ಸಂಪುಟ

ತೆರಿಗೆ ನೆಲೆ ಕೊರೆತ ತಡೆ ಮತ್ತು ಲಾಭ ಸ್ಥಳಾಂತರ ತಡೆಗಾಗಿ ತೆರಿಗೆ ಒಪ್ಪಂದ ಸಂಬಂಧಿ ಕ್ರಮಗಳ ಅನುಷ್ಟಾನಕ್ಕಾಗಿ ಬಹುಕೋನೀಯ ಅಧಿವೇಶನ ದೃಢೀಕರಣ.

Posted On: 12 JUN 2019 8:04PM by PIB Bengaluru

ತೆರಿಗೆ ನೆಲೆ ಕೊರೆತ ತಡೆ ಮತ್ತು ಲಾಭ ಸ್ಥಳಾಂತರ ತಡೆಗಾಗಿ ತೆರಿಗೆ ಒಪ್ಪಂದ ಸಂಬಂಧಿ ಕ್ರಮಗಳ ಅನುಷ್ಟಾನಕ್ಕಾಗಿ ಬಹುಕೋನೀಯ ಅಧಿವೇಶನ ದೃಢೀಕರಣ.

 

ಪ್ರಧಾನ ಮಂತ್ರಿ  ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ತೆರಿಗೆ ನೆಲೆ ಕೊರೆತ ತಡೆ ಮತ್ತು ಲಾಭ ಸ್ಥಳಾಂತರ ತಡೆಗಾಗಿ ತೆರಿಗೆ ಒಪ್ಪಂದ ಸಂಬಂಧಿ ಕ್ರಮಗಳ ಅನುಷ್ಟಾನಕ್ಕಾಗಿ ಬಹುಕೋನೀಯ ಅಧಿವೇಶನ ದೃಢೀಕರಣಕ್ಕೆ  (ಎಂ.ಎಲ್.ಐ.) ಅನುಮೋದನೆ ನೀಡಲಾಯಿತು.

 

ಪರಿಣಾಮ:

ಈ ಅಧಿವೇಶನವು ಒಪ್ಪಂದ ದುರುಪಯೋಗದ ಮೂಲಕ ಮತ್ತು ತೆರಿಗೆ ನೆಲೆ ಕೊರೆತ ಹಾಗು ಲಾಭ ಸ್ಥಳಾಂತರ ವ್ಯೂಹಗಳ ಮೂಲಕ ಆದಾಯ ನಷ್ಟ ತಡೆಯುವುದಕ್ಕಾಗಿ ಭಾರತದ ಒಪ್ಪಂದಗಳನ್ನು ಸುಧಾರಿಸಿ ಸಾಕಷ್ಟು ಪೂರಕ ಆರ್ಥಿಕ ಚಟುವಟಿಕೆಗಳು ನಡೆಯುತ್ತಿದ್ದು, ಲಾಭ ತರುತ್ತಿರುವಂತಹ ಮತ್ತು ಮೌಲ್ಯ ಸೃಷ್ಟಿಯಾಗುತ್ತಿರುವಂತಹ ಸಂದರ್ಭದಲ್ಲಿ  ಲಾಭಕ್ಕೆ ತೆರಿಗೆಯನ್ನು ವಿಧಿಸುವುದನ್ನು ಖಾತ್ರಿಪಡಿಸಲಿದೆ.

 

ವಿವರಗಳು:

(i)             .ತೆರಿಗೆ ನೆಲೆಯ ಕೊರೆತ ಮತ್ತು ಲಾಭ ಸ್ಥಳಾಂತರ ತಡೆಗೆ ತೆರಿಗೆ ಒಪ್ಪಂದ ಸಂಬಂಧಿ  ಕ್ರಮಗಳನ್ನು ಕೈಗೊಳ್ಳಲು ಬಹುಕೋನೀಯ ಅಧಿವೇಶನವನ್ನು ಭಾರತವು ದೃಢೀಕರಿಸಿದೆ. ಗೌರವಾನ್ವಿತ  ಹಣಕಾಸು ಸಚಿವರಾದ ಶ್ರೀ ಅರುಣ್ ಜೈಟ್ಲಿ ಅವರು 7-06-2017ರಂದು ಭಾರತದ  ಪರವಾಗಿ ಪ್ಯಾರೀಸ್ ನಲ್ಲಿ ಇದಕ್ಕೆ ಸಹಿ ಹಾಕಿದ್ದಾರೆ.

