ಸಂಪುಟ
ಜಲ ವಿದ್ಯುತ್ ವಲಯದ ಉತ್ತೇಜನ ಕ್ರಮಗಳಿಗೆ ಸಂಪುಟದ ಅನುಮೋದನೆ
Posted On:
07 MAR 2019 2:46PM by PIB Bengaluru
ಜಲ ವಿದ್ಯುತ್ ವಲಯದ ಉತ್ತೇಜನ ಕ್ರಮಗಳಿಗೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಲ ವಿದ್ಯುತ್ ಕ್ಷೇತ್ರದ ಉತ್ತೇಜನ ಕ್ರಮಗಳಿಗೆ ತನ್ನ ಅನುಮೋದನೆ ನೀಡಿದೆ. ಇದರಲ್ಲಿ ದೊಡ್ಡ ಜಲ ವಿದ್ಯುತ್ ಯೋಜನೆ (ಎಚ್.ಪಿ.ಓ.)ಗಳನ್ನು ಸೌರಶಕ್ತಿಯೇತರ ನವೀಕರಿಸಬಹುದಾದ ಇಂಧನ ಖರೀದಿ (ಆರ್.ಪಿ.ಓ.) ಕಟ್ಟುಪಾಡಾಗಿ ಘೋಷಣೆ ಮಾಡಲು ತನ್ನ ಒಪ್ಪಿಗೆ ಸೂಚಿಸಿದೆ.
ವಿವರಗಳು:
i. ದೊಡ್ಡ ಜಲವಿದ್ಯುತ್ ಯೋಜನೆಗಳನ್ನು ನವೀಕರಿಸಬಹುದಾದ ಇಂಧನ ಮೂಲ ಎಂದು ಘೋಷಿಸಲಾಗುವುದು (ಅಸ್ತಿತ್ವದಲ್ಲಿರುವ ರೂಢಿಯ ಪ್ರಕಾರ, 25 ಮೆ.ವ್ಯಾಗಿಂತ ಕಡಿಮೆ ಜಲವಿದ್ಯುತ್ ಯೋಜನೆಗಳನ್ನು ಮಾತ್ರ ನವೀಕರಿಸಬಹುದಾದ ಇಂಧನಮೂಲ ಎಂದು ವರ್ಗೀಕರಿಸಲಾಗಿದೆ).
ii. ಈ ಕ್ರಮಗಳ ಅಧಿಸೂಚನೆಯ ನಂತರ (ಸೌರಶಕ್ತಿಯೇತರ ನವೀಕರಿಸಬಹುದಾದ ಖರೀದಿ ಕಟ್ಟುಪಾಡುಗೆ ಒಳಪಟ್ಟ ಎಸ್.ಎಚ್.ಪಿ.ಗಳು) ಸ್ಥಾಪನೆಯಾದ ಎಲ್.ಎಚ್.ಪಿ.ಗಳನ್ನು ವ್ಯಾಪಿಸಲು ಎಚ್.ಪಿ.ಓ. ಸೌರಶಕ್ತಿಯೇತರ ನವೀಕರಿಸಬಹುದಾದ ಖರೀದಿ ಕಟ್ಟುಪಾಡಿನೊಳಗೆ ಒಂದು ಪ್ರತ್ಯೇಕ ಘಟಕವಾಗಿದೆ. ವಾರ್ಷಿಕ ಎಚ್.ಪಿ.ಓ. ಗುರಿಗಳ ಪಥವನ್ನು ಜಲವಿದ್ಯುತ್ ಕ್ಷೇತ್ರದಲ್ಲಿ ಯೋಜಿತ ಸಾಮರ್ಥ್ಯದ ಸೇರ್ಪಡೆಯ ಆಧಾರದಲ್ಲಿ ಇಂಧನ ಸಚಿವಾಲಯ ಅಧಿಸೂಚಿಸುತ್ತದೆ. ಎಚ್.ಪಿ.ಓ.ಗಳ ಕಾರ್ಯನಿರ್ವಹಣೆಗಾಗಿ ದರ ನೀತಿಯಲ್ಲಿ ಮತ್ತು ದರ ನಿಯಂತ್ರಣದಲ್ಲಿ ಅಗತ್ಯ ತಿದ್ದುಪಡಿಗಳನ್ನು ಅಳವಡಿಸಲಾಗುತ್ತದೆ.
