ಪ್ರಧಾನ ಮಂತ್ರಿಯವರ ಕಛೇರಿ

ಪಾಲುದಾರರ ವೇದಿಕೆ 2018 ನ್ನು ಉದ್ಘಾಟಿಸಲಿಸಲಿರುವ ಪ್ರಧಾನ ಮಂತ್ರಿ ಶ್ರೀ. ಮೋದಿ 

Posted On: 11 DEC 2018 12:19PM by PIB Bengaluru

ಪಾಲುದಾರರ ವೇದಿಕೆ 2018 ನ್ನು ಉದ್ಘಾಟಿಸಲಿಸಲಿರುವ ಪ್ರಧಾನ ಮಂತ್ರಿ ಶ್ರೀ. ಮೋದಿ 
 

ಭಾರತ ಸರಕಾರವು ತಾಯ್ತನ, ನವಜಾತ ಮತ್ತು ಮಕ್ಕಳ ಆರೋಗ್ಯಕ್ಕಾಗಿರುವ ಪಾಲುದಾರಿಕೆಯ (ಪಿ.ಎಂ. ಎನ್. ಸಿ.ಎಚ್.) ಸಹಯೋಗದೊಂದಿಗೆ  2018 ರ ಡಿಸೆಂಬರ್ 12 ಮತ್ತು 13ರಂದು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ. ಮಹಿಳೆಯರು, ಮಕ್ಕಳು ಮತ್ತು ಹದಿ ಹರೆಯದವರ ಆರೋಗ್ಯ ಮತ್ತು ಸ್ವಾಸ್ಥ್ಯ ಸುಧಾರಣೆಯ ನಿಟ್ಟಿನಲ್ಲಿ ಆಯೋಜನೆಯಾಗಿರುವ ಈ ಸಮ್ಮೇಳನದಲ್ಲಿ 85 ದೇಶಗಳಿಂದ 1500 ರಷ್ಟು ಮಂದಿ ಭಾಗವಹಿಸಲಿದ್ದಾರೆ. ಎಲ್ಲಾ ವಲಯಗಳು ಹಾಗು  ಆದಾಯ ಮಟ್ಟವನ್ನು ಗಮನದಲ್ಲಿರಿಸಿಕೊಂಡು ಮತ್ತು ಪ್ರಸ್ತುತ ಪ್ರಮುಖ ಜಾಗತಿಕ ಹಾಗು ಪ್ರಾದೇಶಿಕ ಮಂಡಳಿಗಳ ಅಧ್ಯಕ್ಷತೆಯನ್ನು ಹೊಂದಿರುವ (ಉದಾಹರಣೆಗೆ ಜಿ 7, ಜಿ-20, ಬ್ರಿಕ್ಸ್, ಇತ್ಯಾದಿ) ದೇಶಗಳನ್ನು ಸೇರಿಸಿಕೊಂಡು ಆಯ್ಕೆ ಮಾಡಿ ಈ ಸಮ್ಮೇಳನಕ್ಕೆ ದೇಶಗಳನ್ನು ಆಹ್ವಾನಿಸಲಾಗಿದೆ.

 

 ಮಹಿಳೆಯರ ಆರೋಗ್ಯ, ಮಕ್ಕಳು ಮತ್ತ್ತು ಹದಿ ಹರೆಯದವರ ಆರೋಗ್ಯ ಸಂಬಂಧಿ ವಿಷಯಗಳಿಗೆ ಅನ್ವಯಿಸಿ ಸಹ್ಯ ಜಾಗತಿಕ ಮುಂಚಲನೆಯ ಉದ್ದೇಶವನ್ನಿಟ್ಟುಕೊಂಡು  ನಡೆಸುತ್ತಿರುವ ಜಾಗತಿಕ , ಉನ್ನತ ಮಟ್ಟದ ಬಹು ರಾಷ್ಟ್ರೀಯ , ಬಹು ಭಾಗೀದಾರ ಕಾರ್ಯಕ್ರಮ ಸರಣಿಯಲ್ಲಿ ಇದು ನಾಲ್ಕನೇಯದಾಗಿದೆ. ಪಾಲುದಾರರ ವೇದಿಕೆಯ ಅಂಗವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ.ಪಿ.ನಡ್ಡಾ, ಚಿಲಿಯ ಮಾಜಿ ಅಧ್ಯಕ್ಷ ಮತ್ತು ಪಿ.ಎಂ.ಎನ್.ಸಿ.ಎಚ್ ಮಂಡಳಿಯ ಮಾಜಿ ಅಧ್ಯಕ್ಷ ಮೈಕೆಲ್ಲೆ ಬಚೆಲೆಟ್ , ಪ್ರಖ್ಯಾತ ನಟಿ ಮತ್ತು ಯೂನಿಸೆಫ್ (ಯು.ಎನ್.ಐ.ಸಿ.ಎಫ್.) ಸೌಹಾರ್ದ ರಾಯಭಾರಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ತಾಯ್ತನ, ನವಜಾತ ಮತ್ತು ಮಕ್ಕಳ ಆರೋಗ್ಯ ಸಹಭಾಗಿತ್ವ ( ಪಿ.ಎಂ. ಎನ್.ಸಿ.ಎಚ್.)ದ ನಿಯೋಗವು