 

(ii)           (ii) . ಈ ಬಹುಕೋನೀಯ ಅಧಿವೇಶನವು ಒ.ಇ.ಸಿ.ಡಿ/ಜಿ .20 ಯೋಜನೆಯ ಫಲಿತವಾಗಿದೆ. ತೆರಿಗೆ ನೆಲೆ ಕೊರೆತ ನಿಭಾವಣೆ ಮತ್ತು ಲಾಭ ವರ್ಗಾವಣೆ (ಬಿ.ಇ.ಪಿ.ಎಸ್. ಯೋಜನೆ ) ಅಂದರೆ ತೆರಿಗೆ ನಿಯಮಗಳಲ್ಲಿ ಇರುವ ಕೊರತೆ ಮತ್ತು ಅಂತರಗಳನ್ನು ಹಾಗು ಹೊಂದಾಣಿಕೆ ರಹಿತ ಅಂಶಗಳನ್ನು ಬಳಸಿಕೊಂಡು ತೆರಿಗೆ ಯೋಜನೆ ವ್ಯೂಹಗಳ ಮೂಲಕ ಕೃತಕವಾಗಿ ಲಾಭಗಳನ್ನು ಆರ್ಥಿಕ  ಚಟುವಟಿಕೆ ಬಹಳ ಕಡಿಮೆ ಇರುವ ಅಥವಾ ಆರ್ಥಿಕ ಚಟುವಟಿಕೆಯೇ ಇಲ್ಲದಿರುವ , ಕಡಿಮೆ ತೆರಿಗೆಯ ಅಥವಾ ತೆರಿಗೆಯೇ ಇಲ್ಲದಿರುವ ಸ್ಥಳಗಳಿಗೆ ವರ್ಗಾಯಿಸಿ ಕಡಿಮೆ ತೆರಿಗೆ ಪಾವತಿ ಮಾಡುವುದು ಅಥವಾ ತೆರಿಗೆಯನ್ನು ಪಾವತಿಸದಿರುವುದು. ಬಿ.ಇ.ಪಿ.ಎಸ್. ಯೋಜನೆಯು ತೆರಿಗೆ ನೆಲೆ ಕೊರೆತ ಮತ್ತು ಲಾಭ ವರ್ಗಾವಣೆ (ಬಿ.ಇ.ಪಿ.ಎಸ್. ) ಯನ್ನು ಸಮಗ್ರ ರೀತಿಯಲ್ಲಿ ನಿಭಾಯಿಸಲು 15 ಕ್ರಮಗಳನ್ನು ಗುರುತಿಸಿದೆ.

 

(iii)          . ಜಿ.20, ಒ.ಪಿ.ಸಿ.ಡಿ. , ಬಿ.ಇ.ಪಿ.ಎಸ್. ಸಂಪರ್ಕ ವ್ಯಾಪ್ತಿಯ ರಾಷ್ಟ್ರಗಳು ಮತ್ತು ಇತರ ಆಸಕ್ತ ದೇಶಗಳು ಒಳಗೊಂಡಂತೆ 100 ಕ್ಕೂ ಅಧಿಕ ದೇಶಗಳ ತಾತ್ಕಾಲಿಕ ಗುಂಪಿನ ಭಾಗವಾಗಿ ಭಾರತವು ಗುರುತಿಸಿಕೊಂಡಿದೆ. ಇವುಗಳು 2015 ರ ಮೇ ತಿಂಗಳಿನಿಂದ ಬಹುಕೋನೀಯ, ಬಹುಪಕ್ಷೀಯ ಅಧಿವೇಶನದ ಪಠ್ಯವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಸಮಾನ ನೆಲೆಯಲ್ಲಿ ಕಾರ್ಯಾಚರಿಸುತ್ತಿವೆ. ಅಧಿವೇಶನದ ಪಠ್ಯ ಮತ್ತು ಅದಕ್ಕೆ ಸಂಬಂಧಿಸಿದ ವಿವರಣಾತ್ಮಕ ಹೇಳಿಕೆಯನ್ನು 2016 ರ ನವೆಂಬರ್ 24ರಂದು ತಾತ್ಕಾಲಿಕ ಗುಂಪು ಅಂಗೀಕರಿಸಿದೆ.

 

(iv)          ಅಧಿವೇಶನವು ಸಹಿ ಹಾಕಿದ ಎಲ್ಲಾ ರಾಷ್ಟ್ರಗಳಿಗೆ ಅಂತಿಮ ಬಿ.ಇ.ಪಿ.ಎಸ್.ಪ್ಯಾಕೇಜಿನ ಭಾಗವಾಗಿ ಒಪ್ಪಿಕೊಂಡಂತೆ ಮತ್ತು ಕ್ರಮ 6 ರ ಒಪ್ಪಂದ ದುರುಪಯೋಗ ತಡೆಯ ಕನಿಷ್ಟ ಮಾನದಂಡಗಳ ಸಹಿತ ಎಲ್ಲಾ ಒಪ್ಪಂದ ಸಂಬಂಧಿ ಕನಿಷ್ಟ ಮಾನದಂಡಗಳನ್ನು ಅನುಸರಿಸಲು ಅವಕಾಶ ನೀಡುತ್ತದೆ.

