ಸಂಪುಟ
ವಿವಿಧ ವಲಯಗಳಿಗೆ ವಿದೇಶೀ ನೇರ ಹೂಡಿಕೆ ನೀತಿಯ ಪರಾಮರ್ಶೆ ಪ್ರಸ್ತಾವಕ್ಕೆ ಸಂಪುಟದ ಅನುಮೋದನೆ
Posted On:
28 AUG 2019 7:35PM by PIB Bengaluru
ವಿವಿಧ ವಲಯಗಳಿಗೆ ವಿದೇಶೀ ನೇರ ಹೂಡಿಕೆ ನೀತಿಯ ಪರಾಮರ್ಶೆ ಪ್ರಸ್ತಾವಕ್ಕೆ ಸಂಪುಟದ ಅನುಮೋದನೆ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ವಿವಿಧ ವಲಯಗಳಿಗೆ ವಿದೇಶಿ ನೇರ ಹೂಡಿಕೆ (ಎಫ್.ಡಿ.ಐ.) ಪರಾಮರ್ಶೆ ಪ್ರಸ್ತಾವಕ್ಕೆ ಅನುಮೋದನೆ ನೀಡಿತು.
ಎಫ್.ಡಿ.ಐ. ನೀತಿ ಸುಧಾರಣೆಯಿಂದ ಆಗುವ ಪ್ರಯೋಜನ ಮತ್ತು ಪರಿಣಾಮಗಳು
i. ಎಫ್.ಡಿ.ಐ. ನೀತಿ ಬದಲಾವಣೆಯಿಂದ ಭಾರತವು ವಿದೇಶಿ ಹೂಡಿಕೆಗೆ ಅತ್ಯಾಕರ್ಷಕ ತಾಣವಾಗಿ ಮೂಡಿ ಬರಲಿದೆ, ಇದರಿಂದ ಹೂಡಿಕೆ ಹೆಚ್ಚಳವಾಗಿ ಉದ್ಯೋಗ ಮತ್ತು ಬೆಳವಣಿಗೆಯ ಲಾಭ ದೊರೆಯಲಿದೆ.
ii .ಕಲ್ಲಿದ್ದಲು ಕ್ಷೇತ್ರದಲ್ಲಿ , ಕಲ್ಲಿದ್ದಲು ಮಾರಾಟಕ್ಕೆ , ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳಿಗೆ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಕರಣಾ ಮೂಲಸೌಕರ್ಯಗಳಿಗೆ ಅಂತಾರಾಷ್ಟ್ರೀಯ ಉದ್ಯಮಿಗಳಿಂದ ದಕ್ಷ ಮತ್ತು ಸ್ಪರ್ಧಾತ್ಮಕ ಕಲ್ಲಿದ್ದಲು ಮಾರುಕಟ್ಟೆ ನಿರ್ಮಾಣಕ್ಕೆ 100% ವಿದೇಶೀ ಹೂಡಿಕೆ ಸ್ವಯಂಚಾಲಿತ ಮಾರ್ಗದಿಂದ ಹರಿದು ಬರಲಿದೆ.
iii. ಇದಲ್ಲದೆ, ಗುತ್ತಿಗೆ ಮೂಲಕ ಉತ್ಪಾದನೆಯು ಮೇಕ್ ಇನ್ ಇಂಡಿಯಾದ ಉದ್ದೇಶಗಳಿಗೆ ಸಮಾನವಾದ ಕೊಡುಗೆಯನ್ನು ನೀಡಲಿದೆ. ಗುತ್ತಿಗೆ ಉತ್ಪಾದನೆಗೆ ಈಗ ಸ್ವಯಂಚಾಲಿತ ಮಾರ್ಗದಲ್ಲಿ ವಿದೇಶಿ ನೇರ ಹೂಡಿಕೆಗೆ ಅವಕಾಶ ಒದಗಿಸಿರುವುದರಿಂದ ಭಾರತದಲ್ಲಿ ಉತ್ಪಾದನಾ ರಂಗಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ.
