ಸಂಪುಟ
ಹದಿನಾರನೇ ಲೋಕಸಭೆ ವಿಸರ್ಜನೆಗೆ ಸಂಪುಟದ ಒಪ್ಪಿಗೆ
Posted On:
24 MAY 2019 7:20PM by PIB Bengaluru
ಹದಿನಾರನೇ ಲೋಕಸಭೆ ವಿಸರ್ಜನೆಗೆ ಸಂಪುಟದ ಒಪ್ಪಿಗೆ
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು 2014ರ ಮೇ 18 ರಂದು ಅಸ್ತಿತ್ವಕ್ಕೆ ಬಂದಿದ್ದ ಹದಿನಾರನೇ ಲೋಕಸಭೆಯನ್ನು ವಿಸರ್ಜಿಸುವಂತೆ ರಾಷ್ಟ್ರಪತಿಯವರನ್ನು ಕೋರುವ ನಿರ್ಣಯಕ್ಕೆ ತನ್ನ ಸಮ್ಮತಿಯನ್ನು ನೀಡಿತು.
ಹಿನ್ನೆಲೆ:
ಸಂವಿಧಾನದ 83(2)ನೇ ಪರಿಚ್ಛೇದದಂತೆ, ಜನಪ್ರತಿನಿಧಿಗಳ ಸಭೆಯು ಅವಧಿಗೆ ಮುನ್ನವೇ ವಿಸರ್ಜನೆಯಾಗದ ಹೊರತು, ತನ್ನ ಮೊದಲ ಸಭೆಗಾಗಿ ಅದು ನೇಮಕವಾದ ದಿನದಿಂದ ಐದು ವರ್ಷಗಳವರೆಗೆ ಮುಂದುವರಿಯಬೇಕು ಮತ್ತು ನಿಗದಿತ ಐದು ವರ್ಷಗಳ ಅವಧಿಗಿಂತ ಹೆಚ್ಚಿರಬಾರದು. ಹದಿನಾರನೇ ಲೋಕಸಭೆಯ ಮೊದಲ ಸಭೆಯು 2014ರ ಜೂನ್ 4 ರಂದು ಸೇರಿತ್ತು. ಅಂದು ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದರು. ಹಾಗಾಗಿ ಪ್ರಸಕ್ತ ಲೋಕಸಭೆಯ ಅವಧಿಯು ರಾಷ್ಟ್ರಪತಿಯವರು ಅವಧಿಗೂ ಮುನ್ನವೇ ವಿಸರ್ಜಿಸದ ಹೊರತು, 2019ರ ಜೂನ್ 3ರಂದು ಕೊನೆಗೊಳ್ಳಲಿದೆ.
ಮೊದಲ ಲೋಕಸಭೆಯಿಂದ ಹದಿನೈದನೇ ಲೋಕಸಭೆಯವರೆಗೆ ಮತದಾನದ ಕೊನೆಯ ದಿನಾಂಕ, ಅಸ್ತಿತ್ವಕ್ಕೆ ಬಂದ ದಿನಾಂಕ, ಮೊದಲ ಸಭೆ ಹಾಗೂ ಅವಧಿಯ ಮುಕ್ತಾಯ ಹಾಗೂ ವಿಸರ್ಜನೆಯ ದಿನಾಂಕಗಳನ್ನು ಇಲ್ಲಿ ನೀಡಲಾಗಿದೆ.
(Release ID: 1572589)
Visitor Counter : 145