ಪ್ರಧಾನ ಮಂತ್ರಿಯವರ ಕಛೇರಿ

ಮರುಭೂಮೀಕರಣವನ್ನು ತಡೆಗಟ್ಟುವ ವಿಶ್ವಸಂಸ್ಥೆ ಸಮಾವೇಶದ ಪಕ್ಷಗಳ 14 ನೇ ಸಮ್ಮೇಳನದ (ಸಿಒಪಿ 14) ಉನ್ನತಮಟ್ಟದ ವಿಭಾಗವನ್ನು ಉದ್ದೇಶಿಸಿ ಪ್ರಧಾನಿಯವರ ಭಾಷಣ ಪರಿಣಾಮಕಾರಿ ಕೊಡುಗೆ ನೀಡಲು ಭಾರತಎದುರು ನೋಡುತ್ತಿದೆ, ಮಾನವಸಬಲೀಕರಣವು ಪರಿಸರದೊಂದಿಗೆ ನಿಕಟಸಂಬಂಧ ಹೊಂದಿದೆ: ಪ್ರಧಾನಿ ಭೂ ನಾಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನುಬಗೆಹರಿಸಲು ಭಾರತವು ಶ್ರೇಷ್ಠತಾಕೇಂದ್ರವೊಂದನ್ನು ಸ್ಥಾಪಿಸಲಿದೆ: ಪ್ರಧಾನಿ

Posted On: 09 SEP 2019 4:47PM by PIB Bengaluru

ಮರುಭೂಮೀಕರಣವನ್ನು ತಡೆಗಟ್ಟುವ ವಿಶ್ವಸಂಸ್ಥೆ ಸಮಾವೇಶದ ಪಕ್ಷಗಳ 14 ನೇ ಸಮ್ಮೇಳನದ (ಸಿಒಪಿ 14) ಉನ್ನತಮಟ್ಟದ ವಿಭಾಗವನ್ನು ಉದ್ದೇಶಿಸಿ ಪ್ರಧಾನಿಯವರ ಭಾಷಣ

ಪರಿಣಾಮಕಾರಿ ಕೊಡುಗೆ ನೀಡಲು ಭಾರತಎದುರು ನೋಡುತ್ತಿದೆ, ಮಾನವಸಬಲೀಕರಣವು ಪರಿಸರದೊಂದಿಗೆ ನಿಕಟಸಂಬಂಧ ಹೊಂದಿದೆ: ಪ್ರಧಾನಿ ಭೂ ನಾಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನುಬಗೆಹರಿಸಲು ಭಾರತವು ಶ್ರೇಷ್ಠತಾಕೇಂದ್ರವೊಂದನ್ನು ಸ್ಥಾಪಿಸಲಿದೆ: ಪ್ರಧಾನಿ
 

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಇಂದು ಮರುಭೂಮೀಕರಣವನ್ನು ತಡೆಗಟ್ಟುವವಿಶ್ವಸಂಸ್ಥೆ ಸಮಾವೇಶದ ಪಕ್ಷಗಳ 14 ನೇ ಸಮ್ಮೇಳನದ (ಸಿಒಪಿ 14) ಉನ್ನತ ಮಟ್ಟದ ವಿಭಾಗವನ್ನು ಉದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರಮೋದಿ ಅವರು ಮಾತನಾಡಿದರು.

ನಾವು ಎರಡು ವರ್ಷಗಳ ಅವಧಿಗೆ ಸಹ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವುದರಿಂದ ಇದಕ್ಕೆಪರಿಣಾಮಕಾರಿ ಕೊಡುಗೆ ನೀಡಲು ಭಾರತಎದುರು ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು. ಯುಗಯುಗಗಳಿಂದಲೂ ನಾವು ಭಾರತದಲ್ಲಿ ಯಾವಾಗಲೂ ಭೂಮಿಗೆ ಪ್ರಾಮುಖ್ಯತೆ ನೀಡಿದ್ದೇವೆ. ಭಾರತೀಯ ಸಂಸ್ಕೃತಿಯಲ್ಲಿ ಭೂಮಿಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಹಾಗೂ ತಾಯಿಯಂತೆ ನೋಡಿ ಕೊಳ್ಳುತ್ತೆವೆ.

