ಸಂಪುಟ

ಔದ್ಯೋಗಿಕ ಆರೋಗ್ಯ ಕುರಿತ ರಾಷ್ಟ್ರೀಯ ಸಂಸ್ಥೆ –ಐಸಿಎಂಆರ್ ನೊಂದಿಗೆ ಗಣಿ ಕಾರ್ಮಿಕರ ಆರೋಗ್ಯ ಕುರಿತ ರಾಷ್ಟ್ರೀಯ ಸಂಸ್ಥೆಯನ್ನು ವಿಲೀನ / ಸಂಯೋಜನೆಗೆ ಸಂಪುಟದ ಅನುಮೋದನೆ

Posted On: 24 JUL 2019 4:19PM by PIB Bengaluru

ಔದ್ಯೋಗಿಕ ಆರೋಗ್ಯ ಕುರಿತ ರಾಷ್ಟ್ರೀಯ ಸಂಸ್ಥೆ –ಐಸಿಎಂಆರ್ ನೊಂದಿಗೆ ಗಣಿ ಕಾರ್ಮಿಕರ ಆರೋಗ್ಯ ಕುರಿತ ರಾಷ್ಟ್ರೀಯ ಸಂಸ್ಥೆಯನ್ನು ವಿಲೀನ / ಸಂಯೋಜನೆಗೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗಣಿ ಸಚಿವಾಲಯ (ಎಂ.ಓ.ಎಂ.)ದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾದ ಗಣಿ ಕಾರ್ಮಿಕರ ಆರೋಗ್ಯ ಕುರಿತ ರಾಷ್ಟ್ರೀಯ ಸಂಸ್ಥೆ (ಎನ್.ಐ.ಎಂ.ಎಚ್.)ಯನ್ನು ವಿಸರ್ಜಿಸಿ, ಅದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂ.ಓ.ಎಚ್ ಮತ್ತು ಎಫ್.ಡಬ್ಲ್ಯು) ಅಡಿಯಲ್ಲಿನ ಅಹಮದಾಬಾದ್ ನ ಔದ್ಯೋಗಿಕ ಆರೋಗ್ಯ ಕುರಿತ ರಾಷ್ಟ್ರೀಯ ಸಂಸ್ಥೆ (ಐಸಿಎಂ.ಆರ್.)ಯಲ್ಲಿ ಅದರ ಎಲ್ಲ ಆಸ್ತಿ ಮತ್ತು ಋಣದ ಸಹಿತ ವಿಲೀನ/ ಸಂಯೋಜನೆ ಮಾಡಲು; ಮತ್ತು ಎನ್.ಐ.ಎಂ.ಎಚ್.ನ ಎಲ್ಲ ಉದ್ಯೋಗಿಗಳನ್ನು ಅದೇ ಸ್ವರೂಪದ ಹುದ್ದೆ/ವೇತನ ಶ್ರೇಣಿಯಲ್ಲಿ ಅವರ ವೇತನವನ್ನು ರಕ್ಷಿಸುವ ಮೂಲಕ ಎನ್.ಐ.ಓ.ಎಚ್.ನಲ್ಲಿ ಸೇರ್ಪಡೆ ಮಾಡಿಕೊಳ್ಳಲು ತನ್ನ ಅನುಮೋದನೆ ನೀಡಿದೆ. ಎನ್.ಐ.ಓ.ಎಚ್.ನಲ್ಲಿ ಎನ್.ಐ.ಎಂ.ಎಚ್. ಅನ್ನು ವಿಲೀನ/ಸಂಯೋಜನೆ ಮಾಡಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು  ಎನ್.ಐ.ಎಂ.ಎಚ್, ಐಸಿ.ಎಂ.ಆರ್., ಎನ್.ಐ.ಓ.ಎಚ್., ಎಂ.ಓ.ಎಂ. ಮತ್ತು ಆರೋಗ್ಯ ಸಂಶೋಧನಾ ಇಲಾಖೆ (ಡಿ.ಎಚ್.ಆರ್.), ಎಂ.ಓ.ಎಚ್. ಮತ್ತು ಎಫ್.ಡಬ್ಲ್ಯುಗೆ ತಿಳಿಸಲಾಗಿದೆ.

