|
ಚುನಾವಣಾ ಆಯೋಗ
ಲೋಕಸಭಾ ಚುನಾವಣೆಗಳು -2019 ರ ಮೊದಲ ಹಂತದಲ್ಲಿ ಭಾರತದ ಮತದಾರರು 2019 ರ ಏಪ್ರಿಲ್ 11 ರಂದು ಮತದಾನ ಮಾಡಲಿದ್ದಾರೆ.
ಪ್ರಕಟಣಾ ದಿನಾಂಕ:
09 APR 2019 2:49PM by PIB Bengaluru
ಲೋಕಸಭಾ ಚುನಾವಣೆಗಳು -2019 ರ ಮೊದಲ ಹಂತದಲ್ಲಿ ಭಾರತದ ಮತದಾರರು 2019 ರ ಏಪ್ರಿಲ್ 11 ರಂದು ಮತದಾನ ಮಾಡಲಿದ್ದಾರೆ.
20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 91 ಸಂಸತ್ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಮೇಘಾಲಯ, ಉತ್ತರಾಖಂಡ, ಮಿಜೋರಾಂ, ನಾಗಾಲ್ಯಾಂಡ್ , ಸಿಕ್ಕಿಂ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ತೆಲಂಗಾಣದ ಎಲ್ಲಾ ಲೋಕ ಸಭಾ ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ.
ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶಗಳ ವಿಧಾನ ಸಭೆಗಳಿಗೆ ಮತ್ತು ಒಡಿಶಾ ವಿಧಾನಸಭೆಯ ಮೊದಲ ಹಂತದ ಚುನಾವಣೆಗಳಿಗೆ ಮತದಾನ ಏಪ್ರಿಲ್ 11 ರಂದು ನಡೆಯಲಿದೆ.
2019 ರ ಸಾರ್ವತ್ರಿಕ ಚುನಾವಣೆಗಳ ಮೊದಲ ಹಂತದ ಮತದಾನ ಏಪ್ರಿಲ್ 11 ರ, ಗುರುವಾರದಂದು ನಡೆಯಲಿದ್ದು ಒಟ್ಟು 543 ಲೋಕ ಸಭಾ ಕ್ಷೇತ್ರಗಳ ಪೈಕಿ ಈ ಸುತ್ತಿನಲ್ಲಿ 91 ಕ್ಷೇತ್ರಗಳಲ್ಲಿ ಚುನಾವಣೆ ಏರ್ಪಟ್ಟಿದ್ದು, ಭಾರತದ ಮತದಾರರು ಮತ ಚಲಾಯಿಸಲಿದ್ದಾರೆ.
ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಮೇಘಾಲಯ, ಉತ್ತರಾಖಂಡ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ತೆಲಂಗಾಣದ ಎಲ್ಲಾ ಸಂಸದೀಯ ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ.
ಮೊದಲ ಹಂತದಲ್ಲಿ ಚುನಾವಣೆ ಎದುರಿಸುವ ಇತರ ರಾಜ್ಯಗಳಲ್ಲಿ ಅಸ್ಸಾಂ, ಬಿಹಾರ, ಛತ್ತೀಸ್ ಗಢ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ತ್ರಿಪುರಾ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಲಗಳು ಸೇರಿವೆ. ಈ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಗಳ ಮೊದಲ ಹಂತದಲ್ಲಿ ಕೆಲವು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಪಟ್ಟಿ: 2019 ರ ಸಾರ್ವತ್ರಿಕ ಚುನಾವಣೆಗಳ ಮೊದಲ ಹಂತದಲ್ಲಿ ದಿನಾಂಕ 11.4.2019ರಂದು ಮತದಾನ ನಡೆಯಲಿರುವ ಸಂಸದೀಯ ಕ್ಷೇತ್ರಗಳ ಪಟ್ಟಿ.
|
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು
|
ಮೊದಲ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ
|
ಸಂಸದೀಯ ಕ್ಷೇತ್ರಗಳು
|
|
ಆಂಧ್ರಪ್ರದೇಶ
|
25
|
ಅರಕು, ಶ್ರೀಕಾಕುಲಂ, ವಿಜಯನಗರಂ, ವಿಶಾಖಪಟ್ಟಣಂ, ಕಾಕಿನಾಡ, ಅಂಕಪಲ್ಲೆ, ಅಮಲಾಪುರಂ, ಅಜಮುಂದ್ರಿ, ನರಸಪುರಂ, ಎಲ್ಲೂರು, ಮಚಲೀಪಟ್ಟಣಂ, ವಿಜಯವಾಡ, ಗುಂಟೂರು, ನರಸರಾವ್ ಪೇಟ್, ಬಾಪಟ್ಲ, ಒಂಗೋಲೆ, ನಂದ್ಯಾಲ್, ಕರ್ನೂಲ್, ಅನಂತಪುರ, ಹಿಂದುಪುರ, ಕಡಪ, ನೆಲ್ಲೂರು, ತಿರುಪತಿ, ರಾಜಂಪೇಟ್, ಚಿತ್ತೂರು.
