ಸಂಪುಟ

ಭಾರತ ಮತ್ತು ಫಿನ್ಲ್ಯಾಂಡ್ ನಡುವೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ

Posted On: 06 FEB 2019 9:47PM by PIB Bengaluru

 ಭಾರತ ಮತ್ತು  ಫಿನ್ಲ್ಯಾಂಡ್ ನಡುವೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು  ಫಿನ್ಲ್ಯಾಂಡ್ ನಡುವೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಹಿತಾಸಕ್ತಿ ಆಧಾರದಲ್ಲಿ ಹೂಡಿಕೆ ಮತ್ತು ಮಹತ್ವಾಕಾಂಕ್ಷಿ ಕೈಗಾರಿಕಾ ವಲಯದಲ್ಲಿ ಅನ್ವೇಷಣೆ ಅಂತಾರಾಷ್ಟ್ರೀಯ ಯೋಜನೆಗಳನ್ನು ಸಂಶೋಧನಾ ಅಭಿವೃದ್ದಿ ಮತ್ತು ಅನ್ವೇಷಣಾ ಆಧಾರಿತವಾಗಿ ಕೈಗೊಳ್ಳುವುದಕ್ಕೆ ಅವಕಾಶ ಒದಗಿಸುವ  ಸಹಯೋಗ ಕುರಿತ  ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.

 

ಪ್ರಯೋಜನಗಳು:

 

ಈ ಎಂ.ಒ.ಯು. ಧೀರ್ಘಾವಧಿ ಸಂಶೋಧನೆ, ಅಭಿವೃದ್ದಿ, ಮತ್ತು ಅನ್ವೇಷಣೆ ಸಹಯೋಗ ವ್ಯವಸ್ಥೆಯನ್ನು ರೂಪಿಸಲು ಮತ್ತು ಭಾರತೀಯ ಹಾಗು ಫಿನ್ಲ್ಯಾಂಡ್ ಸಂಘಟನೆಗಳ ನಡುವೆ ಸಹಕಾರದ ಜಾಲವನ್ನು ಸ್ಥಾಪಿಸಿ ಅದನ್ನು ಬಲಗೊಳಿಸಲು ಅನುಕೂಲತೆಗಳನ್ನು ಒದಗಿಸುತ್ತದೆ. ಅಂತಾರಾಷ್ಟ್ರೀಯ ಗುಣಮಟ್ಟದ,  ಹಣಕಾಸು ಆವಶ್ಯಕತೆಯ ಆಧಾರದ  ಮಹತ್ವಾಕಾಂಕ್ಷಿ ಜಂಟಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಉಭಯ ದೇಶಗಳು ಎರಡೂ ದೇಶಗಳಿಗೆ ಲಾಭದಾಯಕವಾಗುವಂತಹ ವಿಶ್ವ ದರ್ಜೆಯ ಅನ್ವೇಷಣೆಗಳನ್ನು ಕೈಗೊಳ್ಳಲು ಇದು ನೆರವಾಗಲಿದೆ. ಇದು ಎರಡೂ ದೇಶಗಳ ವಿಜ್ಞಾನಿಗಳು, ಸಂಶೋಧಕರು ಮತ್ತು ಕೈಗಾರಿಕೋದ್ಯಮಗಳ ನಡುವೆ  ಜ್ಞಾನ ವಿನಿಮಯ ಮತ್ತು ಜ್ಞಾನ ಉತ್ಪಾದನೆಗೂ ಅವಕಾಶ ಒದಗಿಸಲಿದೆ. 