iv. ಏಕ ಬ್ರಾಂಡ್ ಚಿಲ್ಲರೆ ಮಾರಾಟ (ಎಸ್.ಬಿ.ಆರ್.ಟಿ.) ಯಲ್ಲಿ ಎಫ್.ಡಿ.ಐ. ಗೆ ಸ್ಥಳೀಯ ಮೂಲಗಳಿಗೆ ಸಂಬಂಧಿಸಿ ಅನ್ವಯಿಸುವ ಮಾನದಂಡಗಳನ್ನು ಹಣಕಾಸು ಸಚಿವರು ಕೇಂದ್ರ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. ಇದು ಇನ್ನಷ್ಟು ವಿಸ್ತಾರವಾದ ಸಡಿಲಿಕೆ ಮತ್ತು ವ್ಯಾಪಕತೆಯನ್ನು ಒದಗಿಸಲಿದ್ದು, ಎಸ್.ಬಿ.ಆರ್.ಟಿ. ಗಳಿಗೆ ಕಾರ್ಯಾಚರಿಸಲು ಅನುಕೂಲಕರ ವ್ಯವಸ್ಥೆಯನ್ನು ಒದಗಿಸುವುದಲ್ಲದೆ, ಇದರ ಜೊತೆಗೆ ಮೂಲ ವರ್ಷದಲ್ಲಿ ಹೆಚ್ಚು ರಫ್ತು ಮಾಡಿದ ಸಂಸ್ಥೆಗಳಿಗೆ ಸಮಾನ /ಏಕರೀತಿಯ ವ್ಯಾಪಾರ ವಾತಾವರಣವನ್ನು ನಿರ್ಮಾಣ ಮಾಡಲಿವೆ. ಕಲ್ಲು ಮಣ್ಣಿನ ಗೋಡೆಗಳ ವ್ಯವಸ್ಥೆಯ ಅಂಗಡಿಗಳನ್ನು ತೆರೆಯುವುದಕ್ಕೆ ಮೊದಲೇ ಆನ್ ಲೈನ್ ಮೂಲಕ ಮಾರಾಟಕ್ಕೆ ಅನುಮತಿ ನೀಡುವಿಕೆ ಸದ್ಯದ ಮಾರುಕಟ್ಟೆ ಪದ್ದತಿಗಳ ಜೊತೆ ಸಂಯೋಜನೆಯನ್ನು ಉಂಟು ಮಾಡುತ್ತದೆ. ಆನ್ ಲೈನ್ ಮಾರಾಟವು ಸಾಗಾಟ ಕ್ಷೇತ್ರದಲ್ಲಿ, ಡಿಜಿಟಲ್ ಪಾವತಿ, ಗ್ರಾಹಕ ಸೇವೆ, ತರಬೇತಿ, ಮತ್ತು ಉತ್ಪನ್ನ ಕೌಶಲ್ಯಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
V ಎಫ್.ಡಿ.ಐ. ನೀತಿಗೆ ಮೇಲ್ಕಾಣಿಸಿದ ತಿದ್ದುಪಡಿಗಳು ದೇಶದಲ್ಲಿ ವ್ಯಾಪಾರೋದ್ಯಮ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡಲು, ದೊಡ್ಡ ಪ್ರಮಾಣದಲ್ಲಿ ಎಫ್.ಡಿ.ಐ. ಹರಿದು ಬರಲು ಮತ್ತು ಆ ಮೂಲಕ ಹೂಡಿಕೆಯ ಬೆಳವಣಿಗೆ, ಆದಾಯ ಮತ್ತು ಉದ್ಯೋಗ ವೃದ್ದಿಗೆ ಕೊಡುಗೆ ನೀಡುವಂತಾಗುವುದಕ್ಕಾಗಿ ಹಾಗು ಎಫ್.ಡಿ.ಐ ನೀತಿಯನ್ನು ಉದಾರಗೊಳಿಸಲು ಮತ್ತು ಸರಳಗೊಳಿಸಲು ಮಾಡಲಾಗಿದೆ.
ಹಿನ್ನೆಲೆ
ಆರ್ಥಿಕ ಬೆಳವಣಿಗೆಗೆ ಎಫ್.ಡಿ.ಐ. ಪ್ರಮುಖ ಚಾಲಕ ಶಕ್ತಿ ಮತ್ತು ಅದು ದೇಶದ ಆರ್ಥಿಕ ಅಭಿವೃದ್ದಿಗಾಗಿರುವ ಬಡ್ಡಿ ರಹಿತ ಹಣಕಾಸು ಮೂಲ. ಸರಕಾರವು ಎಫ್.ಡಿ.ಐ.ಗೆ ಅನ್ವಯಿಸಿ ಹೂಡಿಕೆ ಸ್ನೇಹಿ ನೀತಿಯನ್ನು ರೂಪಿಸಿದ್ದು, ಅದರಡಿಯಲ್ಲಿ ಹೆಚ್ಚಿನ ವಲಯ/ರಂಗಗಳಲ್ಲಿ ಶೇಖಡಾ 100 ಎಫ್.ಡಿ.ಐ. ಯನ್ನು ಸ್ವಯಂಚಾಲಿತ ಮಾರ್ಗದಲ್ಲಿ ಮಾಡಲು ಅನುಮತಿ ಒದಗಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತವನ್ನು ಅತ್ಯಾಕರ್ಷಕ ಹೂಡಿಕಾ ತಾಣವನ್ನಾಗಿ ಮಾಡಲು ವಿವಿಧ ರಂಗಗಳಿಗೆ ಎಫ್.ಡಿ.ಐ. ನೀತಿಯ ಪ್ರಸ್ತಾವ/ನಿಬಂಧನೆಗಳನ್ನು ಸತತವಾಗಿ ಉದಾರೀಕರಿಸಲಾಗಿದೆ. ರಕ್ಷಣೆ, ನಿರ್ಮಾಣ ಅಭಿವೃದ್ದಿ, ವ್ಯಾಪಾರ, ಔಷಧಿ, ಇಂಧನ ವಿನಿಮಯ, ವಿಮಾ, ನಿವೃತ್ತಿ ವೇತನ, ಇತರ ಹಣಕಾಸು ಸೇವೆಗಳು, ಆಸ್ತಿ ಪುನರ್ ನಿರ್ಮಾಣ ಕಂಪೆನಿಗಳು, ಪ್ರಸಾರ ಮತ್ತ್ತು ನಾಗರಿಕ ವಾಯುಯಾನ ಸಹಿತ ಹಲವು ಕ್ಷೇತ್ರಗಳು ಇದರಲ್ಲಿ ಸೇರಿವೆ.
