ಪ್ರಧಾನ ಮಂತ್ರಿಯವರ ಕಛೇರಿ

ಅನ್ನದಾತರ ಜೀವನಕ್ಕೆ ಭದ್ರತೆ ಒದಗಿಸಲು ಕಿಸಾನ್ ಮಾನ್ ಧನ್ ಯೋಜನೆಗೆ ಸೆಪ್ಟೆಂಬರ್ 12 ರಂದು ಪ್ರಧಾನಿಯವರಿಂದ ಚಾಲನೆ 400 ಏಕಲವ್ಯ ಮಾದರಿ ವಸತಿ ಶಾಲೆಗಳ ಉದ್ಘಾಟನೆ: ರಾಂಚಿಯಲ್ಲಿ ಹೊಸ ಜಾರ್ಖಂಡ್ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ

Posted On: 09 SEP 2019 5:07PM by PIB Bengaluru

ಅನ್ನದಾತರ ಜೀವನಕ್ಕೆ ಭದ್ರತೆ ಒದಗಿಸಲು ಕಿಸಾನ್ ಮಾನ್ ಧನ್ ಯೋಜನೆಗೆ ಸೆಪ್ಟೆಂಬರ್ 12 ರಂದು ಪ್ರಧಾನಿಯವರಿಂದ ಚಾಲನೆ

400 ಏಕಲವ್ಯ ಮಾದರಿ ವಸತಿ ಶಾಲೆಗಳ ಉದ್ಘಾಟನೆ: ರಾಂಚಿಯಲ್ಲಿ ಹೊಸ ಜಾರ್ಖಂಡ್ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ
 

ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ಮಾನ್ ಧನ್ ಯೋಜನೆಗೆ ಸೆಪ್ಟೆಂಬರ್ 12 ರಂದು ಜಾರ್ಖಂಡ್‌ನ ರಾಂಚಿಯಲ್ಲಿ ಚಾಲನೆ ನೀಡಲಿದ್ದಾರೆ.

60 ವರ್ಷ ದಾಟಿದವರಿಗೆ ತಿಂಗಳಿಗೆ ಕನಿಷ್ಠ 3000 ರೂ.ಗಳ ಪಿಂಚಣಿ ನೀಡುವ ಮೂಲಕ ಈ ಯೋಜನೆ 5 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನವನ್ನು ಭದ್ರಪಡಿಸುತ್ತದೆ.

ಈ ಯೋಜನೆಯು ಮುಂದಿನ ಮೂರು ವರ್ಷಗಳವರೆಗೆ 10,774 ಕೋಟಿ ರೂ. ವೆಚ್ಚ ಮಾಡಲಿದೆ.

ಪ್ರಸ್ತುತ 18 ರಿಂದ 40 ವರ್ಷದೊಳಗಿರುವ ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ರೈತರು ತಮ್ಮ ಮಾಸಿಕ ಕಂತನ್ನು PM-KISAN ನ ಕಂತುಗಳಿಂದ ಅಥವಾ CSC ಗಳ ಮೂಲಕ ತುಂಬಬಹುದು.

ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿನ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಪ್ರಾಥಮಿಕ, ಪ್ರೌಢ ಮತ್ತು ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಒದಗಿಸಲು ಪ್ರಧಾನಿ ನರೇಂದ್ರಮೋದಿ 400 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಂಚಿಯಲ್ಲಿ ಹೊಸ ಜಾರ್ಖಂಡ್ ವಿಧಾನಸಭಾ ಕಟ್ಟಡವನ್ನುಉದ್ಘಾಟಿಸುವರು ಮತ್ತು ಹೊಸ ಸಚಿವಾಲಯದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಅವರ ಈ ಭೇಟಿಯ ಸಮಯದಲ್ಲಿ, ಅವರು ಸಾಹೇಬ್ ಗಂಜ್ ನಲ್ಲಿ ಮಲ್ಟಿ-ಮೋಡಲ್ ಟರ್ಮಿನಲ್ ಅನ್ನು ಉದ್ಘಾಟಿಸುತ್ತಾರೆ.


(Release ID: 1585283) Visitor Counter : 142