“ಮರುಭೂಮೀಕರಣವು ವಿಶ್ವದ ಮೂರನೇ ಎರಡರಷ್ಟು ದೇಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ. ಪ್ರಪಂಚವು ಎದುರಿಸುತ್ತಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ಕ್ರಿಯೆಯೊಂದಿಗೆ ಕ್ರಮ ಕೈಗೊಳ್ಳಲು ಇದು ಬಲವಾದ ಪ್ರಕರಣವಾಗಿದೆ. ಏಕೆಂದರೆನಾವು ಅವನತಿ ಹೊಂದಿದ ಭೂಮಿಯನ್ನು ಸಮಸ್ಯೆಯನ್ನು ಪರಿಹರಿಸುವಾಗ ನೀರಿನ ಕೊರತೆಯ ಸಮಸ್ಯೆಯನ್ನು ಸಹ ಪರಿಹರಿಸುತ್ತೇವೆ. ನೀರು ಸರಬರಾಜನ್ನು ಹೆಚ್ಚಿಸುವುದು, ನೀರಿನ ಮರುಪೂರಣ ಹೆಚ್ಚಿಸುವುದು, ನೀರು ಹರಿಯುವುದನ್ನು ನಿಧಾನಗೊಳಿಸುವುದು ಮತ್ತು ಮಣ್ಣಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳುವುದು ಇವೆಲ್ಲವೂ ಸಮಗ್ರ ಭೂಮಿ ಮತ್ತು ನೀರಿನ ತಂತ್ರದ ಭಾಗಗಳಾಗಿವೆ. ಭೂಮಿ ನಾಶದ ತಟಸ್ಥತೆಯ ಕಾರ್ಯತಂತ್ರದ ಕೇಂದ್ರಬಿಂದುವಾಗಿರುವ ಗ್ಲೋಬಲ್ ವಾಟರ್ ಆಕ್ಷನ್ ಅಜೆಂಡಾವನ್ನು ಸೃಷ್ಟಿಸಲು ಯುಎನ್‌ಸಿಸಿಡಿಯ ನಾಯಕತ್ವವನ್ನುನಾನು ಒತ್ತಾಯಿಸುತ್ತೇನೆ” ಎಂದು ಪ್ರಧಾನಿ ಹೇಳಿದರು.

“ಯುಎನ್‌ಎಫ್‌ಸಿಸಿಯಲ್ಲಿ ಪ್ಯಾರಿಸ್ ಸಿಒಪಿಯಲ್ಲಿ ಸಲ್ಲಿಸಲಾದ ಭಾರತದ ಸೂಚ್ಯಂಕಗಳು ಇಂದು ನನಗೆ ನೆನಪಿಗೆ ಬಂದವು. ಭೂಮಿ, ನೀರು, ಗಾಳಿ,ಮರಗಳು ಮತ್ತು ಎಲ್ಲಾ ಜೀವಿಗಳ ನಡುವೆ ಆರೋಗ್ಯಕರ ಸಮತೋಲನವನ್ನು ಕಾಪಾಡುವ ಭಾರತದ ಬಲವಾದ ಸಾಂಸ್ಕೃತಿಕ ಬೇರುಗಳನ್ನು ಇದು ಎತ್ತಿ ತೋರಿಸಿದೆ. ಸ್ನೇಹಿತರೇ, ಭಾರತವು ತನ್ನ ಅರಣ್ಯವನ್ನು ಹೆಚ್ಚಿಸಿಕೊಂಡಿದೆ ಎಂಬುದುನಿಮಗೆ ಸಂತೋಷ ನೀಡುತ್ತದೆ. 2015 ರಿಂದ2017 ರ ನಡುವೆ ಭಾರತದ ಮರ ಮತ್ತು ಅರಣ್ಯವ್ಯಾಪ್ತಿಯನ್ನು 0.8 ಮಿಲಿಯನ್ ಹೆಕ್ಟೇರ್ ಹೆಚ್ಚಿಸಲಾಗಿದೆ” ಎಂದು ಪ್ರಧಾನಿ ಹೇಳಿದರು.