 

ಪ್ರಧಾನ ಮಂತ್ರಿ ಅವರನ್ನು 2018 ರ ಏಪ್ರಿಲ 11 ರಂದು ಕಾರ್ಯಕ್ರಮದ ಪೂರ್ವಭಾವಿ ತಯಾರಿಯಾಗಿ ಭೇಟಿಯಾಗಿತ್ತು. ಆ ಸಂದರ್ಭ ಪ್ರಧಾನ ಮಂತ್ರಿಗಳು ಪಿ.ಎಂ.ಎನ್.ಸಿ.ಎಚ್. ವೇದಿಕೆಯ ಪೋಷಕರಾಗಲು ಸಂತೋಷದಿಂದ ಒಪ್ಪಿಕೊಂಡಿದ್ದರು.

 

ಪಾಲುದಾರರ ವೇದಿಕೆಯು ಜಾಗತಿಕ ಆರೋಗ್ಯ ಸಹಭಾಗಿತ್ವವಾಗಿದ್ದು ಇದನ್ನು ಮಕ್ಕಳ ಮತ್ತು ತಾಯ್ತನ ಮರಣ ಪ್ರಮಾಣವನ್ನು ಕಡಿಮೆ ಮಾಡುವುದಕ್ಕಾಗಿ, ಹದಿಹರೆಯದವರು, ಮಕ್ಕಳು, ನವಜಾತ ಶಿಶು ಮತ್ತು ತಾಯ್ತನದ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ 2005 ರ ಸೆಪ್ಟೆಂಬರ್ ತಿಂಗಳಲ್ಲಿ ಅಸ್ತಿತ್ವಕ್ಕೆ ತರಲಾಗಿತ್ತು. ಈ ಸಹಭಾಗಿತ್ವ 92 ದೇಶಗಳ 10 ಕ್ಷೇತ್ರಗಳ 1,000 ಕ್ಕೂ ಅಧಿಕ ಸದಸ್ಯರ ಮಿತ್ರಕೂಟವಾಗಿದೆ. ಶೈಕ್ಷಣಿಕ, ಸಂಶೋಧನಾ ಮತ್ತು ಬೋಧನಾ ಸಂಸ್ಥೆಗಳು; ದಾನಿಗಳು ಮತ್ತು ಪ್ರತಿಷ್ಟಾನಗಳು, ಆರೋಗ್ಯ ಸೇವೆಯ ವೃತ್ತಿಪರರು, ಬಹು ಆಯಾಮ ವ್ಯಾಪ್ತಿಯ ಏಜೆನ್ಸಿಗಳು; ಸರಕಾರೇತರ ಸಂಸ್ಥೆಗಳು; ಪಾಲುದಾರ ದೇಶಗಳು; ಜಾಗತಿಕ ಹಣಕಾಸು ವ್ಯವಸ್ಥೆ ಮತ್ತು ಖಾಸಗಿ ವಲಯ ಇದರಲ್ಲಿ ಕೈಜೋಡಿಸಿವೆ.

