ಸಂಪುಟ

ದೆಹಲಿಯ ಅಲಿಪುರ್ ನಲ್ಲಿ ದೆಹಲಿ ಕ್ಷೀರ ಯೋಜನೆ ಒಡೆತನದಲ್ಲಿರುವ 1.61 ಎಕರೆ ಭೂಮಿಯನ್ನು ಕಿಸಾನ್ ಮಂಡಿ ಸ್ಥಾಪನೆಗಾಗಿ ಸಣ್ಣ ರೈತರ ಕೃಷಿವ್ಯಾಪಾರ ಒಕ್ಕೂಟಕ್ಕೆ ಗುತ್ತಿಗೆ ನೀಡಲು ಸಂಪುಟದ ಅನುಮೋದನೆ

Posted On: 13 FEB 2019 9:28PM by PIB Bengaluru

 ದೆಹಲಿಯ ಅಲಿಪುರ್ ನಲ್ಲಿ ದೆಹಲಿ ಕ್ಷೀರ ಯೋಜನೆ ಒಡೆತನದಲ್ಲಿರುವ  1.61 ಎಕರೆ ಭೂಮಿಯನ್ನು ಕಿಸಾನ್ ಮಂಡಿ ಸ್ಥಾಪನೆಗಾಗಿ ಸಣ್ಣ ರೈತರ ಕೃಷಿವ್ಯಾಪಾರ ಒಕ್ಕೂಟಕ್ಕೆ ಗುತ್ತಿಗೆ ನೀಡಲು ಸಂಪುಟದ ಅನುಮೋದನೆ  
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೆಹಲಿಯ ಅಲಿಪುರ್ ನಲ್ಲಿ ದೆಹಲಿ ಕ್ಷೀರ ಯೋಜನೆ ಒಡೆತನದಲ್ಲಿರುವ ಕ್ಷಸರ ಸಂಖ್ಯೆ 91/15ರಲ್ಲಿರುವ  1.61 ಎಕರೆ ಭೂಮಿಯನ್ನು ಕಿಸಾನ್ ಮಂಡಿ ಸ್ಥಾಪನೆಗಾಗಿ ಸಣ್ಣ ರೈತರ ಕೃಷಿವ್ಯಾಪಾರ ಒಕ್ಕೂಟ(ಎಸ್.ಎಫ್.ಎ.ಸಿ.)ಕ್ಕೆ ಗುತ್ತಿಗೆ ನೀಡಲು ಸಮ್ಮತಿ ಸೂಚಿಸಿದೆ.

 

ಗುತ್ತಿಗೆಯ ಅವಧಿ 30 ವರ್ಷಗಳಾಗಿದ್ದು, 10.09.2014 ರಿಂದ ಜಾರಿಗೆ ಬರಲಿದ್ದು, 09.09.2044ರವರೆಗೆ ಇರುತ್ತದೆ. ಇದರ ಗುತ್ತಿಗೆಯ ಹಣ ಮಾಸಿಕ 100 ರೂಪಾಯಿಗಳಾಗಿದ್ದು, ವಾರ್ಷಿಕ ಶೇ.10ರಷ್ಟು ಬಾಡಿಗೆ ಹೆಚ್ಚಳವನ್ನು 10.09.2014ರಿಂದ ಮಾಡಬಹುದಾಗಿದೆ. ಬಾಡಿಗೆಯ ಹಣವನ್ನು ಮುಂಗಡವಾಗಿ ಇಡೀ ವರ್ಷಕ್ಕೆ ಕ್ಯಾಲೆಂಡರ್ ವರ್ಷದ ಆರಂಭದಲ್ಲಿಯೇ ಅಂದರೆ ಜನವರಿ 31ಕ್ಕೆ ಮೊದಲು ಪಾವತಿಸಬೇಕು.