ವಿವಿಧ ಕ್ರಮಗಳ ಮೂಲಕ ಬೆಳೆ ಇಳುವರಿಯನ್ನು ಹೆಚ್ಚಿಸಿ ಆ ಮೂಲಕ ರೈತರ ಆದಾಯವನ್ನುದುಪ್ಪಟ್ಟು ಮಾಡುವ ಕಾರ್ಯಕ್ರಮವನ್ನು ಸರ್ಕಾರಪ್ರಾರಂಭಿಸಿದೆ ಎಂದು ಪ್ರಧಾನಿಹೇಳಿದರು. ಇದರಲ್ಲಿ ಭೂ ಪುನಃಸ್ಥಾಪನೆ ಮತ್ತು ಸೂಕ್ಷ್ಮ ನೀರಾವರಿ ಸೇರಿವೆ. ಪ್ರತಿ ಹನಿ ಹೆಚ್ಚು ಬೆಳೆ ಎಂಬ ಧ್ಯೇಯವಾಕ್ಯದೊಂದಿಗೆ ನಾವು ಕೆಲಸಮಾಡುತ್ತಿದ್ದೇವೆ. ನಾವು ಜೈವಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸುತ್ತಿದ್ದೇವೆ ಮತ್ತುಕೀಟನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುತ್ತಿದ್ದೇವೆ. ನೀರು ಸಂಬಂಧಿತ ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಒಟ್ಟಾರೆಯಾಗಿ ಪರಿಹರಿಸಲು ನಾವು ಜಲಶಕ್ತಿ ಸಚಿವಾಲಯವನ್ನು ರಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಭಾರತವು ಏಕಬಳಕೆಯ ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಅಂತ್ಯಹಾಡಲಿದೆ ಎಂದರು.

“ಸ್ನೇಹಿತರೇ, ಮಾನವ ಸಬಲೀಕರಣವು ಪರಿಸರದೊಂದಿಗೆ ನಿಕಟ ಸಂಬಂಧ ಹೊಂದಿದೆ. ಇದು ನೀರಿನ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದಿರಲಿ ಅಥವಾ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದಿರಲಿ, ಮುಂದಿನ ಮಾರ್ಗವೆಂದರೆ ವರ್ತನೆಯ ಬದಲಾವಣೆ. ಸಮಾಜದ ಎಲ್ಲಾ ವರ್ಗದವರು ಏನನ್ನಾದರೂ ಸಾಧಿಸಲು ನಿರ್ಧರಿಸಿದಾಗ ಮಾತ್ರನಾವು ಬಯಸಿದ ಫಲಿತಾಂಶಗಳನ್ನು ನೋಡಬಹುದು. ನಾವು ಯಾವುದೇ ಸಂಖ್ಯೆಯ ಚೌಕಟ್ಟುಗಳನ್ನು ಪರಿಚಯಿಸಬಹುದು ಆದರೆನಿಜವಾದ ಬದಲಾವಣೆಯು ವಾಸ್ತವದಲ್ಲಿ ತಂಡದ ಕೆಲಸದಿಂದ ನಡೆಸಲ್ಪಡುತ್ತದೆ. ಭಾರತ ಇದನ್ನುಸ್ವಚ್ಛ ಭಾರತ ಅಭಿಯಾನದಲ್ಲಿ ಕಂಡುಕೊಂಡಿದೆ. ಭಾರತ ಕಂಡಿದ್ದು, ಎಲ್ಲಾ ವರ್ಗದ ಜನರು ಇದರಲ್ಲಿ ಭಾಗವಹಿಸಿ ನೈರ್ಮಲ್ಯವನ್ನು ಖಾತ್ರಿಪಡಿಸಿಕೊಂಡರು, ಇದು 2014 ರಲ್ಲಿಶೇಕಡಾ 38 ಇದ್ದದ್ದು ಇಂದು ಶೇಕಡಾ 99 ಕ್ಕೆ ಏರಿದೆ ” ಎಂದು ಪ್ರಧಾನಿ ಹೇಳಿದರು.

