುವುದಕ್ಕಾಗಿ ಸೇರ್ಪಡೆ ಮಾಡುವುದಕ್ಕೆ ತನ್ನ ಅನುಮೋದನೆ ನೀಡಿತು.

ಪ್ರಯೋಜನಗಳು:

ಈ ಅನುಮೋದನೆಯು ಅಂತಹ ಡಿ.ಪಿ. ಕುಟುಂಬಗಳಿಗೆ ಈಗಿರುವ ಯೋಜನೆ ಅಡಿಯಲ್ಲಿ ಒಂದು ಬಾರಿಗೆ 5.5 ಲಕ್ಷ ಹಣಕಾಸು ನೆರವನ್ನು ಪಡೆಯಲು ಅರ್ಹತೆಯನ್ನು ಒದಗಿಸುತ್ತದೆ.ಮತ್ತು ಪ್ರತಿಯಾಗಿ ಈ ಯೋಜನೆಯು ಉದ್ದೇಶಿಸಿದ ಸುಸ್ಥಿರ ಆದಾಯವನ್ನು ಪಡೆಯಲು ಅವರನ್ನು ಸಮರ್ಥರನ್ನಾಗಿಸುತ್ತದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 1947ರಲ್ಲಿ ನಡೆದ ಪಾಕಿಸ್ತಾನಿ ಅತಿಕ್ರಮಣದ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ 31,619 ಕುಟುಂಬಗಳು ವಲಸೆ ಬಂದಿದ್ದವು. ಇವರಲ್ಲಿ 26,319 ಕುಟುಂಬಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆ ನಿಂತಿದ್ದರೆ 5,300 ಕುಟುಂಬಗಳು ಮೊದಲು ಜಮ್ಮು ಮತ್ತು ಕಾಶ್ಮೀರದಿಂದ ದೇಶದ ಇತರೆಡೆಗೆ ವಲಸೆ ಹೋಗಿದ್ದವು. 1965 ಮತ್ತು 1971 ರಲ್ಲಿ ಭಾರತ –ಪಾಕ್ ಯುದ್ದ ನಡೆದಾಗ ಮತ್ತೆ 10,065 ಕುಟುಂಬಗಳು ಛಂಬ್ ನಯಾಬತ್ ಪ್ರದೇಶದಲ್ಲಿ ನಿರಾಶ್ರಿತವಾಗಿದ್ದವು. ಇವರಲ್ಲಿ 3,500 ಕುಟುಂಬಗಳು 1965 ರಲ್ಲಿ ನಿರಾಶ್ರಿತರಾಗಿದ್ದರೆ, 6565 ಕುಟುಂಬಗಳು 1971 ರ ಯುದ್ದದಲ್ಲಿ ನಿರಾಶ್ರಿತಗೊಂಡವು.

ಸಂಪುಟವು 30-11-2016ರಂದು ಅನುಮೋದಿಸಿದ ಪ್ಯಾಕೇಜಿನಲ್ಲಿ 36,384 ಕುಟುಂಬಗಳು ಒಳಗೊಂಡಿವೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆ ನಿಂತ ಪಿ.ಒ.ಜೆ.ಕೆ.ಯ 26,319 ನಿರಾಶ್ರಿತ ಕುಟುಂಬಗಳು ಮತ್ತು ಛಂಬ್ ನಯಾಬ್ ಪ್ರದೇಶದಿಂದ ನಿರಾಶ್ರಿತರಾದ 10,065 ಕುಟುಂಬಗಳು ಸೇರಿವೆ. ಮೊದಲಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಹೊರಗೆ ವಲಸೆ ಹೋಗಿ, ದೇಶದ ಬೇರೆ ಬೇರೆ ಭಾಗಗಳಲ್ಲಿ ನೆಲೆ ನಿಂತ 5,300 ಡಿ.ಪಿ. ಕುಟುಂಬಗಳು ಈ ಅನುಮೋದಿತ ಪ್ಯಾಕೇಜಿನಲ್ಲಿ ಸ್ಥಾನ ಪಡೆದಿರಲಿಲ್ಲ. ಮೊದಲು ರಾಜ್ಯದಿಂದ ಹೊರಗೆ ಹೋಗುವುದನ್ನು ಆಯ್ಕೆ ಮಾಡಿಕೊಂಡಿದ್ದ, ಆದರೆ ಆ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿ ಬಂದು ನೆಲೆ ನಿಂತ 5,300 ಡಿ.ಪಿ.ಕುಟುಂಬಗಳು ಈಗ ಪ್ಯಾಕೇಜಿನಲ್ಲಿ ಸ್ಥಾನ ಪಡೆದಿವೆ.

1947 ರಲ್ಲಿ ಪಿ.ಒ.ಜೆ.ಕೆ.ಯಿಂದ 5,300 ಡಿ.ಪಿ. ಕುಟುಂಬಗಳಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಮರಳಿ ಬಂದು ನೆಲೆ ನಿಂತ ಕುಟುಂಬಗಳನ್ನು , ಯುದ್ದ ಮತ್ತು ವೈರತ್ವಗಳಿಂದಾಗಿ ಸಂತ್ರಸ್ತರಾದವರನ್ನು ಈ ಯೋಜನೆಗೆ ಸೇರ್ಪಡೆ ಮಾಡಿಕೊಳ್ಳುವುದರಿಂದ ಅವರಿಗೆ ತಿಂಗಳಿಗೆ ನ್ಯಾಯೋಚಿತವಾದ ಒಂದು ಆದಾಯವನ್ನು ಗಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಮತ್ತು ಮುಖ್ಯವಾಹಿನಿ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದರಿಂದ ಇಂತಹ ಡಿ.ಪಿ. ಕುಟುಂಬಗಳಿಗೆ ಅವಶ್ಯವಾದ ಹಣಕಾಸು ಸಹಾಯವನ್ನು ಸೂಕ್ತವಾಗಿ ಒದಗಿಸಿಕೊಡುವ ಸರಕಾರದ ಪ್ರತಿಕ್ರಿಯಾ ಸಾಮರ್ಥ್ಯ ವರ್ಧನೆಯೂ ಆದಂತಾಗುತ್ತದೆ. ಇದಕ್ಕೆ ಅವಶ್ಯವಾದ ಹಣಕಾಸನ್ನು ಜಾರಿಯಲ್ಲಿರುವ ಯೋಜನೆಗೆ ಮಂಜೂರಾದ ನಿಧಿಯಿಂದ ಭರಿಸಲಾಗುವುದು.



(Release ID: 1587811) Visitor Counter : 231