ಈ ಸುಧಾರಣೆಗಳು ಕಳೆದ 5 ವರ್ಷಗಳಲ್ಲಿ ದಾಖಲೆ ಪ್ರಮಾಣದ ವಿದೇಶಿ ನೇರ ಹೂಡಿಕೆ ಭಾರತದತ್ತ ಹರಿದು ಬರುವಂತಾಗಲು ಅನುಕೂಲಗಳನ್ನು ಮಾಡಿಕೊಟ್ಟಿವೆ. ಭಾರತದಲ್ಲಿ 2014-15 ರಿಂದ 2018-19 ನಡುವೆ ಒಟ್ಟು ವಿದೇಶಿ ನೇರ ಹೂಡಿಕೆ 286 ಬಿಲಿಯನ್ ಅಮೇರಿಕನ್ ಡಾಲರ್ ಆಗಿದೆ. ಇದಕ್ಕೂ ಹಿಂದಿನ ಐದು ವರ್ಷಗಳ ಅವಧಿಯಲ್ಲಿ (2009-10 ರಿಂದ 2013-14 ) ಈ ಪ್ರಮಾಣ 189 ಬಿಲಿಯನ್ ಅಮೇರಿಕನ್ ಡಾಲರ್ ಆಗಿತ್ತು. ವಸ್ತುಶಃ 2018-19ರಲ್ಲಿ ಒಟ್ಟು ಎಫ್.ಡಿ.ಐ. 64.37 ಬಿಲಿಯನ್ (ತಾತ್ಕಾಲಿಕ ಅಂದಾಜು) ಅಮೇರಿಕನ್ ಡಾಲರ್ ಆಗಿದ್ದು, ಯಾವುದೇ ಹಣಕಾಸು ವರ್ಷದಲ್ಲಿ ಬಂದ ಎಫ್.ಡಿ.ಐ.ಗೆ ಹೋಲಿಸಿದಾಗ ಇದು ಅತ್ಯಧಿಕ.
ಜಾಗತಿಕ ವಿದೇಶಿ ನೇರ ಹೂಡಿಕೆ ಹರಿವು ಕಳೆದ ಕೆಲವು ವರ್ಷಗಳಿಂದ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಯು.ಎನ್.ಸಿ.ಟಿ.ಎ.ಡಿ.ಯ ವಿಶ್ವ ಹೂಡಿಕೆ ವರದಿ 2019ರ ಪ್ರಕಾರ, ಜಾಗತಿಕ ವಿದೇಶಿ ನೇರ ಹೂಡಿಕೆ ಹರಿವು 2018ರಲ್ಲಿ ಶೇಖಡಾ 13% ಕುಸಿದಿದೆ ಅಂದರೆ ಹಿಂದಿನ ವರ್ಷ 1.5 ಟ್ರಿಲಿಯನ್ ಅಮೇರಿಕನ್ ಡಾಲರ್ ಇದ್ದ ಹೂಡಿಕೆ ಪ್ರಮಾಣ 1.3 ಟ್ರಿಲಿಯನ್ ಅಮೆರಿಕನ್ ಡಾಲರಿಗೆ ಕುಸಿದಿದೆ. ಇದು ಸತತ ಮೂರನೇ ವರ್ಷದ ಕುಸಿತವಾಗಿದೆ. ಜಾಗತಿಕವಾಗಿ ಇಂತಕ ಮುಸುಕಿನ ವಾತಾವರಣ ಇದ್ದಾಗಲೂ, ಭಾರತವು ಜಾಗತಿಕ ವಿದೇಶಿ ನೇರ ಹೂಡಿಕೆ ಹರಿವಿಗೆ ಅತ್ಯಾಕರ್ಷಕ ತಾಣವಾಗಿ ಉಳಿದಿದೆ. ಆದಾಗ್ಯೂ ದೇಶವು ಇನ್ನೂ ಹೆಚ್ಚಿನ ವಿದೇಶಿ ನೇರ ಹೂಡಿಕೆ ಆಕರ್ಷಿಸುವ ಸಾಮರ್ಥ್ಯ ಹೊಂದಿರುವುದಾಗಿ ಭಾವಿಸಲಾಗಿದ್ದು, ಅದನ್ನು ಎಫ್.ಡಿ.ಐ. ನೀತಿಯ ಉದಾರೀಕರಣ ಮತ್ತು ಸರಳೀಕರಣದಿಂದ ಸಾಧಿಸಬಹುದಾಗಿದೆ.