iii. ಯೋಜನೆಯ ಆಯುಷ್ಯವನ್ನು 40 ವರ್ಷಗಳಿಗೆ ಹೆಚ್ಚಿಸಿ, ಸಾಲ ಮರುಪಾವತಿ ಅವಧಿಯನ್ನು 18 ವರ್ಷಗಳಿಗೆ ಏರಿಸಿ ಮತ್ತು ಶೇ.2ರಷ್ಟು ಹೆಚ್ಚಳವಾಗುವ ದರವನ್ನು ಅಳವಡಿಸುವ ಮೂಲಕ ದರವನ್ನು ಬ್ಯಾಕ್ ಲೋಡ್ ಮಾಡುವ ಮೂಲಕ ದರವನ್ನು ನಿರ್ಧರಿಸಲು ಅಭಿವೃದ್ಧಿದಾರರಿಗೆ ನಮ್ಯತೆಯನ್ನು ಒದಗಿಸುವಂತಹ ದರದ ತರ್ಕಬದ್ಧಗೊಳಿಸುವಿಕೆ ಕ್ರಮಗಳು.
iv. ಜಲವಿದ್ಯುತ್ ಯೋಜನೆಗಳಿಗೆ ಪ್ರವಾಹ ನಿಯಂತ್ರಿಸುವ ಅಂಶಗಳ ಆಧಾರದ ಮೇಲೆ ನೀಡಬೇಕಾದ ಹಣಕಾಸಿಗೆ ಬಜೆಟ್ ಬೆಂಬಲ; ಮತ್ತು
v. ಮೂಲಸೌಕರ್ಯ ಅಂದರೆ ಪ್ರಕರಣದಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ತವದಂತೆ ರಸ್ತೆ ಮತ್ತು ಸೇತುವೆಗೆ ಪ್ರತಿ ಮೆಗಾ ವ್ಯಾಟ್ ಗೆ 1.5 ಕೋಟಿ ಮಿತಿಗೆ ಒಳಪಟ್ಟು, 200 ಮೆ.ವ್ಯಾ.ವರೆಗಿನ ಯೋಜನೆಗಳು ಮತ್ತು ಪ್ರತಿ ಮೆ.ವ್ಯಾ.ಗೆ 1 ಕೋಟಿ ರೂಪಾಯಿಯಂತೆ 200 ಮೆ.ವ್ಯಾ.ಯೋಜನೆಗಳಿಗೆ ತಗಲುವ ವೆಚ್ಚಕ್ಕೆ ನೀಡಬೇಕಾದ ಹಣಕಾಸಿಗೆ ಬಜೆಟ್ ಬೆಂಬಲ
ಉದ್ಯೋಗ ಸೃಷ್ಟಿಯ ಸಾಮರ್ಥ್ಯ ಸೇರಿದಂತೆ ಪ್ರಮುಖ ಪರಿಣಾಮಗಳು:
ಬಹುತೇಕ ಜಲ ವಿದ್ಯುತ್ ಯೋಜನೆಗಳು ಹಿಮಾಲಯ ಮತ್ತು ಈಶಾನ್ಯ ವಲಯದ ಎತ್ತರದ ಪ್ರದೇಶಗಳಲ್ಲಿದ್ದು, ವಿದ್ಯುತ್ ವಲಯದಲ್ಲಿ ನೇರ ಉದ್ಯೋಗ ಒದಗಿಸುವ ಮೂಲಕ ಇದು ಒಟ್ಟಾರೆಯಾಗಿ ವಲಯದ ಸಾಮಾಜಿಕ – ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿವೆ. ಜೊತೆಗೆ ಇವು ಸಾರಿಗೆ, ಪ್ರವಾಸೋದ್ಯಮ ಮತ್ತು ಇತರ ಸಣ್ಣ ವ್ಯಾಪಾರಗಳ ಕ್ಷೇತ್ರದಲ್ಲಿ ಪರೋಕ್ಷ ಉದ್ಯೋಗ/ಉದ್ಯಮಶೀಲತೆ ಅವಕಾಶಗಳನ್ನೂ ಒದಗಿಸುತ್ತವೆ. 