ಸಂಪುಟ

ಮಾಂಗ್ಡೆಚು ಜಲ ವಿದ್ಯುತ್ ಯೋಜನೆಯ ಸಾಲ ಮರುಪಾವತಿಯ ಅವಧಿಯನ್ನು ಮತ್ತೆ ಎರಡು ವರ್ಷಗಳ ಕಾಲ ವಿಸ್ತರಿಸಲು ಭಾರತ ಮತ್ತು ಭೂತಾನ್ ನಡುವಿನ ಒಪ್ಪಂದದ 3 ನೇ ಪರಿಚ್ಛೇದದ ತಿದ್ದುಪಡಿಯನ್ನು ಸಂಪುಟ ಅಂಗೀಕರಿಸಿದೆ. 

Posted On: 07 MAR 2019 2:36PM by PIB Bengaluru

ಮಾಂಗ್ಡೆಚು ಜಲ ವಿದ್ಯುತ್ ಯೋಜನೆಯ ಸಾಲ ಮರುಪಾವತಿಯ ಅವಧಿಯನ್ನು ಮತ್ತೆ ಎರಡು ವರ್ಷಗಳ ಕಾಲ ವಿಸ್ತರಿಸಲು ಭಾರತ ಮತ್ತು ಭೂತಾನ್ ನಡುವಿನ ಒಪ್ಪಂದದ 3 ನೇ ಪರಿಚ್ಛೇದದ ತಿದ್ದುಪಡಿಯನ್ನು ಸಂಪುಟ ಅಂಗೀಕರಿಸಿದೆ. 
 

ಮಾಂಗ್ಡೆಚು ಜಲ ವಿದ್ಯುತ್ ಯೋಜನೆ (ಎಂ.ಹೆಚ್ ಇ ಪಿ) ಯ ಅನುಷ್ಠಾನವನ್ನು ಹದಿನೈದು (15) ರಿಂದ ಹದಿನೇಳು (17) ವರ್ಷಗಳಲ್ಲಿ ತರಲು ಸಾಲ ಮರುಪಾವತಿಯ ಅವಧಿಯನ್ನು ಭಾರತವು ಮತ್ತೆ ಎರಡು ವರ್ಷಗಳ ಕಾಲ ವಿಸ್ತರಿಸಲು ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿ ನೇತೃತ್ವದ ಕೇಂದ್ರಸಚಿವ ಸಂಪುಟವು ಭಾರತ ಮತ್ತು ಭೂತಾನ್ ನಡುವಿನ ಒಪ್ಪಂದದ 3 ನೇ ಪರಿಚ್ಛೇದದ ತಿದ್ದುಪಡಿಯನ್ನು ಅನುಮೋದಿಸಿತು. 

ಪ್ರಯೋಜನಗಳು: 

ಈ ಪ್ರಸ್ತಾವನೆಯ ಉದ್ಧೇಶ :

i. ಭೂತಾನಿನಲ್ಲಿರುವ ಎಂ.ಹೆಚ್ ಇ ಪಿ ಯಿಂದ 720 MW ವಿದ್ಯುತ್ ಆಮದು ಮಾಡಿಕೊಳ್ಳುವುದಕ್ಕೆ ಮೊದಲ ವರ್ಷದ ಶುಲ್ಕವು ಪ್ರತಿ ಯೂನಿಟ್ ಗೆ ರೂಪಾಯಿ 4.12 ಆಗಿರುತ್ತದೆ.

ii. ಎಂ.ಹೆಚ್ ಇ ಪಿ ಯಿಂದ ಭೂತಾನ್ ಭಾರತಕ್ಕೆ ಹೆಚ್ಚುವರಿ ಶಕ್ತಿಯ ಸರಬರಾಜು.

iii. ಭಾರತ-ಭೂತಾನ್ ಆರ್ಥಿಕ ಸಂಬಂಧಗಳು ಮತ್ತು ಅಂತರ-ಸಂಪರ್ಕಗಳನ್ನು ವಿಶೇಷವಾಗಿ ಜಲ-ಶಕ್ತಿ ಸಹಕಾರ ಕ್ಷೇತ್ರದಲ್ಲಿ ಮತ್ತು ಭಾರತ-ಭೂತಾನ್ ಒಟ್ಟಾರೆ ಸಂಬಂಧಗಳನ್ನು ಬಲಪಡಿಸುವುದು.



(Release ID: 1568309) Visitor Counter : 99