 

(v)            ಅಧಿವೇಶನವು ಎರಡು ಅಥವಾ ಅಧಿಕ ಪಕ್ಷಗಳು ಒಳಗೊಂಡಿರುವ ತೆರಿಗೆ ಒಪ್ಪಂದಗಳನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತದೆ. ಇದು ಈಗಿರುವ ಏಕ ಒಪ್ಪಂದದ ಪ್ರೊಟೋಕಾಲ್ ತಿದ್ದುಪಡಿ ಮಾಡುವ ರೀತಿಯಲ್ಲಿ ಕಾರ್ಯಾಚರಿಸುವುದಿಲ್ಲ. ಅದು ತೆರಿಗೆ ಒಪ್ಪಂದ ವ್ಯಾಪ್ತಿ ಸಂಬಂಧಿತ ಪಠ್ಯವನ್ನು ನೇರವಾಗಿ ತಿದ್ದುಪಡಿ ಮಾಡುವುದಕ್ಕೆ ಬದಲು ಅದು ಹಾಲಿ ಇರುವ ತೆರಿಗೆ ಒಪ್ಪಂದಗಳ ಜೊತೆಯಾಗಿ, ಅವುಗಳ ಆನ್ವಯಿಕತೆಯಲ್ಲಿ  ಬಿ.ಇ.ಪಿ.ಎಸ್. ಕ್ರಮಗಳ ಅನುಷ್ಟಾನ ಸಾಧ್ಯವಾಗುವಂತೆ ಸುಧಾರಣೆಗಳನ್ನು ಮಾಡುತ್ತದೆ.

 

(vi)          ಅಧಿವೇಶನವು ಒಪ್ಪಂದ ದುರುಪಯೋಗ ಮತ್ತು ತೆರಿಗೆ ನೆಲೆ ಕೊರೆತ ಹಾಗು ಲಾಭ ವರ್ಗಾವಣೆ ವ್ಯೂಹಗಳ ಮೂಲಕ ಆದಾಯ ನಷ್ಟವಾಗುವುದನ್ನು ತಡೆಯಲು ಭಾರತದ ಒಪ್ಪಂದಗಳಲ್ಲಿ ಸುಧಾರಣೆಗಳನ್ನು ತರಲಿದೆ. ಮತ್ತು ಸಾಕಷ್ಟು ಆರ್ಥಿಕ ಚಟುವಟಿಕೆಗಳು ಜರಗುವಲ್ಲಿ ಹಾಗು ಲಾಭ ಬರುವಲ್ಲಿ ಮತ್ತು ಮೌಲ್ಯ ಸೃಷ್ಟಿಯಾಗುವಲ್ಲಿ ಲಾಭಕ್ಕೆ ತೆರಿಗೆ ವಿಧಿಸುವಿಕೆಯನ್ನು ಖಾತ್ರಿಪಡಿಸುತ್ತದೆ

 

ಹಿನ್ನೆಲೆ:

ಈ ಅಧಿವೇಶನವು ಭಾರತವು ಸದಸ್ಯ ರಾಷ್ಟ್ರವಾಗಿರುವ ಒ.ಇ.ಸಿ.ಡಿ/ಜಿ 20 ಯೋಜನೆಯ ಫಲಿತಾಂಶಗಳಲ್ಲೊಂದಾಗಿದೆ. ಮತ್ತು ತೆರಿಗೆ ನೆಲೆ ಕೊರೆತ ಹಾಗು ಲಾಭ ಸ್ಥಳಾಂತರದ ತಡೆ ಇದರಿಂದ ಸಾಧ್ಯವಾಗಲಿದೆ. ಈ ಅಧಿವೇಶನವು ದೇಶಗಳಿಗೆ ಬಿ.ಇ.ಪಿ.ಎಸ್. ಫಲಿತಾಂಶಗಳ ದುರುಪಯೋಗ ತಡೆಯನ್ನು ಸಾಧಿಸಲು ಬಹು ಧೀರ್ಘಾವಧಿ ಮತ್ತು ಭಾರೀ ಹೊರೆಯನ್ನು ಹೊರಿಸುವ  ದ್ವಿಪಕ್ಷೀಯ ಒಪ್ಪಂದಗಳ ಬಗ್ಗೆ ಮರು ಮಾತುಕತೆಯ  ಆವಶ್ಯಕತೆ ಇಲ್ಲದೆಯೆ ಬಹುಕೋನೀಯ, ಬಹುಆಯಾಮದ ಮಾರ್ಗದ ಮೂಲಕ ಒಪ್ಪಂದ ಆಧಾರಿತ ಬದಲಾವಣೆಗಳನ್ನು ಅನುಷ್ಟಾನ ಮಾಡಲು ಅವಕಾಶ ನೀಡುತ್ತದೆ. ಇದು ಬಿ.ಇ.ಪಿ.ಎಸ್. ಯೋಜನೆಯನ್ನು ಬಹುಪಕ್ಷೀಯವಾಗಿ ಅನುಷ್ಟಾನಗೊಳಿಸುವಲ್ಲಿ ದೃಢತೆ ಮತ್ತು ಖಚಿತತೆಯನ್ನು ಖಾತ್ರಿಪಡಿಸುತ್ತದೆ. ಬಹುಆಯಾಮದ , ಬಹುಕೋನೀಯ ಅಧಿವೇಶನದ ದೃಢೀಕರಣವು  ಭಾರತದ  ಈಗಿರುವ ಒಪ್ಪಂದಗಳನ್ನು ತ್ವರಿತವಾಗಿ ಸುಧಾರಿಸುವ ಮೂಲಕ ಬಿ.ಇ.ಪಿ.ಎಸ್. ಫಲಿತಾಂಶಗಳ ಆನ್ವಯಿಕತೆಗೆ ಅನುಕೂಲ ಒದಗಿಸಲಿದೆ. ಎಂ.ಎಲ್.ಐ. ದೃಢೀಕರಣಕ್ಕೆ ಸಂಬಂಧಿಸಿದ ಸಂಪುಟ ಟಿಪ್ಪಣಿಯನ್ನು ದಿನಾಂಕ 16-04-2019 ರಂದು ಸಂಪುಟದ ಪರಿಗಣನೆಗೆ ಕಳುಹಿಸಲಾಗಿತ್ತು. ಆದರೆ ಈ ಟಿಪ್ಪಣಿಯನ್ನು ಸಂಪುಟವು ಪರಿಗಣಿಸಿರಲಿಲ್ಲ. ಆ ಕಾರಣದಿಂದ ಮತ್ತು ಕೆಲವು ತುರ್ತು ಕಾರಣಗಳಿಂದಾಗಿ ಗೌರವಾನ್ವಿತ ಪ್ರಧಾನ ಮಂತ್ರಿ ಅವರು ಸಂಪುಟ ಸಚಿವಾಲಯ ಐ.ಡಿ. ಸಂಖ್ಯೆ  216/1/2/2019-ಸಿಎಬಿ ದಿನಾಂಕ 27-05-2019 ರಂದು ಎಂ.ಎಲ್.ಐ. ದೃಢೀಕರಣವನ್ನು ಅನುಮೋದಿಸಿದ್ದಲ್ಲದೆ ಭಾರತ ಸರಕಾರದ (ವ್ಯಾಪಾರೋದ್ಯಮ ನಡೆಸುವಿಕೆ) ನಿಯಮಾವಳಿಗಳು, 1961ರ ನಿಯಮ 12 ರಡಿಯಲ್ಲಿ ಭಾರತದ ಅಂತಿಮ ತೀರ್ಮಾನಕ್ಕೆ  ತಿಂಗಳೊಳಗೆ ಸಂಪುಟದಿಂದ ಪೂರ್ವಾನ್ವಯಗೊಂಡಂತೆ ಅನುಮೋದನೆ ಪಡೆಯಬೇಕು ಎಂಬ ನಿರ್ದೇಶನದೊಂದಿಗೆ ಅನುಮೋದನೆ ನೀಡಿದ್ದರು. ನಿಯಮ 12 ರಡಿಯಲ್ಲಿ ಅನುಮೋದನೆಗೆ ಜೊತೆಯಾಗಿ, ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ದೃಢೀಕರಣ ಸಲಕರಣೆಯನ್ನು ಪಡೆಯಲು ಈ ಕಚೇರಿಯಿಂದ ಒ.ಎಂ. ಎಫ್. ಸಂಖ್ಯೆ. 500/71/2015-ಎಫ್.ಟಿ.ಡಿ-I/150 ದಿನಾಂಕ 31/05/2019ರಂದು ಎಂ.ಇ.ಎ. ಯ ಎಲ್ ಆಂಡ್ ಟಿ . ವಿಭಾಗಕ್ಕೆ ಪ್ರತ್ಯೇಕ ಕೋರಿಕೆಯನ್ನು ಈಗಾಗಲೇ ಕಳುಹಿಸಲಾಗಿದೆ. 



(Release ID: 1574357) Visitor Counter : 86