 

ಪರಿಣಾಮಗಳು:-

 

ಎಸ್.ಎಫ್.ಎ.ಸಿ ವತಿಯಿಂದ ಕಿಸಾನ್ ಮಂಡಿಯನ್ನು ಸ್ಥಾಪಿಸಲಿದ್ದು, ಇದು ದೇಶದ ರೈತರು ಮತ್ತು ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಎಫ್.ಪಿ.ಓ.ಗಳು ಮತ್ತು ಬೆಳೆಗಾರರ ಸಂಘಕ್ಕೆ ನೇರವಾಗಿ ಹಣ್ಣು ಮತ್ತು ತರಕಾರಿಗಳನ್ನು ದೆಹಲಿ/ಎನ್.ಸಿ.ಆರ್.ನ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅದು ಹೆಚ್ಚುವರಿ ಮಾರುಕಟ್ಟೆ ಚಾನೆಲ್/ವೇದಿಕೆಯನ್ನು ಒದಗಿಸುತ್ತದೆ.

 

ಕಿಸಾನ್ ಮಂಡಿಯ ಮುಖ್ಯಾಂಶಗಳು:-

 

ನೋಂದಾಯಿತ ಎಫ್.ಪಿ.ಓಗಳು/ಬೆಳೆಗಾರರ ಸಂಘಗಳಿಗೆ (ಜಿಎಗಳು) ಮಾತ್ರವೇ ತಾಜಾ ಉತ್ಪನ್ನಗಳನ್ನು ಮಾರಾಟ ಮಾಡಲು ಇಲ್ಲಿ ವೇದಿಕೆ ಒದಗಿಸಲಾಗುತ್ತದೆ.

 

ಸಂಸ್ಥೆಗಳು, ಚಿಲ್ಲರೆ ಮಾರಾಟಗಾರರು, ಸಗಟು ಮಾರಾಟಗಾರರು, ಹೊಟೆಲ್ ಗಳು ಮತ್ತು ಅಡುಗೆ ಗುತ್ತಿಗೆ ಸಂಸ್ಥೆಗಳು, ನಿವಾಸಿಗಳ ಕಲ್ಯಾಣ ಸಂಘಗಳು (ಆರ್.ಡಬ್ಲ್ಯುಎಗಳು) ಮತ್ತು ಸಾಮಾನ್ಯ ಗ್ರಾಹಕರು ಈ ವೇದಿಕೆಯಲ್ಲಿ ಯಾವುದೇ ಮಧ್ಯವರ್ತಿಗಳು/ಏಜೆಂಟರಿಲ್ಲದೆ ನೇರವಾಗಿ ಖರೀದಿ ಮಾಡಬಹುದಾಗಿದೆ

 

ಕಿಸಾನ್ ಮಂಡಿಯಲ್ಲಿನ ವಹಿವಾಟಿಗೆ ಮಾರಾಟಗಾರರಿಂದಾಗಲೀ ಅಥವಾ ಖರೀದಿದಾರರಿಂದಾಗಲಿ ಯಾವುದೇ ಕಮಿಷನ್ ಪಡೆಯಲಾಗುವುದಿಲ್ಲ, ಆದರೆ, ಇಲ್ಲಿನ ಸೌಲಭ್ಯಗಳು ಅಂದರೆ ಗೋದಾಮುಗಳು, ಶೀಥಲೀಕರಣ ಘಟಕ ಇತ್ಯಾದಿ ಬಳಕೆಗಾಗಿ ಎಫ್.ಪಿ.ಓ.ಗಳು ಸಣ್ಣ ಮೊತ್ತದ ಸೇವಾ ಶುಲ್ಕವನ್ನು ಪಾವತಿಸುತ್ತಾರೆ. 

ಕಿಸಾನ್ ಮಂಡಿ ಚಿಲ್ಲರೆ ಮಳಿಗೆಗಳ ಮೂಲಕ ಫ್ರಾಂಚೈಸಿ ಮಾದರಿಯಲ್ಲಿ ನೇರವಾಗಿ ಪೂರೈಕೆಗೂ ಅವಕಾಶ ನೀಡುತ್ತದೆ. 

 

ದೆಹಲಿ ಕ್ಷೀರ ಯೋಜನೆಯ ಆಯ್ದ ಕಿಯೋಸ್ಕ್ ಗಳ ಮೂಲಕ ಆಲೂಗಡ್ಡೆ ಮತ್ತು ಈರುಳ್ಳಿಗಳಂತಹ ಪ್ರಧಾನ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೂ  ಚಾಲನೆ ನೀಡಲಾಗುತ್ತಿದೆ. ಕಿಸಾನ್ ಮಂಡಿಯಲ್ಲಿ ಆನ್ ಲೈನ್ ಮತ್ತು ಕಾಲ್ ಸೆಂಟರ್ ಇತ್ಯಾದಿ ಮೂಲಕ ನೇರ ಮಾರಾಟಕ್ಕೊ  ಅವಕಾಶವಿದೆ. 