 

ಪರಿಣಾಮಗಳು:      

ಎನ್.ಐ.ಓ.ಎಚ್.ನಲ್ಲಿ ಎನ್.ಐ.ಎಂ.ಎಚ್ ವಿಲೀನ/ಸಂಯೋಜನೆಯು ಸಾರ್ವಜನಿಕ ಹಣದ ಸಮರ್ಥ ನಿರ್ವಹಣೆಯ ಜೊತೆಗೆ ಔದ್ಯೋಗಿಕ ಆರೋಗ್ಯ ಕ್ಷೇತ್ರದಲ್ಲಿ ವರ್ಧಿತ ಪರಿಣತಿಯ ದೃಷ್ಟಿಯಿಂದ ಎರಡೂ ಸಂಸ್ಥೆಗಳಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

 

ಹಿನ್ನೆಲೆ:

ಎನ್.ಐ.ಎಂ.ಎಚ್. ಅನ್ನು ಭಾರತ ಸರ್ಕಾರ 1990ರಲ್ಲಿ ಸ್ಥಾಪಿಸಿತ್ತು ಮತ್ತು ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆ 1960ರ ಅಡಿಯಲ್ಲಿ ಸೊಸೈಟಿ ಎಂದು ನೋಂದಾಯಿಸಲಾಗಿತ್ತು. ಎನ್.ಐ.ಎಂ.ಎಚ್. ನ ನೋಂದಾಯಿತ ಕಚೇರಿಯು ಕರ್ನಾಟಕದ ಕೋಲಾರ ಗೋಲ್ಡ್ ಫೀಲ್ಡ್ ನಲ್ಲಿದೆ ಮತ್ತು ಕೇಂದ್ರೀಯ ಪ್ರಯೋಗಶಾಲೆ ನಾಗಪುರದಲ್ಲಿದೆ. ಈ ಸಂಸ್ಥೆ ಔದ್ಯೋಗಿಕ ಆರೋಗ್ಯ ಮತ್ತು ನೈರ್ಮಲ್ಯದಲ್ಲಿ ಆನ್ವಯಿಕ ಸಂಶೋಧನೆ ನಡೆಸುತ್ತಿದ್ದು, ಗಣಿ ಮತ್ತು ಗಣಿ ಆಧಾರಿತ ಕೈಗಾರಿಕೆಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಸುರಕ್ಷಿತ ಗಣಿಗಾರಿಕೆ ಮತ್ತು ಆರೋಗ್ಯ ಪೂರ್ಣ ಗಣಿಗಾರರಿಗಾಗಿ ಲೋಹೀಯ ವಲಯ ಮತ್ತು ಪ್ರಯತ್ನಗಳಿಗೆ ವಿಶೇಷ ಒತ್ತು ನೀಡಿ ತಾಂತ್ರಿಕ ನೆರವು ಸೇವೆ ಒದಗಿಸುವುದರಲ್ಲಿ ಪರಿಣತಿ ಹೊಂದಿದೆ.

ಎನ್.ಐ.ಓ.ಎಚ್. ಗಮನ ಹರಿಸಿರುವ ಕ್ಷೇತ್ರಗಳಲ್ಲಿ ಔದ್ಯೋಗಿಕ ಔಷಧ ಮತ್ತು ಔದ್ಯೋಗಿಕ ನೈರ್ಮಲ್ಯ ಸೇರಿದಂತೆ ಔದ್ಯೋಗಿಕ ಆರೋಗ್ಯಕ್ಕೆ ಸಂಬಂಧಿಸಿದ ವ್ಯಾಪಕ ಕ್ಷೇತ್ರಗಳು ಸೇರಿವೆ. ಸ್ವಾಯತ್ತ ಸಂಸ್ಥೆಗಳ ಕಾರ್ಯ ಮತ್ತು ಕಾರ್ಯಕ್ಷಮತೆಯ ಪರಿಶೀಲನೆಯ ಸಂದರ್ಭದಲ್ಲಿ, ವೆಚ್ಚ ನಿರ್ವಹಣಾ ಆಯೋಗವು ಇತರ ವಿಷಯಗಳ ಕುರಿತ ಶಿಫಾರಸು ಮಾಡಿದೆ - ಇದು "ಕಾರ್ಯಾಚರಣೆಗಳಲ್ಲಿ ಸಂಯೋಜನೆ ಮತ್ತು ವೆಚ್ಚವನ್ನು ಕಡಿಮೆ ಮಾಡಲು ವಿಲೀನಗೊಳ್ಳಲು ಇದೇ ರೀತಿಯ ಉದ್ದೇಶಗಳನ್ನು ಹೊಂದಿರುವ ಸಂಸ್ಥೆಗಳನ್ನು ಪರಿಗಣಿಸಬಹುದು". ಅಂತೆಯೇ, ಎನ್.ಐ.ಓ.ಎಚ್ ನೊಂದಿಗೆ ಎನ್.ಐ.ಎಂ.ಎಚ್. ಅನ್ನು ವಿಲೀನಗೊಳಿಸಲು ಶಿಫಾರಸು ಮಾಡಲಾಗಿದೆ.

 

***********



(Release ID: 1580114) Visitor Counter : 133