ಸಂಪುಟ

ಹೊಸ ಹಾಗೂ ಪುನರ್ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತಾಂತ್ರಿಕ ದ್ವಿಪಕ್ಷೀಯ ಸಹಕಾರಕ್ಕಾಗಿ ಭಾರತ ಮತ್ತು ಫ್ರಾನ್ಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 10 JAN 2019 8:50PM by PIB Bengaluru

ಹೊಸ ಹಾಗೂ ಪುನರ್ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತಾಂತ್ರಿಕ ದ್ವಿಪಕ್ಷೀಯ ಸಹಕಾರಕ್ಕಾಗಿ ಭಾರತ ಮತ್ತು ಫ್ರಾನ್ಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹೊಸ ಹಾಗೂ ಪುನರ್ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತಾಂತ್ರಿಕ ದ್ವಿಪಕ್ಷೀಯ ಸಹಕಾರಕ್ಕಾಗಿ ಭಾರತ ಮತ್ತು ಫ್ರಾನ್ಸ್ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2018ರ ಅಕ್ಟೋಬರ್ 3ರಂದು ಅಂಕಿತ ಹಾಕಲಾಗಿತ್ತು. 

ಪ್ರಮುಖಾಂಶಗಳು

ಪರಸ್ಪರ ಲಾಭ, ಸಮಾನತೆ ಮತ್ತು ಪರಸ್ಪರ ಸಂಬಂಧದ ಆಧಾರದಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ವಿಷಯಗಳ ಮೇಲೆ ತಾಂತ್ರಿಕ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಸಾಂಸ್ಥಿಕ ಸಹಕಾರ ಸಂಬಂಧವನ್ನು ಸ್ಥಾಪಿಸಲು ಭಾರತ ಮತ್ತು ಫ್ರಾನ್ಸ್ ಗುರಿ ಹೊಂದಿವೆ. ಈ ತಾಂತ್ರಿಕ ಸಹಕಾರವು ಜಂಟಿ ಸಂಶೋಧನೆ ಕಾರ್ಯ ಗುಂಪು, ಪ್ರಾಯೋಗಿಕ ಯೋಜನೆ, ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳು, ಅಧ್ಯಯನ ಪ್ರವಾಸ, ಪ್ರಕರಣಗಳ ಅಧ್ಯಯನ ಮತ್ತು ಅನುಭವ/ತಜ್ಞತೆಯ ವಿನಿಮಯವನ್ನೂ ಒಳಗೊಂಡಿರುತ್ತದೆ.

ಪ್ರಯೋಜನಗಳು

ಈ ತಿಳಿವಳಿಕೆ ಒಪ್ಪಂದ, ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ನೆರವಾಗಲಿದೆ. 
 

***



(Release ID: 1559629) Visitor Counter : 84