2019-20ರ ಕೇಂದ್ರ ಮುಂಗಡ ಪತ್ರದಲ್ಲಿ ಹಣಕಾಸು ಸಚಿವರು ಭಾರತವನ್ನು ವಿದೇಶಿ ನೇರ ಹೂಡಿಕೆಗೆ ಇನ್ನಷ್ಟು ಅತ್ಯಾಕರ್ಷಕ ತಾಣವನ್ನಾಗಿ ಮಾಡಲು ಎಫ್.ಡಿ.ಐ.ಯಲ್ಲಿ ಇನ್ನಷ್ಟು ದೃಢವಾದ ಪ್ರಸ್ತಾಪಗಳನ್ನು ಮಂಡಿಸಿದ್ದರು. ಅದರನ್ವಯ ಸರಕಾರವು ಎಫ್.ಡಿ.ಐ. ನೀತಿಯಲ್ಲಿ ಹಲವಾರು ತಿದ್ದುಪಡಿಗಳನ್ನು ತರಲು ನಿರ್ಧರಿಸಿತು. ಈ ಬದಲಾವಣೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಕಲ್ಲಿದ್ದಲು ಗಣಿಗಾರಿಕೆ
ಈಗಿರುವ ಎಫ್.ಡಿ.ಐ. ನೀತಿಯಲ್ಲಿ ವಿದ್ಯುತ್ ಯೋಜನೆಗಳ ಬಳಕೆಗೆ, ಕಬ್ಬಿಣ ಮತ್ತು ಉಕ್ಕು ಹಾಗು ಸಿಮೆಂಟ್ ಘಟಕಗಳು ಮತ್ತು ಇತರ ಅರ್ಹ ಕಾರ್ಯಚಟುವಟಿಕೆಗಳಿಗೆ ಕಲ್ಲಿದ್ದಲು ಮತ್ತು ಲಿಗ್ನೈಟ್ ಗಣಿಗಾರಿಕೆಗೆ ಅನ್ವಯಿಸುವ ಕಾನೂನು ನಿಬಂಧನೆಗಳ ಅಡಿಯಲ್ಲಿ ಶೇಖಡಾ 100 ಎಫ್.ಡಿ.ಐ.ಗೆ ಸ್ವಯಂಚಾಲಿತ ಮಾರ್ಗದಲ್ಲಿ ಅನುಮತಿ ಇದೆ. ಇದಲ್ಲದೆ ಕಲ್ಲಿದ್ದಲು ಸಂಸ್ಕರಣಾ ಘಟಕಗಳಾದ ಕಲ್ಲಿದ್ದಲು ತೊಳೆಯುವಿಕೆಯಂತಹ ಘಟಕಗಳಿಗೆ ಕಂಪನಿಯು ಕಲಿದ್ದಲು ಗಣಿಗಾರಿಕೆ ಮಾಡುವುದಿಲ್ಲ ಎಂಬ ಶರತ್ತಿನ ಆಧಾರದ ಮೇಲೆ ಮತ್ತು ತೊಳೆದ ಕಲ್ಲಿದ್ದಲನ್ನು ಅಥವಾ ನಿಗದಿತ ಗಾತ್ರಕ್ಕೆ ಹುಡಿ ಮಾಡಿದ ಕಲ್ಲಿದ್ದಲನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡದಿರುವ ಕರಾರಿನ ಮೇಲೆ ಹಾಗು ತೊಳೆದ ಕಲ್ಲಿದ್ದಲು ಮತ್ತು ನಿಗದಿತ ಗಾತ್ರದಲ್ಲಿ ತುಂಡರಿಸಿದ ಕಲ್ಲಿದ್ದಲನ್ನು ಕಚ್ಚಾ ಕಲ್ಲಿದ್ದಲು ಪೂರೈಸುವವರಿಗೆ ಮಾರಾಟ ಮಾಡುವ ನಿಬಂಧನೆಯ ಮೇಲೆ 100% ಎಫ್.ಡಿ.ಐ.ಗೆ ಸ್ವಯಂಚಾಲಿತ ಮಾರ್ಗದಲ್ಲಿ ಅನುಮತಿ ನೀಡಲಾಗುವುದು