 

ಹಿನ್ನೆಲೆ:-

 

ಎಸ್.ಎಫ್.ಎ.ಸಿ. ಒಂದು ನೋಂದಾಯಿತ ಸೊಸೈಟಿಯಾಗಿದ್ದು ಸೊಸೈಟಿಗಳ ನೋಂದಣಿ ಕಾಯಿದೆ XXI 1860ರ ಅಡಿಯಲ್ಲಿ ಸ್ಥಾಪನೆಯಾಗಿದ್ದು, ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕೃಷಿ ನಿಗಮ ಮತ್ತು ರೈತರ ಕಲ್ಯಾಣ ಇಲಾಖೆಯ ಆಡಳಿತ ನಿಯಂತ್ರಣಕ್ಕೊಳಪಟ್ಟಿರುತ್ತದೆ. ರೈತರು, ತಂತ್ರಜ್ಞಾನ ಮತ್ತು ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವುದು ಇದರ ಕಡ್ಡಾಯವಾಗಿದೆ. ರೈತರನ್ನು ಗುಂಪುಗಳಲ್ಲಿ ಸಂಘಟಿಸಿ, ರೈತರ ಉತ್ಪಾದಕರ ಸಂಸ್ಥೆ (ಎಫ್.ಪಿ.ಓ.)ಗಳಿಗೆ ಕರೆ ನೀಡಿ ಮತ್ತು ಈ ಸಂಸ್ಥೆಗಳನ್ನು ಮಾರುಕಟ್ಟೆಗೆ ಸಂಪರ್ಕಿಸಿ, ಉತ್ತಮ ಫಲಶ್ರುತಿ ಬರುವಂತೆ ಮಾಡುವುದನ್ನು ಎಸ್.ಎಫ್.ಎ.ಸಿ. ಗೆ ಕೃಷಿ ಸಚಿವಾಲಯ ಕಡ್ಡಾಯ ಮಾಡಿದೆ. ಎಸ್.ಎಫ್.ಎ.ಸಿ. 2017ರ ಡಿಸೆಂಬರ್ ವರೆಗೆ ದೇಶದಾದ್ಯಂತ 6.60 ಲಕ್ಷ ರೈತರು ಸದಸ್ಯರನ್ನಾಗಿ ಮಾಡುವ ಮೂಲಕ ಸುಮಾರು 650 ಎಫ್.ಪಿ.ಓ.ಗಳನ್ನು ಉತ್ತೇಜಿಸಿದೆ. ಈ ಕಾಯಗಳು ಸದಸ್ಯ ಮಾಲೀಕತ್ವದ ಬೇರುಮಟ್ಟದ ಸಂಸ್ಥೆಗಳಾಗಿದ್ದು, ಇವು ಸಣ್ಣ ಮತ್ತು ಅಂಚಿನಲ್ಲಿರುವ ರೈತರಿಗೆ ಸಂಘಟಿತವಾಗಿ ಚೌಕಾಸಿ ಮಾಡುವ ಅವಕಾಶ ಒದಗಿಸುತ್ತವೆ. ದೆಹಲಿ ಮತ್ತು ಎನ್.ಸಿ.ಆರ್. ನ ರೈತರು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಹಣ್ಣು ಮತ್ತು ತರಕಾರಿಗಳ ನೇರ ಮಾರಾಟಕ್ಕಾಗಿ ಎಸ್.ಎಫ್.ಎ.ಸಿ., ಹೆಚ್ಚುವರಿ ಮಾರುಕಟ್ಟೆ ಚಾನೆಲ್ /ವೇದಿಕೆಗಳನ್ನು ಎಫ್.ಪಿ.ಓ.ಗಳು ಮತ್ತು ರೈತ ಬೆಳೆಗಾರರ ಸಂಘಗಳನ್ನು ಸಗಟು ಮತ್ತು ಚಿಲ್ಲರೆ ಗ್ರಾಹಕರಿಗೆ ಸಂಪರ್ಕಿಸಲು ಕಿಸಾನ್ ಮಂಡಿಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.  



(Release ID: 1564456) Visitor Counter : 92