ಜಾಗತಿಕ ಭೂ ಕಾರ್ಯಸೂಚಿಯಲ್ಲಿ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. "ಭಾರತದಲ್ಲಿ ಯಶಸ್ವಿಯಾದಕೆಲವು LDN (ಭೂ ಕುಸಿತ ತಟಸ್ಥತೆ) ಕಾರ್ಯತಂತ್ರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಳವಡಿಸಿಕೊಳ್ಳಲು ಇಷ್ಟಪಡುವ ದೇಶಗಳಿಗೆ ಭಾರತ ಬೆಂಬಲವನ್ನು ನೀಡುತ್ತದೆ. ಭಾರತವು ತನ್ನ ಭೂ ಕುಸಿತದ ಪುನಃಸ್ಥಾಪನೆಯನ್ನು ಇಂದಿನಿಂದ 2030ರ ನಡುವೆ 21 ಮಿಲಿಯನ್ ಹೆಕ್ಟೇರ್‌ನಿಂದ 26 ಮಿಲಿಯನ್ ಹೆಕ್ಟೇರ್‌ಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯನ್ನು ಈ ವೇದಿಕೆಯಿಂದ ಘೋಷಿಸಲು ಬಯಸುತ್ತೇನೆ ”ಎಂದು ಪ್ರಧಾನಿಹೇಳಿದರು.

ವೈಜ್ಞಾನಿಕ ವಿಧಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮತ್ತು ಭೂ ಅವನತಿ ಸಮಸ್ಯೆಗಳಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ, ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣಮಂಡಳಿಯಲ್ಲಿ ಶ್ರೇಷ್ಠತೆ ಕೇಂದ್ರವೊಂದನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ಹೇಳಿದರು. ಭೂಮಿ ನಾಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲುಜ್ಞಾನ, ತಂತ್ರಜ್ಞಾನ ಮತ್ತು ಮಾನವಶಕ್ತಿಯತರಬೇತಿಯನ್ನು ಲಭ್ಯತೆಯನ್ನು ಬಯಸುವವರೊಂದಿಗೆ ದಕ್ಷಿಣ-ದಕ್ಷಿಣ ಸಹಕಾರವನ್ನು ಉತ್ತೇಜಿಸಲು ಇದು ಸಕ್ರಿಯವಾಗಿತೊಡಗಿಸಿಕೊಳ್ಳುತ್ತದೆ ಎಂದು ಪ್ರಧಾನಮಂತ್ರಿತಿಳಿಸಿದರು.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮಭಾಷಣವನ್ನು ‘ओम्द्यौःशान्तिः, अन्तरिक्षंशान्तिः’ನೊಂದಿಗೆ ಮುಕ್ತಾಯಗೊಳಿಸಿದರು, ಶಾಂತಿ ಎಂಬ ಪದವು ಶಾಂತಿಯನ್ನು ಅಥವಾ ಹಿಂಸಾಚಾರದ ವಿರೋಧಿಗಳನ್ನು ಮಾತ್ರ ಉಲ್ಲೇಖಿಸುವುದಿಲ್ಲ ಎಂದು ವಿವರಿಸಿದ ಅವರು, ಇದು ಸಮೃದ್ಧಿಯನ್ನು ಸೂಚಿಸುತ್ತದೆ ಎಂದರು. ಪ್ರತಿಯೊಂದಕ್ಕೂ ಒಂದು ಕಾನೂನು ಇದೆ, ಒಂದು ಉದ್ದೇಶವಿದೆ ಮತ್ತು ಪ್ರತಿಯೊಬ್ಬರೂ ಆ ಉದ್ದೇಶವನ್ನುಪೂರೈಸಬೇಕು. ಆ ಉದ್ದೇಶದ ಈಡೇರಿಕೆಯೇ ಸಮೃದ್ಧಿ. ಆದ್ದರಿಂದ, ಆಕಾಶ, ಸ್ವರ್ಗ ಮತ್ತು ಬಾಹ್ಯಾಕಾಶಕ್ಕೆ ಏಳಿಗೆ ಇರಲಿ ಎಂದು ಅದು ಹೇಳುತ್ತದೆ ಎಂದು ಪ್ರಧಾನಿ ವಿವರಿಸಿದರು.



(Release ID: 1585282) Visitor Counter : 90