 

ಈ ಹಿಂದಿನ ಸಮ್ಮೇಳನಗಳು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ (2014), ಭಾರತದ ಹೊಸದಿಲ್ಲಿ (2010) ತಾಂಜೇನಿಯಾದ ದಾರ್ ಎ ಸ್ಸಲಾಂ (2007) ಗಳಲ್ಲಿ ನಡೆದಿವೆ. ಪಾಲುದಾರರ ವೇದಿಕೆಯ ಸಮ್ಮೇಳನದ ಅತಿಥೇಯತ್ವವನ್ನು  ಭಾರತ ವಹಿಸುತ್ತಿರುವುದು ಇದು ಎರಡನೆ ಬಾರಿ.

 

ಪಿ.ಎಂ.ಎನ್.ಸಿ.ಎಚ್. ನ ಉದ್ದೇಶ “ಪ್ರತೀ ಮಹಿಳೆ , ಪ್ರತೀ ಮಗು” (ಇ.ಡಬ್ಲ್ಯು. ಇ.ಸಿ.) ಆಂದೋಲನಕ್ಕೆ  ಬೆಂಬಲವಾಗಿ  ಮಹಿಳೆಯರು, ಮಕ್ಕಳು, ಮತ್ತು ಹದಿ ಹರೆಯದವರ ಆರೋಗ್ಯಕ್ಕೆ ಸಂಬಂಧಿಸಿದಂತೆ ವ್ಯೂಹಾತ್ಮಕವಾಗಿ ರೂಪಿಸಲಾದ ಆರೋಗ್ಯ ಸಂಬಂಧಿ ಎಸ್.ಡಿ.ಜಿ.ಗಳ ಸಹ್ಯ ಅಭಿವೃದ್ದಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಜಾಗತಿಕ ಆರೋಗ್ಯ ಸಮುದಾಯ ಯಶಸ್ವಿಯಾಗಿ ಕೆಲಸ  ಮಾಡುವುದಕ್ಕೆ  ಬೆಂಬಲ ಒದಗಿಸುವುದಾಗಿದೆ. 

 

 

 

ಪಾಲುದಾರರ ವೇದಿಕೆಯ ಕಾರ್ಯಕ್ರಮಗಳನ್ನು “ಬದುಕುವ- ಏಳಿಗೆ ಸಾಧಿಸುವ-ಪರಿವರ್ತನೆಗೊಳ್ಳುವ” ಧ್ಯೇಯವನ್ನೊಳಗೊಂಡ  ಜಾಗತಿಕ  ವ್ಯೂಹಾತ್ಮಕ ಚೌಕಟ್ಟಿನಲ್ಲಿ ರೂಪಿಸಲಾಗುತ್ತದೆ. ಕಾರ್ಯಕ್ರಮವು ರಾಜಕೀಯ ನಾಯಕತ್ವ, ಬಹುವಲಯದ ಕ್ರಮ, ಉತ್ತರದಾಯಿತ್ವ, ಮತ್ತು  ಪಾಲುದಾರಿಕೆಯ ಶಕ್ತಿ ಎಂಬ ವಿಷಯದ ಬಗ್ಗೆ ಆದ್ಯತೆ ನೀಡುವ ನಾಲ್ಕು ಉನ್ನತ ಮಟ್ಟದ ಸಾಮಾನ್ಯ ಪ್ರಾಥಮಿಕ ಅಧಿವೇಶನಗಳನ್ನು  ಒಳಗೊಂಡಿರುತ್ತದೆ. ಪ್ರತೀ ಉನ್ನತ ಮಟ್ಟದ ಸಾಮಾನ್ಯ ಅಧಿವೇಶನವನ್ನನುಸರಿಸಿ ಆರು ಸಹವರ್ತಿ ಅನುಮೋದನಾ ಅಧಿವೇಶನಗಳು ನಡೆಯಲಿದ್ದು , ಇವುಗಳು ವೇದಿಕೆಯ ಪ್ರಮುಖ ಶೀರ್ಷಿಕೆಗಳ ಬಗ್ಗೆ ವಿವರವಾದ ಸಮಾಲೋಚನೆಗೆ ಅವಕಾಶ ಒದಗಿಸುತ್ತವೆ.

