ಪ್ರಧಾನ ಮಂತ್ರಿಯವರ ಕಛೇರಿ

ನೇತಾಜಿ ಸುಭಾಷ್  ಚಂದ್ರ ಬೋಸ್ ರ ಸ್ಮರಣಾರ್ಥ ಕೆಂಪು ಕೋಟೆಯಲ್ಲಿ ಸುಭಾಷ್  ಚಂದ್ರ ಬೋಸ್   ವಸ್ತು ಸಂಗ್ರಹಾಲಯ ಪ್ರಧಾನಮಂತ್ರಿಯವರಿಂದ ಲೋಕಾರ್ಪಣೆ

Posted On: 23 JAN 2019 1:46PM by PIB Bengaluru

ನೇತಾಜಿ ಸುಭಾಷ್  ಚಂದ್ರ ಬೋಸ್ ರ ಸ್ಮರಣಾರ್ಥ ಕೆಂಪು ಕೋಟೆಯಲ್ಲಿ ಸುಭಾಷ್  ಚಂದ್ರ ಬೋಸ್   ವಸ್ತು ಸಂಗ್ರಹಾಲಯ ಪ್ರಧಾನಮಂತ್ರಿಯವರಿಂದ ಲೋಕಾರ್ಪಣೆ

 

ದೆಹಲಿಯಲ್ಲಿ ಯಾದ್ ಎ ಜಲಿಯನ್ ವಸ್ತುಸಂಗ್ರಹಾಲಯ, 1857 ರ ಕುರಿತ ವಸ್ತುಸಂಗ್ರಹಾಲಯ ಮತ್ತು ದೃಶ್ಯಕಲಾ ವಸ್ತುಸಂಗ್ರಹಾಲಯಕ್ಕೆ ಪ್ರಧಾನಮಂತ್ರಿ ಭೇಟಿ. ಎಲ್ಲ ನಾಲ್ಕು ಸಂಗ್ರಹಾಲಯಗಳಿಗೆ ಕ್ರಾಂತಿ ಮಂದಿರ್ ಎಂದು ನಾಮಕರಣ

 

 ಸುಭಾಷ್  ಚಂದ್ರ ಬೋಸ್ ರ 122 ನೇ ಜನ್ಮ ಜಯಂತಿಯ ಸಂದರ್ಭದಲ್ಲಿ ಇಂದು ಸ್ವಾತಂತ್ರ್ಯ ಯೋಧರನ್ನು ಸ್ಮರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪುಷ್ಪನಮನ ಸಲ್ಲಿಸಿದರು ಮತ್ತು ಕೆಂಪು ಕೋಟೆಯಲ್ಲಿ ಸುಭಾಷ್  ಚಂದ್ರ ಬೋಸ್   ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು.

 

 ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆ ಕುರಿತಾದ ಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಸುಭಾಷ್ ಚಂದ್ರ ಬೋಸ್ ರ ಜಯಂತಿಯಂದು ಅವರಿಗೆ ನಮಿಸುತ್ತೇನೆ. ಭಾರತವನ್ನು ಸ್ವತಂತ್ರಗೊಳಿಸುವ ನಿಟ್ಟಿನಲ್ಲಿ ತಮ್ಮನ್ನೇ ಸಮರ್ಪಿಸಿಕೊಂಡ ಅಗ್ರಗಣ್ಯರಲ್ಲೊಬ್ಬರಾಗಿದ್ದರು ಮತ್ತು ಘನತೆಯಿಂದ ಜೀವನ ನಡೆಸಿದವರು. ಬಲಿಷ್ಠ ಭಾರತವನ್ನು ನಿರ್ಮಿಸುವ ಅವರ ಆದರ್ಶಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ.  ಈ ಗೋಡೆಗಳಿಂದ ಇತಿಹಾಸ ಪ್ರತಿಧ್ವನಿಸುತ್ತದೆ ಎಂದು   ಪ್ರಧಾನಮಂತ್ರಿ ಹೇಳಿದರು. ವಸಾಹತುಶಾಹಿ ಆಡಳಿತಗಾರರಿಂದ ಭಾರತದ ವೀರ ಪುತ್ರರಾದ ಕರ್ನಲ್ ಪ್ರೇಮ್ ಸೆಹಗಲ್,  ಕರ್ನಲ್ ಗುರುಭಕ್ಷ ಸಿಂಗ್ ದಿಲ್ಲೋನ್ ಮತ್ತು ಮೇಜರ್ ಜನರಲ್ ಶಾ ನವಾಜ್ ಖಾನ್ ಅವರನ್ನು ಇದೇ ಕಟ್ಟಡದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಭಾರತೀಯ ಸೇನೆ (ಐ ಎನ್ ಎ)ಕುರಿತ ವಿವರವನ್ನು ಬಿಂಬಿಸುವ ಛಾಯಾಚಿತ್ರಗಳನ್ನು ಅವಲೋಕಿಸಿದರು. ನೇತಾಜಿ ಬಳಸುತ್ತಿದ್ದ ಮರದ ಕುರ್ಚಿ ಖಡ್ಗ, ಪದಕಗಳು ಬ್ಯಾಡ್ಜ್ ಗಳು ಸಮವಸ್ತ್ರಗಳು ಮುಂತಾದ   ನೇತಾಜಿ ಮತ್ತು ಐ ಎನ್ ಎ ಗೆ ಸಂಬಂಧಿಸಿದ ಹಲವು ಕಲಾಕೃತಿಗಳನ್ನು ಪ್ರಧಾನಮಂತ್ರಿ ವೀಕ್ಷಿಸಿದರು.

