ಸಂಪುಟ

ಭಾರತ- ನಾರ್ವೆ ಸಾಗರ ಮಾತುಕತೆ ಕುರಿತಂತೆ ಭಾರತ ಮತ್ತು ನಾರ್ವೆ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

Posted On: 06 FEB 2019 9:53PM by PIB Bengaluru

ಭಾರತ- ನಾರ್ವೆ ಸಾಗರ ಮಾತುಕತೆ ಕುರಿತಂತೆ ಭಾರತ ಮತ್ತು ನಾರ್ವೆ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ನಾರ್ವೆ ನಡುವೆ ಸಾಗರ ಮಾತುಕತೆಗಾಗಿ ಭಾರತ ಮತ್ತು ನಾರ್ವೆ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

ಪ್ರಯೋಜನಗಳು:

ಈ ತಿಳಿವಳಿಕೆ ಒಪ್ಪಂದವು, ನೀಲಿ ಆರ್ಥಿಕತೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿನ ಸಹಕಾರವನ್ನು ಉತ್ತೇಜಿಸುತ್ತದೆ. ನಾರ್ವೆ ನೀಲಿ ಆರ್ಥಿಕತೆಯ ರಂಗದಲ್ಲಿ ಜಾಗತಿಕ ನಾಯಕನಾಗಿದೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ ಮತ್ತು ಮೀನುಗಾರಿಕೆ, ಹೈಡ್ರೋಕಾರ್ಬನ್, ನವೀಕರಿಸಬಹುದಾದ ಇಂಧನ, ಸುಸ್ಥಿರವಾಗಿ ಸಾಗರ ಸಂಪನ್ಮೂಲ ಸಜ್ಜುಗೊಳಿಸುವಿಕೆ ಮತ್ತು ಸಾಗರ ಸಾಗಣೆ ಕ್ಷೇತ್ರದಲ್ಲಿ ನೈಪುಣ್ಯತೆಯನ್ನು ಪಡೆದಿದೆ. ಈ ಪ್ರಸ್ತಾಪಿತ ತಿಳಿವಳಿಕೆ ಒಪ್ಪಂದವು, ಹೈಡ್ರೋ ಕಾರ್ಬನ್ಸ್ ಮತ್ತು ಇತರ ಸಾಗರ ಸಂಪನ್ಮೂಲಗಳ ಕ್ಷೇತ್ರದಲ್ಲಿನ ಸಹಯೋಗದ ಅವಕಾಶಗಳನ್ನು ಸೃಷ್ಟಿಸಲು ಮತ್ತು ಇದರ ಜೊತೆಗೆ, ಜಂಟಿ ಕಾರ್ಯ ಪಡೆ (ಜೆಟಿಎಫ್) ಚೌಕಟ್ಟಿನೊಳಗೆ ಬರುವ ಎಲ್ಲ ಬಾಧ್ಯಸ್ಥರ ಪರಸ್ಪರರ ಪ್ರಯೋಜನಕ್ಕಾಗಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಬಂದರು ನಿರ್ವಹಣೆಗೂ ಕೊಡುಗೆ ನೀಡುತ್ತದೆ. ಮೀನುಗಾರಿಕೆ ಮತ್ತು ಅಕ್ವಾಕಲ್ಚರ್ ನಲ್ಲಿ ನೂತನ ತಂತ್ರಜ್ಞಾನ ಅಳವಡಿಸುವ ಮೂಲಕ ಇದು ಆಹಾರ ಭದ್ರತೆಯ ಉದ್ದೇಶಕ್ಕೂ ಕೊಡುಗೆ ನೀಡುತ್ತದೆ. ಇದು ಎರಡೂ ರಾಷ್ಟ್ರಗಳಲ್ಲಿ ವಾಣಿಜ್ಯಕ್ಕಾಗಿ ಲಾಭದಾಯಕವಾದ ಪ್ರಯತ್ನ ಜಾರಿ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ಆರ್ಕಟಿಕ್ ವಲಯದಲ್ಲಿನ ವಿಚಾರಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳು ಮತ್ತು ಸಂಶೋಧಕರು ಸಾಗರ ಪರಿಸರ ವ್ಯವಸ್ಥೆ ಅಧ್ಯಯನ ಕುರಿತಂತೆ ಸಹಯೋಗ ಮಾಡಬಹುದಾಗಿದೆ.
 

***



(Release ID: 1563068) Visitor Counter : 93