ಕಲ್ಲಿದ್ದಲು ಮಾರಾಟ, ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳಿಗೆ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಕರಣಾ ಮೂಲಸೌಕರ್ಯಗಳ ಸಹಿತ ಕಲ್ಲಿದ್ದಲು ಗಣಿಗಳು (ವಿಶೇಷ ಪ್ರಸ್ತಾವನೆಗಳು) ಕಾಯ್ದೆ, 2015, ಗಣಿಗಳು ಹಾಗು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ ) ಕಾಯ್ದೆ, 1957, ಕಾಲ ಕಾಲಕ್ಕೆ ಆಗಿರುವ ತಿದ್ದುಪಡಿಗಳ ಸಹಿತ ಮತ್ತು ಆ ವಿಷಯಕ್ಕೆ ಸಂಬಂಧಿಸಿದ ಸೂಕ್ತ ಕಾಯ್ದೆಗಳ ಅನ್ವಯ, ಸ್ವಯಂ ಚಾಲಿತ ಮಾರ್ಗದಲ್ಲಿ 100% ಎಫ್.ಡಿ.ಐ.ಗೆ ಅನುಮತಿ ನೀಡಲು ನಿರ್ಧರಿಸಲಾಯಿತು.”ಸಂಬಂಧಿಸಿದ ಪೂರಕ ಸಂಸ್ಕರಣಾ ಮೂಲಸೌಕರ್ಯ” ದಲ್ಲಿ ಕಲ್ಲಿದ್ದಲು ತೊಳೆಯುವಿಕೆ/ಸ್ವಚ್ಚತೆ, ಹುಡಿ ಮಾಡುವಿಕೆ, ಕಲ್ಲಿದ್ದಲು ನಿರ್ವಹಣೆ ಮತ್ತು ವಿಂಗಡಣೆ (ಆಯಸ್ಕಾಂತೀಯ ಮತ್ತು ಆಯಸ್ಕಾಂತ ರಹಿತ) ಗಳು ಸೇರಿವೆ.
ಗುತ್ತಿಗೆ ಉತ್ಪಾದನೆ
- ಉತ್ಪಾದನಾ ವಲಯದಲ್ಲಿ ಸ್ವಯಂಚಾಲಿತ ಮಾರ್ಗದ ಮೂಲಕ 100% ಎಫ್.ಡಿ.ಐ.ಗೆ ಈ ಎಫ್.ಡಿ.ಐ. ನೀತಿ ಅವಕಾಶ ನೀಡುತ್ತದೆ.ನೀತಿಯಲ್ಲಿ ಗುತ್ತಿಗೆ ಉತ್ಪಾದನೆಯ ಬಗ್ಗೆ ನಿರ್ದಿಷ್ಟ ಪ್ರಸ್ತಾವನೆಗಳು ಇಲ್ಲ.. ಗುತ್ತಿಗೆ ಉತ್ಪಾದನೆಯ ಬಗ್ಗೆ ಸ್ಪಷ್ಟತೆಗಾಗಿ ಭಾರತದಲ್ಲಿ ಗುತ್ತಿಗೆ ಉತ್ಪಾದನಾ ಕ್ಷೇತ್ರಕ್ಕೂ ಸ್ವಯಂ ಚಾಲಿತ ಮಾರ್ಗದಲ್ಲಿ 100% ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
- ಎಫ್.ಡಿ.ಐ. ನೀತಿಯ ಪ್ರಸ್ತಾವನೆಗಳಿಗೆ ಅನ್ವಯವಾಗುವಂತೆ “ಉತ್ಪಾದನಾ” ವಲಯಕ್ಕೆ ಸ್ವಯಂಚಾಲಿತ ಮಾರ್ಗದಲ್ಲಿ ವಿದೇಶಿ ನೇರ ಹೂಡಿಕೆ. ಉತ್ಪಾದನಾ ಕಾರ್ಯಚಟುವಟಿಕೆಗಳನ್ನು ಭಾರತದಲ್ಲಿ ಹೂಡಿಕೆದಾರರೆ ನಡೆಸಬಹುದು ಅಥವಾ ಕಾನೂನು ಬದ್ಧ ಗುತ್ತಿಗೆಯ ಮೂಲಕವೂ ನಡೆಸಬಹುದು. ಇದು ಹೂಡಿಕೆದಾರರಿಂದ ಹೂಡಿಕೆದಾರರ ನಡುವೆ ಅಥವಾ ಹೂಡಿಕೆದಾರರಿಂದ ಏಜೆಂಟರ ಆಧಾರದಲ್ಲಿಯೂ ಇರಬಹುದು.
