ಸಂಪುಟ

ಭಾರತ ಮತ್ತು ಉಜ್ಬೆಕಿಸ್ತಾನ ನಡುವೆ ಇ-ಆಡಳಿತದ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಉತ್ತೇಜಿಸುವ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅಂಗೀಕಾರ

Posted On: 06 FEB 2019 9:44PM by PIB Bengaluru

ಭಾರತ ಮತ್ತು ಉಜ್ಬೆಕಿಸ್ತಾನ ನಡುವೆ ಇ-ಆಡಳಿತದ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಉತ್ತೇಜಿಸುವ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅಂಗೀಕಾರ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಉಜ್ಬೆಕಿಸ್ತಾನ ನಡುವೆ ಇ-ಆಡಳಿತದ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಉತ್ತೇಜಿಸುವ ತಿಳುವಳಿಕಾ ಒಡಂಬಡಿಕೆಗೆ (ಎಂ.ಒ.ಯು.) ಪೂರ್ವಾನ್ವಯಗೊಂಡಂತೆ ಅಂಗೀಕಾರ ನೀಡಿತು.

ಈ ಒಪ್ಪಂದವು ಇ-ಆಡಳಿತ, ಮಾಹಿತಿ ತಂತ್ರಜ್ಞಾನ ಶಿಕ್ಷಣ, ಇ-ಆಡಳಿತದ ವರ್ಗ ವಿಶಿಷ್ಟ ಉತ್ಪನ್ನಗಳ ಅನುಷ್ಟಾನ ಮತ್ತು ಅವುಗಳ ಬಿಡುಗಡೆ/ ವಿವಿಧ ವಲಯಗಳ ಉಪಕರಣಗಳು, ದತ್ತಾಂಶ ಕೇಂದ್ರಗಳ ಅಭಿವೃದ್ದಿ ಇತ್ಯಾದಿಗಳಿಗೆ ಅನ್ವಯಿಸಿ ನಿಕಟ ಸಹಕಾರ ಉತ್ತೇಜಿಸುವ ಆಶಯವನ್ನು ಹೊಂದಿದೆ.

ಹಿನ್ನೆಲೆ:

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮಾಹಿತಿ ಸಂವಹನ ತಂತ್ರಜ್ಞಾನ (ಐ.ಸಿ.ಟಿ.) ದ ಉದಯಿಸುತ್ತಿರುವ ಮತ್ತು ಪ್ರಮುಖ ಮುಂಚೂಣಿ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವ ಹೊಣೆಗಾರಿಕೆಯನ್ನು ಹೊಂದಿದ್ದು, ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಚೌಕಟ್ಟಿನಡಿಯಲ್ಲಿ ಒಪ್ಪಂದಗಳನ್ನು/ ವಿವಿಧ ದೇಶಗಳ, ವಿವಿಧ ಏಜೆನ್ಸಿಗಳ ಜೊತೆ ಗುರುತಿಸಲ್ಪಟ್ಟ ಕ್ಷೇತ್ರಗಳಲ್ಲಿ ಮಾಹಿತಿ ವಿನಿಮಯ ಉತ್ತೇಜಿಸುವುದಕ್ಕಾಗಿ ಮಾಡಿಕೊಂಡಿದೆ.



(Release ID: 1563055) Visitor Counter : 78