ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ನೇಪಾಳ ಪ್ರಧಾನಮಂತ್ರಿ ಓಲಿ ಅವರಿಂದ ಮೋತಿಹಾರಿ- ಅಮ್ಲೇಕಂಜ್ (ನೇಪಾಳ) ಕೊಳವೆ ಮಾರ್ಗದ ಉದ್ಘಾಟನೆ

Posted On: 10 SEP 2019 2:17PM by PIB Bengaluru

ಪ್ರಧಾನಮಂತ್ರಿ ಮತ್ತು ನೇಪಾಳ ಪ್ರಧಾನಮಂತ್ರಿ ಓಲಿ ಅವರಿಂದ ಮೋತಿಹಾರಿ- ಅಮ್ಲೇಕಂಜ್ (ನೇಪಾಳ) ಕೊಳವೆ ಮಾರ್ಗದ ಉದ್ಘಾಟನೆ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಮಂತ್ರಿ ಶ್ರೀ ಓಲಿ ಅವರು ಇಂದು ಜಂಟಿಯಾಗಿ ಗಡಿಯಾಚೆಯ ಪೆಟ್ರೋಲಿಯಂ ಉತ್ಪನ್ನದ ಕೊಳವೆ ಮಾರ್ಗವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಜಂಟಿಯಾಗಿ ಉದ್ಘಾಟಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಮಂತ್ರಿ ರೈಟ್ ಹಾನರಬಲ್ ಕೆ.ಪಿ. ಶರ್ಮಾ ಓಲಿ ಅವರಿಂದು ಜಂಟಿಯಾಗಿ ದಕ್ಷಿಣ ಏಷ್ಯಾದ ಪ್ರಥಮ ಗಡಿಯಾಚೆಗಿನ ಪೆಟ್ರೋಲಿಯಂ ಉತ್ಪನ್ನಗಳ ಕೊಳವೆ ಮಾರ್ಗವನ್ನು ಭಾರತದ ಮೋತಿಹಾರಿ ಮತ್ತು ನೇಪಾಳದ ಅಮಲೇಕ್ ಗಂಜ್ ನಡುವೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಓಲಿ ಅವರು, ಈ ಮಹತ್ವದ ಸಂಪರ್ಕ ಯೋಜನೆಯನ್ನು ನಿಗದಿತ ಕಾಲಮಿತಿಗಿಂತ ಬಹಳಷ್ಟು ಮುಂಚಿತವಾಗಿ ಹಾಗೂ ಶೀಘ್ರ ಅನುಷ್ಠಾನಗೊಳಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಶ್ರೀ ಮೋದಿ ಅವರು, 69 ಕಿ.ಮೀ ಮೋತಿಹಾರಿ – ಅಮಲೇಕ್ ಗಂಜ್ ಕೊಳವೆ ಮಾರ್ಗವು 2 ದಶಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಸಾಮರ್ಥ ಹೊಂದಿದ್ದು, ಕೈಗೆಟಕುವ ದರದಲ್ಲಿ ನೇಪಾಳ ಜನತೆಗೆ ಪರಿಶುದ್ಧವಾದ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸಲಿದೆ ಎಂದರು. ನೇಪಾಳ ಪ್ರಧಾನಮಂತ್ರಿ ಓಲಿ ಅವರು ಪ್ರತಿ ಲೀಟರ್ ಪೆಟ್ರೋಲಿಯಂ ಉತ್ಪನಗಳ ದರವನ್ನು ನೇಪಾಳದಲ್ಲಿ 2 ರೂಪಾಯಿ ಇಳಿಸುವ ಪ್ರಕಟಣೆ ಮಾಡಿದ್ದನ್ನು ಅವರು ಸ್ವಾಗತಿಸಿದರು.

ಭಾರತ – ನೇಪಾಳ ಸಹಯೋಗದ ದೂರದರ್ಶಿ ನೋಟದ ಕಾರ್ಯಕ್ರಮದ ವಿಸ್ತರಣೆಗೆ ನಿಯಮಿತವಾದ ಉನ್ನತ ರಾಜಕೀಯ ಮಟ್ಟದ ಭೇಟಿ ಇಂಬು ನೀಡಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಭಾರತ ಮತ್ತು ನೇಪಾಳ ನಡುವೆ ದ್ವಿಪಕ್ಷೀಯ ಬಾಂಧವ್ಯ ವೈವಿಧ್ಯಮಯ ವಲಯಗಳಲ್ಲಿ ಇನ್ನೂ ಹೆಚ್ಚು ವಿಸ್ತರಿಸಲಿದೆ ಮತ್ತು ಬಲಿಷ್ಠವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಓಲಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೇಪಾಳಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು. ಅದಕ್ಕೆ ಪ್ರಧಾನಮಂತ್ರಿ ಮೋದಿ ಅವರು ಸಮ್ಮತಿಸಿದರು.



(Release ID: 1585274) Visitor Counter : 105