ಏಕ ಬ್ರಾಂಡ್ ಚಿಲ್ಲರೆ ವ್ಯಾಪಾರ (ಎಸ್.ಬಿ.ಆರ್.ಟಿ.)
ಈಗಿರುವ ಎಫ್.ಡಿ.ಐ. ನೀತಿಯು ಎಸ್.ಬಿ.ಆರ್.ಟಿ. ಸಂಸ್ಥೆಯು 51% ಗೂ ಹೆಚ್ಚಿನ ಎಫ್.ಡಿ.ಐ. ಹೊಂದಿದ್ದರೆ ಆಗ 30 % ಮೌಲ್ಯದ ಸರಕುಗಳನ್ನು ಭಾರತದಿಂದಲೇ ಖರೀದಿಸಬೇಕು. ಜೊತೆಗೆ ಸ್ಥಳೀಯ ಮೂಲಗಳ ಖರೀದಿ ಅಗತ್ಯಗಳನ್ನು ಮೊದಲ 5 ವರ್ಷ ಸರಾಸರಿ ರೀತಿಯಲ್ಲಿ ಈಡೇರಿಸಬೇಕು. ಮತ್ತು ಆ ಬಳಿಕ ವಾರ್ಷಿಕವಾಗಿ ನಿಭಾಯಿಸಬೇಕು.ಇದರಲ್ಲಿ ಹೆಚ್ಚಿನ ಹೊಂದಾಣಿಕೆಗಾಗಿ ಮತ್ತು ಎಸ್.ಬಿ.ಆರ್.ಟಿ.ಗಳ ಸುಗಮ ಕಾರ್ಯಾಚರಣೆಗಾಗಿ ಎಸ್.ಬಿ.ಆರ್.ಟಿ. ಸಂಸ್ಥೆಯು ಏಕ ಬ್ರಾಂಡ್ ನಲ್ಲಿ ಭಾರತದಿಂದ ಖರೀದಿಸುವ ಎಲ್ಲಾ ಖರೀದಿಗಳನ್ನೂ ಅದು ಭಾರತದಲ್ಲಿ ಮಾರಾಟವಾಗಿರಲಿ ಇಲ್ಲವೇ ರಫ್ತಾಗಿರಲಿ, ಅವೆಲ್ಲವನ್ನು ಸ್ಥಳಿಯ ಮೂಲಗಳಿಂದ ಖರೀದಿ ಎಂದು ಪರಿಗಣಿಸಲಾಗುವುದು.ಜೊತೆಗೆ ರಫ್ತನ್ನು5 ವರ್ಷಗಳಿಗೆ ಮಾತ್ರವೇ ಪರಿಗಣಿಸುವ ಮಿತಿಯನ್ನು ತೆಗೆದು ಹಾಕಲಾಗುವುದು. ರಫ್ತಿಗೆ ಉತ್ತೇಜನ ನೀಡುವುದಕ್ಕಾಗಿ ಈ ಕ್ರಮ.
- ಈಗಿರುವ ನೀತಿಯು ಸ್ಥಳೀಯ ಮೂಲಗಳಿಂದ ಖರೀದಿ ಆವಶ್ಯಕತೆಗೆ ಸಂಬಂಧಿಸಿ ಅನಿವಾಸಿ ಭಾರತೀಯರ ಸಂಸ್ಥೆಗಳಿಗೆ ಏಕ ಬ್ರಾಂಡ್ ಚಿಲ್ಲರೆ ಮಾರಾಟ ಮಾಡುವ ಸಂದರ್ಭದಲ್ಲಿ ಜಾಗತಿಕ ವ್ಯಾಪಾರ ಕಾರ್ಯಾಚರಣೆಯನ್ನು ನೇರವಾಗಿ ನಡೆಸಬಹುದು ಇಲ್ಲವೆ ಅವರ ಗುಂಪಿನ ಕಂಪೆನಿಗಳ ಮೂಲಕ ನಡೆಸಬಹುದಾಗಿದ್ದು, ಅದನ್ನು ಮೊದಲ ಐದು ವರ್ಷಗಳ ಸ್ಥಳೀಯ ಮೂಲದ ಆವಶ್ಯಕತೆಗೆ ಪರಿಗಣಿಸಲಾಗುವುದು. ಆದಾಗ್ಯೂ ಈಗಿರುವ ವ್ಯಾಪಾರೋದ್ಯಮ ಮಾದರಿಗಳು ಜಾಗತಿಕ ವಹಿವಾಟಿಗಾಗಿ ಆಯಾ ಸಂಸ್ಥೆಗಳು ಅಥವಾ ಅದರ ಗುಂಪಿನ ಸಂಸ್ಥೆಗಳು ಭಾರತದಿಂದ ಮಾತ್ರವೇ ಖರೀದಿಸುವುದಲ್ಲದೆ ಏಕ ಬ್ರಾಂಡ್ ಚಿಲ್ಲರೆ ಮಾರಾಟ ಸಂಸ್ಥೆಯ ಅಥವಾ ಅದರ ಗುಂಪಿನ ಕಂಪೆನಿಗಳ ಪರವಾಗಿ ಸಂಬಂಧಪಡದ ಮೂರನೇ ಸಂಸ್ಥೆಯಿಂದಲೂ ಖರೀದಿಸುತ್ತವೆ.