 

ಮಹಿಳೆಯರ , ಮಕ್ಕಳ ಮತ್ತು ಹದಿ ಹರೆಯದವರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ವಿವಿಧ ವಲಯಗಳನ್ನು ಸಂಯೋಜಿಸುವ ಕೆಲಸವನ್ನು ದೇಶಗಳು ಹೇಗೆ ನಿರ್ವಹಿಸುತ್ತಿವೆ ಎಂಬುದನ್ನು ವಿವರಿಸುವ ಯಶಸ್ಸಿನ 12 ಅಂಶಗಳುಳ್ಳ ಪ್ರಕರಣಗಳ ಅಧ್ಯಯನಗಳ ಫಲಿತಗಳನ್ನು ವೇದಿಕೆಯಲ್ಲಿ ಅನ್ವೇಷಣೆಗೆ ಒಳಪಡಿಸಿ ಮಂಡಿಸಲಾಗುವುದು. ಈ ಪ್ರಕರಣ ಅಧ್ಯಯನಗಳನ್ನು ಬಿ.ಎಂ.ಜೆ.( ಮೂಲತಹ ಬ್ರಿಟಿಷ್ ಮೆಡಿಕಲ್ ಜರ್ನಲ್) ಯ ವಿಶೇಷ ಪಾಲುದಾರರ ವೇದಿಕೆ ಆವೃತ್ತಿಯಲ್ಲಿ ಪ್ರಕಟಿಸಿ ವ್ಯಾಪಕವಾಗಿ ಪ್ರಚುರಪಡಿಸಲಾಗುವುದು.

 

ಆಫ್ರಿಕಾ, ಪೂರ್ವ ಮೆಡಿಟರೇನಿಯನ್, ಯುರೋಪ್, ಅಮೇರಿಕಾ, ಆಗ್ನೇಯ ಏಶ್ಯಾ ಮತ್ತು ಪಶ್ಚಿಮದ ಫೆಸಿಫಿಕ್ ಗಳನ್ನು ಒಳಗೊಂಡ ಪಾಲುದಾರರ ವೇದಿಕೆಯು ಈ ಆರು ವಲಯಗಳ ಕಲಿಕೆಯನ್ನು ಈ ಕೆಳಗಿನ ಆರು ವಿಷಯ ಶೀರ್ಷಿಕೆಗಳ ಅಡಿಯಲ್ಲಿ ಅನಾವರಣಗೊಳಿಸಲಿದೆ. ಅವುಗಳೆಂದರೆ:

 

೧. ಪೂರ್ವ ಬಾಲ್ಯಾವಸ್ಥೆಯ ಅಭಿವೃದ್ದಿ (ಜರ್ಮನಿ ಮತ್ತು ಚಿಲಿ),

 

೨. ಹದಿಹರೆಯದ ಆರೋಗ್ಯ ಮತ್ತು ಕ್ಷೇಮ (ಅಮೇರಿಕಾ ಮತ್ತು ಇಂಡೋನೇಷಿಯಾ);

 

೩. ಸೇವೆಗಳಲ್ಲಿ ಗುಣಮಟ್ಟ, ಸಮಾನತೆ, ಮತ್ತು ಗೌರವ (ಕ್ಯೂ.ಇ.ಡಿ.) (ಭಾರತ ಮತ್ತು ಕಾಂಬೋಡಿಯಾ );

 

  ಕ್ಯೂ.ಇ.ಡಿ. ವಿಷಯ ಶೀರ್ಷಿಕೆಯಡಿ ಭಾರತದಿಂದ ತೀವ್ರಗೊಳಿಸಿದ ಇಂದ್ರಧನುಷ್ ಅಭಿಯಾನವನ್ನು ಪ್ರಕರಣ ಅಧ್ಯಯನವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

 

೪. ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ (ಮಾಲಾವಿ ಮತ್ತು ಮಲೇಷ್ಯಾ) ಮತ್ತು

 

೫. ಮಹಿಳೆಯರು, ಹೆಣ್ಣು ಮಕ್ಕಳು ಹಾಗು ಸಮುದಾಯಗಳ ಸಶಕ್ತೀಕರಣ (ದಕ್ಷಿಣ ಆಫ್ರಿಕಾ ಮತ್ತು ಗ್ವಾಟೆಮಾಲಾ) ಮತ್ತು

 

೬. ಮಾನವೀಯ ಮತ್ತು ದುರ್ಬಲ ವ್ಯವಸ್ಥೆಗಳು (ಸಿಯೆರ್ರಾ ಲಿಯೋನ್ ಮತ್ತು ಅಫಘಾನಿಸ್ತಾನ.)



(Release ID: 1555762) Visitor Counter : 93