2022 ರ ವೇಳೆಗೆ ಸೌರ ಮತ್ತು ಪವನ ಮುಂತಾದ ಇಂಧನ ಮೂಲಗಳ ಮೂಲಕ 160 ಗಿ.ವ್ಯಾ. ಸಾಮರ್ಥ್ಯದ ಸೇರ್ಪಡೆ ಪರಿಗಣಿಸುವ ಸ್ಥಿರ ಗ್ರಿಡ್ ಹೊಂದುವುದು ಇದರ ಮತ್ತೊಂದು ಪ್ರಯೋಜನವಾಗಿದೆ.
ಹಿನ್ನೆಲೆ:
ಭಾರತವು 1,45,320 ಮೆ.ವ್ಯಾ. ದೊಡ್ಡ ಜಲ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು, ಈವರೆಗೆ ಕೇವಲ 45,400 ಮೆ.ವ್ಯಾ. ಸಾಮರ್ಥ್ಯವನ್ನು ಮಾತ್ರವೇ ಬಳಕೆ ಮಾಡಿಕೊಳ್ಳಲಾಗಿದೆ. ಕಳೆದ 10 ವರ್ಷಗಳಲ್ಲಿ ಕೇವಲ 10,000 ಮೆ.ವ್ಯಾ. ಜಲ ವಿದ್ಯುತ್ ಸೇರ್ಪಡೆಯಾಗಿದೆ. ಜಲ ವಿದ್ಯುತ್ ವಲಯವು ಪ್ರಸ್ತುತ ಸವಾಲಿನ ಹಂತದಲ್ಲಿ ಸಾಗಿದೆ ಮತ್ತು ಒಟ್ಟಾರೆ ಸಾಮರ್ಥ್ಯದಲ್ಲಿ ಜಲ ವಿದ್ಯುತ್ ನ ಪಾಲು 1960ರಲ್ಲಿದ್ದ ಶೇ 50.36 ರಿಂದ 2018-19ರಲ್ಲಿ ಶೇ.13ಕ್ಕೆ ಇಳಿಕೆಯಾಗಿದೆ.
ಜಲವಿದ್ಯುತ್ ಪರಿಸರ ಸ್ನೇಹಿಯಾಗಿರುವುದರ ಜೊತೆಗೆ ಹಲವು ಇತರ ಅನನ್ಯ ಲಕ್ಷಣಗಳನ್ನು ಅಂದರೆ, ತ್ವರಿತ ರಾಂಪಿಂಗ್, ಬ್ಲಾಕ್ ಸ್ಟಾರ್ಟ್, ಪ್ರತಿಕ್ರಿಯಾತ್ಮಕ ಹೀರಿಕೊಳ್ಳುವಿಕೆಗೆ ಸಾಮರ್ಥ್ಯ ಇತ್ಯಾದಿ ಹೊಂದಿದೆ. ಇದು ವಿದ್ಯುತ್, ವಿರುದ್ಧವಾಗಿ ತಿರುಗಿಸಲು, ಗ್ರಿಡ್ ಸಮತೋಲನ / ಸ್ಥಿರತೆ ಉತ್ತುಂಗಕ್ಕೇರಿಸಲು ಸೂಕ್ತವಾಗಿದೆ. ಜೊತೆಗೆ, ಜಲ ವಿದ್ಯುತ್ ನೀರಿನ ಭದ್ರತೆ, ನೀರಾವರಿ ಮತ್ತು ಪ್ರವಾಹ ಸಾಧಾರಣಗೊಳಿಸುವ ಲಾಭವನ್ನೂ ಒದಗಿಸುತ್ತದೆ, ಮಿಗಿಲಾಗಿ ಉದ್ಯೋಗಾವಕಾಶ ಕಲ್ಪಿಸುವ ಮತ್ತು ಪ್ರವಾಸೋದ್ಯಮ ಉತ್ತೇಜಿಸುವ ಮೂಲಕ ಇಡೀ ವಲಯದ ಆರ್ಥಿಕ ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯವಾಗಿ ನಿರ್ಧರಿಸಲ್ಪಟ್ಟ ಕೊಡುಗೆ ನೀಡುವ ಬದ್ಧತೆ ಗೌರವಿಸಲು, 2022 ರ ಹೊತ್ತಿಗೆ .ಪವನ ಮತ್ತು ಸೌರ ವಿದ್ಯುತ್ ನಿಂದ 160 ಗಿ.ವ್ಯಾ ಸೇರ್ಪಡೆ ಮಾಡಲು ಮತ್ತು ಪಳೆಯುಳಿಕೆಯೇತರ ಇಂಧನ ಮೂಲದಿಂದ 2030ರ ಹೊತ್ತಿಗೆ ಶೇ.40ರಷ್ಟು ಒಟ್ಟಾರೆ ಸಾಮರ್ಥ್ಯದ ಹಿನ್ನೆಲೆಯಲ್ಲಿ ಜಲ ವಿದ್ಯುತ್ ನ ಮಹತ್ವ ಇನ್ನಷ್ಟು ಹೆಚ್ಚಿದೆ. ಆದಾಗ್ಯೂ, ಡಿ.ಐ.ಎಸ್.ಓ.ಎಂ.ಎಸ್. ಗಳು ಆರಂಭಿಕ ವರ್ಷಗಳಲ್ಲಿ ದರ ಹೆಚ್ಚಳದಿಂದಾಗಿ ಜಲ ವಿದ್ಯುತ್ ಖರೀದಿ ಒಪ್ಪಂದ (ಪಿಪಿಎಗಳು) ಸಹಿ ಹಾಕಲು ಮನಸ್ಸು ಹೊಂದಿರಲಿಲ್ಲ. ಪ್ರವಾಹ ಸಾಧಾರಣಗೊಳಿಸುವ ವೆಚ್ಚ ಮತ್ತು ಯೋಜನಾ ವೆಚ್ಚದಲ್ಲಿ ಮೂಲಸೌಕರ್ಯದ ವೆಚ್ಚದ ಹೊರೆ ಜಲ ವಿದ್ಯುತ್ ದರ ಹೆಚ್ಚಳವಾಗಲು ಕಾರಣಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ, ಜಲ ವಿದ್ಯುತ್ ವಲಯದ ಉತ್ತೇಜನಕ್ಕೆ ಕ್ರಮಗಳನ್ನು ಅಳವಡಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರವಾಹ ನಿಯಂತ್ರಿಸುವ ವೆಚ್ಚ ಮತ್ತು ಮೂಲಸೌಕರ್ಯ ಅಳವಡಿಕೆ ವೆಚ್ಚಕ್ಕೆ ಬಜೆಟ್ ಬೆಂಬಲ ನೀಡಲು ತೀರ್ಮಾನಿಸಲಾಗಿದೆ ಮತ್ತು ದರ ತರ್ಕಬದ್ದಗೊಳಿಸುವ ಕ್ರಮಗಳು ದರವನ್ನು ಇಳಿಸಲಿದ್ದು, ಗ್ರಾಹಕರ ಮೇಲಿನ ಹೊರೆ ತಪ್ಪಿಸಲಿವೆ.
(Release ID: 1568274)
Visitor Counter : 458