|
|
ಅರುಣಾಚಲ ಪ್ರದೇಶ
|
2
|
ಅರುಣಾಚಲ ಪದೇಶ ಪಶ್ಚಿಮ, ಅರುಣಾಚಲ ಪ್ರದೇಶ ಪೂರ್ವ
|
|
ಅಸ್ಸಾಂ
|
5
|
ತೇಜ್ ಪುರ, ಕಾಳಿಬೋರ್, ಜೋರ್ಹಾಟ್, ಧೀಬ್ರೂಘರ್, ಲಖೀಂಪುರ್
|
|
ಬಿಹಾರ
|
4
|
ಔರಂಗಾಬಾದ್, ಗಯಾ, ನವಾಡ, ಜಾಮುಯಿ
|
|
ಛತ್ತೀಸ್ ಗಢ
|
1
|
ಬಸ್ತಾರ್
|
|
ಜಮ್ಮು ಮತ್ತು ಕಾಶ್ಮೀರ
|
2
|
ಬಾರಾಮುಲ್ಲಾ, ಜಮ್ಮು
|
|
ಮಹಾರಾಷ್ಟ್ರ
|
7
|
ವಾರ್ಧಾ, ರಾಂಟೇಕ್, ನಾಗಪುರ, ಭಂಡಾರಾ-ಗೊಂಡಿಯಾ, ಗಡ್ಚಿರೋಲಿ-ಚಿಮೂರ್, ಚಂದ್ರಾಪುರ, ಯಾವತ್ಮಲ್-ವಾಶಿಂ
|
|
ಮಣಿಪುರ
|
1
|
ಮಣಿಪುರ ಹೊರಭಾಗ
|
|
ಮೇಘಾಲಯ
|
2
|
ಶಿಲ್ಲಾಂಗ್ , ತುರಾ
|
|
ಮಿಜೋರಾಂ
|
1
|
ಮಿಜೋರಾಂ
|
|
ನಾಗಾಲ್ಯಾಂಡ್
|
1
|
ನಾಗಾಲ್ಯಾಂಡ್
|
|
ಒಡಿಶಾ
|
4
|
ಕಾಳಹಂದಿ, ನವರಂಗಪುರ, ಬೆಹ್ರಾಂಪುರ, ಕೊರಾಪುಟ್
|
|
ಸಿಕ್ಕಿಂ
|
1
|
ಸಿಕ್ಕಿಂ
|
|
ತೆಲಂಗಾಣ
|
17
|
ಅದಿಲಾಬಾದ್, ಪೆದ್ದಪಲ್ಲೆ, ಕರೀಂನಗರ್, ನಿಜಾಮಾಬಾದ್, ಜಹಿರಾಬಾದ್, ಮೇಡಕ್, ಮಲಕಗಿರಿ, ಸಿಕಂದರಾಬಾದ್, ಹೈದರಾಬಾದ್, ಚೆವೆಲ್ಲಾ, ಮಹಬೂಬನಗರ್, ನಗರಕರ್ನೂಲ್, ನಲ್ಗೊಂಡಾ, ಭೋಂಗೀರ್, ವಾರಂಗಲ್, ಮಹಬೂಬಾಬಾದ್, ಖಮ್ಮಮ್
|
|
ತ್ರಿಪುರಾ
|
1
|
ತ್ರಿಪುರಾ ಪಶ್ಚಿಮ
|
|
ಉತ್ತರ ಪ್ರದೇಶ
|
8
|
ಸಹರಾನ್ ಪುರ, ಖೈರಾನಾ, ಮುಜಾಫರ್ ನಗರ್, ಬಿಜನೂರ್, ಮೀರತ್, ಭಾಗಪತ್, ಗಜಿಯಾಬಾದ್, ಗೌತಮ್ ಬುದ್ದ ನಗರ.
|
|
ಉತ್ತರಾಖಂಡ
|
5
|
ತೆಹ್ರಿ ಘರ್ ವಾಲ್, ಘರ್ ವಾಲ್, ಅಲ್ಮೋರಾ, ನೈನಿತಾಲ್-ಉಧಂಸಿಂಗ್ ನಗರ್, ಹರ್ದ್ವಾರ್
|
|
ಪಶ್ಚಿಮ ಬಂಗಾಲ
|
2
|
ಕೂಚ್ ಬೆಹರ್ , ಅಲಿಪುರ್ದೌರಾಸ್
|
|
ಲಕ್ಷದ್ವೀಪ
|
1
|
ಲಕ್ಷದ್ವೀಪ
|
|
ಅಂಡಮಾನ್ ಮತ್ತು ನಿಕೋಬಾರ್
|
1
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
ಲೋಕಸಭಾ ಚುನಾವಣೆಗಳ ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿರುವ ಸ್ಪರ್ಧಿಗಳ ಪಟ್ಟಿಗಾಗಿ ಕೊಂಡಿ-
https://eci.gov.in/files/file/9835-list-of-contesting-candidates-for-the-first-phase-of-elections/
ಎರಡನೇ ಹಂತದಿಂದ ಏಳನೇ ಹಂತದವರೆಗಿನ ಚುನಾವಣೆಗಳ ಮತದಾನ ಏಪ್ರಿಲ್ 18, ಏಪ್ರಿಲ್ 23, ಏಪ್ರಿಲ್ 29, ಮೇ 6, ಮೇ 12, ಮತ್ತು ಮೇ 19 ರಂದು ನಡೆಯಲಿದೆ. 17 ನೇ ಲೋಕ ಸಭಾ ಚುನಾವಣೆಗಳ ಮತಗಳ ಎಣಿಕೆ ಮೇ 23 ರಂದು ನಡೆಯುತ್ತದೆ.
*****
(ಪ್ರಕಟಣೆ ಐ.ಡಿ.: 1570332)
|