ಸಂಪುಟ

ಹದಿನೈದನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳ ತಿದ್ದುಪಡಿಗೆ ಸಂಪುಟದ ಅನುಮೋದನೆ

Posted On: 17 JUL 2019 4:18PM by PIB Bengaluru

ಹದಿನೈದನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳ ತಿದ್ದುಪಡಿಗೆ ಸಂಪುಟದ ಅನುಮೋದನೆ

 

ರಕ್ಷಣೆ ಮತ್ತು ಆಂತರಿಕ ಭದ್ರತೆ ಕುರಿತ ನಿಧಿಗೆ ಸಂಬಂಧಿಸಿದ ಕಾಳಜಿಯ ಸವಾಲು ಎದುರಿಸಲು ನಿಬಂಧನೆಗಳು

 

 ಭಾರತ ರಕ್ಷಣೆ ಮತ್ತು ಆಂತರಿಕ ಭದ್ರತೆಗಾಗಿ ಸಮರ್ಪಕ, ಸುರಕ್ಷಿತ ಮತ್ತು ನಿರ್ದಿಷ್ಟ ಸಮಯದ ಬಳಿಕ ರದ್ದಾಗದ ಹಣವನ್ನು ಹಂಚಿಕೆ ಮಾಡುವ ಬಗ್ಗೆ ಗಂಭೀರ ಕಾಳಜಿಯ ಸಮಸ್ಯೆಗಳನ್ನು ಪರಿಹರಿಸಲು.  ಹದಿನೈದನೇ ಹಣಕಾಸು ಆಯೋಗದ ಪ್ರಸ್ತಾಪಿತ ತಿದ್ದುಪಡಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ತನ್ನ ಅನುಮೋದನೆ ನೀಡಿದೆ.

 

ಹದಿನೈದನೇ ಹಣಕಾಸು ಆಯೋಗವನ್ನು  ಸಂವಿಧಾನದ 280 ನೇ ವಿಧಿಯ (1)ನೇ ಉಪವಾಕ್ಯದ ಮತ್ತು ಹಣಕಾಸು ಆಯೋಗ (ವಿವಿಧ ನಿಬಂಧನೆಗಳ) ಕಾಯ್ದೆ 1951 ರ ಅನುಸಾರವಾಗಿ ರಾಷ್ಟ್ರಪತಿಗಳು  2017ರ ನವೆಂಬರ್ 27ರಂದು ರಚಿಸಿದ್ದರು. ಈ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು, 2020ರ ಏಪ್ರಿಲ್ 1ರಿಂದ ಆರಂಭವಾಗುವ ಮುಂದಿನ ಐದು ವರ್ಷಗಳಿಗೆ ಶಿಫಾರಸುಗಳನ್ನು ಮಾಡಲು ಹದಿನೈದನೆ ಹಣಕಾಸು ಆಯೋಗ (XV-FC)ವನ್ನು ರಚಿಸಲಾಗಿತ್ತು.

 

 ಆಯೋಗದ ಉಲ್ಲೇಖಿತ ನಿಯಮಗಳ (ಟಿಓಆರ್) ಅಡಿಯಲ್ಲಿ, ರಕ್ಷಣೆ ಮತ್ತು ಆಂತರಿಕ ಭದ್ರತೆಯ ಕಡ್ಡಾಯ ಅಂಶಗಳಿಗೆ ಹಣಕಾಸಿನ ಸಂಪನ್ಮೂಲವನ್ನು ಹಂಚಿಕೆಯನ್ನು ಖಾತ್ರಿಪಡಿಸಲು ಇದನ್ನು ಪ್ರಸ್ತಾಪಿಸಲಾಗಿದೆ.

 

ಈ ತಿದ್ದುಪಡಿಗಳು, ಹದಿನೈದನೇ ಹಣಕಾಸು ಆಯೋಗಕ್ಕೆ ರಕ್ಷಣಾ ಮತ್ತು ಆಂತರಿಕ ಭದ್ರತೆಯ ಧನ ಸಹಾಯಕ್ಕಾಗಿ ಪ್ರತ್ಯೇಕ ಕಾರ್ಯವಿಧಾನವನ್ನು ರೂಪಿಸಬೇಕೇ ಎಂಬ ಬಗ್ಗೆಯೂ ಪರಿಶೀಲಿಸಲು ಮತ್ತು ಹಾಗಿದ್ದಲ್ಲಿ ಅಂತಹ ಕಾರ್ಯವಿಧಾನವನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ಪರಿಶೀಲಿಸಲೂ ಅನುವು ಮಾಡಿಕೊಡುತ್ತದೆ.

 

**********



(Release ID: 1579251) Visitor Counter : 52