ಇಂತಹ ವ್ಯಾಪಾರ ಪದ್ಧತಿಗಳನ್ನು ವ್ಯಾಪ್ತಿಯೊಳಗೆ ತರಲು “ಜಾಗತಿಕ ವ್ಯವಹಾರಕ್ಕಾಗಿ ಭಾರತದಿಂದ ಸರಕುಗಳ ಖರೀದಿ’ ಯನ್ನು ಎಸ್.ಬಿ.ಆರ್.ಟಿ. ವ್ಯವಹಾರ ನಡೆಸುತ್ತಿರುವ ಸಂಸ್ಥೆಯು ನೇರವಾಗಿ ಖರೀದಿಸಬಹುದು ಅಥವಾ ಅದರ ಗುಂಪಿನ ಕಂಪೆನಿಗಳ ಮೂಲಕ (ನಿವಾಸಿ ಅಥವಾ ಅನಿವಾಸಿ), ಇಲ್ಲವೇ ಪರೋಕ್ಷವಾಗಿ ಮೂರನೇ ಸಂಸ್ಥೆ/ಪಕ್ಷದಿಂದ ಕಾನೂನು ಬದ್ದವಾದ ಒಪ್ಪಂದದ ಮೂಲಕ ಖರೀದಿಸಬಹುದು ಎಂದು ನಿರ್ಧರಿಸಲಾಗಿದೆ.
- ಈಗಿರುವ ನೀತಿಯು ಜಾಗತಿಕ ಮೂಲಗಳಿಂದ ಖರೀದಿಯನ್ನು ಸ್ಥಳೀಯ ಮೂಲಗಳ ಆವಶ್ಯಕತೆಯೊಂದಿಗೆ ತಾಳೆ ಹಾಕುವ ಅಂಶವನ್ನು ಒಳಗೊಂಡಿದೆ.ಇದು ಹಿಂದಿನ ವರ್ಷದಕ್ಕಿಂತ ಹೆಚ್ಚಿನ ಪ್ರಮಾಣ ಮತ್ತು ಹೆಚ್ಚಿನ ಮೌಲ್ಯವನ್ನು ಹೊಂದಿರುತ್ತದೆ. ಇಂತಹ ಆವಶ್ಯಕತೆಗಳಿಂದ ರಫ್ತು ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುವುದರಿಂದ ವ್ಯವಸ್ಥೆಯಲ್ಲಿ ಕೆಲವು ಏರು- ಪೇರುಗಳುಂಟಾಗುತ್ತವೆ. ಮೂಲ ವರ್ಷದಲ್ಲಿ ಅಥವಾ ಬಳಿಕದ ವರ್ಷದಲ್ಲಿ ಕಡಿಮೆ ರಫ್ತು ವಹಿವಾಟು ಮಾಡಿದ ಕಂಪೆನಿಗಳು ಸದ್ಯದ ಆವಶ್ಯಕತೆಗಳನ್ನು ಪೂರೈಸಬಲ್ಲವು, ಆದರೆ ಕಂಪೆನಿಯೊಂದು ಸತತ ಹೆಚ್ಚಿನ ಪ್ರಮಾಣದ ರಫ್ತು ವಹಿವಾಟು ನಡೆಸುತ್ತಿದ್ದರೆ, ಅದಕ್ಕೆ ಅನ್ಯಾಯ ಮಾಡಿದಂತಾಗುತ್ತದೆ.ಆದುದರಿಂದ ಈಗ ಜಾಗತಿಕ ವಹಿವಾಟಿಗಾಗಿ ಭಾರತದಲ್ಲಿ ಮಾಡಲಾದ ಪೂರ್ಣ ಖರೀದಿಯನ್ನು ಸ್ಥಳಿಯ ಮೂಲಗಳಿಂದ ಮಾಡಲಾದ ಖರೀದಿ ಆವಶ್ಯಕತೆಗೆ ಪರಿಗಣಿಸಲಾಗುವುದು.(ಮತ್ತು ಅಲ್ಲಿ ಸತತ ಮೌಲ್ಯ ಹೆಚ್ಚಳ ಇಲ್ಲ)