 

ವಿವರಗಳು:

 

   1 . ಸಹಯೋಗದಲ್ಲಿ ಅನ್ವೇಷಣೆಯನ್ನು ಗುರುತಿಸುವುದು ಮುಖ್ಯ ಮೈಲಿಗಲ್ಲಾಗಿರುತ್ತದೆ. ಡಿ.ಬಿ.ಟಿ ಮತ್ತು ಬ್ಯುಸಿನೆಸ್ ಫಿನ್ಲ್ಯಾಂಡ್ ಗಳು ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ನೆರವು ಮಂಡಳಿ ( ಬಿ.ಐ.ಆರ್. ಎ.ಸಿ.) , ಜೈವಿಕ ತಂತ್ರಜ್ಞಾನ ಇಲಾಖೆಯ (ಡಿ.ಬಿ.ಟಿ.)  ಸಾರ್ವಜನಿಕ ರಂಗದ ಉದ್ಯಮದ ಜೊತೆ ಹಣಕಾಸು ನೆರವು ಮತ್ತು ಮಹತ್ವಾಕಾಂಕ್ಷಿ ಕೈಗಾರಿಕಾ ಮುಂಚೂಣಿ  ಅನ್ವೇಷಣಾ ಹಾಗು ಅಂತಾರಾಷ್ಟ್ರೀಯ ಮಟ್ಟದ ಯೋಜನೆಗಳನ್ನು ಅನುಷ್ಟಾನಿಸಲಿದೆ. ಪರಸ್ಪರ ಹಿತಾಸಕ್ತಿ ಆಧಾರದಲ್ಲಿ ಈ ಕೆಳಗಿನ ಸಂಶೋಧನಾ ಕ್ಷೇತ್ರಗಳನ್ನು ಗುರುತಿಸಲಾಗಿದೆ.

 

ಅನ್ವೇಷಣಾ ಯೋಜನೆ;

 

ಜೀವ ಭವಿಷ್ಯ ವೇದಿಕೆ: ಜೈವಿಕಇಂಧನ , ಜೈವಿಕ ಶಕ್ತಿ ಮತ್ತು ಜೈವಿಕ ಸಂಕುಲ ಆಧಾರಿತ ಉತ್ಪಾದನೆಗಳು:

 

  2.ಜೈವಿಕ ತಂತ್ರಜ್ಞಾನದ ಪರಿಸರ ಸಂಬಂಧಿ ಮತ್ತು ಇಂಧನ ಅನ್ವಯಿಕತೆಗಳು;

 

  3.ನವೋದ್ಯಮಗಳ ವ್ಯಾಪಾರಾಭಿವೃದ್ದಿ  ಮತ್ತು  ಕಂಪೆನಿಗಳ ಬೆಳವಣಿಗೆ ಮತ್ತು

 

  4. ಜೀವ ವಿಜ್ಞಾನಗಳಲ್ಲಿ ಶಿಕ್ಷಣ ತಂತ್ರಜ್ಞಾನಗಳು ಮತ್ತು ಆಟಗಳು.

 

  ಜೀವ ವಿಜ್ಞಾನ ಕೈಗಾರಿಕೆಯ  ಇತರ ಕ್ಷೇತ್ರಗಳು .

 

ಹಿನ್ನೆಲೆ:

 

ಫಿನ್ಲ್ಯಾಂಡ್ ರಿಪಬ್ಲಿಕ್ ಸರಕಾರ ಮತ್ತು ಪ್ರಜಾಪ್ರಭುತ್ವವಾದೀ ಭಾರತ ಸರಕಾರಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ 2008 ರ ಮಾರ್ಚ್ 25 ರಂದು ಹೆಲ್ಸಿಂಕಿಯಲ್ಲಿ ಅಂಕಿತ ಹಾಕಲಾದ ಒಪ್ಪಂದದನ್ವಯ  ಈ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಅದರಲ್ಲಿ ಫಿನ್ಲ್ಯಾಂಡ್ ಮತ್ತು ಭಾರತೀಯ ಸಂಘಟನೆಗಳ ನಡುವೆ ಪರಸ್ಪರ ಹಿತಾಸಕ್ತಿಯ ಆಧಾರದಲ್ಲಿ ಧೀರ್ಘಾವಧಿ ಸಂಶೋಧನೆ ಮತ್ತು ಅಭಿವೃದ್ದಿ, ಹಾಗು ಅನ್ವೇಷಣೆ  (ಆರ್ ಆಂಡ್ ಡಿ ಆಂಡ್ ಐ.) ಸಹಕಾರವನ್ನು ಉತ್ತೇಜಿಸಲು ಒಪಿಕೊಳ್ಳಲಾಗಿದೆ.



(Release ID: 1563124) Visitor Counter : 85