 

ಯಾದ್ ಎ ಜಲಿಯನ್ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಐತಿಹಾಸಿಕ ದುರಂತವನ್ನು ಬಿಂಬಿಸುವ ವೃತ್ತ ಪತ್ರಿಕೆ ತುಣುಕುಗಳು, ವರ್ಣಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ಪ್ರಧಾನಮಂತ್ರಿ ವೀಕ್ಷಿಸಿದರು. 1919 ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಇತಿಹಾಸ ಮತ್ತು ಮೊದಲ ವಿಶ್ವ ಮಹಾಯುದ್ಧದಲ್ಲಿ ಭಾರತೀಯ ಸೈನಿಕರು ಮಾಡಿದಂತಹ ತ್ಯಾಗದ ಇತಿಹಾಸವನ್ನು ನೋಡುಗರಿಗೆ ತಿಳಿಸುವುದು ಈ ವಸ್ತುಸಂಗ್ರಹಾಲಯದ ಉದ್ದೇಶವಾಗಿದೆ.

 

1857- ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂಗ್ರಹಾಲಯಕ್ಕೂ ಪ್ರಧಾನಮಂತ್ರಿ ಭೇಟಿ ನೀಡಿದರು ಮತ್ತು ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟವನ್ನು ಸಾರುವ ಐತಿಹಾಸಿಕ ಚಿತ್ರಣವನ್ನು ಅವಲೋಕಿಸಿದರು. ಈ ಚಿತ್ರಣ ಅಂದು ಭಾರತೀಯರು ತೋರಿದ ಶೌರ್ಯ ಮತ್ತು ಬಲಿದಾನಗಳ ಕುರಿತು ಪ್ರತಿಬಿಂಬಿಸಿತ್ತು. ನಮ್ಮ ಸ್ವಾತಂತ್ರ್ಯ ಯೋಧರು ಮಾಡಿದ ತ್ಯಾಗದ ಬಗ್ಗೆಯೂ ಈ ವಸ್ತುಸಂಗ್ರಹಾಲಯಗಳು ಸಾರುತ್ತವೆ.

 

ಇದೇ ಸ್ಥಳದಲ್ಲಿ ಆಯೋಜಿಸಲಾಗಿದ್ದ ದೃಶ್ಯಕಲಾ ಸಂಗ್ರಹಾಲಯದಲ್ಲಿ ಭಾರತೀಯ ಕಲೆಯ ಕುರಿತಾದ ಪ್ರದರ್ಶನವನ್ನು ಪ್ರಧಾನಮಂತ್ರಿ ವೀಕ್ಷಿಸಿದರು. “ದೃಶ್ಯಕಲಾ ಸಂಗ್ರಹಾಲಯದಲ್ಲಿ ಗುರುದೇವ್ ಠಾಗೋರ್ ಅವರ ಕೃತಿಗಳನ್ನು ವೀಕ್ಷಿಸುವುದೇ ಕಲಾರಸಿಕರಿಗೆ ರಸದೌತಣವಿದ್ದಂತೆ ಎಂದು ಹೇಳಿದರು. ಗುರುದೇವ್ ಠಾಗೋರ್ ಅವರು ಓರ್ವ ಮೇರು ಬರಹಗಾರರೆಂದೇ ತಿಳಿದಿದೆ ಆದರೆ ಅವರಿಗೆ ಕಲಾಜಗತ್ತಿನೊಂದಿಗೂ ಬಲವಾದ ಸಂಪರ್ಕ ಹೊಂದಿದ್ದರು.  ಅವರು ವಿಭಿನ್ನ ಆಯಾಮಗಳನ್ನು ಬಿಂಬಿಸುವ ಹಲವಾರು ಕೃತಿಗಳನ್ನು ಸೃಷ್ಟಿಸಿದ್ದಾರೆ. ಗುರುದೇವ್ ಅವರ ಕೃತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರದರ್ಶಿಸಲಾಗಿವೆ.”  ‘ಭಾರತೀಯ ಕಲೆ ಮತ್ತು ಸಂಸ್ಕೃತಿಯ ಅತಿ ಸೂಕ್ಷ್ಮ ಆಯಾಮಗಳನ್ನು ಬಿಂಬಿಸುವ ದೃಶ್ಯಕಲಾ ಗೆ ಕಲಾಪ್ರೇಮಿಗಳು ಭೇಟಿ ನೀಡಲೇಬೇಕು ಎಂದು ಪ್ರಧಾನಮಂತ್ರಿ ತಮ್ಮ ಟ್ವೀಟ್ ಸಂದೇಶದಲ್ಲಿ ಆಗ್ರಹಿಸಿದ್ದಾರೆ.  ರಾಜಾ ರವಿ ವರ್ಮ, ಗುರುದೇವ್ ಠಾಗೋರ್, ಅಮೃತಾ ಶೇರ್ ಗಿಲ್, ಅಬನೀಂದ್ರನಾಥ್ ಟ್ಯಾಗೋರ್, ನಂದ್ ಲಾಲ್ ಬೋಸ್, ಗಗನೇಂದ್ರ ನಾಥ್ ಟ್ಯಾಗೋರ್, ಶೈಲೋಜ್ ಮೂಖೇರ್ಜಿಯಾ ಮತ್ತು ಜೆಮಿನಿ ರಾಯ್ ಅವರಂತಹ ಭಾರತೀಯ ಕಲಾ ದಿಗ್ಗಜರ ಕೃತಿಗಳನ್ನೂ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.   

