ಸಂಪುಟ
ರೈಲ್ವೆ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ನಡುವೆ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
प्रविष्टि तिथि:
12 JUN 2019 8:11PM by PIB Bengaluru
ರೈಲ್ವೆ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ನಡುವೆ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತೀಯ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ ಮತ್ತು ರಷ್ಯಾದ ರೈಲ್ವೆ ಸಂಶೋಧನಾ ಸಂಸ್ಥೆ ಹಾಗೂ ಮಾಹಿತಿ ತಂತ್ರಜ್ಞಾನಕ್ಕಾಗಿ ಸಂಶೋಧನೆ ಮತ್ತು ವಿನ್ಯಾಸ ಸಂಸ್ಥೆ ಹಾಗೂ ರಷ್ಯಾದ ಸಂಕೇತ ಮತ್ತು ದೂರಸಂಪರ್ಕ ಕುರಿತ ರೈಲ್ವೆ ಸಾರಿಗೆಯೊಂದಿಗೆ ಮಾಡಿಕೊಳ್ಳಲಾಗಿರುವ ಸಹಕಾರ ಒಪ್ಪಂದದ ಕುರಿತಂತೆ ವಿವರ ನೀಡಲಾಯಿತು.
ಈ ತಿಳಿವಳಿಕೆ ಒಪ್ಪಂದವು, ಮಾಹಿತಿ, ತಜ್ಞರ ಸಭೆಗಳು, ವಿಚಾರಸಂಕಿರಣಗಳು, ತಾಂತ್ರಿಕ ಭೇಟಿಗಳು ಮತ್ತು ಜಂಟಿಯಾಗಿ ಸಮ್ಮತಿಸಲಾದ ಸಹಕಾರ ಒಪ್ಪಂದಗಳ ಅನುಷ್ಠಾನಕ್ಕೆ ಅವಕಾಶ ಕಲ್ಪಿಸುತ್ತದೆ.
ಈ ತಿಳಿವಳಿಕೆ ಒಪ್ಪಂದಕ್ಕೆ 2019ರ ಏಪ್ರಿಲ್ ನಲ್ಲಿ ಅಂಕಿತ ಹಾಕಲಾಗಿತ್ತು.
(रिलीज़ आईडी: 1574235)
आगंतुक पटल : 115