ಸಂಪುಟ

ಭಾರತ ಮತ್ತು ಡೆನ್ಮಾರ್ಕ್ ನಡುವೆ ಸಾಗರ ವಿಷಯಗಳ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

Posted On: 10 JAN 2019 8:53PM by PIB Bengaluru

ಭಾರತ ಮತ್ತು ಡೆನ್ಮಾರ್ಕ್ ನಡುವೆ ಸಾಗರ ವಿಷಯಗಳ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಡೆನ್ಮಾರ್ಕ್ ನಡುವೆ ಸಾಗರ ವಿಷಯಗಳ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2019ರ ಜನವರಿಯಲ್ಲಿ ಡೆನ್ಮಾರ್ಕ್ ನಿಂದ ಡಬ್ಲ್ಯು.ಐ.ಪಿ.ಗಳ ಮುಂಬರುವ ಪ್ರವಾಸದ ವೇಳೆ ಅಂಕಿತ ಹಾಕಲು ಪ್ರಸ್ತಾಪಿಸಲಾಗಿದೆ.

ಪ್ರಯೋಜನಗಳು

ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕುವುದು ಎರಡೂ ದೇಶಗಳಿಗೆ ದ್ವಿಪಕ್ಷೀಯ ಸಹಯೋಗದ ಕ್ಷೇತ್ರಗಳ ಪರಿಶೋಧನೆಗೆ ಅವಕಾಶ ಕಲ್ಪಿಸಲಿದೆ: 

ಭಾರತ ಮತ್ತು ಡೆನ್ಮಾರ್ಕ್ ನ ಸಾಗರ ವಲಯದ ನಡುವೆ ಗಡಿಯಾಚೆಯ ಸಹಕಾರ ಮತ್ತು ಹೂಡಿಕೆಗೆ ಅವಕಾಶ ನೀಡುತ್ತದೆ; ಶಿಪ್ಪಿಂಗ್ ನಲ್ಲಿ ಗುಣಮಟ್ಟದ ಖಾತ್ರಿಗಾಗಿ ಪರಸ್ಪರ ಸಾಮರ್ಥ್ಯ ವರ್ಧನೆ ಮಾಡಲು ಎರಡೂ ರಾಷ್ಟ್ರಗಳಿಗೆ ನೈಪುಣ್ಯತೆ, ಪ್ರಕಟಣೆಗಳು, ಮಾಹಿತಿ, ದತ್ತಾಂಶ ಮತ್ತು ಅಂಕಿಅಂಶಗಳನ್ನು ವಿನಿಮಯ ಮಾಡಿಕೊಳ್ಳಲು ಇದು ಅವಕಾಶ ನೀಡುತ್ತದೆ;

ಹಸಿರು ಕಡಲ ತಂತ್ರಜ್ಞಾನ ಮತ್ತು ಹಡಗು ನಿರ್ಮಾಣ ಕ್ಷೇತ್ರದಲ್ಲಿನ ಸಹಕಾರ, ಮಾನ್ಯತೆಯ ಸಂಘಟನೆ (ಆರ್.ಓ.)ದ ಸ್ಥಾನಮಾನ ಭಾರತೀಯ ಶಿಪ್ಪಿಂಗ್ ರಿಜಿಸ್ಟರ್ (ಐ.ಆರ್.ಎಸ್.) ಮಂಜೂರಾತಿ, ಸಾಗರ ತರಬೇತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸಹಕಾರ; ಮರ್ಚೆಂಟ್ ಶಿಪ್ಪಿಂಗ್ ಮತ್ತು ಸಾಗರ ಸಾರಿಗೆ ಸಂಬಂಧಿತ ವಿಷಯಗಳಲ್ಲಿ ಸುಸ್ಥಿರ ಸಹಕಾರಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ; ಮತ್ತು

ಇದು ಎರಡೂ ರಾಷ್ಟ್ರಗಳಿಗೆ, ದ್ವಿಪಕ್ಷೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ, ಪರಸ್ಪರ ಲಾಭದ ಅವಕಾಶಗಳಲ್ಲಿ ಆಳವಾದ ಸಹಕಾರವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹಿನ್ನೆಲೆ

ಡೆನ್ಮಾರ್ಕ್ ಭಾರತದೊಂದಿಗಿನ ಮಹತ್ವದ ವಾಣಿಜ್ಯ ಪಾಲುದಾರರಲ್ಲೊಂದಾಗಿದೆ. ಭಾರತಕ್ಕೆ ಡ್ಯಾನಿಷ್ ಮಾಡುವ ಮಹತ್ವದ ರಫ್ತಿನಲ್ಲಿ ಔಷಧೀಯ/ವೈದ್ಯಕೀಯ ಸರಕುಗಳು, ವಿದ್ಯುತ್ ಉತ್ಪಾದನಾ ಯಂತ್ರೋಪಕರಣಗಳು, ಕೈಗಾರಿಕಾ ಯಂತ್ರೋಪಕರಣ, ಲೋಹದ ಅದಿರು, ಜೈವಿಕ ರಾಸಾಯನಿಕ ಇತ್ಯಾದಿ ಸೇರಿದೆ. ಡೆನ್ಮಾರ್ಕ್ ಗೆ ಭಾರತ ರಫ್ತು ಮಾಡುವ ಪ್ರಮುಖ ವಸ್ತುಗಳು ಜವಳಿ/ ವಸ್ತ್ರ/ ನೂಲು, ರಸ್ತೆಯಲ್ಲಿ ಬಳಸುವ ವಾಹನಗಳು ಮತ್ತು ಬಿಡಿಭಾಗಗಳು, ಲೋಹದ ವಸ್ತುಗಳು, ಕಬ್ಬಿಣ ಮತ್ತು ಉಕ್ಕು, ಪಾದರಕ್ಷೆ ಮತ್ತು ಸಾರಿಗೆ ಸರಕು. ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ವಾಣಿಜ್ಯವನ್ನು ಉತ್ತೇಜಿಸುವ ಸಲುವಾಗಿ ಮತ್ತು ಕಡಲ ಕ್ಷೇತ್ರದಲ್ಲಿ ಸಹಕಾರ ಮತ್ತು ಸಹಯೋಗದ ಖಾತ್ರಿಗಾಗಿ, ಡೆನ್ಮಾರ್ಕ್ ನೊಂದಿಗೆ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲು ಪ್ರಸ್ತಾಪಿಸಲಾಗಿದೆ.
 

***



(Release ID: 1559604) Visitor Counter : 83