 

ಭಾರತದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ನಾಲ್ಕು ಸಂಗ್ರಹಾಲಯಗಳನ್ನು ಉದ್ಘಾಟಿಸುವುದು ತಮ್ಮಲ್ಲಿ ಅತ್ಯಂತ ವಿನೀತ ಭಾವವನ್ನು ಮೂಡಿಸಿದೆ ಎಂದು ಪ್ರಧಾನಮಂತ್ರಿ ಉದ್ಘಾಟನಾ ಸಂದರ್ಭದಲ್ಲಿ ನುಡಿದರು.  ಎಲ್ಲ ನಾಲ್ಕೂ ಸಂಗ್ರಹಾಲಯಗಳನ್ನು ಕ್ರಾಂತಿ ಮಂದಿರ ಎಂದು ಹೆಸರಿಸಲಾಗಿದೆ.

 

ನೇತಾಜಿ ಸುಭಾಷ್  ಚಂದ್ರ ಬೋಸ್ ಮತ್ತು ಭಾರತೀಯ ಸೇನೆ, ಯಾದ್ ಎ ಜಾಲಿಯನ್ ಸಂಗ್ರಹಾಲಯ(ಜಾಲಿಯನ್ ವಾಲಾ ಬಾಗ್ ಮತ್ತು ಪ್ರಥಮ ಮಹಾ ಯುದ್ಧದ ಕುರಿತು), 1857 ರ ಪ್ರಥಮ ಭಾರತೀಯ ಸ್ವಾತಂತ್ರ್ಯ ಹೋರಾಟ ಕುರಿತ ಸಂಗ್ರಹಾಲಯ ಮತ್ತು 3 ಶತಮಾನಗಳನ್ನು ಬಿಂಬಿಸುವ 400 ಕ್ಕಿಂತಲೂ ಅಧಿಕ ಕಲಾಕೃತಿಗಳನ್ನು ಹೊಂದಿದ ಭಾರತೀಯ ಕಲಾಕೃತಿಗಳ ದೃಶ್ಯಕಲಾ ಸಂಗ್ರಹಾಲಯಗಳನ್ನು ಈ ಸಂಕೀರ್ಣ ಒಳಗೊಂಡಿದೆ.

 

ನಮ್ಮ ದೇಶದ ಮಹಾನ್ ಸ್ವಾತಂತ್ರ ಹೋರಾಟಗಾರರ ಕ್ರಾಂತಿಕಾರಿ ಹುರುಪು ಮತ್ತು ಧೈರ್ಯಕ್ಕೆ ಸಂಕೇತದಂತಿದೆ ಈ ಕ್ರಾಂತಿ ಮಂದಿರ. ಗಣರಾಜ್ಯೋತ್ಸವ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ ಇವೆಲ್ಲವು ನಮ್ಮ ಅದ್ಭುತ ಇತಿಹಾಸದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಮತ್ತು ನಾಗರಿಕರಲ್ಲಿ ದೇಶಪ್ರೇಮವನ್ನು ಹೆಚ್ಚಿಸುವ ಕೆಲಸ ಮಾಡಲಿವೆ.    

 

***



(Release ID: 1561129) Visitor Counter : 127