ಸಂಪುಟ

ಪ್ರಧಾನ ಮಂತ್ರಿ - ಜನ ಆರೋಗ್ಯ ಯೋಜನೆಯ ಉತ್ತಮ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಯನ್ನು “ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ”ವಾಗಿ ಪುನಾರಚಿಸಲು ಸಂಪುಟದ ಅನುಮೋದನೆ 

Posted On: 02 JAN 2019 5:51PM by PIB Bengaluru

ಪ್ರಧಾನ ಮಂತ್ರಿ - ಜನ ಆರೋಗ್ಯ ಯೋಜನೆಯ ಉತ್ತಮ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಯನ್ನು “ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ”ವಾಗಿ ಪುನಾರಚಿಸಲು ಸಂಪುಟದ ಅನುಮೋದನೆ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಧಾನ ಮಂತ್ರಿ - ಜನ ಆರೋಗ್ಯ ಯೋಜನೆ (ಪಿಎಂ-ಜೆ.ಎ.ವೈ.)ಯ ಉತ್ತಮ ಅನುಷ್ಠಾನಕ್ಕಾಗಿ ಹಾಲಿ ಇರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆಯನ್ನು “ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ”ವಾಗಿ ಪುನಾರಚಿಸಲು ತನ್ನ ಅನುಮೋದನೆ ನೀಡಿದೆ.

 

ಈ ಅನುಮೋದನೆಯೊಂದಿಗೆ ಹಾಲಿ ಇರುವ ಸೊಸೈಟಿ “ರಾಷ್ಟ್ರೀಯ ಆರೋಗ್ಯ ಸಂಸ್ಥೆ”ಯನ್ನು ವಿಸರ್ಜಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಚೇರಿಗೆ ಸಂಪರ್ಕಿತವಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದೊಂದಿಗೆ ಬದಲಾಯಿಸಲಾಗುವುದು.

 

ಹಾಲಿ ಇರುವ ಬಹು ಹಂತದ ನಿರ್ಧಾರ ನಿರೂಪಕ ವಿನ್ಯಾಸವನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯ ಆಡಳಿತ ಮಂಡಳಿ ಬದಲಾಯಿಸಲಿದೆ, ಇದು ಯೋಜನೆಯ ಸುಗಮ ಅನುಷ್ಠಾನಕ್ಕೆ ಅಗತ್ಯವಾದ ತ್ವರಿತವಾಗಿ ನಿರ್ಧಾರ ಕೈಗೊಳ್ಳುದಕ್ಕೆ ಅವಕಾಶ ಕಲ್ಪಿಸುತ್ತದೆ. ಆಡಳಿತ ಮಂಡಳಿಯ ಸಂಯೋಜನೆಯು ಸರ್ಕಾರ, ಡೊಮೇನ್ ತಜ್ಞರು, ಮುಂತಾದವರುಗಳ ಪ್ರತಿನಿಧಿಸುವಿಕೆಯೊಂದಿಗೆ ವಿಶಾಲವಾಗಿದೆ. ಇದರ ಜೊತೆಗೆ ರಾಜ್ಯಗಳು ಕೂಡ ಆವರ್ತನ ಆಧಾರದಲ್ಲಿ ಆಡಳಿತ ಮಂಡಳಿಲ್ಲಿ ಪ್ರತಿನಿಧಿತ್ವ ಹೊಂದಿರುತ್ತವೆ.

 

ಇದಕ್ಕೆ ಹೊಸ ನಿಧಿಯನ್ನೇನೂ ಅನುಮೋದಿಸುವುದಿಲ್ಲ. ಐಟಿ, ಮಾನವ ಸಂಪನ್ಮೂಲ, ಮೂಲಸೌಕರ್ಯಕ್ಕೆ ಸಂಬಂಧಿಸಿದ ವೆಚ್ಚ ಮತ್ತು ಕಾರ್ಯ ನಿರ್ವಹಣಾ ವೆಚ್ಚ ಇತ್ಯಾದಿ ಸೇರಿದಂತೆ ರಾಷ್ಟ್ರೀಯ ಆರೋಗ್ಯ ಸಂಸ್ಥೆಗೆ ಈ ಹಿಂದೆ ಸಂಪುಟದಿಂದ ಅನುಮೋದನೆಯಾಗಿರುವ ಹಾಲಿ  ಆಯವ್ಯಯವನ್ನೇ ಪ್ರಸ್ತಾಪಿತ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಬಳಕೆ ಮಾಡಿಕೊಳ್ಳಲಿದೆ.

 

ಸಮರ್ಥ ಮತ್ತು ಪಾರದರ್ಶಕ ನಿರ್ಧಾರ ನಿರೂಪಕ ಪ್ರಕ್ರಿಯೆಯ ಮೂಲಕ ಪಿ.ಎಂ. ಜೆ.ಎ.ವೈ. ಅನುಷ್ಠಾನ ಮಾಡುವ ಸಂಪೂರ್ಣ ಹೊಣೆಗಾರಿಕೆ, ಆದೇಶ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕಿರುತ್ತದೆ.


(Release ID: 1558315)