- ಇ-ಕಾಮರ್ಸ್ ಮೂಲಕ ಚಿಲ್ಲರೆ ವಹಿವಾಟು ಮಾಡುವುದಕ್ಕೆ ಮೊದಲು ಎಸ್.ಬಿ.ಆರ್.ಟಿ. ಸಂಸ್ಥೆಗಳು ಆಯಾ ಬ್ರಾಂಡಿನ ಮಾರಾಟಕ್ಕೆ ಮಳಿಗೆ (ಇಟ್ಟಿಗೆ-ಮಣ್ಣಿನ )ಹೊಂದಿರಬೇಕು ಮತ್ತು ಅದರ ಮೂಲಕ ವಹಿವಾಟು ನಡೆಸಬೇಕು ಎಂದು ಈಗಿರುವ ನೀತಿ ಹೇಳುತ್ತದೆ.ಇದು ಕೃತಕ ನಿಬಂಧನೆಗಳನ್ನು ಸೃಷ್ಟಿಸುತ್ತದೆ ಮತ್ತು ಸದ್ಯದ ಮಾರುಕಟ್ಟೆ ಪದ್ದತಿಗಳ ಜೊತೆ ಹೊಂದಾಣಿಕೆ ಸಾಧಿಸುವುದಿಲ್ಲ. ಆದುದರಿಂದ ಅಂಗಡಿ ಮಳಿಗೆಗಳನ್ನು ತೆರೆಯುವುದಕ್ಕೆ ಮೊದಲೇ, ಕೆಲವು ನಿಬಂಧನೆಗೆ ಒಳಪಟ್ಟು ಅಂದರೆ ಆನ್ ಲೈನ್ ಮೂಲಕ ಚಿಲ್ಲರೆ ವ್ಯಾಪಾರ ಆರಂಭಿಸಿದ ದಿನದಿಂದ 2 ವರ್ಷಗಳ ಒಳಗೆ ಆ ಸಂಸ್ಥೆಯು ಅಂಗಡಿ-ಮಳಿಗೆಯನ್ನು ತೆರೆಯಬೇಕು ಎಂಬ ಕರಾರಿನೊಂದಿಗೆ ಆನ್ ಲೈನ್ ಮೂಲಕವೂ ಚಿಲ್ಲರೆ ವ್ಯಾಪಾರ ವಹಿವಾಟು ನಡೆಸಬಹುದು ಎಂಬ ನಿರ್ಧಾರಕ್ಕೆ ಬರಲಾಗಿದೆ.ಆನ್ ಲೈನ್ ಮಾರಾಟವು ಸಾಗಾಟ , ಡಿಜಿಟಲ್ ಪಾವತಿ, ಗ್ರಾಹಕ ಸೇವೆ, ತರಬೇತಿ ಮತ್ತು ಉತ್ಪನ್ನಗಳಲ್ಲಿ ಕೌಶಲ್ಯ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ.
ಡಿಜಿಟಲ್ ಮಾಧ್ಯಮ
ಅಸ್ತಿತ್ವದಲ್ಲಿರುವ ಎಫ್.ಡಿ.ಐ. ನೀತಿಯು “ ಸುದ್ದಿ ಮತ್ತು ಪ್ರಚಲಿತ ವ್ಯವಹಾರಗಳ” ಟಿ.ವಿ. ವಾಹಿನಿಗಳಿಗೆ ಮಂಜೂರಾತಿ ಮಾರ್ಗದಲ್ಲಿ 49 % ಎಫ್.ಡಿ.ಐ.ಗೆ ಅವಕಾಶ ನೀಡುತ್ತದೆ. ಡಿಜಿಟಲ್ ಮಾಧ್ಯಮ ಮೂಲಕ ಸುದ್ದಿ ಮತ್ತು ಪ್ರಚಲಿತ ವ್ಯವಹಾರಗಳ ಪ್ರಸಾರಕ್ಕೆ, ಮುದ್ರಣ ಮಾಧ್ಯಮಗಳಿಗೆ ಇರುವ ಮಾದರಿಯಲ್ಲಿಯೇ ಸರಕಾರಿ ಮಾರ್ಗದ ಮೂಲಕ 26 % ಎಫ್.ಡಿ.ಐ.ಗೆ ಅನುಮತಿ ನೀದಲು ನಿರ್ಧರಿಸಲಾಗಿದೆ.
(Release ID: 1583508)
Visitor Counter : 711